Asianet Suvarna News Asianet Suvarna News

ಮದುವೆಗಾಗಿ ವಧು ಇಟಲಿಗೆ ಹಾರಿದರೆ ಸಾಕು ನಾಯಿ ಅವಾಂತರದಿಂದ ವರ ಬಾಕಿ!

ಇಟಲಿಯಲ್ಲಿ ಮದುವೆಯಾಗಲು ಎಲ್ಲಾ ತಯಾರಿ ಮಾಡಲಾಗಿದೆ. ಮಂಟಪ ಬುಕಿಂಗ್, ಉಳಿದುಕೊಳ್ಳಲು ರೂಂ ಬುಕಿಂಗ್ ಎಲ್ಲವೂ ಆಗಿದೆ. ಮದುವೆಗೆ ಇನ್ನೇನು ಒಂದು ವಾರ ಮಾತ್ರ ಬಾಕಿ. ಹುಡುಗಿ ಹಾಗೂ ಆಕೆಯ ಮನೆಯವರು ಈಗಾಗಲೇ ಇಟಲಿಗೆ ಹಾರಿದ್ದಾರೆ. ಆದರೆ ವರ ಮಾತ್ರ ಬಾಕಿಯಾಗಿದ್ದಾನೆ. ಅತ್ತ ಇಟಲಿಗೂ ತೆರಳಲು ಸಾಧ್ಯವಾಗದೆ ಇತ್ತ ಮನೆಯಲ್ಲಿರಲು ಆಗದೆ ಚಡಪಡಿಸುವ ಪರಿಸ್ಥಿತಿ ಬಂದಿದೆ. ಇದಕ್ಕೆ ಕಾರಣ ವರನ ಸಾಕು ನಾಯಿ.
 

Dog chews groom passport few days before marriage in Italy fiance ask to find a solution before wedding ckm
Author
First Published Aug 21, 2023, 6:08 PM IST

ಬಾಸ್ಟನ್(ಆ.21) ಮದುವೆಯನ್ನು ಮತ್ತಷ್ಟು ವಿಶೇಷ ಹಾಗೂ ಸ್ಮರಣೀಯವಾಗಿಸಲು ಎಲ್ಲರು ಬಯಸುತ್ತಾರೆ. ಅವರವರ ಸಾಮರ್ಥ್ಯ ತಕ್ಕಂತೆ ಪ್ಲಾನ್ ಮಾಡಿ ಮದುವೆಯಾಗುತ್ತಾರೆ. ಹೀಗೆ ಮದುವೆಯಾಗಲು ಹೊರಟ ಜೋಡಿ ತಮ್ಮ ಮದುವೆ ಇಟಲಿಯಲ್ಲಿರಬೇಕೆಂದು ಬಯಸಿದ್ದರು. ಇದಕ್ಕಾಗಿ ಇಟಲಿಯಲ್ಲಿ ಮಂಟಪ, ಉಳಿದೊಳ್ಳಲು ಕೊಠಡಿ, ಎಲ್ಲಾ ತಯಾರಿ ಮಾಡಿದ್ದಾರೆ. ಆಗಸ್ಟ್ 31ಕ್ಕೆ ಮದುವೆ. ಇನ್ನೊಂದು ವಾರ ಮಾತ್ರ ಬಾಕಿ. ಇತ್ತ ವಧು ಹಾಗೂ ಆಕೆಯ ಮನೆಯವರು ಇಟಲಿಗೆ ಹಾರಿದ್ದಾರೆ. ಆದರೆ ವರ ಮಾತ್ರ ಮನೆಯಲ್ಲೇ ಬಾಕಿಯಾಗಿದ್ದಾನೆ. ಕಾರಣ ವರನ ಸಾಕು ನಾಯಿ. ಹೌದು, ಮನೆಯಲ್ಲಿದ್ದ ಸಾಕು ನಾಯಿ ವರನ ಪಾಸ್‌ಪೋರ್ಟ್‍‌ನ್ನು ಜಗಿದು ತಿಂದಿದೆ. ಹೀಗಾಗಿ ಮದುವೆ ತಯಾರಿಯಲ್ಲಿದ್ದ ವರ ಇದೀಗ ಪಾಸ್‌ಪೋರ್ಟ್ ನವೀಕರಿಸಲು ಓಡಾಡುತ್ತಿದ್ದಾನೆ.

ಇಂಗ್ಲೆಂಡ್‌ನ ಬಾಸ್ಟನ್ ನಗರದ ನಿವಾಸಿ ಡೋನಾಟೋ ಫ್ರಾಟ್ಟಾರೋಲಿ ತನ್ನ ಬಹುಕಾಲದ ಗೆಳತಿಯನ್ನು ವರಿಸಲು ಸಜ್ಜಾಗಿದ್ದಾನೆ. ಎರಡು ಕುಟುಂಬದಲ್ಲಿ ಸಂಭ್ರಮ. ಮದುವೆಯನ್ನು ಮತ್ತಷ್ಟು ಸ್ಮರಣೀಯವಾಗಿಸಲು ಇಟಲಿ ಪ್ರಖ್ಯಾತ ಸ್ಥಳದಲ್ಲಿ ಹೊಸ ಬದುಕಿಗೆ ಕಾಲಿಡಲು ಬಯಸಿದ್ದಾರೆ. ಇದಕ್ಕಾಗಿ ಮದುವೆ ಮಂಟಪ ಸೇರಿದಂತೆ ಎಲ್ಲಾ ಬುಕಿಂಗ್ ಮಾಡಲಾಗಿತ್ತು. 

ಒಂದು ನಾಯಿ ಮರಿಗಾಗಿ ಗೋವಾಗೆ ರಾಹುಲ್‌ ಗಾಂಧಿ ಖಾಸಗಿ ಭೇಟಿ!

ವರ ಬೋಸ್ಟನ್ ನಗರದ ನಿವಾಸಿಯಾಗಿದ್ದರೆ, ವಧು ಅಮೆರಿಕಾ ಪ್ರಜೆ. ಬೋಸ್ಟನ್ ಸಿಟಿ ಹಾಲ್‌ಗೆ ತೆರಳಿದ ವರ ಹಾಗೂ ವಧು, ಮದುವೆಯ ಕೆಲ ಕಾನೂನು ಪ್ರಕ್ರಿಯೆ ಮುಗಿಸಬೇಕಿತ್ತು. ಅರ್ಜಿ ಭರ್ತಿ, ಫೋಟೋ, ದಾಖಲೆಗಳ ಪ್ರತಿ ಸೇರದಂತೆ ಹಲವು ಕೆಲಸಗಳನ್ನು ಮುಗಿಸಿದ್ದಾರೆ. ಆದರೆ ಸರ್ಕಾರಿ ಕೆಲಸವಾಗಿದ್ದ ಕಾರಣ ದಿನವಿಡಿ ಕಳೆಯಬೇಕಾಗಿ ಬಂದಿದೆ. ಇತ್ತ ವರನ ಮನೆಯಲ್ಲಿದ್ದ ಮುದ್ದಿನ ಸಾಕು ನಾಯಿಗೆ ಆಕ್ರೋಶಗೊಂಡಿದೆ. 

ಬೆಳಗ್ಗೆಯಿಂದ ಸಂಜೆವರೆಗೆ ಮನೆಯಲ್ಲಿ ಯಾರೂ ಇಲ್ಲ. ಮನೆಯೊಳಗೆ ಬಂಧಿಯಾಗಿದ್ದ ನಾಯಿ ಸಿಟ್ಟು ಹೆಚ್ಚಾಗಿದೆ. ಹೀಗಾಗಿ ವರನ ಟೇಬಲ್ ಮೇಲಿದ್ದ ಪಾಸ್‌ಪೋರ್ಟ್ ಸೇರಿದಂತೆ ಇತರ ಕೆಲ ಫೈಲ್‌ಗಳನ್ನು ಕಚ್ಚಿ ತೆಗೆದು ಆಕ್ರೋಶ ಹೊರಹಾಕಿದೆ. ಇದರಲ್ಲಿ ವರನ ಪಾಸ್‌ಪೋರ್ಟ್ ಕೂಡ ಇತ್ತು. ನಾಯಿ ಈ ಪಾಸ್‌ಪೋರ್ಟ್ ಜಗಿದು ಬಹುತೇಕ ಬಾಗಿ ನುಂಗಿದೆ. ಕೆಲವು ಚೂರುಗಳನ್ನು ಮಾತ್ರ ಬಿಟ್ಟಿದೆ.

ಮದುವೆ ಅರ್ಜಿ ಭರ್ತಿ ಸೇರಿದಂತೆ ಇತರ ಕೆಲಸ ಮುಗಿಸಿ ಮನೆಗೆ ಬಂದ ವರನಿಗೆ ಶಾಕ್ ಆಗಿದೆ. ಕಾರಣ ತನ್ನ ಪಾಸ್‌ಪೋರ್ಟ್ ನಾಯಿ ಕಚ್ಚಿ ತಿಂದಿದೆ. ಒಂದು ಕ್ಷಣ ವರನಿಗೆ ದಿಕ್ಕೇ ತೋಚದಂತಾಗಿದೆ. ತಕ್ಷಣ ವಧುವಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾನೆ. ಅತ್ತ ಆಕೆಯ ತಲೆನೋವು ಹೆಚ್ಚಾಗಿದೆ. ಚೂರು ಚೂರಾದ ಪಾಸ್‌‌ಪೋರ್ಟ್ ಹಿಡಿದು ಪಾಸ್‌ಪೋರ್ಟ್ ಕಚೇರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

 

ಪತ್ನಿಗೆ ಮಾತ್ರವಲ್ಲ ಮೂರು ಸಾಕುನಾಯಿಗೂ ಜೀವನಾಂಶ ಕೊಡುವಂತೆ ಪತಿಗೆ ಸೂಚಿಸಿದ ಕೋರ್ಟ್‌

ಮರುದಿನ ಬೆಳಗ್ಗೆ ಪಾಸ್‌ಪೋರ್ಟ್ ಕಚೇರಿಗೆ ತೆರಳಿದ ವರ ನಡೆದ ಘಟನೆ ವಿವರಿಸಿ ಅತೀ ಶೀಘ್ರದಲ್ಲಿ ಪಾಸ್‌ಪೋರ್ಟ್ ನವೀಕರಿಸುವಂತೆ ಮನವಿ ಮಾಡಿದ್ದಾನೆ. ಇದಕ್ಕೆ ತಕ್ಷಣವೇ ಸ್ಪಂದಿಸಿರುವ ಪಾಸ್‌ಪೋರ್ಟ್ ವಿಭಾದ ಅಧಿಕಾರಿಗಳು ಪ್ರಕ್ರಿಯೆ ಆರಂಭಿಸಿದ್ದಾರೆ. ಆದರೆ ಕೆಲ ಕಾನೂನು ಪ್ರಕ್ರಿಯೆ ಕಾರಣ ಪಾಸ್‌ಪೋರ್ಟ್ ಕೈಸೇರಲು ಕೆಲ ದಿನಗಳು ಹಿಡಿಯುವ ಸಾಧ್ಯತೆ ಇದೆ.

ಆಗಸ್ಟ್ 29ರೊಳಗೆ ಪಾಸ್‌ಪೋರ್ಟ್ ಕೈಸೇರುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಭರವಸೆ ಮೇರೆಗೆ ವಧು ಹಾಗೂ ಆಕೆ ಕುಟುಂಬಸ್ಥರಿಗೆ ಇಟಲಿಗೆ ತೆರಳಲೂ ವರ ಸೂಚಿಸಿದ್ದಾನೆ. ತಾನು ಪಾಸ್‌ಪೋರ್ಟ್ ಕೈಸಿಕ್ಕ ಬೆನ್ನಲ್ಲೇ ಇಟಲಿಗೆ ಬರುವುದಾಗಿ ಹೇಳಿದ್ದಾನೆ. ಒಂದು ವೇಳೆ ಪಾಸ್‌ಪೋರ್ಟ್ ಕೈಸೇರದಿದ್ದರೆ ವಧುವಿನ ತವರು ಅಮೆರಿಕದಲ್ಲಿ ಆಯೋಜಿಸಿರುವ ಆರತಕ್ಷತೆಯನ್ನೇ ಮದುವೆಯಾಗಿ ಪರಿವರ್ತಿಸುವ ಪ್ಲಾನ್ ಮಾಡಿದ್ದಾನೆ.
 

Follow Us:
Download App:
  • android
  • ios