#Feelfree: ಆಫೀಸಲ್ಲೂ ಪೋರ್ನ್‌ ನೋಡ್ತೀನಿ, ಪರವಾಗಿಲ್ವಾ?

ಮನೇಲೂ, ಆಫೀಸಲ್ಲೂ ಪದೇ ಪದೆ ಪೋರ್ನ್‌ ಸೈಟ್‌ಗೆ ವಿಸಿಟ್ ಕೊಡೋದು, ರಾತ್ರಿ ಹಗಲು ಅದನ್ನೇ ಯೋಚನೆ ಮಾಡೋದು ಪೋರ್ನ್‌ ಅಡಿಕ್ಷನ್ನ ಸೂಚನೆ. ಇದರಿಂದ ಹೊರಬರದಿದ್ದರೆ ಎಲ್ಲದರಲ್ಲೂ ನಿಮ್ಮ ಪ್ರೊಡಕ್ಟಿವಿಟಿ ಕಡಿಮೆಯಾಗುತ್ತದೆ.

 

Do not watch porn in office it will ruin carrier

ಪ್ರಶ್ನೆ: ನಾನು ಮೂವತ್ತು ವರ್ಷದ ಅವಿವಾಹಿತ. ಖಾಸಗಿ ಕಂಪನಿಯಲ್ಲಿ ಒಳ್ಳೆಯ ಕೆಲಸದಲ್ಲೇ ಇದ್ದೀನಿ. ಆದರೆ ನನಗೆ ರೂಮಿನಲ್ಲೂ ಆಫೀಸಿನಲ್ಲೂ ಪೋರ್ನ್‌ ನೋಡುವ ಗೀಳು ಅಂಟಿಕೊಂಡಿದೆ. ಇದರಿಂದಾಗಿ ಕಚೇರಿ ಕೆಲಸದ ಮೇಲೂ ಕೆಟ್ಟ ಪ್ರಭಾವ ಆಗುತ್ತಿದೆ.  ಹೊರಬರಲು ಆಗುತ್ತಿಲ್ಲ. ಸಹಾಯ ಮಾಡಿ.

ಉತ್ತರ: ಸಂಗಾತಿ ಬಳಿ ಇಲ್ಲದವರು, ಸಂಗಾತಿಯಿದ್ದರೂ ಮಿಲನದ ರುಚಿ ಹೆಚ್ಚಿಸಿಕೊಳ್ಳಲು ಬಯಸುವವರು, ಸೆಕ್ಸ್‌ ಲೈಫ್‌ನ್ನು ಇನ್ನಷ್ಟು ಸ್ಪೈಸಿ ಆಗಿಸಿಕೊಳ್ಳಬೇಕು ಅಂತ ಬಯಸುವವರು ಆಗೀಗೊಮ್ಮೆ ಪೋರ್ನ್‌ ಸೈಟ್‌ ವಿಸಿಟ್‌ ಮಾಡೋದು ಸಹಜ. ಇದೇನೂ ತಪ್ಪಲ್ಲ ಅಂತಾರೆ ಸೆಕ್ಸ್‌ ಥೆರಪಿಸ್ಟ್‌ಗಳು. ಇದರಿಂದ ಸಹಜ ಆರೋಗ್ಯಕರ ಲೈಂಗಿಕ ಜೀವನ ಲಭ್ಯವಾಗುತ್ತೆ. ಆದರೆ ಇದು ಅತಿಯಾಗಬಾರದು. ಪದೇ ಪದೇ ಪೋರ್ನ್‌ ಸೈಟ್‌ ಮನೋಡೋದು. ಕಚೇರಿಯಲ್ಲಿದ್ದಾಗ್ಲೂ ಅದನ್ನು ನೋಡಬೇಕು ಅನಿಸೋದು, ಇದರಿಂದ ಹೊರ ಬರದಿದ್ದರೆ ಅಪಾಯ ಕಟ್ಟಿಟ್ಟದ್ದು.

 Do not watch porn in office it will ruin carrier

ನೀವು ಹೀಗೆ ಮಾಡಬಹುದು. ಪೋರ್ನ್‌ ನೋಡಲು ನಿರ್ದಿಷ್ಟ ಸಮಯ ಮೀಸಲಿಡಿ. ವಾರದಲ್ಲಿ ಅರ್ಧ ಗಂಟೆ, ವಾರದಲ್ಲಿ ಎರಡು ದಿನ ಅರ್ಧ ಗಂಟೆ- ಹೀಗೆ. ಪ್ರತಿ ದಿನ ಪೋರ್ನ್‌ ನೋಡೋದು ಸ್ವಲ್ಪ ಹೆಚ್ಚೇ. ಹಾಗೇ ಒಂದು ಸಮಯವನ್ನೂ ಗೊತ್ತು ಮಾಡಿಕೊಳ್ಳಿ. ಉದಾಹರಣೆಗೆ- ರಾತ್ರಿ ಹತ್ತು ಗಂಟೆಗೆ. ಅದನ್ನು ಮೀರಬೇಡಿ.  ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಪೋರ್ನ್‌ ಸೈಟ್‌ಗಳನ್ನು ತೆರೆಯಬೇಡಿ. ಕಚೇರಿ ಇರುವುದು ಕಚೇರಿ ಕೆಲಸಕ್ಕಾಗಿಯೇ ಹೊರತು ನಿಮ್ಮ ವೈಯಕ್ತಿಕ ಸಂಗತಿಗಳಿಗಾಗಿ ಅಲ್ಲ. ಅದನ್ನು ನೋಡುವುದು ಸಹೋದ್ಯೋಗಿಗಳಿಗೆ ಗೊತ್ತಾದರೆ ನೀವು ಚೀಪ್‌ ಅನಿಸಿಕೊಳ್ಳುತ್ತೀರಿ. ಇತರರ ಜೊತೆಗಿನ ಸಂಬಂಧದ ಮೇಲೂ ಅದು ಕರಾಳ ನೆರಳು ಚೆಲ್ಲಬಹುದು. 

#Feelfree: ನಾವಿಬ್ರೂ ಮಂಚದಲ್ಲಿರುವಾಗ ಮಗ ನೋಡಿಬಿಟ್ಟ! 
ನೀವು ಸಾಧ್ಯವಿದ್ದರೆ ವಿವಾಹಿತರಾಗಿ ಸಮೃದ್ಧ ಲೈಂಗಿಕ ಸುಖವನ್ನು ಸವಿಯುವುದು ಒಳ್ಳೆಯದು. ಅಥವಾ ಇದು ಸಾಧ್ಯವಾಗದಿದ್ದರೆ ಲಿವ್‌ ಇನ್‌ ಮಾಡಿಕೊಳ್ಳುವುದು, ಲೈಂಗಿಕ ಸಂಗಾತಿಗಳನ್ನು ಹುಡುಕಿಕೊಳ್ಳುವುದೂ ಈಗಿನ ಕಾಲದಲ್ಲಿ ತಪ್ಪಲ್ಲ. ಅದು ನಿಮ್ಮ ಸಾಂಸಾರಿಕ ಹಾಗೂ ಸಾಮಾಜಿಕ ಹಿನ್ನೆಲೆಯಲ್ಲಿ ಆಧರಿಸಿದೆ. ಆಗ ಸಂಗಾತಿಯ ಜೊತೆಗೆ ಪೋರ್ನ್‌ ಹಂಚಿಕೊಂಡು ಸವಿಯಬಹುದು. ಅದು ನಿಮ್ಮ ಸೆಕ್ಸ್‌ ಜೀವನವನ್ನು ಇನ್ನಷ್ಟು ರಸಮಯ ಆಗಿಸುತ್ತದೆ.
ಇತರ ಆರೋಗ್ಯಕರ ಹವ್ಯಾಸಗಳನ್ನು ರೂಢಿಸಿಕೊಂಡಾಗ ಪೋರ್ನ್‌ ಅನ್ನು ಅವಾಯ್ಡ್‌ ಮಾಡಬಹುದು. ಉದಾಹರಣೆಗೆ- ಮನಸ್ಸಿಗೆ ಮುದ ಕೊಡುವ ಸಂಗೀತ ಕೇಳುವುದು, ಸಾಹಿತ್ಯ ಕೃತಿಗಳನ್ನು ಓದುವುದು, ಗೆಳೆಯ/ಗೆಳತಿಯರೊಡನೆ ಚಾಟ್‌ ಮಾಡುವುದು ಇತ್ಯಾದಿ. ನೀವು ಪೋರ್ನ್‌ ನೋಡುವ ಹೊತ್ತು ಎಷ್ಟು, ಅದರಿಂದ ಉಪಯೋಗ ಏನಾದರೂ ಇದೆಯಾ, ಅಥವಾ ನಷ್ಟವೇ ಹೆಚ್ಚಾ, ಆ ಹೊತ್ತಿನಲ್ಲಿ ಬೇರೇನಾದರೂ ಫ್ರೀಲಾನ್ಸ್‌ ಕೆಲಸ ಅಥವಾ ವರ್ಕ್‌ ಫ್ರಮ್‌ ಹೋಮ್‌ ಮಾಡಿದರೆ ಹೆಚ್ಚು ಹಣಕಾಸು ಗಳಿಸಬಹುದಾ? ಈ ಸಾಧ್ಯತೆಗಳನು ಅನ್ವೇಷಿಸಿ. ನಷ್ಟ ಆಗುವಂಥದ್ದನ್ನು ಕೈಬಿಡಿ, ಲಾಭವಾಗುವಂಥದ್ದನ್ನು ರೂಢಿಸಿಕೊಳ್ಳಿ.

Do not watch porn in office it will ruin carrier

#Feelfree: ಸೈಬರ್‌ಸೆಕ್ಸ್ ಮೂಲಕ ಸಂಗಾತಿಗೆ ಮೋಸ ಮಾಡಿದೆನಾ?
ಪ್ರತಿದಿನ ಮುಂಜಾನೆ ಮತ್ತು ಸಂಜೆ ಪಾರ್ಕ್‌ಗೆ ಹತ್ತು ರೌಂಡ್‌ ಹಾಕುವುದು, ಜಾಗ್‌ ಮಾಡುವುದು, ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವುದು ಮುಂತಾದ ದೈಹಿಕ ಚಟುವಟಿಕೆಗಳಿಂದ ದೇಹ ಚುರುಕಾಗುತ್ತದೆ, ಆರೋಗ್ಯಕರ ದೇಹದಲ್ಲಿ ಆರೋಗ್ಯಕರ ಮನಸ್ಸು. ಇದರಿಂದ ಪೋರ್ನ್‌ ನೋಡುವ ಪ್ರಮಾಣ ಇಳಿಯುತ್ತದೆ. ಪೋರ್ನ್‌ ನೋಡಬೇಕೆಂಬ ಹಂಬಲ ಹೆಚ್ಚಾಗಿ ಕಾಡುವುದು ಒಂಟಿಯಾಗಿ ಇರುವಾಗ. ಗುಂಪಿನಲ್ಲಿದ್ದಾಗ, ಗೆಳೆಯರೊಡನೆ ಇರುವಾಗ, ಮನೆಯಲ್ಲಿ ಬಂಧುಗಳೊಡನೆ ಬೆರೆತಿರುವಾಗ ಇದು ಕಾಡುವುದಿಲ್ಲ. ಇಂಥ ಏಕಾಂಗಿತನದ ಸಂದರ್ಭಗಳನ್ನು ತಪ್ಪಿಸಿಕೊಳ್ಳಿ.

#Feelfree: ಗಂಡ ಮಲಗಿದ್ದಾಗ ಮಾತ್ರ ನನ್ ಪಕ್ಕ ಬರ್ತಾಳೆ! 

Latest Videos
Follow Us:
Download App:
  • android
  • ios