- Home
- Entertainment
- Cine World
- ನಯನತಾರಾ-ವಿಘ್ನೇಶ್ ಮದುವೆಗೆ 1 ತಿಂಗಳು; ಶಾರುಖ್-ರಜನಿಕಾಂತ್ ಫೋಟೋ ಹಂಚಿಕೊಂಡ ನಿರ್ದೇಶಕ
ನಯನತಾರಾ-ವಿಘ್ನೇಶ್ ಮದುವೆಗೆ 1 ತಿಂಗಳು; ಶಾರುಖ್-ರಜನಿಕಾಂತ್ ಫೋಟೋ ಹಂಚಿಕೊಂಡ ನಿರ್ದೇಶಕ
ನಯನತಾರಾ ಮತ್ತು ವಿಘ್ನೇಸ್ ಮದುವೆಯಾಗಿ ಒಂದು ತಿಂಗಳಾಗಿದೆ. ಇಂದಿಗೆ ನಯನತಾರಾ ಮತ್ತ ವಿಘ್ನೇಶ್ ಮದುವೆಗೆ ಒಂದು ತಿಂಗಳು. ಈ ಖುಷಿಗೆ ವಿಘ್ನೇಶ್ ಒಂದಿಷ್ಟು ಸುಂದರ ಫೋಟೋ ಹಂಚಿಕೊಂಡಿದ್ದಾರೆ.

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಹಸೆಮಣೆ ಏರಿದ್ದರು. ಅದ್ದೂರಿಯಾಗಿ ನಡೆದ ಮದುವೆ ಸಮಾರಂಭದಲ್ಲಿ ಅನೇಕ ಗಣ್ಯರು ಹಾಜರಿದ್ದರು.
ಇಬ್ಬರ ಮದುವೆ ಸಮಾರಂಭಕ್ಕೆ ಗಣ್ಯಾತಿಗಣ್ಯರು ಹಾಜರಿದ್ದು ನವಜೋಡಿಗೆ ಶುಭಹಾರೈಸಿದ್ದರು. ಗ್ರ್ಯಾಂಡ್ ಆಗಿ ನಡೆದ ಮದುವೆ ಸಮಾರಂಭದಲ್ಲಿ ಇಬ್ಬರು ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಗಣ್ಯರು ಹಾಜರಿದ್ದರು.
ನಯನತಾರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸುಮಾರು ನಾಲ್ಕು ವರ್ಷಗಳಿಂದ ಡೇಟಿಂಗ್‌ನಲ್ಲಿದ್ದ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕೊನೆಗೂ ಮದುವೆಯಾಗುವ ಮೂಲಕ ಪತಿ-ಪತ್ನಿಯರಾಗಿದ್ದಾರೆ.
ನಯನತಾರಾ ಮತ್ತು ವಿಘ್ನೇಸ್ ಮದುವೆಯಾಗಿ ಒಂದು ತಿಂಗಳಾಗಿದೆ. ಇಂದಿಗೆ ನಯನತಾರಾ ಮತ್ತ ವಿಘ್ನೇಶ್ ಮದುವೆಗೆ ಒಂದು ತಿಂಗಳು. ಈ ಖುಷಿಗೆ ವಿಘ್ನೇಶ್ ಒಂದಿಷ್ಟು ಸುಂದರ ಫೋಟೋ ಹಂಚಿಕೊಂಡಿದ್ದಾರೆ.
ನಯನಾತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಗೆ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಾರುಖ್ ಖಾನ್ ಭೇಟಿಯ ಫೋಟೋವನ್ನು ಶೇರ್ ಮಾಡಿದ್ದಾರೆ. ನಯನಾತಾರಾ ಮದುವೆಗೆ ಶಾರುಖ್ ಮತ್ತು ರಜನಿಕಾಂತ್ ಭೇಟಿ ನೀಡಿದ್ದರು.
ಶಾರುಖ್ ಖಾನ್ ಮದುಮಗಳು ನಯನತಾರಾ ಅವರನ್ನು ಹಗ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಶಾರುಖ್ ಖಾನ್ ಗೆ ನಿರ್ದೇಶಕ ಅಟ್ಲೀ ಕುಮಾರ್ ಸಾಥ್ ನೀಡಿದ್ದಾರೆ. ಅಂದಹಾಗೆ ಶಾರುಖ್ ಮತ್ತು ನಯನತಾರಾ ಇಬ್ಬರೂ ಅಟ್ಲೀ ನಿರ್ದೇಶನದ ಜವಾನ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.
nayantara
ಇನ್ನು ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಮದುವೆಗೆ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದರು. ರಜನಿಕಾಂತ್ ಜೊತೆಗೆ ನಿರ್ದೇಶಕ ಮಮಿರತ್ನಂ ದಂಪತಿ ಕೂಡ ಹಾಜರಿದ್ದರು. ಅಂದಹಾಗೆ ನಯನತಾರಾ ಮತ್ತು ವಿಘ್ನೇಶ್ ಮದುವೆಗೆ ಅನೇಕರು ಹಾಜರಿದ್ದು ಮವ ಜೋಡಿಗೆ ಶುಭಹಾರೈಸಿದ್ದರು. ನಯನತಾರಾ ಮದುವೆ ಮುಗಿಸಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.