ಮುದ್ದು ಹುಡುಗಿಗೆ ಪುಂಡರ ಕಾಟ, ಈ ನರಕವೇ ಬೇಡ ಅಂದ್ಕೊಂಡು ವಿಷ ಕುಡಿದು ಪ್ರಾಣಬಿಟ್ಟಳು!

ಯುವತಿಯ ಬಡ ಪೋಷಕರು, ಪುಂಡ ಯುವಕರ ವಿರುದ್ಧ ಅತ್ಯಾಚಾರ ಯತ್ನ ಹಾಗೂ ಅಪರಾಧಿಕ ಕೃತ್ಯಗಳ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ಕೂಡಾ ದಾಖಲಿಸಿದ್ದರು. ಆದ್ರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರಿಗೆ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ಈ ಕಾಮುಕರು, ಯುವತಿಗೆ ಇನ್ನಷ್ಟು ಚಿತ್ರಹಿಂಸೆ ನೀಡತೊಡಗಿದ್ರು.

Distressed by molestation Class 12 Student Commits Suicide left a two page note san

ಕೆ 12ನೇ ಕ್ಲಾಸ್​ ಸ್ಟುಡೆಂಟ್. ವಯಸ್ಸು ಕೇವಲ 17 ವರ್ಷ. ಕಿತ್ತು ತಿನ್ನುವ ಬಡತನ. ಆದರೆ, ಓದಿನಲ್ಲಿ ಮುಂದು. ಕಷ್ಟಪಟ್ಟು ಓದುತ್ತಿದ್ದ ಈ ವಿದ್ಯಾರ್ಥಿನಿಯ ಪಾಲಿಗೆ ವಿಲನ್ ಆಗಿದ್ದೇ ಆಕೆಯ ಸೌಂದರ್ಯ. ಬಡತನದಲ್ಲಿ ಅರಳಿದ್ದ ಸೌಂದರ್ಯ ಆಕೆಯ ಬದುಕನ್ನೇ ಕಿತ್ತುಕೊಂಡಿದೆ. ಪುಂಡರ ಕಾಟ ತಾಳಲಾರದೇ ವಿದ್ಯಾರ್ಥಿನಿ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. 
ಪೊಲೀಸರು, ಕಾನೂನು ಈ ಅಸಹಾಯಕ ಯುವತಿಯ ಪಾಲಿಗೆ ನೆರವಾಗಲಿಲ್ಲ. ಶ್ರೀಮಂತ ಮಕ್ಕಳ ಬೆನ್ನಿಗೆ ಖಾಕಿ ಪಡೆ ನಿಂತುಬಿಟ್ಟಿದ್ದು, ಭವಿಷ್ಯದ ಕನಸು ಹೊತ್ತ ಬಡ ಯುವತಿಯ ಬದುಕು ಬಲಿಪಡೆಯುವಂತಾಯ್ತು.

ಈ ಘಟನೆ ನಡೆದಿರೋದು ಉತ್ತರ ಪ್ರದೇಶ ರಾಜ್ಯದ ಮೊರಾದಾಬಾದ್ ಜಿಲ್ಲೆಯ ಕುಂದರ್ಕಿ ಊರಿನಲ್ಲಿ. ಪಿಯುಸಿ ಓದುತ್ತಿದ್ದ ಈ ವಿದ್ಯಾರ್ಥಿನಿಗೆ ಒಂದೆಡೆ ಬಡತನ, ಇನ್ನೊಂದೆಡೆ ಪುಂಡರ ಕಾಟ. ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದ ಅಪ್ಪ, ಕೂಲಿ ಮಾಡಿ ಸಂಸಾರ ತೂಗಿಸುತ್ತಿದ್ದ ಅಮ್ಮ, ಗುಡಿಸಿಲಿನಲ್ಲಿ ವಾಸಿಸುತ್ತಿದ್ದರೂ, ಕಷ್ಟಪಟ್ಟುತ್ತಿದ್ದ ಈ ಯುವತಿಗೆ ಕಾಮುಕರು ಕೊಟ್ಟ ಕಾಟ ಅಷ್ಟಿಷ್ಟಲ್ಲ. 

ಶಾಲೆಗೆ ಹೋಗುವಾಗ, ಮನೆಗೆ ಬರುವಾಗ ಆಕೆಯನ್ನು ಹಿಂಬಾಲಿಸುತ್ತಿದ್ದ ಪುಂಡರ ತಂಡ, ಯುವತಿಯನ್ನು ಇನ್ನಿಲ್ಲದಂತೆ ಕಾಡಿದ್ದರು. ಚೋಪಡಿಯಲ್ಲಿ ಬದುಕುತ್ತಿದ್ದ ಈ ಯುವತಿ ಸ್ನಾನ ಮಾಡುತ್ತಿದ್ದ ವಿಡಿಯೋ ಮಾಡಿಕೊಂಡಿದ್ದರು, ಟಾಯ್ಲೆಟ್​ಗೆ ಹೋದರೂ ಹಿಂಬಾಲಿಸುತ್ತಿದ್ದರು.

ಕಳೆದ ಹಲವು ತಿಂಗಳುಗಳಿಂದ ಪುಂಡರ ಕಾಟ ಮಿತಿ ಮೀರಿತ್ತು. ಪೊಲೀಸರಿಗೆ ದೂರು ನೀಡಿದರೂ ಯಾವುದೇ ಪ್ರಯೋಜನ ಆಗಿರಲಿಲ್ಲ. ಮೊರದಾಬಾದ್‌ನ ಕಿಡಿಗೇಡಿ ಯುವಕರು ಯುವತಿಯ ಬದುಕನ್ನೇ ನರಕ ಮಾಡಿಬಿಟ್ಟಿದ್ದರು. ಮೊನ್ನೆ ಮಾರ್ಚ್ 8 ರಂದು ಮನೆಗೆ ನುಗ್ಗಿದ ಮೂವರು ರಾಕ್ಷಸರು ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ರು. ಇದರಿಂದ ತೀವ್ರ ಆಘಾತಕ್ಕೊಳಗಾದ ಯುವತಿ, ಈ ನರಕದಲ್ಲಿ ಬದುಕೋದೇ ಬೇಡ ಎಂದು ನಿರ್ಧಾರಕ್ಕೆ ಬಂದವರಳೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟಳು.

ಆತ್ಮಹತ್ಯೆಗೂ ಮುನ್ನ ಸುದೀರ್ಘ ಡೆತ್ ನೋಟ್ ಬರೆದಿಟ್ಟಿದ್ದ ಯುವತಿ, ಪುಂಡರ ಅಟ್ಟಹಾಸ ವಿವರಿಸಿದ್ದಾಳೆ. ನಾನು ಶಾಲೆಯಿಂದ ಮನೆಗೆ ಹೋಗುವಾಗ, ಮನೆಯಿಂದ ಶಾಲೆಗೆ ಹೋಗುವಾಗ ಈ ಪುಂಡ ಯುವಕರ ಗುಂಪು ನನ್ನನ್ನು ತಡೆಯುತ್ತಿತ್ತು. ನನ್ನ ಜೊತೆ ಅಸಭ್ಯವಾಗಿ ವರ್ತಿಸುತ್ತಿದ್ದರು. ಹೀಗಾಗಿ, ನಾನು ಶಾಲೆಗೆ ಹೋಗುವುದನ್ನೇ ಬಿಟ್ಟೆ.  ಪೊಲೀಸರಿಗೆ ದೂರು ನೀಡಿದರೂ ಕ್ಯಾರೇ ಅನ್ನಲಿಲ್ಲ. ಏಕೆಂದರೆ, ಈ ಪುಂಡ ಯುವಕರ ಪೋಷಕರು ಶ್ರೀಮಂತರು. ಹೀಗಾಗಿ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಯುವತಿ ತನ್ನ ಅಳಲು ತೋಡಿಕೊಂಡಿದ್ದಾಳೆ.ಅಷ್ಟೇ ಅಲ್ಲ, ತಾನು ಸತ್ತ ಬಳಿಕವಾದರೂ ಈ ಕಿರಾತಕರಿಗೆ ತಕ್ಷ ಶಿಕ್ಷೆಯಾಗಲೇ ಬೇಕೆಂದು ಯುವತಿ ಮನವಿ ಮಾಡಿದ್ದಾರೆ. 

ಯುವತಿಯ ಬಡ ಪೋಷಕರು, ಪುಂಡ ಯುವಕರ ವಿರುದ್ಧ ಅತ್ಯಾಚಾರ ಯತ್ನ ಹಾಗೂ ಅಪರಾಧಿಕ ಕೃತ್ಯಗಳ ಸೆಕ್ಷನ್ ಅಡಿಯಲ್ಲಿ ಎಫ್‌ಐಆರ್ ಕೂಡಾ ದಾಖಲಿಸಿದ್ದರು. ಆದ್ರೆ, ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರಿಗೆ ದೂರು ನೀಡಿದ್ದರಿಂದ ಸಿಟ್ಟಿಗೆದ್ದ ಈ ಕಾಮುಕರು, ಯುವತಿಗೆ ಇನ್ನಷ್ಟು ಚಿತ್ರಹಿಂಸೆ ನೀಡತೊಡಗಿದ್ರು.

ಲೋಕಾಯುಕ್ತ ದಾಳಿ: 40 ಸಾವಿರ ಲಂಚ ಪಡೆವಾಗ ಸಿಕ್ಕಿಬಿದ್ದ ರಾಣೆಬೆನ್ನೂರು ಪಿಎಸ್‌ಐ

ಮಾರ್ಚ್ 8 ರಂದು ಒಬ್ಬ  ಪುಂಡ.  ಯುವತಿಯ ಮನೆಗೇ ನುಗ್ಗಿದ್ದ. ಆಕೆಯ ಜೊತೆ ಅಸಭ್ಯವಾಗಿ ವರ್ತಿಸಿದ್ದ. ತಕ್ಷಣವೇ ಪೋಷಕರು, ಎಸ್ಪಿ ಕಚೇರಿ ಸೇರಿ  ಮೂರು ಕಡೆ ದೂರು ನೀಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಪೊಲೀಸರು ಬಡ ದಂಪತಿಯನ್ನೇ ಹೆದರಿಸಿಬಿಟ್ರು. ಇದರಿಂದ ತೀವ್ರವಾಗಿ ಮಾನಸಿಕ, ದೈಹಿಕವಾಗಿ ನೊಂದಿದ್ದ ಯುವತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡುಬಿಟ್ಟರು. 

ಎಕ್ಸಾಂನಲ್ಲಿ ಕಡಿಮೆ ಮಾರ್ಕ್ಸ್‌ ಭಯ: ಮನೇಲಿ ಬೈತಾರೆಂದು ಲೈಂಗಿಕ ಕಿರುಕುಳದ ಕತೆ ಕಟ್ಟಿದ ಬಾಲಕಿ..!

ಯುವತಿ ಸಾವಿನ ಬಳಿಕ, ಪೋಷಕರು ನೀಡಿದ್ದ ದೂರು ಆಧರಿಸಿ ಒಬ್ಬ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ರು.ಆದ್ರೆ, ನ್ಯಾಯಾಂಗ ವ್ಯವಸ್ಥೆ ಹೇಗಿದೆ ಅಂದ್ರೆ, ಜಾಮೀನು ಪಡೆದ ಯುವಕ ಜೈಲಿನಿಂದ ಹೊರಬಂದು ಬಿಟ್ಟ. ಪೊಲೀಸರು ಅಂದೇ ಎಚ್ಚೆತ್ತುಕೊಂಡು, ಪುಂಡರ ಹೆಡೆಮುರಿಕಟ್ಟಿದ್ದರೆ, ಆ ಕನಸುಕಂಗಳ ಯುವತಿಯ ಬದುಕುತ್ತಿದ್ದಳು. ಆದ್ರೆ, ದುಡ್ಡಿದ್ದವರಿಗಷ್ಟೇ ನ್ಯಾಯ ಎಂಬಂತಾಗಿರುವ ವ್ಯವಸ್ಥೆಯಲ್ಲಿ ಈ ಯುವತಿಯಂಥ ಸಾವಿರಾರು ಹೆಣ್ಮಕ್ಕಳು ತಮ್ಮ ಕನಸುಗಳನ್ನೇ ಬಲಿಕೊಡಬೇಕಾಗಿರುವುದು ದುರಂತ..

Latest Videos
Follow Us:
Download App:
  • android
  • ios