Asianet Suvarna News Asianet Suvarna News

ಬಾಲ್ಯದ ಸ್ವೀಟ್ ಹಾರ್ಟ್ ಜೀವನ ಸಂಗಾತಿ ಆಗ್ಲಿ ಅಂತಾರೆ ಈ ರಾಶಿಯ ಮಂದಿ

ಬಾಲ್ಯದಲ್ಲಿ ಹಲವರ ಬಗ್ಗೆ ಅರಿಯದ ಆಕರ್ಷಣೆ ಇರುತ್ತದೆ, ಕ್ರಶ್ ಇರುತ್ತದೆ. ಅವರು ಸ್ನೇಹಿತರಾಗಿಯೂ ಇರಬಹುದು. ಬೆಳೆಯುತ್ತ ಬೆಳೆಯುತ್ತ ಬಹಳಷ್ಟು ಜನ ಈ ಕ್ರಶ್ ಕಡಿಮೆಯಾಗಿ ಬೇರೊಂದು ಸಂಗಾತಿಯ ಕಡೆಗೆ ಮುಖ ಮಾಡುತ್ತಾರೆ. ಆದರೆ, ಕೆಲವು ಜನ ಮಾತ್ರ ತಮ್ಮ ಬಾಲ್ಯಕಾಲದ ಕ್ರಶ್ ಅನ್ನೇ ಮದುವೆಯಾಗಿ ಇಡೀ ಜೀವನ ಅವರೊಂದಿಗೇ ಕಳೆಯಲು ಇಷ್ಟಪಡುತ್ತಾರೆ. ಐದು ರಾಶಿಗಳಲ್ಲಿ ಈ ಗುಣ ಕಾಣಬಹುದು.

 
 

These zodiac sign people want to marry their childhood sweetheart
Author
First Published Nov 18, 2022, 10:47 AM IST

ಬಾಲ್ಯದಲ್ಲಿ ಯಾರ ಮೇಲಾದರೂ ಕ್ರಶ್ ಉಂಟಾಗುವುದು ಸಹಜ. ಅದು ಕ್ರಶ್ ಅಥವಾ ಆಕರ್ಷಣೆ ಎಂದೂ ತಿಳಿಯದ ವಯಸ್ಸದು. ಅದು ಕ್ರಮೇಣ ಸ್ನೇಹವಾಗಿ, ಪ್ರೀತಿಯಾಗಿ ಬದಲಾಗಬಹುದು. ಆದರೆ, ಬಹಳಷ್ಟು ಜನ ಪ್ರೌಢ ವಯಸ್ಸಿಗೆ ಬರುವ ಹೊತ್ತಿಗೆ ಬಾಲ್ಯದ ಈ ಆಕರ್ಷಣೆಯಿಂದ ಹೊರಬರುತ್ತಾರೆ. ಅದನ್ನು ಪ್ರೀತಿ ಎಂದು ಅವರು ಕನ್ಸಿಡರ್ ಮಾಡುವುದಿಲ್ಲ. ಅವರ ಪ್ರಪಂಚ ವಿಸ್ತಾರಗೊಳ್ಳುತ್ತ ಆಯ್ಕೆಯೂ ವಿಸ್ತಾರಗೊಳ್ಳುತ್ತ ಸಾಗುತ್ತದೆ. ಆದರೆ, ಕೆಲವು ಜನ ಹೀಗಿರುವುದಿಲ್ಲ. ಅವರು ಬಾಲ್ಯದ ಸ್ನೇಹವನ್ನು ಯಾವತ್ತೂ ಎದೆಯಲ್ಲಿಟ್ಟು ಕಾಪಾಡುತ್ತಾರೆ. ಬಾಲ್ಯದ ಮುಗ್ಧ ಪ್ರೀತಿ, ಪ್ರೌಢ ವಯಸ್ಸಿಗೆ ಬಂದಾಗ ಪ್ರೌಢ ಪ್ರೀತಿಯಾಗಿ ಬದಲಾಗುತ್ತದೆ. ಆದರೆ, ಅವರು ಚೈಲ್ಡ್ ಹುಡ್ ಸ್ವೀಟ್ ಹಾರ್ಟ್ ಅನ್ನು ಎಂದಿಗೂ ದೂರ ಮಾಡುವುದಿಲ್ಲ. ಅವರನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಇಷ್ಟಪಡುತ್ತಾರೆ ಹಾಗೂ ಅದಕ್ಕಾಗಿ ಪ್ರಾಮಾಣಿ ಪ್ರಯತ್ನ ಮಾಡುತ್ತಾರೆ. ಹೀಗೆ, ಬಾಲ್ಯದ ಪ್ರೀತಿಪಾತ್ರರನ್ನೇ ವಿವಾಹವಾಗಿ ಅವರನ್ನೇ ಸಂಗಾತಿಯನ್ನಾಗಿ ಮಾಡಿಕೊಳ್ಳುವವರು ಸಾಮಾನ್ಯವಾಗಿ ಈ ಐದು ರಾಶಿಗಳಿಗೆ ಸೇರಿರುತ್ತಾರೆ ಎನ್ನಬಹುದು. ಅವರೊಂದಿಗೇ ಬೆಳೆದು ದೊಡ್ಡವರಾಗಿದ್ದೇವೆ, ಅವರೊಂದಿಗೇ ಜೀವನ ಕಳೆಯುತ್ತೇವೆ ಎಂದು ನಿರ್ಧರಿಸಬಹುದು. ಅವರು ತಮ್ಮ ಸಂಗಾತಿಯನ್ನು ಬಹಳ ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಪರಸ್ಪರರ ಸಾಮರ್ಥ್ಯ ಹಾಗೂ ದೌರ್ಬಲ್ಯಗಳ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿರುತ್ತದೆ. ಅಂತಹ ಕೆಲವು ರಾಶಿಗಳು ಯಾವುವು ನೋಡಿ.

· ಮೀನ (Pisces)
ಮೀನ ರಾಶಿಯ (Zodiac Sign) ಜನ ಜೀವನದಲ್ಲಿ ಒಬ್ಬರನ್ನು ಸಂಗಾತಿಯನ್ನಾಗಿ (Partner) ಮಾಡಿಕೊಳ್ಳುತ್ತಾರೆ. ಹೀಗಾಗಿ, ಚೈಲ್ಡ್ ಹುಡ್ ಸ್ವೀಟ್ ಹಾರ್ಟ್ (childhood Sweetheart) ಅನ್ನೇ ತಮ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳುವ ಆಸಕ್ತಿ ಹೊಂದಿರುತ್ತಾರೆ. ಜಲ ತತ್ವದ ಈ ಜನ ಸ್ನೇಹಮಯ, ಪ್ರೀತಿಸುವ (Loving) ಗುಣ ಹೊಂದಿದ್ದು, ಸೂಕ್ಷ್ಮವಾಗಿರುತ್ತಾರೆ. ಹಾಗೂ ಬಾಲ್ಯದ ಪ್ರೀತಿಯ ಬಗ್ಗೆ ಮೃದು ಧೋರಣೆ ಹೊಂದಿರುತ್ತಾರೆ. ಅಲ್ಲಿ ಇಲ್ಲಿ ಸಮಯ ಕಳೆಯುವ ಬದಲು, ಅವರಿವರ ಗೊಂದಲದಲ್ಲಿ ಹಿಂಸೆ ಮಾಡಿಕೊಳ್ಳದೆ ಬಾಲ್ಯಕಾಲದ ಸ್ನೇಹಿತೆ ಅಥವಾ ಸ್ನೇಹಿತನ ಜತೆಗೇ ಸುಭದ್ರ ಸಂಬಂಧ ಹೊಂದಲು ಬಯಸುತ್ತಾರೆ.

Shani Transit 2023: ಶನಿಕೃಪೆಯಿಂದ 2023ರ ಆರಂಭ ಈ 3 ರಾಶಿಗೆ ಶುಭಲಾಭ

· ವೃಷಭ (Taurus)
ವೃಷಭ ರಾಶಿಯ ಜನ ಪ್ರೀತಿ ಮತ್ತು ಸಂಬಂಧವನ್ನು (Relationship) ಒಂದೇ ಎಂದು ಬಗೆಯುತ್ತಾರೆ. ವ್ಯಕ್ತಿಯಲ್ಲಿ ಆಸಕ್ತಿ (Interest) ಇಲ್ಲವೆಂದಾದರೆ ಇವರು ಎಂದಿಗೂ ಸಂಬಂಧ ಆರಂಭಿಸುವುದಿಲ್ಲ. ಹೊಸಬರನ್ನು ಮನಸ್ಸಿನೊಳಗೆ ಬಿಟ್ಟುಕೊಳ್ಳುವುದಿಲ್ಲ. ಹೀಗಾಗಿ, ಚಿಕ್ಕಂದಿನಿಂದ ಕಂಡ ಸ್ನೇಹವೇ (Friendship) ಇವರಿಗೆ ಆಪ್ತವೆನಿಸುತ್ತದೆ. ಅವರನ್ನೇ ಮದುವೆ (Marriage) ಮಾಡಿಕೊಳ್ಳುವುದು ಇವರಿಗೆ ಸುಲಭವಾಗುತ್ತದೆ.

· ಕರ್ಕಾಟಕ (Cancer)
ಈ ರಾಶಿಯ ಜನ ತಮ್ಮ ಬಾಲ್ಯದ ಕಾಲದ ಪ್ರೀತಿಪಾತ್ರರನ್ನೇ ಮದುವೆಯಾಗಲು ಬಯಸುತ್ತಾರೆ. ಭಾವನಾತ್ಮಕವಾಗಿ (Emotionally) ಅವರ ಮೇಲೆ ಅವಲಂಬಿತರಾಗಿರುತ್ತಾರೆ. ಹೀಗಾಗಿ, ಅವರು ಒಂದು ವಯಸ್ಸಿಗೆ ಬಂದರೂ ಎಲ್ಲರಂತೆ ಅವರಿವರ ಬಗ್ಗೆ ಆಸಕ್ತಿ ಹೊಂದುವುದಿಲ್ಲ. ಡೇಟಿಂಗ್ ನಲ್ಲೂ ಆಸಕ್ತಿ ತಾಳುವುದಿಲ್ಲ. ಬದಲಿಗೆ, ಅವರು ತಾವು ಮೊದಲಿನಿಂದಲೂ ಪ್ರೀತಿಸುವ ಅಥವಾ ದೀರ್ಘಕಾಲದಿಂದಲೂ ತಿಳಿದಿರುವ ಗೆಳೆಯ ಅಥವಾ ಗೆಳತಿಯನ್ನು ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸುತ್ತಾರೆ. ಇವರು ಅಭದ್ರತೆಗೆ (Insecurity) ಸಿಕ್ಕಾಪಟ್ಟೆ ಹೆದರುತ್ತಾರೆ. ಸಂಬಂಧದಲ್ಲಿ ಎಂದಿಗೂ ಸುರಕ್ಷಿತರಾಗಿರಲು ಇಷ್ಟಪಡುತ್ತಾರೆ.

· ತುಲಾ (Libra)
ಈ ರಾಶಿಯ ಜನ ತಮ್ಮ ಮೊದಲ ಪ್ರೀತಿಯನ್ನು (First Love) ಎಂದಿಗೂ ಉಳಿಸಿಕೊಳ್ಳಲು ಬಯಸುತ್ತಾರೆ. ಸಂಬಂಧದಲ್ಲಿ ಸುರಕ್ಷತೆ ಹಾಗೂ ಶುದ್ಧತೆಯನ್ನು ಇಷ್ಟಪಡುವ ಇವರು ಬಾಲ್ಯಕಾಲದ ಪ್ರೀತಿಗೆ ಆದ್ಯತೆ ನೀಡುತ್ತಾರೆ.

ಅಪ್ಪಿ ತಪ್ಪಿಯೂ ಈ ರಾಶಿಯವರು ಸಾಲ ಕೊಟ್ಟು ಕೋಡಂಗಿ ಆಗ್ಬೇಡಿ

· ವೃಶ್ಚಿಕ (Scorpio)
ವೃಶ್ಚಿಕ ರಾಶಿಯ ಜನಕ್ಕೆ ಮೊದಲ ಮುಗ್ಧ (Innocent) ಪ್ರೀತಿ ಅತ್ಯಮೂಲ್ಯ. ಹೀಗಾಗಿ, ಅವರೊಂದಿಗೆ ದೀರ್ಘಕಾಲ ಜೀವನ (Long Life) ಕಳೆಯಲು ಬಯಸುತ್ತಾರೆ. ಬಾಲ್ಯದ ಪ್ರೀತಿಪಾತ್ರರಲ್ಲಿ ಪ್ರೀತಿ ವ್ಯಕ್ತಪಡಿಸಲು ಕಾಯುತ್ತಾರೆ.

Follow Us:
Download App:
  • android
  • ios