Asianet Suvarna News Asianet Suvarna News

ಹುಡುಗಿಯರನ್ನು ಇಂಪ್ರೆಸ್ ಮಾಡ್ಬೇಕಾ? ಚಾಟ್ ಜಿಪಿಟಿ ಟಿಪ್ಸ್ ಫಾಲೋ ಮಾಡಿ

ಪ್ರೇಮಿಗಳ ದಿನ ಹತ್ತಿರ ಬರ್ತಿದೆ. ನಿಮ್ಮ ಹುಡುಗಿ ನಿಮಗೆ ಸಿಗ್ಬೇಕು ಅಂದ್ರೆ ಗಿಫ್ಟ್ ಮಾತ್ರವಲ್ಲ ಲುಕ್ ಬಗ್ಗೆ ಗಮನ ಹರಿಸಿ. ಕೆಲ ಫ್ಯಾಷನ್ ರೂಲ್ಸ್ ಪಾಲಿಸಿ ಹುಡುಗಿ ಮುಂದೆ ಭೇಷ್ ಎನ್ನಿಸಿಕೊಳ್ಳಿ.  

Chatgpt Tips For Men To Impress Girl On Valentines Day roo
Author
First Published Feb 6, 2024, 4:38 PM IST

ಫ್ಯಾಷನ್, ಸೌಂದರ್ಯ, ಬ್ಯೂಟಿ ಈ ಎಲ್ಲ ವಿಷ್ಯ ಬಂದಾಗ ಹುಡುಗಿಯರ ಬಗ್ಗೆ ಮಾತನಾಡೋರೇ ಹೆಚ್ಚು. ಫ್ಯಾಷನ್ ಸೆನ್ಸ್ ಹೊಂದಿರುವ ಹುಡುಗರ ಸಂಖ್ಯೆ ಬಹಳ ಕಡಿಮೆ. ಯಾವುದೋ ಟೀ ಶರ್ಟ್ ಗೆ ಇನ್ನಾವುದೋ ಪ್ಯಾಂಟ್ ಧರಿಸಿ ಬಂದ್ರೂ ನಿಮ್ಮನ್ನು ಕೇಳೋರಿಲ್ಲ ಎನ್ನುವ ಅನಾದಿಕಾಲದ ಮಾತನ್ನೇ ಇನ್ನೂ ಅನೇಕರು ಪಾಲಿಸ್ತಾ ಬಂದಿದ್ದಾರೆ. ಎಲ್ಲಿ ಹೇಗೆ ಹೋಗ್ಬೇಕು ಎನ್ನುವ ಜ್ಞಾನ ಕೆಲ ಹುಡುಗರಿಗೆ ಇರೋದಿಲ್ಲ. ವ್ಯಾಲಂಟೈನ್ಸ್ ಡೇ ಹತ್ತಿರ ಬರ್ತಿದೆ. ಒಂದು ವರ್ಷದಿಂದ ಹಿಂದೆ ಮುಂದೆ ಸುತ್ತಾಡುತ್ತಿರುವ ಹುಡುಗಿಗೆ ಪ್ರಪೋಸ್ ಮಾಡ್ಬೇಕು, ಈಗಾಗಲೇ ಪ್ರೇಮ ನಿವೇದನೆ ಮಾಡಿರುವ ಹುಡುಗಿಯನ್ನು ಇನ್ನಷ್ಟು ಇಂಪ್ರೆಸ್ ಮಾಡ್ಬೇಕು, ಮದುವೆ ಆಗಿದ್ರೂ ಪತ್ನಿಗೆ ಮತ್ತಷ್ಟು ಹತ್ತಿರ ಆಗ್ಬೇಕು ಎನ್ನುವ ಹುಡುಗರಿಗೆ ವ್ಯಾಲಂಟೈನ್ಸ್ ಡೇ ಬೆಸ್ಟ್ ದಿನ. ಈ ದಿನ ನೀವು, ನಿಮ್ಮವರ ಮನಸ್ಸು ಗೆಲ್ಲುವುದು ಬಹಳ ಮುಖ್ಯ. ಸಂಗಾತಿಗೆ ಇಷ್ಟವಾಗುವ ಜಾಗಕ್ಕೆ ಟ್ರಿಪ್ ಹೋಗೋದು ಅಥವಾ ಡಿನ್ನರ್ ಫಿಕ್ಸ್ ಮಾಡೋದು ಇಲ್ಲವೆ ಅವರಿಗೊಂದು ಒಳ್ಳೆ ಗಿಫ್ಟ್ ನೀಡಿದ್ರೆ ನಿಮ್ಮ ಕೆಲಸ ಮುಗಿಲಿಲ್ಲ. ಡೇಟ್, ಡಿನ್ನರ್, ಟೂರ್ ಹೋಗುವ ವೇಳೆ ಸ್ವಲ್ಪ ನಿಮ್ಮ ಸೌಂದರ್ಯಕ್ಕೂ ಮಹತ್ವ ನೀಡಿ. ಚೆಂದದ ಹುಡುಗ್ರು, ಫ್ಯಾಷನ್ ಸೆನ್ಸ್ ಇರೋ ಬಾಯ್ಸ್, ಹುಡುಗಿಯರನ್ನು ಸುಲಭವಾಗಿ ಸೆಳೆಯಬಹುದು. ವ್ಯಾಲಂಟೈನ್ಸ್ ಡೇ ದಿನ ಹೇಗೆ ಸಿದ್ಧ ಆಗ್ಬೇಕು ಅಂತಾ ಚಾಟ್ ಜಿಪಿಟಿ ಕೆಲ ಟಿಪ್ಸ್ ನೀಡಿದೆ.

ಡ್ರೆಸ್ (Dress) ಆಯ್ಕೆ ಸರಿಯಾಗಿರಲಿ : ವ್ಯಾಲಂಟೈನ್ಸ್ ಡೇ (Valentines Day) ದಿನ ನೀವು ಎಲ್ಲಿಗೆ ಹೋಗ್ತಿದ್ದೀರಿ ಎನ್ನುವುದರ ಆಧಾರದ ಮೇಲೆ ನಿಮ್ಮ ಬಟ್ಟೆ ಆಯ್ಕೆ ಮಾಡಿಕೊಳ್ಳಿ. ಸಾಮಾನ್ಯ ಡೇಟಿಂಗ್ ಅಥವಾ ಫಾರ್ಮಲ್ ಇವೆಂಟ್ ಅಥವಾ ಪಾರ್ಟಿ ಇಲ್ಲವೆ ರಿಲ್ಯಾಕ್ಸ್ ಪ್ಲೇಸ್ ಹೀಗೆ ಎಲ್ಲಿಗೆ ಹೋಗ್ತೀರಿ ಎಂಬುದರ ಮೇಲೆ ಡ್ರೆಸ್ ಧರಿಸಿ. ಹಾಗೆಯೇ ಸರಿಯಾಗಿ ಫಿಟ್ಟಿಂಗ್ ಇರುವ, ನಿಮ್ಮ ದೇಹಕ್ಕೆ ಹೊಂದುವ ಬಟ್ಟೆ ಹಾಕಿಕೊಳ್ಳಿ.

ಮಡದಿಯ ಮುಡಿಗೆ ಮಲ್ಲಿಗೆ ಮುಡಿಸಿ 'ಹೂವೇ ಹೂ ಮುಡಿದಂತಿದೆ' ಎಂದ ಗೌತಮ್! ಕಳೆದೇ ಹೋದ್ಲು ಭೂಮಿ..

ಕ್ಲಾಸಿಕ್ ಬಣ್ಣ : ಡೇಟ್ ನೈಟ್ ಬಟ್ಟೆ ಆಯ್ಕೆ ವೇಳೆ ಬಣ್ಣಕ್ಕೆ ಗಮನ ನೀಡಿ. ಗರ್ಲ್ ಫ್ರೆಂಡ್ ಔಟ್ ಫಿಟ್ ಗೆ ಮ್ಯಾಚ್ ಆಗುವ ಬಣ್ಣದ ಬಟ್ಟೆ ಧರಿಸಬಹುದು. ಕಪ್ಪು, ನೇವಿ ಬಣ್ಣ, ಗ್ರೇ ಬಣ್ಣದ ಬಟ್ಟೆಗಳು ನಿಮ್ಮ ನೋಟಕ್ಕೆ ವಿಶೇಷ ಲುಕ್ ನೀಡುತ್ತೆ. ಪ್ರೇಮಿಗಳ ದಿನವಾದ ಕಾರಣ ನೀವು ಕೆಂಪು ಬಣ್ಣದ ಶೇಡ್ ಇರುವು ಬಟ್ಟೆ ಆಯ್ಕೆ ಮಾಡಿಕೊಳ್ಳಬಹುದು.

ಪಾದರಕ್ಷೆ  ಆಯ್ಕೆ ಹೀಗಿರಲಿ : ಒಳ್ಳೆ ಡ್ರೆಸ್ ಧರಿಸಿ, ಯಾವುದೋ ಶೂ ಹಾಕಿಕೊಂಡು ಹೊರಟ್ರೆ ನಿಮ್ಮ ಲುಕ್ ಸಂಪೂರ್ಣ ಹಾಳಾದಂತೆ. ಅಡಿಯಿಂದ ಮುಡಿಯವರೆಗೆ ಲುಕ್ ನೀಟಾಗಿರಬೇಕು. ನೀವು ಸ್ವಚ್ಛವಾದ ಹಾಗೂ ಡ್ರೆಸ್ ಗೆ ತಕ್ಕ ಶೂ ಧರಿಸಿ. ಫಾರ್ಮಲ್ ಡ್ರೆಸ್ ಧರಿಸಿಲ್ಲವೆಂದ್ರೆ ನೀವು ಸ್ನೀಕರ್ ಅಥವಾ ಲೋಫರ್ ಗಳನ್ನು ಧರಿಸಬಹುದು.

ಸೌಂದರ್ಯಕ್ಕೆ ಗಮನ ನೀಡಿ : ಬಟ್ಟೆ, ಶೂ ಆದ್ಮೇಲೆ ಸಣ್ಣಪುಟ್ಟ ವಿಷ್ಯಗಳನ್ನು ಮರೆಯಬೇಡಿ. ವಾಚ್, ಬ್ರೇಸ್ಲೆಟ್, ಟೈ ಇವೆಲ್ಲ ಸೂಕ್ತ ಎನ್ನಿಸಿದ್ರೆ ಧರಿಸಿ. ಹಾಗೆಯೇ ಹೇರ್ ಕಟ್, ಶೇವಿಂಗ್ ಬಗ್ಗೆಯೂ ನೀವು ಮಹತ್ವ ನೀಡ್ಬೇಕು. ಗಡ್ಡ ಟ್ರಿಮ್ ಆಗಿರಲಿ. ಬೇಸಿಗೆ ಸಮಯದಲ್ಲಿ ಅನೇಕರ ಮುಖ ಒಣಗುವ ಕಾರಣ ಕ್ರೀಂ ಬಳಸಿ. 

ಐದು ಸಾವಿರ ಹುಡುಗೀರ ಮಧ್ಯೆ ಪರ್ಫೆಕ್ಟ್ ಸಂಗಾತಿ ಹುಡುಕಿಕೊಟ್ಟ ಚಾಟ್ ಜಿಪಿಟಿ !

ಬಟ್ಟೆ ಧರಿಸುವ ಮುನ್ನ ದಾರಗಳು ಹೊರಬರದಂತೆ ನೋಡಿಕೊಳ್ಳಿ. ಕಾಲರ್ ಕೊಳೆಯಾಗಿದ್ಯಾ ಚೆಕ್ ಮಾಡಿಕೊಳ್ಳಿ. ಋತುವಿಗೆ (Climate) ತಕ್ಕ ಬಟ್ಟೆ ಧರಿಸಲು ಮರೆಯಬೇಡಿ. ಮ್ಯಾಜಿಕ್ (Magic) ಮಾಡುವ ಸುಗಂಧ ದ್ರವ್ಯ (Perfume) : ಬೆವರು ವಾಸನೆ (Sweat Odour) ರೋಮ್ಯಾಂಟಿಕ್ ಮೂಡನ್ನು (Romantic Mood) ಹಾಳು ಮಾಡುತ್ತದೆ. ನಿಮ್ಮ ಸೆಂಟ್ ಇಲ್ಲಿ ಅಧ್ಬುತ ಕೆಲಸ ಮಾಡುತ್ತದೆ ಎಂಬುದು ನೆನಪಿರಲಿ. ಉತ್ತಮ ಸುಗಂಧ ದ್ರವ್ಯ ಹುಡುಗಿಯರನ್ನು ಆಕರ್ಷಿಸುತ್ತದೆ.

Follow Us:
Download App:
  • android
  • ios