ವಿಶಾಖಪಟ್ಟಣದ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತಿಮ್ಮಪ್ಪ ಎಂಬಾತ 100 ಕೋಟಿ ರೂ.ಗಳ ಚೆಕ್ ದೇಣಿಗೆ ನೀಡಿದ್ದ. ಮೊದಲು 10 ರೂಪಾಯಿ ಎಂದು ಬರೆದು, ನಂತರ ಸೊನ್ನೆ ಸೇರಿಸುತ್ತಾ ಹೋದನು. ಆದರೆ, ಚೆಕ್ ಬೌನ್ಸ್ ಆಗಿದ್ದು, ಆತನ ಖಾತೆಯಲ್ಲಿ ಕೇವಲ 17 ರೂಪಾಯಿ ಇತ್ತು. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಕ್ತನ ಈ ನಡೆಯನ್ನು ಕೆಲವರು ಟೀಕಿಸಿದ್ದಾರೆ.
ಹಿಂದೂ ದೇವಾಲಯಗಳು ಭಾರಿ ಪ್ರಮಾಣದಲ್ಲಿ ದೇಣಿಗೆ ಪಡೆಯುವುದು ಹೊಸದೇನಲ್ಲ. ದೇವಾಲಯಗಳಿಗೆ ಭೇಟಿ ನೀಡುವ ಭಕ್ತರು ಸಾಮಾನ್ಯವಾಗಿ ಏನಾದರೂ ದಾನ ಮಾಡಿದ ನಂತರ ಹಿಂತಿರುಗುತ್ತಾರೆ. ಈ ಸಂಪ್ರದಾಯ ಹೊಸದಲ್ಲ, ಜಗತ್ತಿನ ಅತಿ ಶ್ರೀಮಂತ ದೇವಾಲಯಗಳಲ್ಲಿ ಒಂದು ಎನ್ನಿಸಿಕೊಂಡಿರುವ ತಿರುಮಲ ತಿರುಪತಿಯ ತಿಮ್ಮಪ್ಪನಿಗೆ ನೂರಾರು ಕೋಟಿ ದೇಣಿಗೆ, ಕಾಣಿಕೆ ಬರುವುದು ಹೊಸ ವಿಷಯವೇನಲ್ಲ. ವಜ್ರ ಖಚಿತ ಆಭರಣಗಳನ್ನೂ ಕೊಡುವವರು ಇದ್ದಾರೆ. ಬಿಲೇನಿಯರ್ಗಳಿಂದ ಹಿಡಿದು ಸಾಮಾನ್ಯ ಮನುಷ್ಯನವರೆಗೂ ತನ್ನ ಅರ್ಹತೆಗೆ ತಕ್ಕಂತೆ ಹಣವನ್ನು ಕಾಣಿಕೆ, ದೇಣಿಗೆ ರೂಪದಲ್ಲಿ ನೀಡಲಾಗುತ್ತಿದೆ. ಅದೇ ರೀತಿ ಬೇರೆ ಬೇರೆ ದೇವಾಲಯಗಳಲ್ಲಿಯೂ ತಮ್ಮ ಅರ್ಹತೆ ಅನುಸಾರವಾಗಿ ಕಾಣಿಕೆ ನೀಡಲಾಗುತ್ತಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿರುವ ಒಂದು ದೇಣಿಗೆ ಪ್ರಕರಣ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇದಕ್ಕೆ ಕಾರಣ, ತಿಮ್ಮಪ್ಪ ಎಂಬ ವ್ಯಕ್ತಿ, ದೇವಾಲಯದ ದೇಣಿಗೆ ಪೆಟ್ಟಿಗೆಯಲ್ಲಿ 100 ಕೋಟಿ ರೂ.ಗಳ ಚೆಕ್ ಹಾಕಿದ್ದಾನೆ. ಆಂಧ್ರಪ್ರದೇಶದ ಸಿಂಹಾಚಲಂನಲ್ಲಿರುವ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿ ವಾರಿ ದೇವಸ್ಥಾನ ಇದು. ಇಷ್ಟು ಬೃಹತ್ ಮೊತ್ತವನ್ನು ನೋಡಿದ ಅಲ್ಲಿಯ ಅರ್ಚಕರು ಫುಲ್ ಖುಷ್ ಆಗಿದ್ದಾರೆ. ಅಷ್ಟಕ್ಕೂ ಈ 'ಭಕ್ತ' ಮೊದಲು 10 ರೂಪಾಯಿ ಚೆಕ್ ಮೇಲೆ ಬರೆದಿದ್ದ. ಕೊನೆಗೆ ಸೊನ್ನೆಗಳನ್ನು ಸೇರಿಸುತ್ತಲೇ ಹೋಗಿರುವುದು ಅಲ್ಲಿಯವವರ ಗಮನಕ್ಕೆ ಬಂದಿದೆ. ಅದು 100 ಕೋಟಿ ಆದ ಮೇಲೆ ಅದನ್ನು ಹುಂಡಿಗೆ ಹಾಕಿದ್ದಾನೆ. ಆರಂಭದಲ್ಲಿ, ದೇವಾಲಯದ ಆಡಳಿತ ಮಂಡಳಿ ಇದನ್ನು ನೋಡಿ ಆಶ್ಚರ್ಯಚಕಿತವಾಯಿತು, ಏಕೆಂದರೆ ಇಲ್ಲಿಯವರೆಗೆ ದೇವಾಲಯಕ್ಕೆ ಇಷ್ಟು ದೊಡ್ಡ ದೇಣಿಗೆ ಬಂದಿರಲಿಲ್ಲ. ತಿರುಪತಿ ತಿಮ್ಮಪ್ಪನಿಗೆ ಈ ಪರಿಯ ದೇಣಿಗೆ ಬಂದಿರಬಹುದೇ ವಿನಾ ತಮ್ಮ ದೇವಾಲಯದಲ್ಲಿ ಇದು ಇತಿಹಾಸ ಎಂದೇ ಆಡಳಿತ ಮಂಡಳಿಯವರೂ ಎಂದುಕೊಂಡರು.
ಒಂದು ಹಾಡಿಗಾಗಿ 6 ತಿಂಗಳು ಶೂಟಿಂಗ್ ನಿಲ್ಲಿಸಿದ್ದ ಡಾ.ರಾಜ್: ದ್ವೈತ-ಅದ್ವೈತ ಚರ್ಚೆಗೆ ಸಿಕ್ಕಿತ್ತು ರೋಚಕ ಟ್ವಿಸ್ಟ್!
ಚೆಕ್ ನೋಡಿದಾಗ, ಆತನ ಹೆಸರು ತಿಮ್ಮಪ್ಪ ಎಂದು ತಿಳಿಯಿತು. ಅಷ್ಟು ಬೃಹತ್ ಮೊತ್ತವನ್ನು ನೋಡಿದ ಅವರು ಕೂಡಲೇ ಚೆಕ್ ಅನ್ನು ಕ್ಲಿಯರೆನ್ಸ್ಗಾಗಿ ಕಳುಹಿಸಲಾಯಿತು. ಆದರೆ ದುರದೃಷ್ಟವಶಾತ್ ಅವರು ಬೌನ್ಸ್ ಆಗಿ ಬಂದಿತು. ಆಮೇಲೆ ನೋಡಿದರೆ ತಿಮ್ಮಪ್ಪ ಎಂದು ಹೆಸರು ಬರೆದಿದ್ದ ಈ ವ್ಯಕ್ತಿಯ ಅಕೌಂಟ್ನಲ್ಲಿ ಇದ್ದುದು ಕೇವಲ 17 ರೂಪಾಯಿ ಮಾತ್ರ! ಇದರಿಂದ ದೇವಾಲಯದ ಆಡಳಿತ ಮಂಡಳಿಗೆ ಭಾರಿ ನಿರಾಸೆಯಾಗಿದೆ. ಈತನ ವಿರುದ್ಧ ಯಾವ ರೀತಿ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನುವುದು ಸದ್ಯ ತಿಳಿದುಬಂದಿಲ್ಲ!
ಆದರೆ ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ, ತಿಮ್ಮಪ್ಪ ಸರಿಯಾಗಿ ನಾಮ ಹಾಕಿದ್ದಾನೆ ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ! ದೇವರ ವಿಷಯದಲ್ಲಿ ಈ ಪರಿಯ ಅಪಹಾಸ್ಯ ಮಾಡುವುದು ಸರಿಯಲ್ಲ, ಆತನಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಮತ್ತೆ ಕೆಲವರು ಹೇಳುತ್ತಿದ್ದಾರೆ.
ದಿನಪೂರ್ತಿ ಭಿಕ್ಷೆ ಬೇಡಿ ಊಟ ಮಾಡಿದ ಬಿಗ್ಬಾಸ್ ಕಾವ್ಯಾ ಶಾಸ್ತ್ರಿ: ಅಪ್ಪನಿಗೆ ಮರುಜೀವ ಬಂದ ಆ ಘಟನೆ ನೆನೆದ ನಟಿ
