ಗಂಡ-ಹೆಂಡತಿ ಜಗಳ ಆಡೋದಾದ್ರೆ ಆಡಿ, ಮಕ್ಕಳ ಮುಂದೆ ಮಾತ್ರ ಅವೆಲ್ಲ ಇಡ್ಕೋಬೇಡಿ!
ಒಂದು ವಸ್ತು ಸರಿ ಇದೆ ಎಂದು ಒಬ್ಬರು, ಸರಿ ಇಲ್ಲವೆಂದು ಇನ್ನೊಬ್ಬರು ಹೇಳಿದಾಗ ನಾವು ಗೊಂದಲಕ್ಕೆ ಬೀಳ್ತೇವೆ. ಇನ್ನು ಮಕ್ಕಳ ಸ್ಥಿತಿ ಹೇಗಿರಬೇಡ. ಪಾಲಕರು ಸರಿ ತಪ್ಪಿನ ಬಗ್ಗೆ ಕಚ್ಚಾಡುತ್ತಿದ್ದರೆ ಅದು ಮಕ್ಕಳ ಭವಿಷ್ಯಕ್ಕೆ ಮುಳುವಾಗುತ್ತೆ.
ಮನೆಯೇ ಮೊದಲ ಪಾಠ ಶಾಲೆ. ಇದು ಎಲ್ಲರಿಗೂ ತಿಳಿದಿರುವ ಸಂಗತಿ. ಮಕ್ಕಳಾದವರು ಪುಸ್ತಕ ಓದಿ ಕಲಿಯುವುದಕ್ಕಿಂತ ಮನೆ, ಕುಟುಂಬಸ್ಥರು, ಸುತ್ತಲಿನ ಪರಿಸರ ನೋಡಿ ಹೆಚ್ಚು ಕಲಿಯುತ್ತಾರೆ. ಹಾಗಾಗಿಯೇ ಪಾಲಕರಿಗೆ ಜವಾಬ್ದಾರಿ ಹೆಚ್ಚು. ಮಕ್ಕಳನ್ನು ಒಬ್ಬ ಸುಸಂಸ್ಕೃತ, ಬುದ್ಧಿವಂತ ಪ್ರಜೆಯಾಗಿ ಮಾಡ್ಬೇಕು, ಮಕ್ಕಳು ಜೀವನದಲ್ಲಿ ಯಶಸ್ಸು ಪಡೆಯಬೇಕು, ವೈಯಕ್ತಿಕ ಜೀವನವನ್ನು ಸರಿದೂಗಿಸಿಕೊಂಡು ಹೋಗುವ ಆತ್ಮಸ್ಥೈರ್ಯ ಮಕ್ಕಳಿಗೆ ಇರಬೇಕು ಎಂದು ಪಾಲಕರು ಬಯಸ್ತಾರೆ. ಇದನ್ನು ಮಕ್ಕಳಿಗೆ ಕಲಿಸುವ ಸಂದರ್ಭದಲ್ಲಿ ಎಡವುತ್ತಾರೆ. ಮಕ್ಕಳಿಗೆ ನಾವು ಎಲ್ಲ ವಿಷ್ಯವನ್ನು ಸ್ಪೂನ್ ಫೀಡಿಂಗ್ ಮಾಡಲು ಸಾಧ್ಯವಿಲ್ಲ. ಯಾವುದು ತಪ್ಪು, ಯಾವುದು ಸರಿ, ಯಾವುದನ್ನು ಮಾಡಿದ್ರೆ ಪರಿಣಾಮ ಏನಾಗುತ್ತೆ ಎಂಬುದೆಲ್ಲವನ್ನು ನಾವು ಹೇಳಿ, ಮಾಡಿ ತೋರಿಸಲು ಆಗೋದಿಲ್ಲ. ಬಹುತೇಕ ಸಂಗತಿಗಳನ್ನು ಮಕ್ಕಳು ಪಾಲಕರನ್ನು ನೋಡಿಯೇ ಕಲಿತಿರುತ್ತಾರೆ. ಇದೇ ಕಾರಣಕ್ಕೆ ನೀವು ಮಕ್ಕಳ ಮುಂದೆ ಹೇಗೆ ನಡೆದುಕೊಳ್ಳುತ್ತೀರಿ ಎಂಬುದು ಬಹಳ ಮುಖ್ಯವಾಗುತ್ತದೆ.
ಸಂಸಾರ (Family) ಎಂದ ಮೇಲೆ ಭಿನ್ನಾಭಿಪ್ರಾಯಗಳು ಸಹಜ. ಆದ್ರೆ ನಿಮ್ಮ ಗಲಾಟೆ, ಜಗಳಗಳೇ ಮುಂದೆ ನಿಮ್ಮ ಮಕ್ಕಳ (Children) ಜೀವನ ಹಾಳು ಮಾಡಬಾರದು. ಅದೆಷ್ಟೋ ಮಕ್ಕಳ ಬದುಕು ಹಾಳಾಗಲು ಪರೋಕ್ಷವಾಗಿ ಪಾಲಕರು ಕಾರಣವಾಗಿದ್ದಾರೆ. ಪಾಲಕರ ಸ್ಥಾನಕ್ಕೆ ಬಂದ್ಮೇಲೆ ನೀವು ಹೆಜ್ಜೆ ಹೆಜ್ಜೆಯನ್ನೂ ಆಲೋಚಿಸಿ ಇಡಬೇಕು. ನೀವಿಟ್ಟ ಒಂದು ಗ್ಲಾಸ್ ಕಪ್ ಕೂಡ ಮಕ್ಕಳ ಬದುಕನ್ನು ಬದಲಿಸಬಹುದು.
ಬಲವಂತವಾಗಿ ಸ್ವೀಟ್ ತಿನ್ನಿಸಿದ ವರ, ಮುಖಕ್ಕೆ ಉಗುಳಿ, ಕಾಲಿನಿಂದ ತುಳಿದು ರಂಪಾಟ ಮಾಡಿದ ವಧು!
ಪ್ರತಿಯೊಬ್ಬ ಮನುಷ್ಯನ ಆಲೋಚನೆ (Thought) , ಆಸಕ್ತಿ, ಅಭಿಪ್ರಾಯ ಭಿನ್ನವಾಗಿರುತ್ತದೆ. ಪತಿ ಹೇಳಿದ್ದೇ ಸರ್ವಶ್ರೇಷ್ಠವೆಂದಾಗ್ಲಿ ಇಲ್ಲ ಪತ್ನಿ ನಡೆದಿದ್ದೇ ದಾರಿ ಎಂದಾಗ್ಲಿ ಒಪ್ಪಿಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ. ಯಾವುದೋ ವಸ್ತುವನ್ನು ಖರೀದಿಸುವಾಗ ಕೂಡ ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ಬರಬಹುದು. ಆದ್ರೆ ಅದನ್ನು ನಿಮ್ಮ ಮಕ್ಕಳ ಮುಂದೆ ಪ್ರದರ್ಶಿಸುವ ಅಗತ್ಯವಿಲ್ಲ. ನಿಮ್ಮಿಬ್ಬರ ಭಿನ್ನ ಅಭಿಪ್ರಾಯಗಳು ನಿಮ್ಮ ಮಕ್ಕಳ ಮೇಲೆ ದ್ವಂದ್ವವನ್ನು ಸೃಷ್ಟಿಸುತ್ತದೆ. ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ತಿಳಿಯಲು ಅವರಿಗೆ ಸಾಧ್ಯವಾಗೋದಿಲ್ಲ. ದಂಪತಿ ಮಧ್ಯೆ ಯಾವುದೇ ವಿಷ್ಯಕ್ಕೆ ಭಿನ್ನತೆಯಿದ್ರೂ ಇಬ್ಬರು ಚರ್ಚಿಸಿ ಒಂದೇ ನಿರ್ಧಾರಕ್ಕೆ ಬಂದ್ಮೇಲೆ ಮಕ್ಕಳಿಗೆ ಹೇಳೋದು ಸೂಕ್ತ.
ಮಗುವಿಗೆ ಬಟ್ಟೆ ಖರೀದಿ ವಿಷ್ಯ ಚರ್ಚೆಯಾಗ್ತಿರುತ್ತದೆ ಎಂದಿಟ್ಟುಕೊಳ್ಳಿ. ಪತ್ನಿ ಅದು ಬೇಡವೆಂದ್ರೆ ಪತಿ ಅದು ಬೇಕು ಎನ್ನುತ್ತಿರುತ್ತಾನೆ. ಇಬ್ಬರ ದೃಷ್ಟಿಕೋನದಿಂದ ಅವರಿಬ್ಬರು ಮಾತನಾಡ್ತಿರೋದು ಸರಿಯಾಗಿಯೇ ಇರುತ್ತದೆ. ಆದ್ರೆ ಇಬ್ಬರ ವಾದವನ್ನು ಕೇಳ್ತಿದ್ದ ಮಗು ಮಾತ್ರ ಗೊಂದಲಕ್ಕೆ ಬೀಳುತ್ತದೆ. ಅಪ್ಪ ಹೇಳಿದ್ದು ಸರಿಯಾಗಿದೆಯಾ ಇಲ್ಲ ಅಮ್ಮ ಹೇಳಿದ್ದಾ ಎಂಬ ಪ್ರಶ್ನೆ ತಲೆಯಲ್ಲಿ ಓಡ್ತಿರುತ್ತದೆ. ಇನ್ಸ್ಟಾಗ್ರಾಮ್‌ನಲ್ಲಿ ಖ್ಯಾತ ವಾಗ್ಮಿ, ಶಿಕ್ಷಣ ತಜ್ಞ ಡಾ. ಗುರುರಾಜ್ ಕರ್ಜಿಗಿ ಅವರು ಮಾತನಾಡಿರುವ ವೀಡಿಯೋವೊಂದು ವೈರಲ್ ಆಗಿದ್ದು, ಪೋಷಕರ ಗೊಂದಲ ಮಕ್ಕಳ ಮೇಲೆ ಹೇಗೆ ಪರಿಣಾಮ ಬೀರಬಹುದು ಎಂಬುದನ್ನು ಸ್ಪಷ್ಟವಾಗಿ ವಿವರಿಸಿದ್ದಾರೆ.
Personality Tips: ಭಾರೀ ಬದಲಾವಣೆಗೆ ನಿಮ್ ಮನಸ್ಸು ಸಿದ್ಧವಾಗಿದ್ಯಾ? ಅದನ್ನ ಅರಿಯೋದು ಹೇಗೆ?
ಅವರ ಪ್ರಕಾರ, ತಂದೆ ತಾಯಿ ಇಬ್ಬರು ಎಂದೂ ಡಬಲ್ ಒಪಿನಿಯನ್ ಹೊಂದಿರಬಾರದು. ಇದು ಮಕ್ಕಳನ್ನು ಕನ್ಫ್ಯೂಸ್ ಮಾಡುತ್ತೆ. ಮಕ್ಕಳು ತಂದೆ ಹಾಗೂ ತಾಯಿಗೆ ಯಾವುದು ಬೇಕು ಎಂಬುದನ್ನು ಪತ್ತೆ ಮಾಡಿ, ಅದ್ರಂತೆ ಮಾತನಾಡಲು ಶುರು ಮಾಡ್ತಾರೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಪಾಲಕರ ಮಧ್ಯೆ ಭಿನ್ನಾಭಿಪ್ರಾಯವಿದ್ರೆ ಇಬ್ಬರೇ ಅದ್ರ ಬಗ್ಗೆ ಚರ್ಚೆ ನಡೆಸಿ. ಇಬ್ಬರೂ ಒಂದು ನಿರ್ಧಾರಕ್ಕೆ ಬನ್ನಿ. ಆ ನಿರ್ಧಾರವನ್ನು ನಿಮ್ಮ ಮಕ್ಕಳ ಮುಂದೆ ಹೇಳಿ. ಅದ್ರ ಬದಲು ಮಕ್ಕಳ ಮುಂದೆ ಇಬ್ಬರೂ ವಾದಕ್ಕೆ ಇಳಿಯಬೇಡಿ ಎನ್ನುತ್ತಾರೆ ದಿಲೀಪ್. ಇದಕ್ಕೆ ಕೆಲ ಇನ್ಸ್ಟಾಗ್ರಾಮ್ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಮನೆಯಲ್ಲೂ ಹೀಗೆ ಆಗುತ್ತೆ ಎಂದಿದ್ದಾರೆ.