ಮಗುವನ್ನು ಬಿಟ್ಟು ಕೆಲ್ಸಕ್ಕೆ ಹೋಗ್ತಿದ್ದೀನಿ ಅನ್ನೋ ಬೇಜಾರಾ ? Mom Guilt ಹೋಗಲಾಡಿಸಲು ಹೀಗೆ ಮಾಡಿ

ಮಗು (Baby)ವಿನ ಜತೆ ಮನೆಯಲ್ಲಿರೋದಾ ? ಕೆಲಸ (Work)ಕ್ಕೆ ಹೋಗೋದಾ ? ಹೊಸ ತಾಯಂದಿರನ್ನು ಪದೇ ಪದೇ ಕಾಡುವ ಸಮಸ್ಯೆಯಿದು. ಕೊನೆಗೊಮ್ಮೆ ದೃಢವಾಗಿ ಕೆಲಸಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡರೂ ಸಣ್ಣ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದೇನೆ ಎಂಬ ಗಿಲ್ಟ್‌ (Guilt) ಕಾಡದೇ ಇರುವುದಿಲ್ಲ. ಹೀಗಿದ್ದಾಗ ಏನ್ಮಾಡ್ಬೋದು ?

Deal With Mom Guilt On Resuming Work When Your Baby Is Still Youngvin

ಉದ್ಯೋಗ (Job) ಅನ್ನೋದು ಪ್ರತಿಯೊಬ್ಬರಿಗೂ ಅಗತ್ಯ. ಅನಿವಾರ್ಯತೆಗಿಂತಲೂ ಹೆಚ್ಚಾಗಿ ತಮ್ಮ ಪ್ರತಿಭೆ, ಸಾಮರ್ಥ್ಯವನ್ನು ವೃಥಾ ಹಾಳಾಗದಂತೆ ಕಾಪಾಡಲು ಉದ್ಯೋಗದಲ್ಲಿರುವುದು ಅಗತ್ಯ. ಆರ್ಥಿಕ ಭದ್ರತೆಗಿಂತಲೂ ಹೆಚ್ಚಾಗಿ ಹೆಚ್ಚಿನ ಮಹಿಳೆ (Women)ಯರು ಇದೇ ಕಾರಣಕ್ಕೆ ಉದ್ಯೋಗಕ್ಕೆ ಹೋಗಲು ಬಯಸುತ್ತಾರೆ. ಆದ್ರೆ ಹೊಸ ತಾಯಂದಿರು ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವುದನ್ನು ಆಯ್ಕೆ ಮಾಡಿಕೊಂಡಾಗ ಎಲ್ಲರ ಹುಬ್ಬು ಮೇಲೇರುತ್ತದೆ. ಕಾಲ ಅದೆಷ್ಟು ಬದಲಾದರೂ ಸಮಾಜದ ದೃಷ್ಟಿಕೋನ ಮಾತ್ರ ಬದಲಾಗಿಲ್ಲ. ಹೆಣ್ಣು ಮಗುವನ್ನು ಹೆತ್ತು ನೋಡಿಕೊಳ್ಳುತ್ತಿರಬೇಕು, ಉದ್ಯೋಗಕ್ಕೆ ಹೋಗುವುದಲ್ಲ ಎಂಬ ಮನೋಭಾವ ಎಲ್ಲೆಡೆ ಹಾಗೆಯೇ ಇದೆ. 

ಹೀಗಾಗಿಯೇ ಹೊಸ ತಾಯಂದಿರು ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಮರಳಲು ಹಿಂಜರಿಯುತ್ತಾರೆ. ಎಲ್ಲರ ಟೀಕೆಗಳನ್ನು ಎದುರಿಸುವ ಸಮಸ್ಯೆಯೇ ಬೇಡವೆಂದು ಉದ್ಯೋಗಕ್ಕೆ ರಾಜೀನಾಮೆ ನೀಡಲು ಮುಂದಾಗುತ್ತಾರೆ. ಮಗುವಿನ ನಂತರ ಕೆಲಸವನ್ನು ಪುನರಾರಂಭಿಸುವುದು ಬಹುಶಃ ಮಹಿಳೆಯರು ಮಾಡುವ ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ. ಮಗುವನ್ನು ಬಿಟ್ಟಿರಲಾಗದ, ಕೆಲಸವನ್ನು ಬಿಡಲಾಗದ ಸಂದಿಗ್ಧತೆಯನ್ನು ಅವರು ಅನುಭವಿಸುತ್ತಿರುತ್ತಾರೆ. ಸಣ್ಣ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಾ ತಪ್ಪು ಮಾಡುತ್ತಿದ್ದೇನಾ ಎಂದು ಯೋಚಿಸುತ್ತಿದ್ದಾರೆ.

Sleep Better: ಹೊಸ ತಾಯಂದಿರೇ, ನಿದ್ರಾಹೀನತೆಯ ಸಮಸ್ಯೆಯೇ ? ಹೀಗೆ ಮಾಡಿ

ಮಗುವಾದ ಬಳಿಕ ಗಂಡಸರು ಉದ್ಯೋಗಕ್ಕೆ ಮರಳುವುದು ಸಾಮಾನ್ಯವಾಗಿದೆ. ಮನೆಯ ನಿರ್ವಹಣೆಯ ದೃಷ್ಟಿಯಿಂದ ಇದು ಅನಿವಾರ್ಯವೆಂದು ಪರಿಗಣಿಸಲಾಗುತ್ತದೆ. ಅದೇ ಮಹಿಳೆಯರು ಮಕ್ಕಳಾದ ಕೂಡಲೇ ಕೆಲಸಕ್ಕೆ ಹೋಗುವುದು ಪ್ರಶ್ನಾರ್ಥಕವಾಗಿದೆ. ಹೀಗಾಗಿ ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಮಹಿಳೆ ಕುಟುಂಬ, ಸ್ನೇಹಿತರ ಬಳಗದಿಂದ ಟೀಕೆ, ವ್ಯಂಗ್ಯ ಎದುರಿಸುವುದು ಮಾತ್ರವಲ್ಲದೆ ಸ್ವತಃ ತಾನೇ ಪಶ್ಚಾತ್ತಾಪ ಮನೋಭಾವವನ್ನು ಹೊಂದುತ್ತಾಳೆ. ಆದರೆ ಇಂಥಾ ಸಂದರ್ಭದಲ್ಲಿ ಮಹಿಳೆ ಗಿಲ್ಟ್‌ ಫೀಲಾಗುವ ಅಗತ್ಯವಿಲ್ಲ ಎಂದು ಡಾ.ವಂಶಿಕಾ ಗುಪ್ತಾ ಅದುಕಿಯಾ ಹೇಳಿದ್ದಾರೆ.

ಗರ್ಭಾವಸ್ಥೆ, ಹೆರಿಗೆ ಮತ್ತು ಹಾಲುಣಿಸುವ ತಜ್ಞೆ ಮತ್ತು ಫಿಸಿಯೋಥೆರಪಿಸ್ಟ್ ಡಾ.ವಂಶಿಕಾ ಗುಪ್ತಾ ಗಿಲ್ಟ್‌ ಮಾಮ್‌ ಮನೋಭಾವವನ್ನು ಹಂಚಿಕೊಂಡಿದ್ದಾರೆ. ಗಿಲ್ಟ್ ಫೀಲ್‌, ಪ್ರತಿಯೊಬ್ಬ ಹೊಸ ತಾಯಿಯು ಜೀವನದ ವಿವಿಧ ಹಂತಗಳಲ್ಲಿ ಅನುಭವಿಸುವ ಸಂಗತಿಯಾಗಿದೆ. ಈ ಭಾವನೆಗಳನ್ನು ನಿಭಾಯಿಸುವುದು ಮತ್ತು ತಾಯಿಯ ಜೀವನ ಮತ್ತು ಕೆಲಸದ ಜೀವನವನ್ನು ಉತ್ತಮವಾಗಿ ಸಮತೋಲನಗೊಳಿಸುವುದು ಖಂಡಿತವಾಗಿಯೂ ಟ್ರಿಕಿಯಾಗಿದೆ. ನವಜಾತ ಶಿಶು ಎಲ್ಲದೊರೊಂದಿಗೂ ಹೊಂದಿಕೊಳ್ಳಲು ಕಷ್ಟಪಡುತ್ತದೆ. ಹೀಗಾಗಿಯೇ ತಾಯಂದಿರಲ್ಲಿ ಗಿಲ್ಟ್ ಫೀಲ್ ಕಾಡತೊಡಗುತ್ತದೆ ಎಂದು ತಿಳಿಸುತ್ತಾರೆ.

ನಿಮಗೆ ಯಾರೂ ಹೇಳದ 8 ವಿಲಕ್ಷಣ ಗರ್ಭಧಾರಣೆಯ ಲಕ್ಷಣಗಳು!!!

ಹೋಮಿಯೋಪತಿ, ಕ್ಲಿನಿಕಲ್ ಹಿಪ್ನೋಥೆರಪಿಸ್ಟ್, ಟ್ರೈಕಾಲಜಿಸ್ಟ್ ಮತ್ತು ನ್ಯೂಟ್ರಿಷನ್ ಮತ್ತು ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಎಕ್ಸ್‌ಪರ್ಟ್ ಆಗಿರುವ ಡಾ ಖುಷ್ಬೂ ಠಕ್ಕರ್ ಗರೋಡಿಯಾ, 'ಹಲವು ಬಾರಿ ಮಹಿಳೆಯರಿಗೆ ತಾಯಿಯಾಗುವುದನ್ನು ಆಯ್ಕೆ ಮಾಡುವ ಅವಕಾಶವೂ ಇರುವುದಿಲ್ಲ. ಹೀಗಾಗಿ ತಮ್ಮ ವೃತ್ತಿಜೀವನವನ್ನು ತ್ಯಜಿಸಲು ಬಯಸದ ಕಾರಣ ಕೆಲಸಕ್ಕೆ ಮರಳಲು ಆಯ್ಕೆ ಮಾಡುತ್ತಾರೆ. ಕಾರಣವೇನೇ ಇರಲಿ, ಕೆಲಸ ಮಾಡುವ ತಾಯಿಯಾಗಲು ನಿರ್ಧರಿಸುವುದು ಗೌರವಾನ್ವಿತ ಮತ್ತು ಅವಮಾನಕ್ಕೊಳಗಾಗದ ಆಯ್ಕೆಯಾಗಿದೆ' ಎಂದು ಹೇಳುತ್ತಾರೆ. Mom Guilt ಹೋಗಲಾಡಿಸಲು ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ

ಆರಾಮವಾಗಿರಿ ಮತ್ತು ಖುಷಿಯಾಗಿರಿ: ಮಕ್ಕಳನ್ನು ಬಿಟ್ಟು ಕೆಲಸಕ್ಕೆ ತೆರಳುವುದು ಅಪರಾಧವೇನಲ್ಲ. ನೀವು ನಿಮ್ಮ ಜವಾಬ್ದಾರಿ (Responsibility)ಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೀರಿ. ಹೀಗಾಗಿ ನಿಮ್ಮ ಆಯ್ಕೆಯ ಬಗ್ಗೆ ಗೊಂದಲಗಳನ್ನು ಬಿಟ್ಟು ಖುಷಿಯಾಗಿರಿ.

ಕುಟುಂಬಕ್ಕೆ ನೆರವಾಗುತ್ತಿದ್ದೀರಿ: ಮಗುವನ್ನು ಬಿಟ್ಟು ಕೆಲಸಕ್ಕೆ ಹೋಗುವ ಮೂಲಕ ನೀವು ಕುಟುಂಬ (Family)ಕ್ಕೆ ಆರ್ಥಿಕವಾಗಿ ಹೊರೆಯಾಗದಂತೆ ಜೀವನ ನಡೆಸುತ್ತಿದ್ದೀರಿ. ಮಾತ್ರವಲ್ಲ ಇದು ನಿಮ್ಮ ಮಗುವಿನ ಭವಿಷ್ಯಕ್ಕೂ ಹೆಚ್ಚು ನೆರವಾಗುತ್ತದೆ ಎಂಬುದನ್ನು ನೆನಪಿಡಿಸಿ. ಹೀಗಾಗಿ ಉಳಿದವರ ಟೀಕೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ.

ಸಕಾರಾತ್ಮಕ ಮನೋಭಾವ ರೂಢಿಸಿಕೊಳ್ಳಿ: ಯಾವುದೇ ಸಮಸ್ಯೆಯಿಂದ ಹೊರಬರಲು ಸಕಾರಾತ್ಮಕ ಮನೋಭಾವ (Positive Mind) ರೂಢಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ನೀವು ಮಾಡುತ್ತಿರುವ ಕೆಲಸದ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಿ.

ಅಭದ್ರತೆ ಕಾಡಲು ಬಿಡಬೇಡಿ: ಮಗುವನ್ನು ನೀವು ಅತಿ ಹೆಚ್ಚು ಪ್ರೀತಿಸುತ್ತಿದ್ದೀರಿ. ನಿಮ್ಮ ಉದ್ಯೋಗವನ್ನು ಸಹ. ಹೀಗಾಗಿ ಇವೆರಡನ್ನೂ ಹೊಂದಾಣಿಕೆಯಿಂದ ಮುಂದಕ್ಕೆ ತೆಗೆದುಕೊಂಡು ಹೋಗಿ. ಮಗುವಿನ ಬಗ್ಗೆಯಾಗಲಿ, ಕೆಲಸದ ಬಗ್ಗೆಯಾಗಲಿ ಅಭದ್ರತೆ (Insecurity) ಕಾಡಲು ಬಿಡಬೇಡಿ. ಮನೆ, ಉದ್ಯೋಗ ಎರಡನ್ನೂ ನಿಭಾಯಿಸುತ್ತಿರುವ ಬಗ್ಗೆ ನಿಮಗೆ ಹೆಮ್ಮೆಯಿರಲಿ. 

ಮನೆಮಂದಿಯೊಂದಿಗೆ ಸಮಯ ಕಳೆಯಿರಿ: ಬಿಡುವಿನ ವೇಳೆ ಸಿಕ್ಕಾಗಲ್ಲೆಲ್ಲಾ ಮಗುವಿನೊಂದಿಗೆ, ಮನೆ ಮಂದಿಗೆ ಸಮಯ ಕಳೆಯುವುದನ್ನು ಮರೆಯದಿರಿ. ಇದು ಕುಟುಂಬದ ಜತೆಗಿನ ನಿಮ್ಮ ಬಾಂಡಿಂಗ್‌ (Bonding)ನ್ನು ಇನ್ನಷ್ಟು ಸದೃಢಗೊಳಿಸುತ್ತದೆ.

Latest Videos
Follow Us:
Download App:
  • android
  • ios