Asianet Suvarna News Asianet Suvarna News

ಶ್ವಾನಗಳ ಶುಭವಿವಾಹ: ರೆಸಾರ್ಟ್‌ನಲ್ಲಿ ಅದ್ಧೂರಿ ಮದುವೆ, ಅತಿಥಿಗಳಿಗೆ ಬಿರಿಯಾನಿ ಊಟ

ಇತ್ತೀಚಿನ ವರ್ಷಗಳಲ್ಲಿ ಪ್ರಾಣಿ ಸಾಕುವುದು ಫ್ಯಾಷನ್ ಆಗಿದೆ. ಒಳ್ಳೊಳ್ಳೆ ಬ್ರೀಡ್ ನಾಯಿಗಳನ್ನು ಸಾಕುವುದು ಪ್ರತಿಷ್ಠ ಎನಿಸಿದೆ. ಶ್ವಾನಗಳ ಬರ್ತ್‌ಡೇ ಆಚರಿಸುವುದು ಸಾಮಾನ್ಯ. ಆದರೆ ಇಲ್ಲಿ ಮದುವೇನೇ ಮಾಡ್ಬಿಟ್ಟಿದ್ದಾರೆ.

Dogs from Keralas Thrissur gets married in a grand ceremony cut cake have Biriyani dpl
Author
Bangalore, First Published Sep 24, 2021, 12:19 PM IST
  • Facebook
  • Twitter
  • Whatsapp

ಶ್ವಾನಗಳಿಗೆ ಚಂದ ಚಂದದ ಕೇಕ್ ಮಾಡಿ ಬರ್ತ್‌ಡೇ ಸೆಲೆಬ್ರೇಟ್ ಮಾಡುವಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ. ಆದರೆ ನಾಯಿಗಳಿಗೆ ಮದುವೆ ಮಾಡೋದನ್ನು ಕೇಳಿದ್ದೀರಾ ? ನೋಡಿದ್ದೀರಾ ? ಕೇರಳದ(Kerala) ತ್ರಿಶೂರ್‌(Thrissur)ನಲ್ಲಿ ನಾಯಿಗಳಿಗೆ ಮದುವೆ ಮಾಡಿದ್ದು ಪ್ರೀ ವೆಡ್ಡಿಂಗ್ ಫೊಟೋ ಶೂಟ್ ಕೂಡಾ ಮಾಡಲಾಗಿದೆ. ಇದೀಗ ಈ ಜೋಡಿ ಇಂಟರ್‌ನೆಟ್ ತುಂಬಾ ವೈರಲ್‌ ಆಗಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಪ್ರಾಣಿ ಸಾಕುವುದು ಫ್ಯಾಷನ್ ಆಗಿದೆ. ಒಳ್ಳೊಳ್ಳೆ ಬ್ರೀಡ್ ನಾಯಿಗಳನ್ನು ಸಾಕುವುದು ಪ್ರತಿಷ್ಠ ಎನಿಸಿದೆ. ಶ್ವಾನಗಳ ಬರ್ತ್‌ಡೇ ಆಚರಿಸುವುದು ಸಾಮಾನ್ಯ. ಆದರೆ ಇಲ್ಲಿ ಮದುವೇನೇ ಮಾಡ್ಬಿಟ್ಟಿದ್ದಾರೆ. ವಧು ಹಾಗೂ ವರ ಶ್ವಾನ ಎರಡೂ ಒಂದೇ ತಳಿಗೆ ಸೇರಿವೆ. ಬೀಗಲ್ಸ್ ಜಾತಿಗೆ ಸೇರಿದ ಶ್ವಾನಗಳು ಹಾರ ಬದಲಾಯಿಸಿ ಮದುವೆಯಾಗಿದ್ದಾರೆ. ವಧು ಜಾಹ್ನವಿ ಹಾಗೂ ವರನೂ ಬೀಗಲ್ಸ್ ಬ್ರೀಡ್‌ಗೆ ಸೇರಿದೆ.

ಸಮುದ್ರದಲ್ಲಿ ಮುಳುಗುತ್ತಿದ್ದ ಮಗುವನ್ನು ರಕ್ಷಿಸಿದ ನಾಯಿ, ಪ್ರಾಮಾಣಿಕತೆಗಿಲ್ಲ ಸರಿಸಾಟಿ!

ತ್ರಿಶೂರ್ ಹೊರವಲಯದಲ್ಲಿರುವ ಐತಿಹಾಸಿಕ ರೆಸಾರ್ಟ್‌ ಪುನ್ನಾಯುರ್ಕುಳಂನಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ಅಂದ ಹಾಗೆ ಈ ಮದುವೆಯಲ್ಲಿ ಬಹಳಷ್ಟು ನಾಯಿಗಳು ಭಾಗಿಯಾಗಿವೆ. ಆಸಿಡ್ ನಾಯಿಯ ಕುಟುಂಬ ತ್ರಿಶೂರ್‌ನ ವಡನಪಳ್ಳಿಯಲ್ಲಿದ್ದು ಅವರೇ ಮದುವೆಯನ್ನು ನಡೆಸಿದ್ದಾರೆ. ಆಸಿಡ್ ಆಲಿಯಾಸ್ ಕುಟ್ಟಾಪುವಿಗೆ ಎರಡೂವರೆ ವರ್ಷ ವಯಸ್ಸು ಚಿಕ್ಕಂದಿನಿಂದಲೇ ಕುಟುಂಬದ ಭಾಗವಾಗಿತ್ತು. ಕುಟ್ಟಾಪು ಶೆಲ್ಲಿ ಹಾಗೂ ಅವರ ಪತ್ನಿಗೆ ತಮ್ಮ ಇಬ್ಬರು ಮಕ್ಕಳು ಆಕಾಶ್ ಹಾಗೂ ಅರ್ಜುನ್ ನಂತರ ಮೂರನೇ ಮಗನಂತೆಯೇ.

ಆಕಾಶ್ ಡಿಎಚ್‌ಗೆ ಕುಟುಂಬವು ಸ್ವಲ್ಪ ಸಮಯದಿಂದ ಆಸಿಡ್‌ಗಾಗಿ ಸಂಗಾತಿಯನ್ನು ಹುಡುಕುತ್ತಿದ್ದರು. ಇತ್ತೀಚೆಗೆ ಒಂದೂವರೆ ವರ್ಷ ವಯಸ್ಸಿನ ಜಾನ್ವಿಯನ್ನು ಅವರು ಕಂಡುಕೊಂಡಿದ್ದಾರೆ. ಆಮೇಲೆ ಅವರ ನೆಚ್ಚಿನ ಕುಟ್ಟಾಪುವಿನ ಮದುವೆಯ ಪ್ಲಾನ್‌ಗಳು ಶುರುವಾಗಿದ್ದು ಆ ಕನಸು ಸಾಕಾರವಾಗಿದೆ.

ಈವೆಂಟ್ ಮ್ಯಾನೇಜ್‌ಮೆಂಟ್ ಗುಂಪು ಈ ಮದುವೆ ಸಿದ್ಧತೆಯಲ್ಲಿ ಸಂಪೂರ್ಣವಾಗಿ ಕೆಲಸ ಮಾಡಿತ್ತು. ಸೇವ್-ದಿ-ಡೇಟ್ ಫೋಟೋಶೂಟ್ ಅನ್ನು ಸಹ ನಡೆಸಲಾಗಿತ್ತು. ಆತಿಥ್ಯ ಉದ್ಯಮದಲ್ಲಿ ಕೆಲಸ ಮಾಡುವ ಕುಟುಂಬದವರಾಗಿದ್ದು ಸಾಕು ನಾಯಿಗಳೊಂದಿಗಿನ ಅವರ ಎಲ್ಲಾ ಸ್ನೇಹಿತರನ್ನು ಮದುವೆಗೆ ಆಹ್ವಾನಿಸಲಾಗಿತ್ತು.

ವರನು ಶರ್ಟ್ ಧರಿಸಿದ್ದರೆ, ವಧು ಸ್ಕರ್ಟ್ ಧರಿಸಿದ್ದಳು. ವಧುವನ್ನು ವಿಧ್ಯುಕ್ತ ರೀತಿಯಲ್ಲಿ ವೇದಿಕೆಗೆ ಕರೆತರಲಾಯಿತು. ಹಾರಗಳನ್ನು ವಿನಿಮಯ ಮಾಡಲಾಯಿತು. ನವವಿವಾಹಿತ ದಂಪತಿಗಳು ಕೇಕ್ ಕತ್ತರಿಸಿದ್ದಾರೆ. ಅತಿಥಿಗಳಿಗೆ ಬಿಸಿಬಿಸಿಯಾದ ತ್ರಿಶೂರ್ ಸ್ಟೈಲ್ ಬಿರಿಯಾನಿ ಉಣಬಡಿಸಲಾಗಿದೆ.

Follow Us:
Download App:
  • android
  • ios