Asianet Suvarna News Asianet Suvarna News

#Feelfree: ಮನೆಯಿಂದ ಹೊರಗೆ ಹೋದಾಗ ಮಾತ್ರ ಸೆಕ್ಸ್ ಮೂಡ್ ಬರುತ್ತೆ!

ಪ್ರತಿನಿತ್ಯ ಅದೇ ಬೆಡ್‌ರೂಮು, ಅದೇ ಹಾಲ್- ಅಲ್ಲೇ ಸೆಕ್ಸ್ ಬೋರಾಗುವುದು ಸಹಜ. ಹೀಗಾಗಿಯೇ ಹೊರಾಂಗಣ ಸೆಕ್ಸ್ ಹೆಚ್ಚು ಕಿಕ್ ಕೊಡುತ್ತದೆ. ಮನೆಯಲ್ಲೂ ಈ ಸಂತೃಪ್ತಿ ಪಡೆಯುವುದು ಹೇಗೆ?

Couple who get sexual mood when they out from home
Author
Bengaluru, First Published Jul 16, 2021, 4:28 PM IST

ಪ್ರಶ್ನೆ: ನಾನು ಮೂವತ್ತು ವರ್ಷದ ವಿವಾಹಿತೆ. ಮದುವೆಯಾಗಿ ಐದು ವರ್ಷವಾಗಿದೆ. ಗಂಡನಿಗೆ ಮೂವತ್ತೆಂಟು ವರ್ಷ. ಆರಂಭದ ಎರಡು ವರ್ಷ ನಮ್ಮ ನಡುವೆ ಸಾಕಷ್ಟು ಸೆಕ್ಸ್ ಇತ್ತು. ಹೆಚ್ಚು ಕಡಿಮೆ ಪ್ರತಿದಿನ ಸಂಭೋಗಿಸುತ್ತಿದ್ದೆವು. ಬರಬರುತ್ತಾ ಅದರ ಫ್ರೀಕ್ವೆನ್ಸಿ ಕಡಿಮೆ ಆಯ್ತು. ಈಗ ನಾವಿಬ್ಬರೂ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದೇವೆ. ಆದರೆ ಕಳೆದ ಎರಡು ತಿಂಗಳಲ್ಲಿ ಒಮ್ಮೆಯೂ ಸೇರಿಲ್ಲ. ಆದರೆ, ಹೊರಗಡೆ ಎಲ್ಲಾದರೂ ಪ್ರವಾಸ ಹೋದಾಗ ತಾನಾಗಿಯೇ ಮೈಮನಸ್ಸು ಅರಳಿ, ಸೆಕ್ಸ್‌ನಲ್ಲಿ ತೊಡಗುವಂತೆ ಆಗುತ್ತೆ.  ಇಬ್ಬರೂ ಪರಸ್ಪರ ಸಾಕಷ್ಟು ಫೋರ್‌ಪ್ಲೇಯಲ್ಲಿ ತೊಡಗುತ್ತೇವೆ. ಸೆಕ್ಸ್ ಆ ದಿನಗಳಲ್ಲಿ ತೃಪ್ತಿಕರವಾಗಿ ಇರುತ್ತೆ. ಹೀಗೇಕೆ? ಮನೆಯಲ್ಲಿ ಮಾತ್ರ ಯಾಕೆ ಸೆಕ್ಸ್ ನೀರಸವಾಗಿರ್ತದೆ?

ಉತ್ತರ: ಇದಕ್ಕೆ ಉತ್ತರ ನಿಮ್ಮ ಪ್ರಶ್ನೆಯಲ್ಲೇ ಇದೆ. ದೇಹ ಮತ್ತು ಮನಸ್ಸುಗಳು ಸದಾ ಹೊಸದನ್ನು ಬಯಸುತ್ತಿರುತ್ತವೆ. ಕಾಲಕ್ರಮೇಣ ಮನೆ ಹಳತಾಗುತ್ತದೆ, ಸಂಗಾತಿ ಕೂಡ ಹಳಬನಾಗುತ್ತಾನೆ/ಳೆ. ಸಹಜವಾಗಿ ಅಲ್ಲಿ ನಿಮ್ಮನ್ನು ಉದ್ರೇಕಿಸುವ ಗುಣಗಳು ಯಾವುದೂ ಇರುವುದಿಲ್ಲ. ಹೊಸ ಸ್ಥಳಗಳಿಗೆ ಹೋದಾಗ ಹೀಗಲ್ಲ. ಅಲ್ಲಿನ ವಾತಾವರಣ, ತಾಪಮಾನದ ಬದಲಾವಣೆ, ಹೊಸದಾಗಿ ಕಂಡ ದೃಶ್ಯಗಳಿಂದ ನಿಮ್ಮ ಮನಸ್ಸು ಸಾವಧಾನದ, ಉದ್ವೇಗ ಒತ್ತಡಗಳಿಲ್ಲದ ಸ್ಥಿತಿಗೆ ಬಂದಿರುತ್ತದೆ. ಮನೆಯ ವಾತಾವರಣ ನಿಮ್ಮನ್ನು ಕೌಟುಂಬಿಕ ಮತ್ತು ಕಚೇರಿಯ ಒತ್ತಡಗಳಿಗೆ ಒಳಪಡಿಸಿದರೆ, ಹೊರ ವಾತಾವರಣ ನಿರಾಳವಾಗಿ ಒಂದಾಗಲು ಪ್ರೇರೇಪಿಸುತ್ತದೆ. ಹೀಗಾಗಿ ನೀರಸ  ದಾಂಪತ್ಯಗಳಿಗೆ ಸಾಮಾನ್ಯವಾಗಿ ಪ್ರವಾಸದ ಐಡಿಯಾ ಕೊಡಲಾಗುತ್ತೆ.

Feelfree: ಹೆಣ್ಣು ಮೇಲಿದ್ದರೆ ಹೆಚ್ಚು ಸುಖ, ವಾತ್ಸಾಯನನೂ ಹೇಳಿದ್ದಾನೆ ಈ ಭಂಗಿ!

ಇದು ಸರಿ, ಆದರೆ ಯಾವಾಗಲೂ ಪ್ರವಾಸ ಹೋಗಲು ಆಗುವುದಿಲ್ವಲ್ಲ? ಹಾಗಾದರೆ ಮನೆಯಲ್ಲೇ ಪ್ರಣಯದ ಕಾವು ಉಳಿಸಿಕೊಳ್ಳುವುದು ಹೇಗೆ? ಅನೇಕ ರೀತಿಗಳಲ್ಲಿ ಮಾಡಬಹುದು. ಪ್ರಣಯದ ಜಾಗ ಬದಲಿಸಿ. ಬೆಡ್‌ರೂಮಿನಲ್ಲೇ ಅದು ಆಗಬೇಕೆಂದೇನೂ ಇಲ್ಲ. ಹಾಲ್‌ನಲ್ಲಿ, ಸೋಫಾದ ಮೇಲೆ, ಅಡುಗೆ ಮನೆಯಲ್ಲಿ, ಡೈನಿಂಗ್ ಟೇಬಲ್ ಮೇಲೆ ಕೂಡ ಪ್ರಣಯಕ್ಕೆ ಅವಕಾಶವಿದೆ. ಬೆಡ್‌ರೂಮಿನಲ್ಲು ವಾಸ್ತು, ಇಂಟೀರಿಯರ್ ಡಿಸೈನ್ ಬದಲಿಸಬಹುದು. ನನ್ನ ಪರಿಚಯದ ವ್ಯಕ್ತಿಯೊಬ್ಬರು ಮಧ್ಯರಾತ್ರಿ, ಟೆರೇಸ್ ಮೇಲೆ ಸಂಗಾತಿ ಜೊತೆಗೆ ಸೇರುತ್ತಿದ್ದರು. ಯಾರಾದರೂ ನೋಡಬಹುದು ಎಂಬ ಆತಂಕ‌ ಅವರ ಕ್ರೀಡೆಗೆ ಇನ್ನಷ್ಟು ಹುರುಪು ತುಂಬುತ್ತಿತ್ತು. ಇನ್ನೊಬ್ಬರು, ತಮ್ಮ ಕಾರಿನಲ್ಲಿ‌ ಪ್ರಣಯಕೇಳಿ ನಡೆಸುತ್ತಿದ್ದರು. ಇವೆಲ್ಲವೂ ಪ್ರಣಯಕ್ಕೆ ಇನ್ನಷ್ಟು ಸ್ವಾರಸ್ಯ ಸೇರಿಸುವ ಅಂಶಗಳು. ನೀವೂ ಇಂಥವನ್ನು ಪ್ರಯತ್ನಿಸಿ.

#Feelfree: ಫೋರ್ ಪ್ಲೇ ಅಥವಾ ಮುನ್ನಲಿವು ಎಂದರೆ ಏನು?

ಪ್ರಶ್ನೆ: ನನ್ನ ವಯಸ್ಸು ಇಪ್ಪತ್ತೆಂಟು. ಪತಿಗೂ ಅಷ್ಟೇ. ಮದುವೆಯಾಗಿ ಮೂರು ವರ್ಷ. ನಮ್ಮಿಬ್ಬರ ಸೆಕ್ಸ್ ಲೈಫ್ ಚೆನ್ನಾಗಿಯೇ ಇದೆ. ಆದರೆ ನನ್ನ ಪತಿಯ ಒಂದು ಗೀಳು ಏನೆಂದರೆ ಸೆಕ್ಸ್ ಸಂದರ್ಭದಲ್ಲಿ ಅಶ್ಲೀಲ ಪದ, ಮಾತುಗಳನ್ನು ಉದ್ಗರಿಸುವುದು, ಕೆಲವೊಮ್ಮೆ ಅಶ್ಲೀಲ‌ ಬೈಗುಳವನ್ನು ಬಳಸುತ್ತಾರೆ. ಇದು ಮೊದಮೊದಲು ತಮಾಷೆಯಾಗಿ, ರೊಮ್ಯಾಂಟಿಕ್ ಆಗಿ ಕೇಳಿಸುತ್ತಿತ್ತಾದರೂ, ಈಗ ಕಿರಿಕಿರಿ ಹುಟ್ಟಿಸುತ್ತಿದೆ. ಹೇಗೆ ಇದನ್ನು ಬಿಡಿಸುವುದು?
 

Couple who get sexual mood when they out from home

ಉತ್ತರ: ಈ ಕುರಿತು ನಿಮ್ಮ ಗಂಡನಿಗೆ ನಯವಾಗಿ ತಿಳಿಹೇಳಿ. ರೊಮ್ಯಾಂಟಿಕ್ ಆಗಿರುವುದು ಬೇರೆ, ಪೋಲಿಯಾಗಿರುವುದು ಬೇರೆ, ಅಶ್ಲೀಲತೆ ಬೇರೆ. ಪ್ರತಿ ದಾಂಪತ್ಯಕ್ಕೂ ಅದರದೇ ಆದ ಶೀಲ- ಅಶ್ಲೀಲದ ಗಡಿಗೆರೆ ಇರುತ್ತವೆ. ಹಾಗೇ ವ್ಯಕ್ತಿ ಗೌರವವೂ ಇರುತ್ತದೆ.  ಹದ ತಪ್ಪಿದರೆ ಸಿಹಿ ಹೋಗಿ ಕಹಿಯಾಗುತ್ತದೆ. ಬೈಯ್ಯುವ ಬದಲು ಬೇರೆ ಪ್ರಣಯೋದ್ರೇಕ ಹೆಚ್ಚಿಸುವ ಮಾತುಗಳನ್ನು ನೀವೇ ಮುಂದಾಗಿ ಆಡಿ, ಅವರಿಗೂ ಕಲಿಸಿಕೊಡಿ. ಸರಿಹೋಗದಿದ್ದರೆ, ಅಂಥ ಪದ ಕೇಳಿದ ಕೂಡಲೇ ಸೆಕ್ಸ್ ನಿರಾಕರಿಸಿ. ಇದರಿಂದ ಅವರು ಸರಿಹೋಗಬಹುದು. ಇಂಥ ಮಾತುಗಳಿಂದ ಅವರು ಹೆಚ್ಚಿನ ಕಿಕ್ ಪಡೆಯುತ್ತಿರಬಹುದು; ಆ ಕಿಕ್ ಇತರ ಕ್ರಿಯೆಗಳಲ್ಲಿ ಸಿಗುವಂತೆ ನೀವು ಪ್ರಯತ್ನಿಸಬೇಕಾದೀತು.

#Feelfree: ಅರವತ್ತರ ಅಂಕಲ್, ಇಪ್ಪತ್ತೈದರ ಯುವಕ, ಯಾರು ಹಿತವರು ನನಗೆ?

Follow Us:
Download App:
  • android
  • ios