ಒಂದು ನಾಯಿ ಮರಿಗಾಗಿ ಗೋವಾಗೆ ರಾಹುಲ್ ಗಾಂಧಿ ಖಾಸಗಿ ಭೇಟಿ!
ತನ್ನ ಶೌರ್ಯಕ್ಕಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನಸ್ಕಿ ಅವರಿಂದ ಶ್ವಾನವೊಂದು ಗೌರವ ಪಡೆದುಕೊಂಡಿತ್ತು. ಈಗ ಅದೇ ಜಾತಿಯ ಶ್ವಾನವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತಮ್ಮ ದೆಹಲಿಯ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ.
ನವದೆಹಲಿ (ಆ.3): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಹಠಾತ್ ಆಗಿ ಗೋವಾಕ್ಕೆ ಭೇಟಿ ನೀಡಿದ್ದರು. ಹಾಗಂತ ಪಕ್ಷದ ಕಾರ್ಯಕ್ರಮವಾಗಲಿ, ರಾಜಕೀಯ ಕಾರ್ಯಕ್ರಮವಾಗಿಲಿ ಇದ್ದಿರಲಿಲ್ಲ. ಬುಧವಾರ ಗೋವಾಕ್ಕೆ ಖಾಸಗಿ ಭೇಟಿಗಾಗಿ ಬಂದಿದ್ದ ರಾಹುಲ್ ಗಾಂಧಿಯನ್ನು ಕಾಂಗ್ರೆಸ್ ನಾಯಕರು ಸ್ವಾಗತಿಸಿದ್ದರು. ಗುರುವಾರ ಅವರು ವಾಪಾಸ್ ದೆಹಲಿಗೆ ಹೋಗುವಾಗ ಅಪರೂಪದ ತಳಿಯ ಶ್ವಾನವನ್ನು ತಮ್ಮ ದೆಹಲಿ ನಿವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೆ. ತನ್ನ ಬುದ್ಧಿವಂತಿಕೆಗೆಹಾಗೂ ವಾಸನೆಯ ಮೂಲಕವೇ ಎಲ್ಲವನ್ನು ಕಂಡುಹಿಡಿಯುವ ಕಾರಣಕ್ಕೆ ಹೆಸರುವಾಸಿಯಾಗಿರುವ ಅಪರೂಪದ ಜ್ಯಾಕ್ ರಸೆಲ್ ಟೆರಿಯರ್ ಶ್ವಾನದ ಮರಿಯನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದಾರೆ. ರಾಹುಲ್ ಗಾಂಧಿ ಬುಧವಾರ ಗೋವಾಕ್ಕೆ ಆಗಮಿಸಿದರು, ಗುರುವಾರ ತಮ್ಮೊಂದಿಗೆ ಹೋಗುವಾಗ ಜಾಕ್ ರಸೆಲ್ ಟೆರಿಯರ್‌ನ ಎರಡು ಮರಿಯನ್ನು ತೆಗೆದುಕೊಂಡು ಹೋಗಲು ತೀರ್ಮಾನ ಮಾಡಿದ್ದರು. ಆದರೆ, ವಿಮಾನದಲ್ಲಿ ಒಂದೇ ಒಂದು ನಾಯಿಮರಿಯನ್ನು ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದರಿಂದ. ದೆಹಲಿಗೆ ಒಂದು ಮರಿಯನ್ನು ತೆಗೆದುಕೊಂಡು ಹೋಗಿದ್ದಾರೆ.
ಈ ಕುರಿತಾಗಿ ಮಾತನಾಡಿರುವ ಗೋವಾ ಮೂಲದ ಶ್ವಾನ ತಳಿಗಾರರು ಹಾಗೂ ವಕೀಲರು ಆಗಿರುವ ಶರ್ವಾಣಿ ಪಿತ್ರೆ ಮತ್ತು ಅವರ ಪತಿ ಸ್ಟಾನ್ಲಿ ಬ್ರಗಾಂಕಾ ಅವರು ಗಾಂಧಿಯವರ ಕಚೇರಿಯಿಂದ ಈ ಕುರಿತಾಗಿ ಕರೆ ಬಂದಿತ್ತು. ಅವರು, ಜಾಕ್ ರಸ್ಸೆಲ್ ಟೆರಿಯರ್‌ಗಳ ಲಭ್ಯತೆಯ ಬಗ್ಗೆ ವಿಚಾರಣೆ ಮಾಡಿದ್ದಲ್ಲದೆ, ಅದು ಇದೆ ಎಂದು ತಿಳಿದಾಗ ಉತ್ಸುಕರಾಗಿದ್ದರು ಎಂದು ಹೇಳಿದರು. ಗುರುವಾರ ಬೆಳಗ್ಗೆ ಕಾಂಗ್ರೆಸ್ ನಾಯಕ ಉತ್ತರ ಗೋವಾದ ಮಾಪುಸಾದಲ್ಲಿ ಬ್ರಗಾಂಕಾ ಕುಟುಂಬಕ್ಕೆ ಭೇಟಿ ನೀಡಿದರು. “ಅವರು (ಗಾಂಧಿ) ತುಂಬಾ ವಿನಮ್ರ ವ್ಯಕ್ತಿ. ಖುಷಿಯಿಂದಲೇ ನಮ್ಮೊಂದಿಗೆ ಅವರು ಸ್ನೇಹಿತರಂತೆ ಮಾತನಾಡಿದರು' ಎಂದು ಪಿತ್ರೆ ಹೇಳಿದ್ದಾರೆ.
"ಇವು ಗಟ್ಟಿಮುಟ್ಟಾದ ನಾಯಿಗಳ ವಿಶೇಷ ತಳಿಯಾಗಿದ್ದು, ಅವು ದೃಷ್ಟಿ ಮತ್ತು ವಾಸನೆಯ ಉತ್ತಮ ಪ್ರಜ್ಞೆಯನ್ನು ಹೊಂದಿವೆ ಮತ್ತು ದೀರ್ಘಾವಧಿಯ ಜೀವನವನ್ನು ಹೊಂದಿರುವ ಅತ್ಯಂತ ಬುದ್ಧಿವಂತ ಶ್ವಾನಗಳಾಗಿವೆ" ಎಂದು ಪಿತ್ರೆ ಹೇಳಿದ್ದಾರೆ.
ಭ್ರಷ್ಟಾಚಾರ ನಡೆಸಿದ್ರೆ ಸಹಿಸಲ್ಲ: ಕರ್ನಾಟಕದ ಸಚಿವರಿಗೆ ರಾಹುಲ್ ಗಾಂಧಿ ಎಚ್ಚರಿಕೆ
ಇತ್ತೀಚೆಗೆ ರಷ್ಯಾದಿಂದ ಉಕ್ರೇನ್ ಕೆಲವು ಪ್ರದೇಶಗಳನ್ನು ವಶಪಡಿಸಿಕೊಂಡಿತ್ತು. ಈ ವೇಳೆ ಅಲ್ಲಿನ ಪ್ರದೇಶದಲ್ಲಿ ರಷ್ಯಾದ ಸೈನಿಕರು ಇರಿಸಿದ್ದ ಮೈನ್ಸ್‌ಗಳನ್ನು ಜಾಕ್ ರಸೆಲ್ ಟೆರಿಯರ್ ತಳಿಯ ನಾಯಿಗಳು ಸಮರ್ಥವಾಗಿ ಕಂಡುಹಿಡಿದಿದ್ದವು. ಇದೇ ಸಾಹಸಕ್ಕಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸೇನಾ ಪದಕವನ್ನು ನೀಡಿ ಗೌರವಿಸಿದ್ದರು. ಪ್ರಸ್ತುತ ಭಾರತದಲ್ಲಿ ಅಜೀಂ ಪ್ರೇಮ್ ಜೀ ಹಾಗೂ ಕರೀನಾ ಕಪೂರ್ ಅವರಂಥ ವ್ಯಕ್ತಿಗಳು ಇವರಿಂದಲೇ ಜಾಕ್ ರಸೆಲ್ ಟೆರಿಯರ್ ಶ್ವಾನಗಳ ತಳಿಗಳನ್ನು ಪಡೆದುಕೊಂಡಿದ್ದಾರೆ. ಗೋವಾದಲ್ಲಿ, ಕಾಂಗ್ರೆಸ್ ನಾಯಕ ಪ್ರತಿಪಕ್ಷದ ನಾಯಕ ಯೂರಿ ಅಲೆಮಾವೊ ಮತ್ತು ಗೋವಾ ಕಾಂಗ್ರೆಸ್ ಅಧ್ಯಕ್ಷ ಅಮಿತ್ ಪಾಟ್ಕರ್ ಸೇರಿದಂತೆ ರಾಜ್ಯ ಕಾಂಗ್ರೆಸ್ ನಾಯಕರನ್ನು ಭೇಟಿಯಾದರು.
ದಿಲ್ಲಿ ಮಾರ್ಕೆಟ್‌ಗೆ ರಾಹುಲ್ ಗಾಂಧಿ ಭೇಟಿ ವ್ಯಾಪಾರಸ್ಥರ ಕಷ್ಟ-ಸುಖ ಆಲಿಕೆ