ಚಾಣಕ್ಯರ ಪ್ರಕಾರ, ನೀವು ಎಂದಿಗೂ ಹೋಗಬಾರದ ಕೆಲವು ಸ್ಥಳಗಳಿವೆ. ಒಂದು ವೇಳೆ ಈ ಬುದ್ಧಿಮಾತನ್ನು ಆಲಿಸಿಯೂ ನೀವು ಅಂಥ ಜಾಗಗಳಿಗೆ ಹೋದರೆ ಮಾನಸಿಕ, ಭೌತಿಕ ಅಥವಾ ಆರ್ಥಿಕ ನಷ್ಟವನ್ನು ಅನುಭವಿಸುವಿರಿ.
ವಿಶ್ವದ ಮಹಾನ್ ತತ್ವಜ್ಞಾನಿ ಆಚಾರ್ಯ ಚಾಣಕ್ಯ ಸುಮಾರು 3 ಸಾವಿರ ವರ್ಷಗಳ ಹಿಂದೆ ಭಾರತದಲ್ಲಿ ಜನಿಸಿದವರು. ಅವರ ಅನುಭವಗಳಿಂದ, ಕುಟುಂಬ, ಸಮಾಜ, ದೇಶ, ಮಿಲಿಟರಿ, ವಿದೇಶಾಂಗ ನೀತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಅದ್ಭುತ ಜ್ಞಾನವನ್ನು ಗಳಿಸಿದ್ದರು. ಈ ಅನುಭವಗಳ ಆಧಾರದ ಮೇಲೆ ಅವರು ಅರ್ಥಶಾಸ್ತ್ರ ಎಂಬ ಪುಸ್ತಕವನ್ನು ಬರೆದರು. ಈ ಪುಸ್ತಕವು ಅವರ ಅನುಭವಗಳ ಸಾರವನ್ನು ಒಳಗೊಂಡಿದೆ. ಈ ಪುಸ್ತಕವು ನಂತರ ಚಾಣಕ್ಯ ನೀತಿ ಎಂದು ಪ್ರಸಿದ್ಧವಾಯಿತು. ಇದರಲ್ಲಿ ಒಳ್ಳೆಯ ಬದುಕಿಗೆ ಅನುಕೂಲವಾಗುವ ಹಲವು ಸೂತ್ರಗಳಿವೆ. ಚಾಣಕ್ಯರ ಪ್ರಕಾರ, ನೀವು ಎಂದಿಗೂ ಹೋಗಬಾರದ ಕೆಲವು ಸ್ಥಳಗಳಿವೆ. ಒಂದು ವೇಳೆ ಈ ಬುದ್ಧಿಮಾತನ್ನು ಆಲಿಸಿಯೂ ನೀವು ಅಂಥ ಜಾಗಗಳಿಗೆ ಹೋದರೆ ಮಾನಸಿಕ, ಭೌತಿಕ ಅಥವಾ ಆರ್ಥಿಕ ನಷ್ಟವನ್ನು ಅನುಭವಿಸುವಿರಿ.
ಸಂಸ್ಕಾರದ ಕೊರತೆಯಿರುವ ತಾಣ
ಆಚಾರ್ಯ ಚಾಣಕ್ಯರ ಪ್ರಕಾರ, ಉತ್ತಮ ಮೌಲ್ಯಗಳ ಕೊರತೆಯಿರುವ, ಹುಟ್ಟಿನಿಂದ ಒಳ್ಳೆಯ ಸಂಸ್ಕಾರ ಗಳಿಸಿಲ್ಲದ, ಪರಸ್ಪರ ಮೋಸ ಮಾಡುವ, ಪರಸ್ಪರ ಸುಳ್ಳು ಹೇಳುವ ಮತ್ತು ಇತರರನ್ನು ಕೆಡವಲು ಸಂಚು ರೂಪಿಸುವವರು ಇರುವ ಸ್ಥಳಕ್ಕೆ ಎಂದಿಗೂ ಹೋಗಬಾರದು ಅಥವಾ ಅಲ್ಲಿ ಮನೆ ಕಟ್ಟುವ ಬಗ್ಗೆ ಯೋಚಿಸಬಾರದು. ಹಾಗೊಂದು ವೇಳೆ ಅಲ್ಲಿ ವಾಸಿಸಿದರೆ ನೀವೂ ಹಾಗೇ ಆಗುವಿರಿ ಅಥವಾ ಸರ್ವನಾಶ ಆಗುವಿರಿ.
ಕೆಲಸವಿಲ್ಲದ ಸ್ಥಳ
ಚಾಣಕ್ಯರ ಪ್ರಕಾರ, ಉದ್ಯೋಗಾವಕಾಶವಿಲ್ಲದ ಸ್ಥಳ ಅಥವಾ ನಿಮಗೆ ಯಾವುದೇ ಕೆಲಸಕಾರ್ಯವಿಲ್ಲದ ಜಾಗಕ್ಕೆ ಹೋಗುವುದು ವ್ಯರ್ಥ. ಆ ಸ್ಥಳ ಎಷ್ಟೇ ಸುಂದರವಾಗಿದ್ದರೂ ನಿಮಗೆ ಅಲ್ಲಿ ಯಾವುದೇ ಉದ್ಯೋಗ ಅಥವಾ ವ್ಯಾಪಾರ ಅವಕಾಶಗಳಿಲ್ಲದಿದ್ದರೆ, ಅಲ್ಲಿ ಉಳಿಯುವುದು ವ್ಯರ್ಥ. ಅಂತಹ ಸ್ಥಳಗಳನ್ನು ಸಾಧ್ಯವಾದಷ್ಟು ಬೇಗ ಬಿಡಬೇಕು.
ಕಲಿಕೆಗೆ ವಾತಾವರಣ ಇಲ್ಲದ ಜಾಗ
ಯಾವುದೇ ವ್ಯಕ್ತಿಯ ಅಭಿವೃದ್ಧಿಯಲ್ಲಿ ಕಲಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಹೊಸ ಸಂಗತಿಗಳ ಕಲಿಕೆ ಅಥವಾ ಶಿಕ್ಷಣಕ್ಕೆ, ಅಧ್ಯಯನಕ್ಕೆ, ಓದುವಿಕೆಗೆ ಯಾವುದೇ ಪ್ರಾಮುಖ್ಯತೆ ನೀಡದ ಸ್ಥಳಕ್ಕೆ ನೀವು ಹೋದರೆ, ನೀವು ಮುಂದೆ ಸಾಗುವ ಬದಲು ನಿಮ್ಮನ್ನು ಹಿಂದಕ್ಕೆ ತಳ್ಳಿಕೊಳ್ಳುತ್ತಿದ್ದೀರಿ ಎಂದರ್ಥ. ಅಲ್ಲಿ ನೀವು ಕಲಿತದ್ದೆಲ್ಲ ಖರ್ಚಾಗಬಹುದೇ ಹೊರತು ನಿಮಗೆ ಏನೂ ಗಿಟ್ಟದು. ಆದ್ದರಿಂದ ಅಂತಹ ಸ್ಥಳಕ್ಕೆ ಹೋಗಬಾರದು.
ಸಹಾಯ ಮಾಡುವವರು ಇಲ್ಲದ ಊರು
ಜೀವನೋಪಾಯಕ್ಕಾಗಿ ಹೊಸ ಸ್ಥಳಗಳಿಗೆ ಹೋಗುವುದು ಹೊಸ ವಿಷಯವಲ್ಲ. ಆದರೆ ಅಲ್ಲಿಗೆ ಹೋಗುವ ಮೊದಲು, ನಿಮಗೆ ಸಹಾಯ ಮಾಡಲು ಯಾರಾದರೂ ಇದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. ಹಾಗಲ್ಲದಿದ್ದರೆ, ನಿಮಗೆ ತೊಂದರೆ ಒದಗಿದರೆ ನೀವು ಏಕಾಂಗಿಯಾಗಿ ಬಿಡುತ್ತೀರಿ. ಆದ್ದರಿಂದ, ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರು ವಾಸಿಸದ ಸ್ಥಳದಲ್ಲಿ ನೀವು ಹೆಚ್ಚು ಕಾಲ ಇರಬಾರದು.
Chanakya Niti: ನಿಮ್ಮ ಗೆಳೆತನ ಪರೀಕ್ಷಿಸೋ 11 ಸನ್ನಿವೇಶಗಳು ಇವು, ಚಾಣಕ್ಯ ನೀತಿ ಕೇಳಿ
ಗೌರವವಿಲ್ಲದ ಎಡೆ
ಪ್ರತಿಯೊಬ್ಬ ವ್ಯಕ್ತಿಯು ತಾನು ಎಲ್ಲೆಡೆ ಗೌರವಿಸಲ್ಪಡಬೇಕೆಂದು ಬಯಸುತ್ತಾನೆ. ಇದು ಅವನ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮಾತುಗಳನ್ನು ನಿರ್ಲಕ್ಷಿಸುವ ಸ್ಥಳಕ್ಕೆ ನೀವು ಹೋದರೆ, ಪ್ರತಿ ಸಣ್ಣ ವಿಷಯಕ್ಕೂ ನಿಮ್ಮನ್ನು ಅವಮಾನಿಸಿದರೆ ಅಥವಾ ನಿಂದಿಸಿದರೆ, ನೀವು ಅಂತಹ ಸ್ಥಳದಿಂದ ದೂರವಿರಬೇಕು. ಇದು ನಿಮ್ಮನ್ನು ಜೀವಂತ ಇರುತ್ತಾ ಕೊಂದ ಹಾಗೆಯೇ ಸರಿ. ಪಂಡಿತರಿಗೆ ಅವಮಾನವೇ ಸಾವು ಎನ್ನುತ್ತಾರೆ.
ಸಾಲ ಕೇಳುವವರ ಜಾಗ
ಸದಾ ಸಾಲ ಕೇಳುವವರು, ನಿಮ್ಮಿಂದ ಏನನ್ನಾದರೂ ಬಯಸುತ್ತಲೇ ಇರುವವರು, ನೀವು ಎಷ್ಟು ಕೊಟ್ಟರೂ ಇನ್ನೂ ಕೊಡಿ ಎಂದು ಅಪೇಕ್ಷಿಸುವವರು, ದಾರಿದ್ರ್ಯದಲ್ಲಿದ್ದುಕೊಂಡೂ ಅದರಿಂದ ಮೇಲೆ ಬರಲು ಯಾವುದೇ ಪ್ರಯತ್ನ ಮಾಡದವರು, ಇಂಥವರು ಇರುವ ಜಾಗಕ್ಕೆ ನೀವು ಹೋಗಬಾರದು. ಇದರಿಂದ ನಿಮಗೆ ನಷ್ಟವೇ ಹೊರತು ಲಾಭವಿಲ್ಲ.
ಚಾಣಕ್ಯನ ಪ್ರಕಾರ ಗಂಡ ಹೆಂಡತಿ ಈ ಕೆಲಸ ನಂತರ ಕಡ್ಡಾಯವಾಗಿ ಸ್ನಾನ ಮಾಡಬೇಕಂತೆ
