ಹಲವು ದಿನಗಳಿಂದ ಹುಡುಗಿಯೊಬ್ಬಳಿಗೆ ನೀವು ಕಾಳು ಹಾಕ್ತಾ ಇದ್ದೀರಿ,ಆದ್ರೆ ಅದೆಷ್ಟೇ ಪ್ರಯತ್ನಿಸಿದ್ರೂ ಆಕೆ ನಿಮ್ಮತ್ತ ತಿರುಗಿ ಕೂಡ ನೋಡುತ್ತಿಲ್ಲ ಎನ್ನೋದೆ ಚಿಂತೆಯ ವಿಷಯವಾಗಿದೆಯೇ? ಡೋಂಟ್‌ ವರಿ, ಕೆಂಪು ಬಣ್ಣದ ಟೀ ಶರ್ಟ್‌ ಧರಿಸಿ ಆ ಹುಡುಗಿ ಮುಂದೆ ಹಾದು ಹೋಗಿ,ಆಕೆ ನಿಮ್ಮತ್ತ ಕಳ್ಳ ನೋಟ ಬೀರದಿದ್ರೆ ಕೇಳಿ! ಅರೇ, ಕೆಂಪು ಟೀ ಶರ್ಟ್‌ಗೂ ಆಕೆ ನೋಡೋದಕ್ಕೂ ಏನು ಸಂಬಂಧ ಎಂಬ ಸಂಶಯ ನಿಮ್ಮನ್ನು ಕಾಡುತ್ತಿರಬಹುದು.

ಆದ್ರೆ ಕೆಂಪು ಬಣ್ಣಕ್ಕೆ ಇಂಥದೊಂದು ಆಕರ್ಷಣೆಯ ಗುಣವಿದೆ ಎಂಬುದನ್ನು ಅನೇಕ ಮನೋವೈದ್ಯಕೀಯ ಅಧ್ಯಯನಗಳು ಸಾಬೀತುಪಡಿಸಿವೆ. ಬಹುಶಃ ಇದೇ ಕಾರಣಕ್ಕೋ ಏನೋ ವ್ಯಾಲೆಂಟೆನ್ಸ್‌ ಡೇ ದಿನ ಇನ್ನೂ ಲವರ್‌ ಸಿಗದ ಹುಡುಗ, ಹುಡುಗೀರು ಕೆಂಪು ಬಣ್ಣದ ಡ್ರೆಸ್‌ ಧರಿಸಿ ಓಡಾಡೋದು! ಪ್ರಪೋಸ್‌ ಮಾಡೋವಾಗ ಕೂಡ ಕೆಂಪು ಬಣ್ಣದ ಬಟ್ಟೆ ಧರಿಸೋದನ್ನು ಸಿನಿಮಾಗಳಲ್ಲಿ ನೋಡಿಯೇ ಇರುತ್ತೀರಿ. ಈ ಆಕರ್ಷಕ, ರೊಮ್ಯಾಂಟಿಕ್‌ ಕೆಂಪು ಬಣ್ಣದ ಕುರಿತ ಒಂದಿಷ್ಟು ಆಸಕ್ತಿದಾಯಕ ಮಾಹಿತಿಗಳು ಇಲ್ಲಿವೆ. 

ಸಂತೃಪ್ತ ಪಾಲಕರಾಗಬೇಕೆಂದ್ರೆ ನೀವು ಈ 9 ಟಿಪ್ಸ್‌ ಪಾಲಿಸಲೇಬೇಕು

ವಿರುದ್ಧ ಲಿಂಗಿಗಳನ್ನು ಆಕರ್ಷಿಸೋ ಬಣ್ಣ
ಜರ್ನಲ್‌ ಆಫ್‌ ಪರ್ಸ್‌ನಾಲಿಟಿ ಆಂಡ್‌ ಸೋಷಿಯಲ್‌ ಸೈಕಾಲಜಿ ಹಾಗೂ ಜರ್ನಲ್‌ ಆಫ್‌ ಎಕ್ಸ್‌ಪೆರಿಮೆಂಟಲ್‌ ಸೈಕಾಲಜಿಯಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕೆಂಪು ಬಣ್ಣದ ಧಿರಿಸನ್ನು ಮಹಿಳೆಯಾಗಲೀ, ಪುರುಷನಾಗಲೀ ಧರಿಸಿದ್ದಲ್ಲಿ ಅವರು ತಮ್ಮ ವಿರುದ್ಧ ಲಿಂಗಿಗಳಿಗೆ ಆಕರ್ಷಕವಾಗಿ ಕಾಣಿಸುತ್ತಾರಂತೆ. ಅಷ್ಟೇ ಅಲ್ಲ, ಈ ಅಧ್ಯಯನದಲ್ಲಿ ಇನ್ನೂ ಒಂದು ಆಸಕ್ತಿಕಾರ ವಿಷಯ ಪತ್ತೆಯಾಗಿದೆ, ಅದೇನಪ್ಪ ಅಂದ್ರೆ ಕೆಂಪು ಬಣ್ಣ ಅದನ್ನು ಧರಿಸಿರೋ ಪುರುಷನ ಸ್ಥಾನಮಾನ ಹಾಗೂ ಪ್ರಾಬಲ್ಯವನ್ನು ಇತರರಿಗೆ ಅದ್ರಲ್ಲೂ ವಿರೋಧಿ ಲಿಂಗಿಗಳಿಗೆ ರವಾನಿಸುತ್ತದೆ. ಈ ಮೂಲಕ ಆ ಪುರುಷನೆಡೆಗೆ ಮಹಿಳೆಯರು ಆಕರ್ಷಿತರಾಗುವಂತೆ ಮಾಡುತ್ತದೆಯಂತೆ.  ಪದವಿ ವಿದ್ಯಾರ್ಥಿನಿಯರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಈ ಹುಡುಗೀರಿಗೆ ಹುಡುಗರ ಕಪ್ಪು ಬಿಳುಪಿನ ಹಾಗೂ ಕೆಂಪು ಬ್ಯಾಗ್ರೌಂಡ್‌ ಹೊಂದಿರೋ ಫೋಟೋಗಳನ್ನು ನೀಡಲಾಯಿತು. ಆಗ ಹುಡುಗೀರು ಕೆಂಪು ಬ್ಯಾಗ್ರೌಂಡ್‌ ಇರುವ ಫೋಟೋದಲ್ಲಿನ ಹುಡುಗರ ಕಡೆಗೆ ಹೆಚ್ಚು ಆಕರ್ಷಿತರಾಗಿರೋದು ಕಂಡುಬಂತು. ಮಹಿಳೆಯರು ಕೆಂಪು ಧಿರಿಸಿನಲ್ಲಿರೋ ಹುಡುಗ ಒಳ್ಳೇ ಸ್ಟೇಟಸ್‌ ಹೊಂದಿದ್ದಾನೆ, ತುಂಬಾ ಹಣ ಮಾಡ್ತಾನೆ, ಸಮಾಜದಲ್ಲಿ ಉನ್ನತ ಸ್ಥಾನಕ್ಕೇರುತ್ತಾನೆ ಎಂಬ ಅಭಿಪ್ರಾಯ ಹೊಂದಿದ್ದಾರೆ ಎಂದು ಅಧ್ಯಯನ ತಿಳಿಸಿದೆ. ಒಟ್ಟಾರೆ ಕೆಂಪು ಬಣ್ಣದ ಶರ್ಟ್‌ ಧರಿಸಿರೋ ಹುಡುಗರನ್ನು ನೋಡಿದ್ರೆ ಹುಡುಗೀರು ಬೇಗ ಬುಟ್ಟಿಗೆ ಬೀಳುತ್ತಾರೆ ಎಂಬುದು ಈ ಅಧ್ಯಯನದ ಸಾರ.

ಈ ಗಂಡಸರಿಗೇಕೆ ಪ್ರೀತಿಯನ್ನು ಎಕ್ಸ್‌ಪ್ರೆಸ್ ಮಾಡಲು ಬರೋಲ್ಲ?

ಸೆಕ್ಸ್‌ ಕಲರ್‌
ರೆಡ್‌ಗೂ ಸೆಕ್ಸ್‌ಗೂ ಏನೋ ಕನೆಕ್ಷನ್‌. ಇದೇ ಕಾರಣಕ್ಕೆ ವೇಶ್ಯವಾಟಿಕೆ ಅಡ್ಡಗಳಿರೋ ಪ್ರದೇಶಕ್ಕೆ ರೆಡ್‌ ಲೈಟ್‌ ಏರಿಯಾ ಎಂಬ ಹೆಸರು. ಪರ್ಸನಾಲಿಟಿ ಆಂಡ್‌ ಸೋಷಿಯಲ್‌ ಸೈಕಾಲಜಿ ಬುಲೆಟಿನ್‌ನಲ್ಲಿ ಪ್ರಕಟವಾದ ವರದಿಯೊಂದರ ಪ್ರಕಾರ ರೆಡ್‌ ಕಲರ್‌ ಡ್ರೆಸ್‌ ಹಾಕಿರೋ ಮಹಿಳೆಯನ್ನು ಕಂಡ್ರೆ ಆಕೆ ತುಂಬಾ ಬೋಲ್ಡ್‌, ಸೆಕ್ಸಿ, ಮುಕ್ತ ದೈಹಿಕ ಸಂರ್ಪಕಕ್ಕೂ ಆಕೆ ಸಿದ್ಧಳಿದ್ದಾಳೆ ಎಂದು ಪುರುಷರು ಮಾತ್ರವಲ್ಲ, ಇತರ ಮಹಿಳೆಯರೂ ಭಾವಿಸುತ್ತಾರಂತೆ. ಅಷ್ಟೇ ಅಲ್ಲ, ಕೆಂಪು ಬಣ್ಣದ ಡ್ರೆಸ್‌ ಧರಿಸಿರೋ ಮಹಿಳೆಯನ್ನು ಕಂಡ್ರೆ ಇತರ ಮಹಿಳೆಯರು ತಮ್ಮ ಶತ್ರುವೆಂಬಂತೆ ಕಾಣುತ್ತಾರಂತೆ. ಎಲ್ಲಿ ಆಕೆ ತಮ್ಮ ಸಂಗಾತಿಯನ್ನು ತನ್ನತ್ತ ಸೆಳೆದು ಬಿಡುತ್ತಾಳೋ ಎಂಬ ಭಯವೇ ಅವರು ಈ ರೀತಿ ಯೋಚಿಸಲು ಕಾರಣವೆಂದು ಈ ವರದಿ ಹೇಳಿದೆ. 

ರೊಮ್ಯಾನ್ಸ್ ಕುರಿತ ಈ ವಿಷ್ಯಗಳನ್ನು ಕೇಳಿದ್ರೆ ಖುಷಿಯಾಗೋದು ಗ್ಯಾರಂಟಿ

ರೊಮ್ಯಾಂಟಿಕ್‌ ಮೂಡ್‌ಗೆ ಕರೆದೊಯ್ಯುವ ಬಣ್ಣ
ಕೆಂಪು ಪ್ರೀತಿಯ ಸಂಕೇತ. ರೊಮ್ಯಾನ್ಸ್‌ ಅಂದ್ರೇನೆ ರೆಡ್‌. ಕೆಂಪು ಗುಲಾಬಿ, ಕೆಂಪು ಡ್ರೆಸ್‌, ಕೆಂಪು ಬಣ್ಣದ ಲಿಪ್‌ಸ್ಟಿಕ್‌, ಕೆಂಪು ಹಾರ್ಟ್‌ ಇವೆಲ್ಲ ಪ್ರೀತಿ, ರೊಮ್ಯಾನ್ಸ್‌ ಸಂಕೇತ. ಕೆಂಪು ಬಣ್ಣ ಬಹುಬೇಗ ನಮ್ಮನ್ನು ರೊಮ್ಯಾಂಟಿಕ್‌ ಮೂಡ್‌ಗೆ ಕರೆದೊಯ್ಯಬಲ್ಲದಂತೆ. ಇದೇ ಕಾರಣಕ್ಕೆ ಪ್ರೇಮಿಗಳಿಗೂ ಕೆಂಪು ಬಣ್ಣಕ್ಕೂ ಬಿಡಿಸಲಾಗದ ನಂಟು.