ಈಸಿಜೆಟ್ ವಿಮಾನದ ಟಾಯ್ಲೆಟ್‌ನಲ್ಲಿ ನವ ಜೋಡಿ ಲೈಂಗಿಕ ಕ್ರಿಯೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇವರ ಕೃತ್ಯವನ್ನು ವಿಮಾನದ ಸಿಬ್ಬಂದಿ ಕಣ್ಣಾರೆ ಕಂಡ ಬಳಿಕ ಇಬ್ಬರನ್ನೂ ವಿಮಾನದಿಂದ ಕೆಳಗೆ ಇಳಿಸಲಾಗಿದೆ. 

ನವದೆಹಲಿ (ಸೆ.16): ಇತ್ತೀಚಿನ ದಿನಗಳಲ್ಲಿ ವಿಮಾನದಲ್ಲಿ ಒಂದಲ್ಲ ಒಂದು ಅವಾಂತರಗಳು ಸುದ್ದಿಯಾಗುತ್ತಿದೆ. ಇತ್ತೀಚೆಗೆ ಅಮೆರಿಕದಿಂದ ಬಾರ್ಸಿಲೋನಾಕ್ಕೆ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ಬೇಧಿಯಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ಇಡೀ ವಿಮಾನದಲ್ಲಿ ಮಲ ವಿಸರ್ಜನೆ ಮಾಡಿದ್ದ. ಈಗ ವಿಮಾನದಲ್ಲಿ ನವ ಜೋಡಿಯೊಂದು ಸೆಕ್ಸ್‌ ಮಾಡುವಾಗಲೇ ಸಿಕ್ಕಿಬಿದ್ದಿದೆ. ವಿಮಾನದ ಟಾಯ್ಲೆಟ್‌ನಲ್ಲಿ ಸೆಕ್ಸ್‌ ಮಾಡುವಾಗ ಸ್ವತಃ ವಿಮಾನದ ಸಿಬ್ಬಂದಿಯ ಕೈಯಲ್ಲಿ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ಈ ಜೋಡಿಯನ್ನು ತಕ್ಷಣವೇ ವಿಮಾನದಿಂದ ಹೊರಹಾಕಲಾಗಿದೆ. ಇಂಗ್ಲೆಂಡ್‌ನ ಲುಟನ್‌ನಿಂದ ಸ್ಪೇನ್‌ನ ಇಬಿಜಾಗೆ ತೆರಳುತ್ತಿದ್ದ ಈಸಿಜೆಟ್‌ ವಿಮಾನದಲ್ಲಿ ಈ ಘಟನೆ ನಡೆದಿದೆ. ಇಂಡಿಪೆಂಡೆಂಟ್‌ ವರದಿಯ ಪ್ರಕಾರ, ವಾಶ್‌ರೂಮ್‌ನಲ್ಲಿ ಇರುವ ಸೆಕ್ಸ್‌ ಮಾಡುತ್ತಿರುವಾಗಲೇ ಫ್ಲೈಟ್‌ ಅಟೆಂಡೆಂಟ್‌ ಈ ಕೃತ್ಯವನ್ನು ಗುರುತಿಸಿದ್ದಾರೆ. 

ಸೆಪ್ಟೆಂಬರ್ 8 ರಂದು ಸಂಭವಿಸಿದ ಘಟನೆಯ 37 ಸೆಕೆಂಡುಗಳ ಕ್ಲಿಪ್ ಟ್ವಿಟರ್‌ನಲ್ಲಿ ವೈರಲ್ ಆಗಿದೆ ಮತ್ತು ಪ್ರಸ್ತುತ ಐದು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವಿಚಾರವನ್ನು ಕೇಳಿ ಸಹ ಪ್ರಯಾಣಿಕರು ಹಾಗೂ ಕ್ಯಾಬಿನ್‌ ಸಿಬ್ಬಂದಿಗಳು ಅಚ್ಚರಿ ಪಟ್ಟಿದ್ದಾರೆ. ಇನ್ನು ಸೆಕ್ಸ್‌ ನಡೆಸುತ್ತಿದ್ದ ಜೋಡಿ ಮುಜುಗರದಿಂದ ತಲೆತಗ್ಗಿಸಿದೆ.

ಈ ವಿಡಿಯೋದಲ್ಲಿ ವಿಮಾನದ ಸಿಬ್ಬಂದಿ ಟಾಯ್ಲೆಟ್‌ನ ಎದುರು ಸಾಕಷ್ಟು ಸಮಯ ನಿಂತುಕೊಂಡು, ಒಳಗಿದ್ದವರು ಹೊರಗೆ ಬರಲು ಎಂದು ಕಾಯುತ್ತಿರುತ್ತಾರೆ. ಆದರೆ, ಎಷ್ಟು ಹೊತ್ತಾದರೂ ಬಾಗಿಲು ತೆರಯದೇ ಇದ್ದಾಗ, ತಾವೇ ಯಾವುದೇ ಸೂಚನೆ ನೀಡದೇ ಬಾಗಿಲು ತೆರೆಯುವ ಸಾಹಸವನ್ನು ಮಾಡಿದ್ದರು. ಆದರೆ, ಟಾಯ್ಲೆಟ್‌ನ ಒಳಗೆ ಅವರು ಕಂಡ ದೃಶ್ಯ ಇವರಿಗೆ ಮಾತ್ರ ಆಘಾತಕಾರಿಯಾಗಿರಲಿಲ್ಲ. ವಿಮಾನದಲ್ಲಿದ್ದ ಎಲ್ಲರೂ ಇವರನ್ನು ಕಂಡು ಅಚ್ಚರಿ ಪಟ್ಟಿದ್ದಾರೆ. ವಿಮಾನದ ಟಾಯ್ಲೆಟ್‌ ಸೀಟ್‌ನಲ್ಲಿ ಕುಳಿತು ನವಜೋಡಿಗಳು ಲೈಂಗಿಕ ಕ್ರಿಯೆ ನಡೆಸುತ್ತಿದ್ದರು. ಇನ್ನೂ ಕೆಲವರು ಈ ಘಟನೆಯನ್ನು ನೋಡಿ ನಕ್ಕು ಸುಮ್ಮನಾದರೆ, ಇನ್ನೂ ಕೆಲವರು ಮುಜುಗರಕ್ಕೆ ಒಳಗಾಗಿದ್ದಾರೆ.

Video: ಬೀದಿ ನಾಯಿಯ ಮೇಲೆ ಅತ್ಯಾಚಾರ, ದೆಹಲಿ ವ್ಯಕ್ತಿಯ ಮೇಲೆ ಎಫ್ಐಆರ್!

ವೀಡಿಯೊ ವೈರಲ್ ಆದ ಕೂಡಲೇ, ಈಸಿಜೆಟ್‌ನ ವಕ್ತಾರರು ಈ ಬಗ್ಗೆ ಪ್ರಕಟಣೆ ನೀಡಿದ್ದು "ಸೆಪ್ಟೆಂಬರ್ 8 ರಂದು ಲುಟನ್‌ನಿಂದ ಇಬಿಜಾಗೆ ತೆರಳುತ್ತಿದ್ದ ವಿಮಾನದಲ್ಲಿ ಇಬ್ಬರು ಪ್ರಯಾಣಿಕರ ವರ್ತನೆಯಿಂದಾಗಿ ಪೊಲೀಸರು ಸ್ಥಳಕ್ಕೆ ಆಗಮಿಸುವಂತಾಯಿತು' ಎಂದು ತಿಳಿಸಿದೆ. ದಂಪತಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.

ಕೊಡಗಿನಲ್ಲಿ ಅಪ್ರಾಪ್ತ ಹಿಂದೂ ಹುಡುಗಿಯರ ಕಿಡ್ನಾಪ್‌, ನಾಲ್ವರ ಗ್ಯಾಂಗ್ ಅರೆಸ್ಟ್!

Scroll to load tweet…