ವಾಷಿಂಗ್ಟನ್‌(ಜು.13): ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಇದೇ ಮೊದಲ ಬಾರಿ ಮಾಸ್ಕ್‌ ಧರಿಸಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಅಮೆರಿಕದಲ್ಲಿ ಕೊರೋನಾ ತಾಂಡವವಾಡುತ್ತಿದ್ದರೂ ಈವರೆಗೂ ಮಾಸ್ಕ್‌ ಬಗ್ಗೆ ನಿರ್ಲಕ್ಷ್ಯ ತಾಳಿದ್ದ ಅವರು, ಈಗ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ.

ಟ್ರಂಪ್‌ ಅವರು ಶನಿವಾರ ವಾಷಿಂಗ್ಟನ್‌ ಉಪನಗರದ ಮಿಲಿಟರಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯ ಸಿಬ್ಬಂದಿಯನ್ನು ಭೇಟಿ ಮಾಡಿದರು. ಆಗ ಅವರು ಮಾಸ್ಕ್‌ ಧರಿಸಿದ್ದು ಕಂಡು ಬಂತು. ‘ಆಸ್ಪತ್ರೆಯಲ್ಲಿದ್ದಾಗ ಮಾಸ್ಕ್‌ ಧರಿಸುವುದು ಉತ್ತಮ’ ಎಂದು ಟ್ರಂಪ್‌ ಸುದ್ದಿಗಾರರ ಜತೆ ಮಾತನಾಡುತ್ತಾ ಹೇಳಿದರು.

ಶಾಲೆ ಪುನಾರಂಭಿಸದಿದ್ದರೆ ಅನುದಾನ ಕಟ್‌: ಟ್ರಂಪ್ ಮತ್ತೊಂದು ಶಾಕಿಂಗ್ ನಿರ್ಧಾರ‌!

ಮಾಸ್ಕ್‌ ವಿರೋಧಿ ಆಗಿರುವ ಟ್ರಂಪ್‌, ಪತ್ರಿಕಾಗೋಷ್ಠಿಗಳಲ್ಲಿ ಮುಖಗವಸು ಧರಿಸಲು ನಿರಾಕರಿಸಿದ್ದರು. ಮುಖಗವಸು ಧರಿಸಿದರೆ ದೌರ್ಬಲ್ಯದ ಸಂಕೇತ ಎಂಬುದು ಅವರ ಭಾವನೆ ಎಂದು ಅವ ಆಪ್ತ ಮೂಲಗಳು ಹೇಳಿವೆ. ಈ ಬಗ್ಗೆ ವಿಪಕ್ಷಗಳು ನಿರಂತರವಾಗಿ ಆಕ್ರೋಶ ವ್ಯಕ್ತಪಡಿಸಿದ್ದವು.