ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಮತ್ತೆ ಅಧ್ಯಕ್ಷ ಚುನಾವಣೆಗೆ ನಿಂತಿದ್ದಾರೆ. ತಮಗೆ ಎದುರಾಳಿಯಾಗಿ ನಿಂತಿರುವ ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅವರನ್ನು ವಾಚಾಮಗೋಚರ ನಿಂದಿಸುತ್ತಾ ಇದ್ದಾರೆ. ಈ ಟ್ರಂಪ್ ಎಂಥ ವ್ಯಕ್ತಿ ಎಂದರೆ, ಸ್ತ್ರೀಯರ ಬಗ್ಗೆ ಒಳ್ಳೆಯ ಮಾತುಗಳು ಇವರ ಬಾಯಿಯಿಂದ ಬರುವುದೇ ಇಲ್ಲ. ಇಂಥ ಡೊನಾಲ್ಡ್‌ ಟ್ರಂಪ್‌ ಪರಮ ರಸಿಕ, ಲಂಪಟ, ಅಥವಾ ಆಡುಭಾಷೆಯಲ್ಲಿ ಹೇಳುವುದಾದರೆ ಜೊಲ್ಲು ಪಾರ್ಟಿ. ಅಮೆರಿಕದ ಪೋರ್ನ್‌ ಇಂಡಸ್ಟ್ರಿಯ ಹಲವು ತಾರೆಯರು ಈ ಟ್ರಂಪ್‌ಗೂ ತಮಗೂ ಇದ್ದ ಸೆಕ್ಸ್ ಸಂಬಂಧವನ್ನು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಸ್ಟಾರ್ಮಿ ಡೇನಿಯಲ್ಸ್ ಎಂಬ ಪೋರ್ನ್‌ ನಟಿ ಒಂದು ಮ್ಯಾಗಜಿನ್‌ಗೆ ಟ್ರಂಪ್‌ನ ಲೀಲಾವಿಲಾಸವನ್ನು ಹೇಳಿಕೊಂಡಳು. ಟ್ರಂಪ್ ೨೦೧೧ರಲ್ಲಿ ನನ್ನ ಜೊತೆಗೆ "ಟೆಕ್ಸ್ಟ್‌ಬುಕ್ ಸೆಕ್ಸ್' ಹೊಂದಿದ್ದರು ಎಂದು ಹೇಳಿಕೊಂಡಳು. ಈ ಬಗ್ಗೆ ಯಾರಲ್ಲಿಯೂ ಏನನ್ನೂ ಹೇಳಿಕೊಳ್ಳಬಾರದು ಎಂದು ಬಾಯಿ ಮುಚ್ಚಿಕೊಂಡಿರಲು ೯೪,೦೦೦ ಡಾಲರ್‌ ಹಣವನ್ನು ಆಕೆಗೆ ಕೊಟ್ಟಿದ್ದರಂತೆ. ಅದೂ ಟ್ರಂಪ್‌ನ ವಕೀಲರ ಮೂಲಕ. ಟ್ರಂಪ್‌ ಈಕೆಯನ್ನು ಹನಿಕೂಂಬ್ ಎಂದು ಕರೆಯುತ್ತಿದ್ದನಂತೆ. ಹಾಗೆಂದರೆ ಜೇನುಗೂಡು ಅಂತ. "ಆ ಪ್ರಾಯದಲ್ಲಿ ಏನು ನಡೆಸಬಹುದೋ ಅಷ್ಟನ್ನೇ ನಡೆಸುತ್ತಿದ್ದ. ಒಂದೇ ಭಂಗಿ!'' ಎಂದು ಆಕೆ ಲೇವಡಿ ಮಾಡಿದ್ದಳು.
ವಿಕ್ಟೋರಿಯಾ ಝಡ್‌ರಾಕ್ ಎಂಬಾಕೆ ಅಶ್ಲೀಲ ಚಿತ್ರಗಳಲ್ಲಿ ನಟಿಸಿ ಹೆಸರಾದವಳು. ಈಕೆಯ ಜೊತೆಗೆ ಟ್ರಂಪ್‌ ಹಲವಾರು ಬಾರಿ ಡೇಟಿಂಗ್‌ ಮಾಡಿದ್ದ. ಈಕೆ ಉಕ್ರೇನಿನವಳು. ೨೦೦೦ದ ಟೈಮಿನಲ್ಲಿ ಇವರಿಬ್ಬರ ಸರಸ ಸಾಕಷ್ಟು ಬಾರಿ ನಡೆದಿತ್ತು. ಇವರಿಬ್ಬರು ಮಾತುಕತೆ ನಡೆಸುವಾಗ ಟ್ರಂಪ್ ಪದೇ ಪದೆ, "ತಾನು ಸ್ತ್ರೀಯರಿಗೆ ಬೆಸ್ಟ್‌ ಆರ್ಗ್ಯಾಸಂ ಕೊಡಬಲ್ಲ ಸಾಮರ್ಥ್ಯವಂತ' ಎಂದು ಕೊಚ್ಚಿಕೊಳ್ಳುತ್ತಿದ್ದನಂತೆ. ಈತನ ಬಾಯಿಹರುಕುತನ ನೋಡಿ ಬೇಸತ್ತೇ ಈಕೆ ಆತನ ಬಳಿ ಹೋಗುವುದು ಬಿಟ್ಟಳಂತೆ. 

ಆನ್ನಾ ನಿಕೋಲ್‌ ಸ್ಮಿತ್‌ ಎಂಬಾಕೆ ಪ್ಲೇಬಾಯ್ ಮ್ಯಾಗಜಿನ್‌ನಲ್ಲಿ ನ್ಯೂಡ್‌ ಪೋಸ್‌ಗಳನ್ನು ಕೊಟ್ಟು ಸುದ್ದಿಯಾದವಳು. ನಂತರ ನ್ಯೂಡ್‌ ಮಾಡೆಲ್ ಆದಳು ಹಾಗೂ ಸೆಕ್ಸ್ ಚಿತ್ರಗಳ ತಾರೆಯೂ ಆದಳು. ೮೯ ವರ್ಷ ತೈಲೋದ್ಯಮಿ ಜೆ ಹೊವಾರ್ಡ್ ಮಾರ್ಷಲ್‌ ಎಂಬಾತನನ್ನು ಮದುವೆಯಾದಳು. ಅದಾಗಿ ಒಂದೇ ವರ್ಷದಲ್ಲಿ ಆ ಶ್ರೀಮಂತ ಉದ್ಯಮಿ ಸತ್ತೇಹೋದ. ಇದರ ನಂತರ ಕೆಲವೇ ತಿಂಗಳಲ್ಲಿ ಟ್ರಂಪ್‌ ಮತ್ತು ನಿಕೋಲ್‌ ಡೇಟಿಂಗ್‌ ಶುರು ಮಾಡಿದರು. ಟ್ರಂಪ್‌ ಎಲ್ಲಿ ಹೋದರೂ ಆಕೆ ಜೊತೆಯಾಗಿ ಇರುತ್ತಿದ್ದಳು. ಆದರೆ ಇಬ್ಬರೂ ತಮ್ಮ ಸಂಬಂಧ ಖಚಿತಪಡಿಸಲಿಲ್ಲ. ೨೦೦೭ರಲ್ಲಿ ಹಾಲಿವುಡ್‌ನ ಒಂದು ಹೋಟೆಲ್‌ನಲ್ಲಿ ಡ್ರಗ್‌ ಓವರ್‌ಡೋಸ್‌ ಆಗಿ ಆಕೆ ಸತ್ತೇಹೋದಳು.
ಕರೇನ್‌ ಮೆಕ್‌ದುಗಾಲ್‌ ಎಂಬ ೧೯೯೮ರ ಪ್ಲೇಬಾಯ್‌ ನ್ಯೂಡ್‌ ಮಾಡೆಲ್‌, ಅಮೆರಿಕ ಟ್ಯಾಬ್ಲಾಯ್ಡ್‌ ಒಂದಕ್ಕೆ ಟ್ರಂಪ್‌ ಜೊತೆಗಿನ ತನ್ನ ಸಂಬಂಧದ ಕತೆಯನ್ನು ಸುಮಾರು ಒಂದು ಲಕ್ಷ ಡಾಲರ್‌ಗೆ ಮಾರಿಕೊಂಡಿದ್ದಳು. ಆದರೆ ಅದು ಪ್ರಕಟವಾಗಲೇ ಇಲ್ಲ. ಯಾಕೆಂದರೆ  ಅದನ್ನೂ ಟ್ರಂಪ್‌ ಖರೀದಿಸಿದ ಎಂದು ಸುದ್ದಿಯಾಯಿತು. 

ಈ ಬಾರಿ ಟ್ರಂಪ್‌ಗೆ ಸೋಲು ಖಚಿತ: ಅಮೆರಿಕ ‘ಜ್ಯೋತಿಷಿ’! 
ಇನ್ನೊಬ್ಬಾಕೆ ಅಲಾನಾ ಇವಾನ್ಸ್‌ ಎಂಬ ಪೋರ್ನ್‌ ತಾರೆ. ಈಕೆ ಸ್ಟಾರ್ಮಿ ಡೇನಿಯಲ್ಸ್‌ ಜೊತೆಗೆ ಟ್ರಂಪ್‌ ಇದ್ದ ಹೋಟೆಲ್‌ ರೂಮಿಗೆ ಭೇಟಿ ಕೊಟ್ಟಿದ್ದಳಂತೆ. ಒಂದೇ ಭೇಟಿಯಲ್ಲಿ, ಈತನ ಸಹವಾಸ ಸಾಕು ಎನಿಸಿ ನಂತರ ಟ್ರಂಪ್‌ ಇದ್ದ ಕಡೆ ಹೋಗಲೇ ಇಲ್ಲವಂತೆ. 

ಮೊದಲ ಬಾರಿ ಮಾಸ್ಕ್‌ ಧರಿಸಿದ ಡೊನಾಲ್ಡ್ ಟ್ರಂಪ್‌! 
ಅಂದ ಹಾಗೆ ಟ್ರಂಪ್‌ ಇವನ್ನೆಲ್ಲಾ ಮಾಡಿದ್ದು ಮೆಲಾನಿಯಾ ಟ್ರಂಪ್‌ನಂಥ ಚೆಂದುಳ್ಳಿ ಚೆಲುವೆ ಪತ್ನಿ ಪಕ್ಕದಲ್ಲಿ ಇರುವಾಗಲೇ. ಇನ್ನೆಂಥಾ ಚಪಲ ಚೆನ್ನಿಗರಾಯ ಇರಬಹುದು, ಊಹಿಸಿಕೊಳ್ಳಿ. ಅಂದ ಹಾಗೆ ಈ ಎಲ್ಲರ ಮಾತುಗಳ ಬಗ್ಗೆ ಟ್ರಂಪ್ ಮುಗುಂ ಆಗಿದ್ದಾರೆ. ಹೌದೆನ್ನಲೂ ಇಲ್ಲ, ನಿರಾಕರಿಸಿಯೂ ಇಲ್ಲ. 

ಮುಸ್ಲಿಮರ ಸಂತಾನ ಹರಣ: ಚೀನಾಗೆ ಅಮೆರಿಕ ಸಡ್ಡು!