ಆಚಾರ್ಯ ಚಾಣಕ್ಯರ ಪ್ರಕಾರ ಐದು ಬಗೆಯ ಜನರಿಂದ ದೂರವಿರಬೇಕು. ಅಂಥವರ ಸಹವಾಸದಿಂದ ತೊಂದರೆ, ನೆಮ್ಮದಿ ಹಾಳಾಗುವಿಕೆ, ಆರ್ಥಿಕವಾಗಿ ಹಾಗೂ ಮಾನಸಿಕವಾಗಿ ಹಾನಿ, ಕಿರುಕುಳ ತಪ್ಪಿದ್ದಲ್ಲ. ಹಾಗಾದರೆ ಯಾರು ಆ ಐದು ಬಗೆಯ ಜನ?
ಆಚಾರ್ಯ ಚಾಣಕ್ಯ ಪ್ರಾಚೀನ ಭಾರತ ಕಂಡ ಮಹಾನ್ ಮುತ್ಸದ್ಧಿ, ರಾಜಕಾರಣಿ, ಜ್ಞಾನಿ, ಕುಟಿಲ ಕಾರಸ್ಥಾನಿ, ಶಿಕ್ಷಕ, ಅರ್ಥಶಾಸ್ತ್ರಜ್ಞ, ನ್ಯಾಯಶಾಸ್ತ್ರಜ್ಞ, ರಾಜ ಸಲಹೆಗಾರ ಮತ್ತು ದಾರ್ಶನಿಕ. ಕೌಟಿಲ್ಯ ಮತ್ತು ವಿಷ್ಣುಗುಪ್ತ ಎಂದೂ ಹೆಸರು ಹೊಂದಿದ್ದ ಇವರು ಅರ್ಥಶಾಸ್ತ್ರದ ಪಿತಾಮಹ. ರಾಜಕೀಯದಲ್ಲಿ ಹೇಗಿರಬೇಕು ಎಂದು ಬರೆದಂತೆ, ಸಂಸಾರದಲ್ಲಿ ಹೇಗಿರಬೇಕು ಎಂದೂ ಚಾಣಕ್ಯ ಬರೆದಿದ್ದಾರೆ. ಚಾಣಕ್ಯನ ತಂತ್ರ ಮತ್ತು ಜ್ಞಾನವು ಒಬ್ಬ ಸಾಮಾನ್ಯನನ್ನು (ಚಂದ್ರಗುಪ್ತ) ರಾಜನನ್ನಾಗಿ ಮಾಡಲು ಕಾರಣವಾಯಿತು.
ಆಚಾರ್ಯ ಚಾಣಕ್ಯರ ಪ್ರಕಾರ ನಾವು ಈ ಕೆಳಗಿನ ಐದು ವಿಧದ ಜನರಿಗೆ ಸಹಾಯ ಮಾಡಲು ಹೋಗಬಾರದು. ಇಂಥವರನ್ನು ಕಂಡರೆ ದೂರ ಓಡಿಬಿಡಿ ಅಂತಾರೆ ಕೌಟಿಲ್ಯ. ಅವರು ಯಾರು? ಆ ಬಗೆಯ ವ್ಯಕ್ತಿಗಳಿಗೆ ಸಹಾಯ ಮಾಡಿದರೆ ಏನಾಗುತ್ತದೆ?
ಸದಾ ಸಾಲಗಾರರು
ಸದಾ ಸಾಲ ಮಾಡಿಕೊಂಡು ತಿರುಗಾಡುವವರನ್ನು ಕಂಡರೆ ದೂರದಿಂದಲೇ ಓಡಿಬಿಡಿ. ಯಾಕೆಂದರೆ ಅವರು ನಿಮ್ಮ ಬಳಿಯೇ ಸಾಲ ಮಾಡಿದ್ದರೂ ಮತ್ತೆ ನಿಮ್ಮ ಬಳಿಯೇ ಧನಸಹಾಯ ಕೇಳಲು ಹೇಸುವುದಿಲ್ಲ. ಋಣದ ಬಗ್ಗೆ ಇವರು ಯೋಚನೆ ಮಾಡುವುದಿಲ್ಲ, ಅದನ್ನು ತೀರಿಸುವುದು ಹೇಗೆ ಎಂದು ಯಾವತ್ತೂ ಯೋಚಿಸುವುದಿಲ್ಲ. ಬದಲಾಗಿ ಇಂದು ಯಾರಿಂದ ಹೇಗೆ ಹಣ ಎತ್ತಬಹುದು ಎಂದು ಅವರು ಯೋಚಿಸುತ್ತಿರುತ್ತಾರೆ. ಇವರಿಗೆ ಹಣ ನೀಡಿದರೆ ಹಣವೂ ಹೋಯಿತು, ಇವರ ಗೆಳೆತನವೂ ಹೋಯಿತು.
ಚಾಡಿಕೋರರು
ಚಾಡಿಕೋರರನ್ನು ಗುರುತಿಸುವುದು ಸುಲಭ. ಇವರು ನಿಮ್ಮ ಬಳಿ ಬಂದು, ನಿಮ್ಮ ಗೆಳೆಯರ ಬಗ್ಗೆಯೋ ನಿಮ್ಮ ಹೆಂಡತಿಯ ಬಗ್ಗೆಯೋ ಗಂಡನ ಬಗ್ಗೆಯೋ ಚಾಡಿ ಹೇಳುತ್ತಿರುತ್ತಾರೆ. ಹಾಗೆ ನೋಡಲಾಗಿ, ಇವರು ಅವರ ಬಳಿ ಹೋಗಿ ನಿಮ್ಮ ಬಗ್ಗೆ ಚಾಡಿ ಹೇಳುವುದಿಲ್ಲ ಎಂದು ಏನು ಗ್ಯಾರಂಟಿ? ಚಾಡಿಕೋರರು ಮನೆಮನೆಯ ನೆಮ್ಮದಿಯನ್ನು ನಾಶ ಮಾಡುತ್ತಾರೆ. ಇರುವ ಒಂದು ದೋಷವನ್ನು ನೂರಾಗಿ ಹಿಗ್ಗಿಸಿ ಇನ್ನೊಬ್ಬರ ಬಳಿ ದೂರುತ್ತಾರೆ. ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು ತಪ್ಪಿಯೂ ಇನ್ನೊಬ್ಬರ ಬಳಿ ಹೇಳುವುದಿಲ್ಲ.
ಕೀಳು ಸ್ವಭಾವದ ಹೆಣ್ಣು
ತೊಂದರೆಯಲ್ಲಿರುವ ಹೆಣ್ಣುಮಕ್ಕಳನ್ನು ನೋಡಿದಾಗ ಜನರು ಭಾವನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಆದರೆ ನೀವು ಆ ಮಹಿಳೆಗೆ ಸಹಾಯವನ್ನು ಮಾಡುವ ಮುನ್ನ ಆಕೆಯು ಯಾವುದೇ ತಪ್ಪನ್ನು ಮಾಡದೇ ಸಮಸ್ಯೆಯಲ್ಲಿದ್ದಾಳೆಯೇ ಅಥವಾ ತಪ್ಪನ್ನು ಮಾಡಿ ಸಮಸ್ಯೆಯಲ್ಲಿದ್ದಾಳೆಯೇ ಎಂದು ತಿಳಿದುಕೊಂಡ ನಂತರ ಸಹಾಯ ಮಾಡಲು ಮುಂದಾಗಬೇಕು. ಕೆಲವೊಮ್ಮೆ ಮಹಿಳೆಯರು ತಮ್ಮ ನಡವಳಿಕೆ ಮತ್ತು ತಾವು ಮಾಡಿದ ಕಾರ್ಯಗಳಿಂದ ಸಮಸ್ಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಅವರು ತಪ್ಪಾದ ದಾರಿಯಲ್ಲಿ ಹೋಗುವ ಮೂಲಕ ಕೂಡ ಸಮಸ್ಯೆಯೆಂಬ ಸುಳಿಗೆ ಸಿಲುಕಿರಬಹುದು. ಸದ್ಗುಣಶೀಲ ಮಹಿಳೆ ಯಾವಾಗ ತೊಂದರೆಯಲ್ಲಿರುತ್ತಾಳೋ ಆಕೆಗೆ ಸಹಾಯ ಮಾಡಬೇಕೇ ವಿನಃ, ತಪ್ಪು ಮಾಡಿದ ಮಹಿಳೆಗೆ ಸಹಾಯ ಮಾಡಬಾರದು. ನಿಷ್ಠೆಯಿಲ್ಲದ ಮಹಿಳೆಗೆ ಸಹಾಯ ಮಾಡಬಾರದು ಎಂದು ಚಾಣಕ್ಯನು ಹೇಳುತ್ತಾನೆ. ನಿಷ್ಠೆ ರಹಿತ ಮಹಿಳೆಗೆ ಸಹಾಯ ಮಾಡುವುದರಿಂದ ನಾವು ನೋವು ಮತ್ತು ತೊಂದರೆಗೆ ಸಿಲುಕಿಕೊಳ್ಳಬೇಕಾಗುತ್ತದೆ. ಸ್ವಾರ್ಥ ಗುಣವುಳ್ಳ ಮಹಿಳೆಯರಿಗೂ ಸಹಾಯ ಮಾಡಬಾರದು. ತಮ್ಮ ಸ್ವಾರ್ಥ ಪೂರ್ಣಗೊಂಡ ನಂತರ ಅವರು ನಿಮ್ಮನ್ನು ಮರೆತು ಬಿಡುತ್ತಾರೆ.
ಸದಾ ದುಃಖಿಗಳು
ಯಾವುದೇ ಕಾರಣವಿಲ್ಲದೆ ದುಃಖಿಯಾಗಿರುವ, ಒಂಟಿಯಾಗಿರುವಂತೆ ನಟಿಸುವ ಜನರಿಂದ ದೂರವಿರಬೇಕು. ಅವರು ಎಂದಿಗೂ ತಮ್ಮ ಜೊತೆ ಇರುವವರಿಗೆ ಸಂತೋಷವನ್ನು ನೀಡುವುದಿಲ್ಲ. ಅಂತಹ ದುಃಖಿತ ವ್ಯಕ್ತಿಯೊಂದಿಗೆ ಇರುವುದು ನಿಮ್ಮನ್ನು ಕೂಡ ದುಃಖಕ್ಕೆ ತಳ್ಳುತ್ತದೆ. ದುಃಖಿತ ಜನರು ಯಾವಾಗಲೂ ಇತರರನ್ನು ಶಪಿಸುತ್ತಲೇ ಇರುತ್ತಾರೆ. ಅಂತಹ ಜನರಿಂದ ಯಾವಾಗಲೂ ನೀವು ದೂರವಿರಬೇಕು. ನೀವು ಇಂತಹ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದುವುದರಿಂದ ಮನಶಾಂತಿಯ ಮೇಲೆ ಪ್ರಭಾವ ಬೀರುತ್ತದೆ. ಯಾವಾಗಲೂ ದುಃಖದಲ್ಲಿರುವ ವ್ಯಕ್ತಿಯಿಂದ ದೂರವಿದ್ದಷ್ಟು ನಮ್ಮ ಮಾನಸಿಕ ಅಶಾಂತಿ ಹೆಚ್ಚಾಗುತ್ತದೆ.
ಮಕ್ಕಳು ಪಾಲಕರ ಮಾತು ಕೇಳದಿರಲು ಕಾರಣಗಳು ಹಾಗೂ ಪರಿಹಾರ
ತಿದ್ದಿಕೊಳ್ಳದ ಮೂರ್ಖರು
ಮೂರ್ಖರಿಗೆ ಯಾರೂ ಸಲಹೆ ನೀಡಬಾರದು. ಜ್ಞಾನವನ್ನು ನೀಡುವ ಮೂಲಕ ನೀವು ಅವರಿಗೆ ಸಹಾಯ ಮಾಡುತ್ತೀರಿ ಮತ್ತು ಏನನ್ನಾದರೂ ಪಡೆಯಲು ಅವರಿಗೆ ಸಹಾಯ ಮಾಡುತ್ತೀರಿ ಎಂದು ನೀವು ಭಾವಿಸಿದರೆ ಅದು ನಿಮ್ಮ ದೊಡ್ಡ ತಪ್ಪಾಗುತ್ತದೆ ಎನ್ನುತ್ತಾನೆ ಚಾಣಕ್ಯ. ಸಲಹೆ ನೀಡಿಯೂ ತಿದ್ದಿಕೊಳ್ಳದ ಮೂರ್ಖರು ಇನ್ನೂ ಡೇಂಜರ್. ಇವರು ಸದಾ ಉಪದ್ವ್ಯಾಪ ಮಾಡಿಕೊಳ್ಳುವುದಲ್ಲದೆ ನಿಮ್ಮನ್ನೂ ಅಪಾಯದಲ್ಲಿ ಸಿಲುಕಿಸುತ್ತಾರೆ. ಮೂರ್ಖ ಜನರು ಎಂದು ಅವರಿಗೆ ಸಲಹೆ ನೀಡಲು ಅಥವಾ ಸಹಾಯ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ, ಯಾಕೆಂದರೆ ಅವರು ಜೀವನದಲ್ಲಿ ಸರಿಯಾದ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅವರು ಸಂಪೂರ್ಣವಾಗಿ ಕ್ಷುಲ್ಲಕ ವಿಷಯಗಳ ಬಗ್ಗೆ ವಾದಿಸಲು ಪ್ರಾರಂಭಿಸಬಹುದು ಮತ್ತು ನಿಮ್ಮ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಬಹುದು. ಅವರು ನಿಮ್ಮಲ್ಲಿ ಒತ್ತಡವನ್ನು ಸೃಷ್ಟಿಸಲು ಮುಖ್ಯ ಕಾರಣರಾಗುತ್ತಾರೆ.
ಈ ದಿನಾಂಕದಂದು ಹುಟ್ಟಿದವರಿಗೆ ಎರಡು ಮದುವೆ ಇಲ್ಲವೇ ಮತ್ತೊಂದು ಸಂಬಂಧ ಹೆಚ್ಚು! ಯಾವುದದು ಸಂಖ್ಯೆ?
