Asianet Suvarna News Asianet Suvarna News

ಇಂಥಾ ಸ್ನೇಹಿತರು ನಿಮಗೂ ಇದ್ದಾರಾ? ನಿದ್ದೆಗೆ ಜಾರಿದ ಸಹಪಾಠಿಗೆ ಹೆಗಲು ಕೊಟ್ಟ ಸ್ನೇಹಿತ..!

ಇಲ್ಲೊಂದು ಕಡೆ ಪುಟ್ಟ ಬಾಲಕರ ನಿಷ್ಕಲ್ಮಶ ಸ್ನೇಹದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸ್ನೇಹ ಎಂದರೆ ಇದೆ ಎಂದು ಕೆಲವು ನೆಟ್ಟಿಗರು ಬಣ್ಣಿಸುತ್ತಿದ್ದಾರೆ. 

cute little boys friendship video goes viral in Social Media akb
Author
First Published Nov 18, 2022, 7:11 PM IST

ಶುಭಮಂಗಲ ಸಿನಿಮಾದ ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲ್ಲಿ ಈ ಹಾಡನ್ನು ಯಾರು ಕೇಳಿಲ್ಲ. ಬಾಲ್ಯದ ಸ್ನೇಹದ ಅಮೋಘ ಅದ್ಭುತ ವೈಶಿಷ್ಟ್ಯವನ್ನು ತಿಳಿಸುವ ಹಾಡು ಇದು. ಸ್ನೇಹ ಎಂದರೇನು ಎಂಬುದನ್ನು ವಿವರಿಸಲಾಗದು. ಸ್ನೇಹದ ಬಗ್ಗೆ ಒಬ್ಬರೊಬ್ಬರು ಒಂದೊಂದು ರೀತಿ ಬಣ್ಣನೇ ಮಾಡಿದ್ದಾರೆ. ಆಪತ್ತಿಗಾದವನೇ ನಿಜವಾದ ಗೆಳೆಯ ಎಂಬ ಗಾದೆಯೂ ಇದೆ. ಈ ವಿಷಯವೆಲ್ಲಾ ಈಗ್ಯಾಕೆ ಅಂತೀರಾ. ಇಲ್ಲೊಂದು ಕಡೆ ಪುಟ್ಟ ಬಾಲಕರ ನಿಷ್ಕಲ್ಮಶ ಸ್ನೇಹದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಸ್ನೇಹ ಎಂದರೆ ಇದೆ ಎಂದು ಕೆಲವು ನೆಟ್ಟಿಗರು ಬಣ್ಣಿಸುತ್ತಿದ್ದಾರೆ. 

ವಿಡಿಯೋದಲ್ಲಿ ಕಾಣಿಸುವಂತೆ ಶಾಲೆಯಲ್ಲಿ ಕುಳಿತ ಪುಟಾಣಿಗಳ ವಿಡಿಯೋ ಇದು, ಮೂವರು ಬಾಲಕರು (Little Boys) ವಿಡಿಯೋದಲ್ಲಿದ್ದು, ಮೂವರು ಬೆಂಚಿನ ಮೇಲೆ ಕುಳಿತಿದ್ದಾರೆ. ಅದರಲ್ಲಿ ಸೈಡ್‌ನಲ್ಲಿ ಕುಳಿತ ಪುಟ್ಟ ಬಾಲಕ ಕುಳಿತಲ್ಲೇ ತೂಕಾಡಿಸುತ್ತಿದ್ದು, ಆತ ಕೆಳಗೆ ಬೀಳುತ್ತಾನೆ ಎನ್ನುವಷ್ಟರಲ್ಲಿ ಹತ್ತಿರ ಇದ್ದ ಬಾಲಕ ಆತನ ತಲೆಯನ್ನು ಈತನ ಹೆಗಲಿಗೆ (Shoulder) ಒರಗಿಸಿಕೊಂಡು ನಿದ್ದೆ ಸುಗಮವಾಗಲೂ ಹೆಗಲು ನೀಡುತ್ತಾನೆ. ಈ ವಿಡಿಯೋವನ್ನು ಸಾಕಷ್ಟು ಜನ ಮೆಚ್ಚಿಕೊಂಡಿದ್ದು, ಪುಟಾಣಿಯ ದೊಡ್ಡ ಮನಸ್ಸಿಗೆ ಸೆಲ್ಯೂಟ್ ಹೊಡೆದಿದ್ದಾರೆ. 

ಅನೇಕರು ಈ ವಿಡಿಯೋಗೆ ಕ್ಯೂಟ್, ತುಂಬಾ ಮುದ್ದಾಗಿದೆ ಅಂತ ಕಾಮೆಂಟ್ ಮಾಡಿದ್ದಾರೆ. ಸ್ನೇಹಿತರು (Friends) ಕಷ್ಟದ ಸಮಯದಲ್ಲಿ ಕೈ ಹಿಡಿಯುವ ಭಾವನಾತ್ಮಕವಾಗಿ ಬೆಂಬಲಿಸುವ ನಿಜವಾದ ಗೆಳೆಯರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಈ ಮಕ್ಕಳಿಂದ ಪ್ರಪಂಚ ಕಲಿಯುವುದು ತುಂಬಾ ಇದೆ. ಮಕ್ಕಳಿಂದ ದೊಡ್ಡವರು ಕಲಿಯಬೇಕಾದ್ದು ತುಂಬಾ ಇದೆ. ಬಾಲ್ಯದಲ್ಲಿ ತುಂಬಾ ಒಳ್ಳೆಯವರಾಗಿರುವ ಮಕ್ಕಳು ದೊಡ್ಡವರಾಗುತ್ತಾ ಏಕೆ ಕೆಟ್ಟವರಾಗುತ್ತಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ಇದು ನನ್ನ ಗ್ಯಾಂಗ್ ಎಂದು ತಮ್ಮ ಗೆಳೆಯರ ಗ್ರೂಪ್‌ನ್ನು ಹೋಲಿಸಿಕೊಂಡಿದ್ದಾರೆ. ಈ 26 ಸೆಕೆಂಡ್‌ಗಳ ಈ ವಿಡಿಯೋವನ್ನು 27.4 ಮಿಲಿಯನ್ ಜನ ವೀಕ್ಷಿಸಿದ್ದಾರೆ. 

ಬಾಲ್ಯದ ಸ್ವೀಟ್ ಹಾರ್ಟ್ ಜೀವನ ಸಂಗಾತಿ ಆಗ್ಲಿ ಅಂತಾರೆ ಈ ರಾಶಿಯ ಮಂದಿ

 

ಸ್ನೇಹಿತರು ನಮ್ಮ ಕಷ್ಟ ಸುಖ ಎರಡಕ್ಕೂ ಜೊತೆಯಾಗುತ್ತಾರೆ. ಕಣ್ಣೀರಿಡುವಾಗ ಸಂತೈಸುವ ಗೆಳೆಯ/ಗೆಳತಿಯರು ಅಳುವ ಮೊಗದಲ್ಲಿ ನಗು (Smile) ಮೂಡಿಸಲು ಇನ್ನಿಲ್ಲದ ಸಾಹಸ ಮಾಡುತ್ತಾರೆ. ಹಾಗೆಯೇ ಕೀಟಲೆ ವಿಚಾರ ಬಂದಾಗ ಒಂದು ಕೈ ಹೆಚ್ಚೆ ಎನ್ನುವಷ್ಟು ಕಾಲೆಳೆಯುತ್ತಾರೆ. ಅದರಲ್ಲೂ ಹುಡುಗರಂತು ತಮ್ಮ ಸ್ನೇಹಿತ ಮದುವೆಯಾಗುತ್ತಾನೆ (weddings) ಎಂದ ಕೂಡಲೇ ಅಯ್ಯೋ ಆತ ನಮ್ಮ ಗ್ರೂಪ್‌ನಲ್ಲಿ ಇರುವುದಿಲ್ಲ ಎಂದು ಬಾಧೆಪಡುತ್ತಾರೆ. ಇದೇ ಕಾರಣಕ್ಕೆ ಕೆಲವು ಸ್ನೇಹಿತರು ತಮ್ಮ ಗೆಳೆಯನ ಮದುವೆ ದಿನ ಆತನನ್ನು ವಿವಾಹವಾಗುವ ಯುವತಿಯಿಂದ ಬಾಂಡ್ ಬರೆಸಿಕೊಂಡು ವಿಚಾರ ಸಾಕಷ್ಟು ವೈರಲ್ ಆಗಿತ್ತು.

ಮದುವೆಯಾದ ಗೆಳೆಯ ತಮ್ಮಿಂದ ಕೈ ತಪ್ಪಿ ಹೋಗುತ್ತಾನೆ ಎಂದು ವರನ (Groom) ಗೆಳೆಯರು ಶನಿವಾರ ಭಾನುವಾರ ಗೆಳೆಯನನ್ನು ಕ್ರಿಕೆಟ್ ಆಡಲು ಕಳುಹಿಸಬೇಕು, ನಮ್ಮ ಜೊತೆ ಪಾರ್ಟಿ ಮಾಡಲು ಬಿಡಬೇಕು ಎಂದು ವಧುವಿನ ಕೈಯಲ್ಲಿ 20 ರೂಪಾಯಿಯ ಸ್ಟಾಂಪ್ ಇರುವ ಬಾಂಡ್‌ ಪೇಪರ್‌ಗೆ ಸಹಿ ಹಾಕಿಸಿಕೊಂಡಿದ್ದರು. 

ಚಿಕಾಗೋದಲ್ಲಿ ಭಾರತೀಯ ಸ್ನೇಹಿತನ ಮದುವೆಗೆ ಸೀರೆಯುಟ್ಟು ಬಂದ ಪುರುಷರು!

ನಿನ್ನೆಯಷ್ಟೇ ಸ್ನೇಹಿತರ ಕಿತಾಪತಿಯ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿತ್ತು. ಸ್ನೇಹಿತನ ಮದುವೆಯಂದು ಗೆಳೆಯರೆಲ್ಲಾ ಸೇರಿ ಆತ ಮದುವೆ ಮನೆಗೆ ವಿಭಿನ್ನವಾಗಿ ಬರಲು ಪ್ಲಾನ್ ಮಾಡಿದ್ದರು. ಅದರಂತೆ ಮದುಮಗ (Groom) ಶವಪೆಟ್ಟಿಗೆ ಏರಿ ಮದುವೆ ಮನೆಗೆ ಬಂದಿಳಿದ್ದ. ಆದರೆ  ಸ್ನೇಹಿತರ ಕಿತಾಪತಿಯನ್ನು ಮದುವೆ ಮನೆಯವರು ಮಾತ್ರ ಇಷ್ಟಪಡದೇ ಗಾಬರಿಯಾಗಿದ್ದರು. ಅಲ್ಲದೇ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಇದು ಸರಿಯಲ್ಲ ಎಂದು ಸಿಟ್ಟಿಗೆದ್ದಿದ್ದರು. 
 

Follow Us:
Download App:
  • android
  • ios