Wedding Card: ಮದುವೆ ಆಮಂತ್ರಣ ಪತ್ರಿಕೆಗೆ ಷೇರ್ ಮಾರ್ಕೆಟ್ ಟಚ್
ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಪ್ರತಿಯೊಂದು ಸಿದ್ಧತೆಯ ಬಗ್ಗೆ ಅನೇಕ ಕನಸನ್ನು ಕಟ್ಟಿಕೊಂಡಿರುತ್ತಾರೆ. ಆಮಂತ್ರಣ ಪತ್ರಿಕೆಯನ್ನು ಸಹ ಅದಕ್ಕೆ ತಕ್ಕಂತೆ ಮಾಡಿಸಿಕೊಳ್ಳುತ್ತಾರೆ. ಆದರೆ ಮಹಾರಾಷ್ಟ್ರದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ಟಾಕ್ ಮಾರ್ಕೆಟ್ ಪರಿಭಾಷೆಯಲ್ಲಿ ಮಾಡಿಸಿದೆ.
ಹಿಂದಿನ ಕಾಲದಲ್ಲೆಲ್ಲಾ ಮದುವೆ (Marriage) ತುಂಬಾ ಸರಳವಾಗಿ ನಡೆಯುತ್ತಿತ್ತು. ಆದ್ರೆ ಇತ್ತೀಚಿನ ಕೆಲ ವರ್ಷಗಳಿಂದ ಮದುವೆಗಳನ್ನು ತುಂಬಾ ಅದ್ಧೂರಿಯಾಗಿ ಮಾಡಲಾಗುತ್ತೆ. ಡಿಫರೆಂಟ್ ವೆಡ್ಡಿಂಗ್ ಕಾರ್ಡ್, ಗ್ರ್ಯಾಂಡ್ ಡೆಕೊರೇಷನ್, ವೆರೈಟಿ ಊಟ ಸಿದ್ಧಪಡಿಸುತ್ತಾರೆ. ತಮ್ಮ ಫೋಟೋಗಳನ್ನೇ ಗ್ರಾಫಿಕ್ಸ್ ಮಾಡಿಸಿ ವೆಡ್ಡಿಂಗ್ ಕಾರ್ಡ್ ಸಿದ್ಧಪಡಿಸುತ್ತಾರೆ. ಇನ್ನು ಕೆಲವರು ಹಾರ್ಟ್ ಶೇಪ್, ಫ್ಲವರ್, ಬಟರ್‌ಫ್ಲೈ ಶೇಪ್‌ನಲ್ಲಿ ಮದುವೆ ಆಮಂತ್ರಣ ಪತ್ರಿಕೆ ಸಿದ್ಧಪಡಿಸುತ್ತಾರೆ. ಮತ್ತೂ ಕೆಲವರು ಓಪನ್ ಮಾಡಿದಾಗ ಸಂಗೀತ ಹಾಡುವ, ಕಲರ್‌ಫುಲ್ ಅಗಿ ಕಾಣುವ ವೆಡ್ಡಿಂಗ್ ಕಾರ್ಡ್ ಸಿದ್ಧಗೊಳಿಸುತ್ತಾರೆ. ಅದೆಲ್ಲಕ್ಕಿಂತ ವಿಭಿನ್ನವಾಗಿ ಮಹಾರಾಷ್ಟ್ರದಲ್ಲೊಂದು ಜೋಡಿ ಸ್ಟಾಕ್ ಮಾರ್ಕೆಟ್ ರೀತಿಯ ಮದುವೆ ಆಮಂತ್ರಣ ಪತ್ರಿಕೆಯನ್ನು (Wedding card) ಸಿದ್ಧಪಡಿಸಿದ್ದಾರೆ.
ಆಹ್ವಾನ ಪತ್ರಿಕೆಗೆ ಷೇರ್ ಮಾರ್ಕೆಟ್ ಟಚ್
ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯು ತಮ್ಮ ಮದುವೆಯ ಪ್ರತಿಯೊಂದು ಸಿದ್ಧತೆಯ ಬಗ್ಗೆ ಅನೇಕ ಕನಸನ್ನು ಕಟ್ಟಿಕೊಂಡಿರುತ್ತಾರೆ. ಆಮಂತ್ರಣ ಪತ್ರಿಕೆಯನ್ನು ಸಹ ಅದಕ್ಕೆ ತಕ್ಕಂತೆ ಮಾಡಿಸಿಕೊಳ್ಳುತ್ತಾರೆ. ಆದರೆ ಮಹಾರಾಷ್ಟ್ರದ ಜೋಡಿ ಮದುವೆ ಆಮಂತ್ರಣ ಪತ್ರಿಕೆಯನ್ನು ಸ್ಟಾಕ್ ಮಾರ್ಕೆಟ್ (Stock Market) ಪರಿಭಾಷೆಯಲ್ಲಿ ಮಾಡಿಸಿದೆ. ನಾಂದೇಡ್‍ನ ಜೋಡಿಗಳು (Couple) ಉದ್ಯೋಗದಲ್ಲಿ ವೈದ್ಯರಾಗಿದ್ದು(Doctor), ಷೇರು ಮಾರುಕಟ್ಟೆಯಿಂದ ಪ್ರೇರಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆಯ ಪರಿಭಾಷೆಯಲ್ಲೇ ತಮ್ಮ ಮದುವೆ ಕಾರ್ಡ್‍ನ್ನು ಮಾಡಿಸಿದ್ದಾರೆ.
Kannada Wedding Card: ಕನ್ನಡ ಕಂಪು ಸೂಸುವ ವಿಶಿಷ್ಟ ಲಗ್ನಪತ್ರಿಕೆ..!
ಆಮಂತ್ರಣ ಕಾರ್ಡ್‍ನಲ್ಲಿ ಏನಿದೆ ?
ಮದುವೆ ಕಾರ್ಡಿನ ವಿಶೇಷವೆಂದರೆ ಆಮಂತ್ರಣದಲ್ಲಿ ಬರುವ ಪ್ರತಿ ಶಬ್ದವನ್ನು ಷೇರು ಮಾರುಕಟ್ಟೆಗೆ ಸಂಬಂಧಿಸಿ ತಯಾರಿಸಿದ್ದಾರೆ. ಇದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲೂ (Social media) ಹಂಚಿಕೊಂಡಿದ್ದಾರೆ. ವರನನ್ನು ಡಾ.ಸಂದೇಶ್ ಮೆಡಿಸಿನ್ ಲಿಮಿಟೆಡ್ ಎಂದು ಪರಿಚಯಿಸಿದ್ದರೆ ಮತ್ತು ಡಾ.ದಿವ್ಯಾ ಅನೆಸ್ತೇಶಿಯಾ ಲಿಮಿಟೆಡ್ ಹೆಸರಿಸಲಾಗಿದೆ. ಕಾರ್ಡ್‍ನ ಆರಂಭದಲ್ಲಿ ಅತ್ಯಮೂಲ್ಯ ಕಾರ್ಯಕ್ರಮದ ಆಹ್ವಾನ ಎಂದು ತಿಳಿಸಲಾಗಿದೆ. ಸ್ನೇಹಿತರನ್ನು (Friends) ಹಾಗೂ ಕುಟುಂಬದವರನ್ನು ಚಿಲ್ಲರೆ ಹೂಡಿಕೆದಾರರು ಎಂದಿದ್ದಾರೆ.
ಸಮಾರಂಭಕ್ಕೆ ಸಂಬಂಧಿಸಿದ ವಿವಿಧ ಆಚರಣೆಗಳಿಗೆ ಸ್ಟಾಕ್ ಮಾರ್ಕೆಟ್‍ಗೆ ಸಂಬಂಧಿಸಿದ ಹೆಸರನ್ನೇ ನೀಡಿದ್ದಾರೆ. ಸಂಗೀತವನ್ನು ರಿಂಗಿಂಗ್ ಬೆಲ್, ಸ್ವಾಗತವನ್ನು ಮಧ್ಯಂತರ ಡಿವಿಡೆಂಡ್ ಪಾವತಿ ಎಂದು ತಿಳಿಸಿದ್ದಾರೆ. ಡಿಸೆಂಬರ್ 6 ಮತ್ತು 7 ಬಿಡ್ಡಿಂಗ್ ದಿನಾಂಕವಾಗಿದ್ದು, ಗುಲ್ಬರ್ಗದ ಹುನ್ನಾಬಾದ್ ರಸ್ತೆಯಲ್ಲಿರುವ ಸಾಕಾಸರ್ ಗಾರ್ಡನ್‌ನಲ್ಲಿ ಸ್ಟಾಕ್ ಎಕ್ಸ್‌ಚೇಂಜ್ ನಡೆಯಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಬೋನಸ್ ರೂಪದಲ್ಲಿ ಸ್ಥಳೀಯದಲ್ಲವರಿಗೆ ಇರಲು ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Wedding Cardನಲ್ಲಿ ಪೋರ್ನ್ ವೆಬ್ ಸೈಟ್ ಲಿಂಕ್; ಅತಿಥಿಗಳು ಸುಸ್ತೋ ಸುಸ್ತು!
ಫಾರ್ಮಾಸಿಸ್ಟ್-ನರ್ಸ್ ಜೋಡಿಯ ಡಿಫರೆಂಟ್ ಮದುವೆ ಆಮಂತ್ರಣ ಪತ್ರಿಕೆ
ತಮಿಳುನಾಡಿನ ಫಾರ್ಮಾಸಿಸ್ಟ್- ನರ್ಸ್ ಜೋಡಿಯೊಂದು ಈ ಹಿಂದೆ ಡಿಫರೆಂಟ್ ಮದುವೆ ಆಮಂತ್ರಣ ಪತ್ರಿಕೆ ಮೂಲಕ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಟ್ಯಾಬ್ಲೆಟ್ ಕಾರ್ಡ್ ಮಾದರಿಯ ಆಮಂತ್ರಣ ಪತ್ರಿಕೆ ವೈರಲ್ ಆಗಿದ್ದು, ಇಂತಹದ್ದೊಂದು ವಿಭಿನ್ನ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ವರ ಫಾರ್ಮಾಸಿಸ್ಟ್, ವಧು ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ ಈ ಜೋಡಿ ಆಹ್ವಾನ ಪತ್ರಿಕೆಗೆ ಟ್ಯಾಬ್ಲೆಟ್ ಕಾರ್ಡ್ ಮಾದರಿ ಬಳಸಿದ್ದಾರೆ. ಆ ಮೂಲಕ ವೃತ್ತಿಪರತೆ ತೋರಿದ್ದಾರೆ.
ವರನ ಹೆಸರು ಎಳಿಲರಸನ್. ವಧುವಿನ ಹೆಸರು ವಸಂತಕುಮಾರಿ. ತಿರುವಣ್ಣಾಮಲೈ ಜಿಲ್ಲೆಯ ಎಳಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರ ಮದುವೆ 2022ರ ಸೆಪ್ಟೆಂಬರ್ 5ರಂದು ನಡೆಯಲಿದೆ. ಎಲ್ಲ ಸ್ನೇಹಿತರು ಮತ್ತು ಬಂಧುಗಳು ತಪ್ಪದೇ ವಿವಾಹ ಸಮಾರಂಭಕ್ಕೆ ಆಗಮಿಸಬೇಕು ಎಂದು ತಿಳಿಸಲಾಗಿದೆ. ಅಷ್ಟೇ ಅಲ್ಲ, ನೀಲಿ ಬಣ್ಣದಲ್ಲಿ ಮದುವೆ ಮತ್ತು ಆರತಕ್ಷತೆ ನಡೆಯುವ ದಿನಾಂಕ ಮತ್ತು ಸಮಯ ತಿಳಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ, ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಮುದ್ರಿಸಲಾಗಿದೆ. ಮದುವೆ ಕರೆಯೋಲೆ ಪತ್ರಿಕೆಯಲ್ಲಿ ವಧು-ವರನ (Bride-groom) ಹೆಸರು ದೊಡ್ಡ ಅಕ್ಷರದಲ್ಲಿದ್ದು, ಪಕ್ಕದಲ್ಲೇ ಇಬ್ಬರ ಶಿಕ್ಷಣದ ವಿವರವೂ ಇದೆ.