ಚಿಕ್ಕಮಗಳೂರಿನಲ್ಲಿ ಅಣ್ಣನೇ ತಂಗಿಯನ್ನು ಗರ್ಭಿಣಿ ಮಾಡಿದ ಘಟನೆ ನಡೆದಿದೆ. ಕಾಲೇಜಿಗೆ ಬಿಟ್ಟು ಕರೆದುಕೊಂಡು ಹೋಗುವ ನೆಪದಲ್ಲಿ ತಂಗಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಆರೋಪಿ ಶಶಾಂಕ್‌ನನ್ನು ಪೊಲೀಸರು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಚಿಕ್ಕಮಗಳೂರು (ಮಾ.05): ಕಾಫಿನಾಡಿ ಚಿಕ್ಕಮಗಳೂರಿನಲ್ಲಿ ನಾಗರೀಕ ಸಮಾಜ ತಲೆತಗ್ಗಿಸುವ ಘಟನೆ ನಡೆದಿದೆ. ವಯಸ್ಸಿಗೆ ಬಂದಿರುವ ತಂಗಿಯನ್ನು ಕಾಲೇಜಿನಲ್ಲಿ ಕಿಡಿಗೇಡಿಗಳಿಂದ ರಕ್ಷಣೆ ಮಾಡಬೇಕಾದ ಅಣ್ಣನೇ ತನ್ನ ತಂಗಿಯನ್ನು ಗರ್ಭಿಣಿ ಮಾಡಿದ ಪ್ರಸಂಗ ನಡೆದಿದೆ. ಇದೀಗ ಆತನ ತಂಗಿ 7 ತಿಂಗಳ ಗರ್ಭಿಣಿ ಆಗಿದ್ದಾಳೆ.

ಕಳೆದ ವರ್ಷವಷ್ಟೇ ಹೈಸ್ಕೂಲು ಮುಗಿಸಿ ಪಿಯುಸಿ ಕಾಲೇಜಿನ ಮೆಟ್ಟಿಲೇರಿದ್ದ ಚಿಕ್ಕಪ್ಪನ ಮಗಳನ್ನು ಕಾಲೇಜಿಗೆ ಬಿಡುವುದು ಹಾಗೂ ಕರೆದುಕೊಂಡು ಬರುವುದನ್ನು ಮಾಡಿದ್ದಾನೆ. ಆದರೆ, ಅದ್ಯಾವಾಗ ತಂಗಿಯ ಮೇಲೆ ಕಣ್ಣು ಹಾಕಿದ್ದಾನೋ ಗೊತ್ತಿಲ್ಲ. ಇದೀಗ ಸ್ವಂತ ಚಿಕ್ಕಪ್ಪನ ಮಗಳನ್ನೇ ತನ್ನ ಕಾಮತೃಷೆ ತೀರಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಈ ವಿಚಾರವನ್ನು ಮನೆಯಲ್ಲಿ ಯಾರಿಗೂ ಹೇಳದಂತೆ ಗುಟ್ಟಾಗಿ ಕಾಪಾಡುವಂತೆ ಬೆದರಿಕೆಯನ್ನೂ ಹಾಕಿದ್ದಾನೆ. ಇದಾದ ನಂತರ ಮನೆಯವರಿಗೆ ವಿಚಾರವೇ ತಿಳಿದಿಲ್ಲ.

ಕಾಲೇಜಿಗೆ ಹೋಗುತ್ತಿದ್ದ ಮಗಳಿಗೆ ಸುಸ್ತಾಗುವುದು ಹಾಗೂ ಹೊಟ್ಟೆ ಮುಂದಕ್ಕೆ ಬಂದಿರುವುದನ್ನು ಮನೆಯವರು ಗಮನಿಸಿದ್ದಾರೆ. ಆಗ ಪರೀಕ್ಷೆ ಮಾಡಿದಾಗ ಆಕೆ ಗರ್ಭಿಣಿ ಎಂಬ ಮಾಹಿತಿ ತಿಳಿದುಬಂದಿದೆ. ಆಗ ಅಪ್ರಾಪ್ತ ವಯಸ್ಸಿನ ಮಗಳನ್ನು ಗರ್ಭಿಣಿ ಮಾಡಿದ ಪಾಪಿ ಯಾರೆಂದು ಮಗಳಿಂದ ಬಾಯಿ ಬಿಡಿಸಿದ್ದಾರೆ. ಬೇರೆ ಯಾರೋ ಅಲ್ಲ, ಮನೆಯಲ್ಲಿಯೇ ಇರುವ ದೊಡ್ಡಪ್ಪನ ಮಗ ಶಶಾಂಕ್ (20) ತಂಗಿಯ ಮೇಲೆ ಅತ್ಯಾಚಾರ ಮಾಡಿ ಗರ್ಭಿಣಿ ಮಾಡಿದ್ದಾನೆ ಎಂಬುದು ತಿಳಿದುಬಂದಿದೆ.

ಇದನ್ನೂ ಓದಿ: ನಮ್ಮಜ್ಜಿ ಅಕೌಂಟ್‌ನಲ್ಲಿ ₹80 ಲಕ್ಷ ಇದೆ ಎಂದಿದ್ದಷ್ಟೇ..! ಅಜ್ಜಿ ಹಣ, ಬಾಲಕಿ ಮಾನ ಎರಡೂ ಹೋಯ್ತು!

ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತ ಬಾಲಕಿಯ ಪೋಷಕರು ಶಶಾಂಕನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಕಾಫಿನಾಡ ಮಲೆನಾಡು ತಾಲೂಕಿನ ಹಳ್ಳಿಯೊಂದರಲ್ಲಿ ಘಟನೆ ನಡೆದಿದ್ದನ್ನು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಆರೋಪಿ ಶಶಾಂಕ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೀಗ ಶಶಾಂಕ್ ವಿರುದ್ಧ ಸ್ಥಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಆರೋಪಿ ಶಶಾಂಕ್ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಇದನ್ನೂ ಓದಿ: ಅಕೌಂಟ್​ನಲ್ಲಿ ಇದ್ದದ್ದು 17 ರೂ-ಹುಂಡಿಗೆ ಹಾಕಿದ್ದು 100 ಕೋಟಿ ರೂ! ಈ 'ತಿಮ್ಮಪ್ಪ'ನ ಪವಾಡ ನೋಡಿ..