ಮಲಾವಿಯ ಫಲೋಂಬೆ ಎಂಬಲ್ಲಿ ಚಾರ್ಲ್ಸ್ ಮಜಾವೆ ಎಂಬ ವ್ಯಕ್ತಿ ಮಂಚದಲ್ಲಿದ್ದಾಗಲೇ ಮೃತಪಟ್ಟಿದ್ದಾನೆ. ಸತ್ತ ಕ್ಷಣ: ಸೆಕ್ಸ್‌ನ ತುರೀಯ ಸ್ಥಿತಿ ಅನುಭವಿಸುತ್ತಿದ್ದಾಗ. ಅರ್ಥಾತ್ ಆರ್ಗ್ಯಾಸಂ ವೇಳೆ. ಪೋಸ್ಟ್ ಮಾರ್ಟಮ್ ನಡೆಸಿದ ವೈದ್ಯರು ಕೂಡ, ಇದು ಮಿಲನದ ಸಂದರ್ಭದಲ್ಲಿಯೇ ಆಗಿರುವ ಸಾವು ಎಂದು ಖಚಿತಡಿಸಿದ್ದಾರೆ. ಇದು ಹೇಗಾಗುತ್ತದೆ?

ಲೈಂಗಿಕ ಸುಖದ ಉತ್ಕಟಾವಸ್ಥೆಯಲ್ಲಿ ಈ ವ್ಯಕ್ತಿಯ ಮಿದುಳಿನ ರಕ್ತನಾಳಗಳು ಬಿರಿದು ಸ್ಫೋಟಗೊಂಡದ್ದೇ ಈತನ ಸಾವಿಗೆ ಕಾರಣ ಎಂದು ವೈದ್ಯರು ಶರಾ ಬರೆದಿದ್ದಾರೆ. ಆತನ ದೇಹದ ಎಲ್ಲ ರಕ್ತನಾಳಗಳೂ ಬಹುಶಃ ಈ ಸಮಯದಲ್ಲಿ ಉದ್ವೇಗದಿಂದ ಚೀರಿಕೊಂಡಿರಬಹುದು. ಅದನ್ನು ಮೆದುಳಿಗೆ ತಡೆಯಲಾಗದೆ ಹೋಗಿರುವ ಸಾಧ್ಯತೆ ಇದೆ. ಅಂದ ಹಾಗೆ ಸಾಯುವ ಸಂದರ್ಭದಲ್ಲಿ ಈತ ಸೆಕ್ಸ್ ನಡೆಸುತ್ತಾ ಇದ್ದುದು ಒಂದು ವೇಶ್ಯಾಗೃಹದಲ್ಲಿ, ಒಬ್ಬಳು ವೇಶ್ಯೆಯ ಜೊತೆಗೆ. ಈಕೆಯನ್ನು ಈ ಕೇಸಿನಲ್ಲಿ ಅಪರಾಧಿ ಎಂದು ಪರಿಗಣಿಸಿಲ್ಲ. ಸೋ, ಈಕೆಗೆ ಶಿಕ್ಷೆಯಿಲ್ಲ.

ಪಿರಿಯಡ್ಸ್ ಸಮಯದಲ್ಲಿ ಸೆಕ್ಸ್ : ಗಮನಹರಿಸಬೇಕಾದ ಕೆಲವು ವಿಷಯಗಳು ...

ಇಂಥದೇ ಇನ್ನೊಂದು ಘಟನೆ ಕಳೆದ ವಾರ ಭಾರತದ ನಾಗ್ಪುರದಲ್ಲಿ ನಡೆದಿತ್ತು. ಇಲ್ಲಿ ಒಬ್ಬ ವಿವಾಹಿತ, ಇನ್ನೊಬ್ಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಇವನಿಗೆ ಮದುವೆಯಾಗಿ ಒಂದು ಮಗುವೂ ಇತ್ತು. ಆದರೂ ಈ ಅಕ್ರಮ ಸಂಬಂಧ ಐದು ವರ್ಷಗಳಿಂದ ನಡೆದಿತ್ತು. ಇವನ ಸಾವು ಸಂಭವಿಸಿದ್ದು ಒಂದು ವಿಚಿತ್ರ ಬಗೆಯಲ್ಲಿ. ಇವರಿಬ್ಬರೂ ಒಂದು ಹೋಟೆಲ್ ರೂಮಿನಲ್ಲಿ ಮೀಟ್ ಆಗುತ್ತಿದ್ದರು. ಈಗಲೂ ಹಾಗೇ ಮಾಡಿದ್ದರು. ಸೆಕ್ಸ್‌ಗೆ ಇನ್ನಷ್ಟು ಮಸಾಲೆ, ಹುರುಪು ತುಂಬಲು ಇವನ ಗೆಳತಿ ಇವನ ಕೈಕಾಲುಗಳನ್ನು ಕಟ್ಟಿ ಹಾಕಿದ್ದಾಳೆ. ನಂತರ ನೈಲಾನ್ ದಾರದಿಂದ ಕುತ್ತಿಗೆಗೂ ಬಿಗಿದಿದ್ದಾಳೆ. ಇದು ಸೆಕ್ಸ್‌ನ ಆರ್ಗ್ಯಾಸಂ ಅನ್ನು ಇನ್ನಷ್ಟು ಉದ್ದೀಪಿಸುತ್ತದೆ ಎಂಬುದು ಇವರ ಉದ್ದೇಶ. ಆದರೆ, ಸೆಕ್ಸ್ ಎಲ್ಲ ಮುಗಿಸಿ ಇವನ ಸಂಗಾತಿ ಎದ್ದು ಬಾತ್‌ರೂಮಿಗೆ ಹೋದಾಗ ಇವನ ಕುತ್ತಿಗೆಯ ಗಂಟು ಬಿಗಿದು ಕೊಂಡಿದೆ. ಕೈಕಾಲು ಅಲ್ಲಾಡಿಸಲು ಸಾಧ್ಯವಾಗದೆ ಹೋದ್ದರಿಂದ ಕುತ್ತಿಗೆ ಬಿಗಿದು ಉಸಿರುಗಟ್ಟಿಯೇ ಈತ ಸತ್ತು ಹೋಗಿದ್ದಾನೆ. ಗೆಳತಿ ಬಾತ್‌ರೂಮಿನಿಂದ ಬಂದು ನೋಡಿದಾಗ ಇವನ ಉಸಿರು ನಿಂತು ಹೋಗಿದೆ. ಕೂಡಲೇ ಹಗ್ಗವನ್ನೆಲ್ಲ ಬಿಡಿಸಿ ಸಹಾಯಕ್ಕೆ ಕರೆದಿದ್ದಾಳೆ. ಆದರೆ ಅಷ್ಟರಲ್ಲಾಗಲೇ ಆತನ ಕತೆ ಮುಗಿದಿದೆ. ಅಂದಹಾಗೆ ಈಕೆಯ ಮೇಲೆ ಕೇಸು ಜಡಿಯಲಾಗಿದೆಯೇ ಇಲ್ಲವೇ ತಿಳಿಯದು.

ಯಾವ ರಾಶಿಗೆ ಏನ್ ಸೇವಿಸಿದ್ರೆ ಒಳ್ಳೇದು..? ಸಿಕ್ಕಿದ್ದೆಲ್ಲಾ ತಿಂದ್ರೆ ಸಂಕಷ್ಟ ...

ಇದಕ್ಕಾಗಿಯೇ ವೈದ್ಯರು ಮತ್ತು ಲೈಂಗಿಕ ತಜ್ಞರು ಹೇಳುವುದು ಹೀಗೆ: ಲೈಂಗಿಕ ಬದುಕನ್ನು ತುಂಬಾ ಕಾಲ ಖಾಲಿ ಬಿಡಬಾರದು. ಹೃದಯ ಸಮಸ್ಯೆ ಇರುವವರು ಕೂಡ, ಹೃದಯಾಘಾತದಿಂದ ಚೇತರಿಸಿಕೊಂಡ ಕೆಲವು ತಿಂಗಳ ಬಳಿಕ ಸೆಕ್ಸ್‌ನಲ್ಲಿ ಆಕ್ಟಿವ್‌ ಆಗಿರಲು ಏನೂ ತೊಂದರೆಯಿಲ್ಲ. ಹೃದಯದ ಸಮಸ್ಯೆ ಇದೆ ಎಂದು ಸೆಕ್ಸನ್ನು ಪೂರ್ತಿಯಾಗಿ ನಿಲ್ಲಿಸಿಯೇ ಬಿಟ್ಟರೆ, ಮುಂದೆ ಯಾವತ್ತೋ ಅದನ್ನು ನಡೆಸಿದಾಗ ಪ್ರಾಬ್ಲಮ್ ಆಗುವ ಸಾಧ್ಯತೆ ಇದೆ. ಅಷ್ಟು ದಿನ ಕಟ್ಟಿಕೊಂಡಿದ್ದುದು ಇದ್ದಕ್ಕಿದ್ದಂತೆ ಧುಮುಕುವಾಗ ದೇಹಕ್ಕೆ ತಡೆಯಲಾಗದ ಅವಸ್ಥೆ ಉಂಟಾಗುವುದು ಸಹಜ ಅಲ್ಲವೇ. ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿಯಲ್ಲಿ ಪ್ರಕಟವಾದ ಒಂದು ವೈಜ್ಞಾನಿಕ ರಿಸರ್ಚ್ ಪೇಪರ್ ಹೇಳುವ ಪ್ರಕಾರ, ಹೃದಯದ ಕಾಯಿಲೆ ಇದ್ದವರು ಸಹ ಆಗಾಗ ನಿಯಮಿತ ರೀತಿಯಲ್ಲಿ ಲೈಂಗಿಕ ಚಟುವಟಿಕೆ ನಡೆಸಿದರೆ ಹೆಚ್ಚಿನ ಕಾಲ ನೆಮ್ಮದಿಯಿಂದ ಬದುಕಬಹುದು. ಹಾಗಂತ ತಾನು ಸಿಕ್ಕಾಪಟ್ಟೆ ಆರೋಗ್ಯವಂತನಾಗಿದ್ದೀನಿ ಅಂತ ತೋರಿಸಿಕೊಳ್ಳುವ ಅತಿ ಲೈಂಗಿಕ ಚಟುವಟಿಕೆ ಕೂಡ ಒಳ್ಳೆಯದಲ್ಲವಂತೆ.

ಇದನ್ನು ನೋಡಿದರೆ ಮಹಾಭಾರತದ ಪಾಂಡು ರಾಜನ ನೆನಪಾಗುತ್ತದೆ. ಆತನೂ ರಾಣಿ ಮಾದ್ರಿಯ ಜೊತೆಗೆ ಮಿಲನದ ಸಂದರ್ಭದಲ್ಲಿಯೇ ಮೃತಪಟ್ಟವನು. ಋಷಿಗಳ ಶಾಪದಿಂದ ಬಹುಕಾಲ ಕಟ್ಟಿಟ್ಟ ಆತನ ಲೈಂಗಿಕಾಂಕ್ಷೆ ಒಮ್ಮೆಲೇ ಗರಿಗೆದರಿ ಹರಿದದ್ದೇ ಆತನ ಮರಣಕ್ಕೆ ಕಾರಣ.

ಅಧಿಕ ರಕ್ತದೊತ್ತಡ ದೂರ ಮಾಡುತ್ತೆ ಸ್ಟ್ರೆಚಿಂಗ್: ಎಷ್ಟೊತ್ತು ಮಾಡ್ಬೇಕು..? ...