Asianet Suvarna News Asianet Suvarna News

Angry Husband : ಟೀಗೆ ಸಕ್ಕರೆ ಹೆಚ್ಚಾದ್ರೂ ಗಂಡಂಗೆ ಕೋಪ, ಮಡದಿಯರಿಗೆ ಬಂತು ಬಿಪಿ!

ಕೋಪಿಷ್ಠರ ಜೊತೆ ಬದುಕೋದು ಸುಲಭವಲ್ಲ. ಹೆಜ್ಜೆ ಹೆಜ್ಜೆಯನ್ನು ಗಮನಿಸಿ ಇಡಬೇಕು. ಪತಿ ಅಥವಾ ಪತ್ನಿ ಸಿಡುಕು ಸ್ವಭಾವದವರಾಗಿದ್ದರೆ  ದಾಂಪತ್ಯ ಉಸಿರುಗಟ್ಟಿಸುತ್ತದೆ. ಜೀವನ ಸಾಕಾಪ್ಪ ಎನ್ನಿಸುವ ಜೊತೆಗೆ ಹೊಸ ರೋಗ ಅಂಟಿಕೊಳ್ಳುತ್ತದೆ.

Confessions Of Three Married Women How They Are Scared Of Their Short Tempered Husband roo
Author
First Published Jul 28, 2023, 4:03 PM IST

ದಾಂಪತ್ಯ ಜೀವನದಲ್ಲಿ ಗಂಡನ ಕೋಪಕ್ಕೆ ಬಲಿಯಾಗುವ ಮಹಿಳೆಯರ ಸಂಖ್ಯೆ ಸಾಕಷ್ಟಿದೆ. ದಾಂಪತ್ಯ ಉಳಿಸಿಕೊಳ್ಳಲು ಗಂಡನನ್ನು ಸಹಿಸಿಕೊಳ್ಳುವ ಮಹಿಳೆಯರು ಪ್ರತಿ ದಿನ ನರಕ ಎದುರಿಸುತ್ತಾರೆ. ಮಗನನ್ನು ಮುದ್ದಾಗಿ, ಪ್ರೀತಿಯಿಂದ ಸಾಕಿದ ಪಾಲಕರು ಮಕ್ಕಳ ಎಲ್ಲ ಕೆಲಸವನ್ನು ಮೆಚ್ಚಿಕೊಳ್ತಾರೆ. ಮಕ್ಕಳ ಮನಸ್ಸಿಗೆ ನೋವಾಗದಂತೆ ನಡೆದುಕೊಳ್ತಾರೆ. ಪಾಲಕರ ಈ ವರ್ತನೆ ಮುಂದೆ ಬರುವ ಸೊಸೆಯ ಮೇಲೆ ಅಡ್ಡಪರಿಣಾಮನ್ನುಂ    ಟು ಮಾಡುತ್ತದೆ. ಪಾಲಕರಂತೆ ಪತ್ನಿ ಕೂಡ ಎಲ್ಲವನ್ನೂ ಸಹಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಒಂದು ಸಂಸಾರ ಸುಖಕರವಾಗಿರಬೇಕೆಂದ್ರೆ ಇಬ್ಬರ ಮಧ್ಯೆ ಹೊಂದಾಣಿಕೆ ಅಗತ್ಯ. ಎಲ್ಲದರಲ್ಲೂ ಒಬ್ಬರೇ ಮೇಲುಗೈ ಸಾಧಿಸಿದ್ರೆ ಇನ್ನೊಬ್ಬರು ಇದ್ದೂ ಸತ್ತಂತೆ. 

ಸಿಡುಕ, ಸದಾ ಕೋಪ (Gnger) ಗೊಳ್ಳುವ ವ್ಯಕ್ತಿ ಜೊತೆ ಜೀವನ ಮಾಡುವುದು ಬಹಳ ಕಷ್ಟ. ಯಾವುದಕ್ಕೆ ಕೋಪ ಬರುತ್ತೆ, ಯಾವುದಕ್ಕೆ ಬರೋದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಲಾಗದೆ ಭಯ (fear) ದಲ್ಲಿಯೇ ಅವರ ಜೀವನ ಹೋಗಿರುತ್ತದೆ. ಕೋಪಿಷ್ಠ ವ್ಯಕ್ತಿಯನ್ನು ಮದುವೆ (marriage) ಯಾದ ತಪ್ಪಿಗೆ ಹಿಂಸೆ ಅನುಭವಿಸುತ್ತಿರುವ ಪತ್ನಿಯರು ತಮ್ಮ ನೋವನ್ನು ನಮ್ಮ ಮುಂದೆ ಹಂಚಿಕೊಂಡಿದ್ದಾರೆ.

ಮಗಳಿಗಿಂತ ಚಿಕ್ಕವಳ ಜೊತೆ ಅನಿಲ್​ ಕಪೂರ್​ ಲಿಪ್​ಲಾಕ್​! ಬಾಲಿವುಡ್ಡೋ, ಚರಂಡಿವುಡ್ಡೋ ಅಂತಿದ್ದಾರೆ ಟ್ರೋಲಿಗರು

ಗಂಡನ ಕಾರಣಕ್ಕೆ ಬಿಪಿ ತರಿಸಿಕೊಂಡ ಪತ್ನಿ : ನನ್ನ ಅರೆಂಜ್ ಮ್ಯಾರೇಜ್. ನನಗೆ ನನ್ನ ಪತಿಯನ್ನು ಮದುವೆಯಾಗಲು ಸ್ವಲ್ಪವೂ ಇಷ್ಟವಿರಲಿಲ್ಲ. ಯಾವುದೇ ಸಮಯದಲ್ಲಿ, ಎಲ್ಲೆಂದರಲ್ಲಿ, ಪ್ರತಿಯೊಂದು ವಿಷ್ಯಕ್ಕೂ ನನ್ನ ಪತಿ ಕೂಗಾಡಲು ಶುರು ಮಾಡ್ತಾನೆ. ಅವನ ಈ ವರ್ತನೆ ನನ್ನನ್ನು ತುಂಬಾ ಹೈರಾಣ ಮಾಡಿದೆ. ನಾನು ಸದಾ ಭಯದಲ್ಲಿ ಇರ್ತೇನೆ. ಪ್ರತಿ ಕ್ಷಣ ಟೆನ್ಷನ್ ಕಾಡುವ ಕಾರಣಕ್ಕೆ ನನಗೆ ಬಿಪಿ ಬಂದಿದೆ ಎನ್ನುತ್ತಾಳೆ ಮಹಿಳೆ.  
ಪ್ರತಿಯೊಂದು ವಿಷ್ಯವನ್ನು ಕೂಲಂಕುಷವಾಗಿ ನೋಡಬೇಕು. ಯಾಕೆಂದ್ರೆ ಸಣ್ಣ ತಪ್ಪಿದ್ರೂ ನನ್ನ ಗಂಡ ಹುಚ್ಚನಂತೆ ಆಡ್ತಾನೆ. ನನ್ನ ಅತ್ತೆ, ಮಾವ ಕೂಡ ಅವನ ಕೋಪಕ್ಕೆ ಹೆದರುತ್ತಾರೆ. ಅವನ ಸಹೋದರಿಯರು ಕೂಡ ಅಣ್ಣನ ಭಯಕ್ಕೆ ಹೆದರುತ್ತಾರೆ. ಕೋಪಗೊಂಡ ಗಂಡನನ್ನು ಹೇಗೆ ಎದುರಿಸಬೇಕೆಂದು ನಾನು ಅನೇಕ ಬಾರಿ ಗೂಗಲ್ ಮಾಡಿದ್ದೇನೆ ಎನ್ನುತ್ತಾಳೆ ಮಹಿಳೆ.

ಒಂದು ದಿನ ಪತಿಗೆ ಹೃದಯಾಘಾತವಾಗೋದು ಗ್ಯಾರಂಟಿ : ನನ್ನದು ಲವ್ ಮ್ಯಾರೇಜ್. ಪತಿಗೆ ಕೋಪ ಬರುತ್ತೆ ಎಂಬುದು ತಿಳಿದೂ ನಾನು ಆತನನ್ನು ಮದುವೆಯಾದೆ. ಯಾಕೆಂದ್ರೆ ಆತನೊಬ್ಬ ಒಳ್ಳೆಯ ವ್ಯಕ್ತಿ. ಕೋಪ ಎಲ್ಲಿಯವರೆಗೆ ಬರೋದಿಲ್ಲವೋ ಅಲ್ಲಿಯವರೆಗೆ ಆತ ಒಳ್ಳೆಯವನು. ಕೋಪ ಬಂದಾಗ ಮಾತ್ರ ರಾಕ್ಷಸನಂತೆ ವರ್ತಿಸುತ್ತಾನೆ. ಕೋಪದಿಂದ ಆತನಿಗೆ ಒಂದು ದಿನ ಹೃದಯಾಘಾತವಾದ್ರೆ ಎನ್ನುವ ಭಯ ನನಗಿದೆ. ಧ್ಯಾನ ಮತ್ತು ವ್ಯಾಯಾಮ ಮಾಡುವಂತೆ ನಾನು ಪತಿಗೆ ಸಲಹೆ ನೀಡುತ್ತೇನೆ. ಆದ್ರೆ ಆತ ಇದನ್ನು ಒಪ್ಪುತ್ತಿಲ್ಲ. ಲಘುವಾಗಿ ತೆಗೆದುಕೊಳ್ಳುತ್ತಿದ್ದಾನೆ. ಆತನ ಕೋಪದ ವ್ಯಕ್ತಿತ್ವ ನನ್ನ ಚಿಂತೆಗೆ ಕಾರಣವಾಗಿದೆ. ಆತನ ಆರೋಗ್ಯದ ಬಗ್ಗೆ ಭಯ ಶುರುವಾಗಿದೆ ಎನ್ನುತ್ತಾಳೆ ಈ ಮಹಿಳೆ.

ಮಕ್ಳು ರೂಡ್ ಆಗಿ ಬಿಹೇವ್ ಮಾಡಿದಾಗ ಪೇರೆಂಟ್ಸ್‌ ಸಿಟ್ಟಿಗೇಳೋದಲ್ಲ..

ಪತಿಯ ಕೋಪದ ಕಾರಣ ವಿಚ್ಛೇದನ ಪಡೆದ ಪತ್ನಿ : ಇದನ್ನು ಓದಿದ್ರೆ ನಿಮಗೆ ಅಚ್ಚರಿ ಎನ್ನಿಸಬಹುದು. ಆದ್ರೆ ಕೆಲವರ ಕೋಪ ಹಾಗಿರುತ್ತದೆ. ಕೋಪ ಬಂದಾಗ ಅವರನ್ನು ಅವರು ನಿಯಂತ್ರಿಸಿಕೊಳ್ಳಲು ಸಾಧ್ಯವಾಗೋದಿಲ್ಲ. ಈಕೆ ಗಂಡನ ಕೋಪ ಕೂಡ ಈಕೆಯ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲು ಶುರುವಾಗಿತ್ತು. ಕೆಲಸ ಹಾಗೂ ಆತನ ಕೂಗಿನ ಮಧ್ಯೆ ನನ್ನ ಆರೋಗ್ಯ ಹಾಳಾಗುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಪತಿ ಜೊತೆ ಈ ಬಗ್ಗೆ ನಾನು ಮಾತನಾಡಿದ್ದೆ. ಕೋಪ ನಿಯಂತ್ರಣಕ್ಕೆ ಎರಡು ವರ್ಷಗಳ ಕಾಲಾವಕಾಶ ನೀಡಿದ್ದೆ. ಆದ್ರೆ ಆತನ ವರ್ತನೆಯಲ್ಲಿ ಸುಧಾರಣೆ ಕಾಣಲಿಲ್ಲ. ಒಂದು ದಿನ ನಾನು ಟೀಗೆ ಸಕ್ಕರೆ ಹೆಚ್ಚಿನ ಪ್ರಮಾಣದಲ್ಲಿ ಹಾಕಿದ್ದೇನೆ ಎನ್ನುವ ಕಾರಣಕ್ಕೆ ಆತ ನನ ಲ್ಯಾಪ್ ಟಾಪ್ ಎಸೆದಿದ್ದ. ನಂತ್ರ ನಾನು ವಿಚ್ಛೇದನ ಪಡೆದಿದ್ದು, ಈಗ ಆರಾಮಾಗಿ ಇದ್ದೇನೆ ಎನ್ನುತ್ತಾಳೆ ಈ ಮಹಿಳೆ.

Follow Us:
Download App:
  • android
  • ios