ಗದಗ: ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಕೊಡ್ತೀವಿ ಅಂತಾರೆ, ದಯವಿಟ್ಟು ಹುಡ್ಗಿ ಹುಡುಕಿಕೊಡಿ: ಪಿಡಿಓಗೆ ಗುತ್ತಿಗೆದಾರನ ಪತ್ರ..!
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ ಮುತ್ತು ಹೂಗಾರ ಕಳೆದ ಏಳು ವರ್ಷದಿಂದ ಕನ್ಯಾನ್ವೇಷಣೆ ನಡೆಸ್ತಿದ್ದಾನೆ. ಹಳ್ಳಿಹಳ್ಳಿಗೆ ತಿರುಗಿ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾನೆ. ಆದ್ರೆ ಬಹುತೇಕರು ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಅಂತಿದ್ದಾರಂತೆ. ಇದ್ರಿಂದ ಜಿಗುಪ್ಸೆಗೊಂಡಿರೋ ಮುತ್ತು, ಗ್ರಾಮ ಪಂಚಾಯ್ತಿ ಅಧಿಕಾರಿಗೆ ಪತ್ರ ಬರೆದು ಕನ್ಯಾ ಹುಡುಕಿಕೊಡಿ ಅಂತಾ ಕೇಳಿಕೊಂಡಿದ್ದಾನೆ.
ಗದಗ(ಜೂ.15): ಸತತ ಏಳು ವರ್ಷದಿಂದ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿ ಜಿಗುಪ್ಸೆ ಹೊಂದಿರೋ ಯುವಕನೊಬ್ಬ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಕನ್ಯೆ ಹುಡುಕಿ ಕೊಡಿ ಅಂತಾ ಪತ್ರ ಬರೆದಿದ್ದಾನೆ. ಸದ್ಯ ಈ ಪತ್ರ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡಂಬಳ ಗ್ರಾಮದ ಯುವಕ ಮುತ್ತು ಹೂಗಾರ (27) ಕಳೆದ ಏಳು ವರ್ಷದಿಂದ ಕನ್ಯಾನ್ವೇಷಣೆ ನಡೆಸ್ತಿದ್ದಾನೆ. ಹಳ್ಳಿಹಳ್ಳಿಗೆ ತಿರುಗಿ ಜೀವನ ಸಂಗಾತಿಗಾಗಿ ಹುಡುಕಾಟ ನಡೆಸಿದ್ದಾನೆ. ಆದ್ರೆ ಬಹುತೇಕರು ಸರ್ಕಾರಿ ನೌಕರಿ ಇದ್ರೆ ಮಾತ್ರ ಕನ್ಯೆ ಅಂತಿದ್ದಾರಂತೆ. ಇದ್ರಿಂದ ಜಿಗುಪ್ಸೆಗೊಂಡಿರೋ ಮುತ್ತು, ಗ್ರಾಮ ಪಂಚಾಯ್ತಿ ಅಧಿಕಾರಿಗೆ ಪತ್ರ ಬರೆದು ಕನ್ಯಾ ಹುಡುಕಿಕೊಡಿ ಅಂತಾ ಕೇಳಿಕೊಂಡಿದ್ದಾನೆ.
ಕ್ಷಮಿಸಿ ನಂಗೆ ನಿದ್ದೆ ಬರ್ತಿದೆ..ತಾಳಿ ಕಟ್ಟೋ ಹೊತ್ತಲ್ಲಿ, ಮಂಟಪದಲ್ಲೇ ನಿದ್ರಿಸಿದ ವಧು!
ಲಿಂಗಾಯತ ಹೂಗಾರ ಸಮಾಜದ ಮುತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗುತ್ತಿಗೆದಾರನಾಗಿ ಕೆಲಸ ಮಾಡ್ತಾರಂತೆ. ಕುಟುಂಬ ನಿರ್ವಹಿಸುವಷ್ಟು ಹಣವನ್ನೂ ಸಂಪಾದಸ್ತಾರೆ. ಹೀಗಿದ್ರೂ ಕನ್ಯಾ ಮಾತ್ರ ಸಿಗ್ತಾನೇ ಇಲ್ಲ. ಸರ್ಕಾರಿ ನೌಕರಿ ಇಲ್ಲದೇ ಕನ್ಯೆ ಹುಡುಕುತ್ತಿರೋರಿಗೆ ಸರ್ಕಾರ ಏನಾದ್ರೂ ಯೋಜನೆ ತರ್ಲಿ ಅನ್ನೋ ಕಾರಣಕ್ಕೆ ಪಿಡಿಒ ಅವರಿಗೆ ಪತ್ರ ಬರೆದಿದ್ದೇನೆ ಅಂತಾರೆ ಮುತ್ತು.
ಒಬ್ಬನೇ ಮಗ, ವೃತ್ತಿಯಿಂದ ಗುತ್ತಿಗೆದಾರ. ಸುಮಾರು ವರ್ಷದಿಂದ ಕನ್ಯೆ ಹುಡುಕಿ ಜೀವನದಲ್ಲಿ ಜಿಗುಪ್ಸೆ ಬಂದಿದೆ. ಜೀವನ ಸಂಗಾತಿಯನ್ನ ಹುಡುಕಲು ಹೋದಾಗ ಸರ್ಕಾರಿ ನೌಕರಿ ಇದ್ದವರಿಗೆ ಮಾತ್ರ ಕನ್ಯೆ ಅಂತಾ ತಿರಸ್ಕಾರ ಮಾಡುತ್ತಿದ್ದಾರೆ. ದಯಾಳುಗಳಾದ ತಾವು ಯಾವುದೇ ಜಾತಿಯ ಕನ್ಯೆಯಾದ್ರೂ ಸರಿ ಹುಡುಕಿಕೊಡಿ ಅಂತಾ ಮುತ್ತು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮಾವನ 3 ಕಂಡೀಷನ್ ಕೇಳಿ, 'ನಿನ್ ಮಗಳೇ ಬೇಡ..' ಎಂದು ಎಸ್ಕೇಪ್ ಆದ ವರ!
ಪತ್ರ ಸ್ವೀಕರಿಸಿರೋ ಪಿಡಿಒ ಅನೀಲಗೌಡ, ಮುತ್ತು ಹಾಗೂ ಕೆಲ ಸ್ನೇಹಿತರು ಪತ್ರ ಕೊಟ್ಟಿದ್ದಾರೆ. ಆದ್ರೆ, ಕನ್ಯೆ ಹುಡುಕೋದಕ್ಕೆ ಆಗಲ್ಲ. ಶುಭವಾಗ್ಲಿ ಅಂತಾ ಹೇಳಿ ಕಳಿಸಿರೋದಾಗಿ ತಿಳಿಸಿದ್ದಾರೆ.
ಕನ್ಯಾ ಹುಡುಕಿ ಸುಸ್ತಾಗಿರೋ ಮುತ್ತು ಅವರಿಗೆ ಆದಷ್ಟು ಬೇಗ ಕನ್ಯಾ ಸಿಗಲಿ. ಜೊತೆಗೆ ಸರ್ಕಾರಿ ನೌಕರಿ ಇಲ್ಲದಿದ್ರೂ ಪರವಾಗಿಲ್ಲ ಯೋಗ್ಯ ವರ ಇದ್ರೆ ಕನ್ಯಾ ಕೊಡ್ತೀವಿ ಅನ್ನೋ ಮನೋಭಾವನೆ ಹೆಣ್ಣು ಹೆತ್ತವರಿಗೂ ಮೂಡಲಿ.