ಮಕ್ಳು ರೂಡ್ ಆಗಿ ಬಿಹೇವ್ ಮಾಡಿದಾಗ ಪೇರೆಂಟ್ಸ್ ಸಿಟ್ಟಿಗೇಳೋದಲ್ಲ..
ಮಕ್ಕಳು ಹಠ ಮಾಡಿದಾಗ, ರಂಪಾಟ ಮಾಡಿದಾಗ, ರೂಡ್ ಆಗಿ ಬಿಹೇವ್ ಮಾಡಿದಾಗ ಪೋಷಕರಿಗೆ ಸಿಟ್ಟು ಬರುವುದು ಸಾಮಾನ್ಯ. ಹೀಗೆ ಸಿಟ್ಟಿಗೆದ್ದು ತಕ್ಷಣ ಮಕ್ಕಳಿಗೆ ಬೈಯುವುದು, ಹೊಡೆಯುವುದನ್ನು ಮಾಡ್ತಾರೆ ಕೆಲ ಪೋಷಕರು. ಆದರೆ ಹೀಗೆ ಮಾಡುವುದು ತಪ್ಪು ಎಂದು ತಜ್ಞರು ಹೇಳ್ತಾರೆ.

ಮಕ್ಕಳು ಹಠ ಮಾಡಿದಾಗ, ರಂಪಾಟ ಮಾಡಿದಾಗ, ರೂಡ್ ಆಗಿ ಬಿಹೇವ್ ಮಾಡಿದಾಗ ಪೋಷಕರಿಗೆ ಸಿಟ್ಟು ಬರುವುದು ಸಾಮಾನ್ಯ. ಹೀಗೆ ಸಿಟ್ಟಿಗೆದ್ದು ತಕ್ಷಣ ಮಕ್ಕಳಿಗೆ ಬೈಯುವುದು, ಹೊಡೆಯುವುದನ್ನು ಮಾಡ್ತಾರೆ ಕೆಲ ಪೋಷಕರು. ಆದರೆ ಹೀಗೆ ಮಾಡುವುದು ತಪ್ಪು ಎಂದು ತಜ್ಞರು ಹೇಳ್ತಾರೆ.
ಮಗುವು ಅಸಭ್ಯ ವರ್ತನೆಯನ್ನು ತೋರಿಸಲು ಪ್ರಾರಂಭಿಸಿದಾಗ ಸಾಮಾನ್ಯವಾಗಿ ಪೋಷಕರು ಸಿಟ್ಟಿಗೇಳುತ್ತಾರೆ. ಮಕ್ಕಳು ಹಠ ಮಾಡಿದಾಗ, ರಂಪಾಟ ಮಾಡಿದಾಗ, ರೂಡ್ ಆಗಿ ಬಿಹೇವ್ ಮಾಡಿದಾಗ ಪೋಷಕರಿಗೆ ಸಿಟ್ಟು ಬರುವುದು ಸಾಮಾನ್ಯ. ಹೀಗೆ ಸಿಟ್ಟಿಗೆದ್ದು ಪೇರೆಂಟ್ಸ್ ತಕ್ಷಣ ಮಕ್ಕಳಿಗೆ ಬೈಯುವುದು, ಹೊಡೆಯುವುದನ್ನು ಮಾಡ್ತಾರೆ. ಆದರೆ ಹೀಗೆ ಮಾಡುವುದು ತಪ್ಪು ಎಂದು ತಜ್ಞರು ಹೇಳ್ತಾರೆ. ಬದಲಾಗಿ ಮಕ್ಕಳು ರೂಡ್ ಆಗ ಬಿಹೇವ್ ಮಾಡಿದಾಗ ಅವರ ಜೊತೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸಿದ್ದಾರೆ.
ಕಾರಣ ಕಂಡುಹಿಡಿಯಿರಿ
ಮಕ್ಕಳು ರೂಡ್ ಆಗಿ ಬಿಹೇವ್ ಮಾಡಿದಾಗ ಅದರ ಹಿಂದೆ ನಿರ್ಧಿಷ್ಟವಾಗಿಯೂ ಒಂದು ಕಾರಣ ಇರುತ್ತದೆ. ಹೆಚ್ಚಿನ ಸಮಯ ಮಗು ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದಾಗ ಅದು ಅವನಿಗೆ ಅಥವಾ ಅವಳಿಗೆ ನಿರ್ಧಿಷ್ಟವಾದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗದೆ ಇರುವ ಕಾರಣ ಇರಬಹುದು. ಅಂತಹ ಸಂದರ್ಭಗಳಲ್ಲಿ, ಈ ಬಗ್ಗೆ ತಿಳಿದುಕೊಂಡು ಸಮಸ್ಯೆ ಬಗೆಹರಿಸುವುದು ಒಳ್ಳೆಯದು.
ರೂಡ್ ಆಗಿರುವುದು ಯಾಕೆ ಒಳ್ಳೆಯದಲ್ಲ ತಿಳಿಸಿ
ಕೆಲವೊಮ್ಮೆ ಮಕ್ಕಳು ರೂಡ್ ಆಗಿರುವುದೇ ಒಳ್ಳೆಯದು ಎಂದು ತಪ್ಪು ತಿಳಿದುಕೊಂಡಿರುವ ಸಾಧ್ಯತೆ ಇರುತ್ತದೆ. ಹೀಗಾಗಿ ಇದು ಸಂಪೂರ್ಣ ವ್ಯಕ್ತಿತ್ವಕ್ಕೆ ಯಾಕೆ ಒಳ್ಳೆಯದಲ್ಲ ಅನ್ನೋದನ್ನು ಅವರಿಗೆ ತಿಳಿಸಿಕೊಡಿ. ರೂಡ್ ಆಗಿರುವುದರಿಂದ ವ್ಯಕ್ತಿತ್ವಕ್ಕೆ ಎಷ್ಟು ತೊಂದರೆಯಾಗುತ್ತದೆ ಎಂಬುದನ್ನು ತಿಳಿಸಿಕೊಡಿ
ಕಾಮ್ ಆಗಿರಲು ಕಲಿಸಿ
ಮುಂದಿನ ಹಂತವು ಮಕ್ಕಳಿಗೆ ಕಾಮ್ ಆಗಿ ಇರುವುದನ್ನು ಕಲಿಸುವುದಾಗಿದೆ. ಹೆತ್ತವರೊಂದಿಗೆ ಅಸಭ್ಯವಾಗಿ ಅಥವಾ ಸ್ನೇಹಿಯಾಗಿಲ್ಲದ ಬದಲು ಆ ಭಾವನೆಗಳನ್ನು ಸಂವಹನ ಮಾಡಲು ಬಳಸಬಹುದಾದ ಪದಗಳನ್ನು ಅವರಿಗೆ ಕಲಿಸುವುದು. ಇದು ಅವರ ಭಾವನೆಗಳನ್ನು ಉತ್ತಮವಾಗಿ ವ್ಯಕ್ತಪಡಿಸಲು ಅವರಿಗೆ ಸಹಾಯ ಮಾಡುತ್ತದೆ. ಇದು ಅವರಿಗೆ ದಯೆಯ ಮಹತ್ವವನ್ನು ಕಲಿಸುತ್ತದೆ.
ಪ್ರೋತ್ಸಾಹಿಸಿ ಮತ್ತು ಹೊಗಳಿ
ತಮ್ಮ ಭಾವನೆಗಳನ್ನು ಹೇಗೆ ಉತ್ತಮವಾಗಿ ಸಂವಹನ ಮಾಡಬೇಕೆಂದು ಕಲಿಯುವಲ್ಲಿ ಮಗುವಿನ ಕ್ರಿಯೆಗಳು ಮತ್ತು ಪ್ರಯತ್ನಗಳನ್ನು ಪ್ರಶಂಸಿಸುವುದು ಪ್ರಮುಖ ಹಂತಗಳಲ್ಲಿ ಒಂದಾಗಿದೆ. ಅವರು ಕೋಪಗೊಂಡಾಗ ಅಥವಾ ಕಿರಿಕಿರಿಗೊಂಡಾಗಲೂ ಸಹ ವಿನಮ್ರವಾಗಿರಲು ಇದು ಅವರಿಗೆ ನೆರವಾಗುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.