ನನ್ನ ಹೆಸರು ರಿತು ದಾಲ್ಮಿಯಾ. ಸೆಪ್ಟೆಂಬರ್ 6ರಂದು, ಸುಪ್ರೀಂ ಕೋರ್ಟ್ ಸಲಿಂಗಕಾಮ ಶಿಕ್ಷಾರ್ಹ ಅಪರಾಧವಲ್ಲ ಎಂದು ಐತಿಹಾಸಿಕ ತೀರ್ಪು ನೀಡಿ ಎರಡು ವರ್ಷಗಳಾಗುತ್ತವೆ. ಈ ಹೋರಾಟದಲ್ಲಿ ನಾನೂ ಇದ್ದೆ. ನನ್ನ ಕತೆಯನ್ನು ಈಗ ಹೇಳುವೆ.

ನಾನು ಹುಟ್ತಾನೇ ಒಂಟಿ. ಗೊಂಬೆಗಳ ಜತೆಗೆ ಆಡೋಕೆ ನಂಗೆ ಇಷ್ಟವಿರಲಿಲ್ಲ. ಹುಡುಗರ ಹಾಗೆ ತಲೆಕೂದಲು ಕತ್ತರಿಸಿಕೊಳ್ತಿದ್ದೆ. ಪ್ಯಾಂಟ್ ಧರಿಸ್ತಿದ್ದೆ. ಫ್ಲ್ಯಾಟ್‌ ಶೂ ಹಾಕಿಕೊಳ್ತಿದ್ದೆ. ನನ್ನ ಆಂಟಿಯರು, ನೀನ್‌ ಹುಡುಗಿ ಥರಾನೇ ಕಾಣೋಲ್ಲ ಅಂತಿದ್ದರು. ನಾನು ನನ್ನ ಗೆಳತಿಯರನ್ನು ನನ್ನ ಸೋದರ "ಲೆಸ್ಬಿಯನ್ಸ್' ಅಂತ ತಮಾಷೆ ಮಾಡ್ತಿದ್ದ. ಅದರ ಗಂಭೀರತೆ ನನಗೂ ಗೊತ್ತಿರಲಿಲ್ಲ. ಅವನಿಗೂ ಗೊತ್ತಿರಲಿಲ್ಲ. ಕಾಲೇಜಿನಲ್ಲಿ ಮತ್ತು ನಂತರ ನಾನು ಪುರುಷರ ಜೊತೆಗೆ ಡೇಟಿಂಗ್‌ ಕೂಡ ಮಾಡಿದೆ. ಅವರ ಜೊತೆ ರೂಮಿಗೂ ಹೋದೆ, ಮಲಗಿದೆ ಕೂಡ. ಆದರೆ ಅದ್ಯಾವುದನ್ನೂ ಪ್ರೀತಿಯಿಂದ ಮಾಡಲಿಲ್ಲ. ನನ್ನೊಳಗೇ ನಾನು ಬೇರೆ ಥರಾ ಅಂತ ಅನಿಸ್ತಾ ಇತ್ತು.23ನೇ ವಯಸ್ಸಿನಲ್ಲಿ ನನ್ನ ಸಂಗಾತಿಯನ್ನು ಭೇಟಿ ಮಾಡಿದೆ. ಆಕೆಯನ್ನು ನೋಡಿದ ಕೂಡಲೇ ನಂಗೆ ಮನಸ್ಸಿನಲ್ಲಿ ಚಿಟ್ಟೆ ಓಡಾಡಿದ ಭಾವನೆ. ಹೇಳಿಕೊಳ್ಳಲು ಸಾಧ್ಯವಾಗಲಿಲ್ಲ. ನಾನೂ ಅವಳೂ ಸ್ನೇಹಿತರಾದೆವು. ಆದರೆ ಪ್ರೇಮ ಹೇಳಿಕೊಳ್ಳಲಿಲ್ಲ. ಆಮೇಲೆ ನಾನು ಲಂಡನ್‌ಗೆ ಹೋದೆ. ಅವಳು ದಿಲ್ಲಿಯಲ್ಲಿ ಇದ್ದಳು. ನಮ್ಮಿಬ್ಬರ ನಡುವೆ ಫೋನ್‌ನಲ್ಲಿ ಮಾತುಕತೆ ನಡೆಯುತ್ತಿತ್ತು. ಎಷ್ಟು ಮಾತಾಡುತ್ತಿದ್ದೆವು ಎಂದರೆ, ಫೋನ್‌ ಬಿಲ್‌ ಸಿಕ್ಕಾಪಟ್ಟೆ ಬರುತ್ತಿತ್ತು. ಕೊನೆಗೂ ನಾವಿಬ್ಬರೂ ಪರಸ್ಪರ ಪ್ರೇಮವನ್ನು ಹೇಳಿಕೊಳ್ಳುವ ಧೈರ್ಯ ಮಾಡಿದೆವು. ಆಗ ಸಮಾಧಾನದ ಭಾವನೆ ಇಬ್ಬರಿಗೂ. ಮೂರು ವರ್ಷದ ಬಳಿಕ ನಾನು ದಿಲ್ಲಿಗೆ ಮರಳಿದೆ. ಇಬ್ಬರೂ ಜೊತೆಗೇ ವಾಸಿಸಲು ಆರಂಭಿಸಿದೆವು.

ಮಹಿಳಾ ಸಲಿಂಗಿಗಳಿಗೆ ಲಿವಿ ಇನ್‌ನಲ್ಲಿರಲು ಯಾವ ಅಡ್ಡಿಯಿಲ್ಲ

ಆದರೆ ಆಗ ಸಲಿಂಗಕಾಮ ಭಾರತದಲ್ಲಿ ಅಪರಾಧವಾಗಿತ್ತು. ಜೊತೆಯಾಗಿ ನಾವಿಬ್ಬರೂ ಕಾಣಿಸಿಕೊಳ್ಳಲು, ಪಾರ್ಕ್‌ಗಳಲ್ಲೋ ರೆಸ್ಟೋರೆಂಟ್‌ಗಳಲ್ಲೋ ಮುಕ್ತವಾಗಿ ವರ್ತಿಸಲು ಸಾಧ್ಯ ಇರಲಿಲ್ಲ. ಲೆಸ್ಬಿಯನ್‌ ಎಂಬ ಪದವನ್ನು ಸಮಾಜ ಅಸಹ್ಯದಿಂದ ನೋಡುತ್ತಿತ್ತು. ನಾನು ಲೆಸ್ಬಿಯನ್‌ ಅಂಥ ಹೇಳಿಕೊಂಡರೆ ಬಾಡಿಗೆ ಮನೆ ಕೂಡ ಸಿಗುತ್ತಿರಲಿಲ್ಲ. ನನ್ನ ಇನ್ಶೂರೆನ್ಸ್‌ ಪಾಲಿಸಿಯಲ್ಲಿ ನಾಮಿನಿಯಾಗಿ ಆಕೆಯ ಹೆಸರು ಹಾಕಲು ಸಾಧ್ಯವಿರಲಿಲ್ಲ. ಅದಕ್ಕೆ ಗಂಡ ಅಥವಾ ರಕ್ತಸಂಬಂಧಿಯೇ ಆಗಬೇಕಿತ್ತು. 

ಸಂಗಾತಿಯೊಂದಿಗೆ ಸರಿದೂಗಿಸು ಆರ್ಥಿಕ ಸಂಬಂಧ ಹೀಗಿರಲಿ...

2008ರಲ್ಲಿ ಸಲಿಂಗಕಾಮಿಗಳ ಒಂದು ಸಂಸ್ಥೆ ಪರಿಚಯವಾಯಿತು. ಅವರ ಜೊತೆಗೆ ನಾನು ದಿಲ್ಲಿಯಲ್ಲಿ ನಡೆದ ಒಂದು ರ್ಯಾಲಿಗೆ ಹೋದೆ. ನನ್ನ ಫೋಟೋ ಹಾಗೂ ಹೆಸರು ಮಾಧ್ಯಮಗಳಲ್ಲಿ ಬಂತು. ಮರುದಿನ ಮೀಡಿಯಾಗಳು ನನ್ನ ಬೆನ್ನು ಬಿದ್ದವು. ನನ್ನ ಅಭಿಪ್ರಾಯ ಕೇಳೋದಕ್ಕಲ್ಲ, ನಾನು ಯಾರೊಂದಿಗೆ ಮಲಗ್ತೀನಿ ಅಂತ ಕೇಳೋದಕ್ಕೆ! ನಾನೇನೂ ಐ ಲೈಕ್‌ ವುಮನ್‌ ಅಂತ ಟಿಶರ್ಟ್‌ನಲ್ಲಿ ಹಾಕಿಕೊಳ್ತಿರಲಿಲ್ಲ. ಆದರೆ ಆಗಲೇ ನಾನು ರೆಸ್ಟೋರೆಂಟ್‌ ಒಂದರಲ್ಲಿ ಸಾಕಷ್ಟು ಪಳಗಿದ, ಖ್ಯಾತಿ ಹೊಂದಿದ ಶೆಫ್  ಆಗಿದ್ದೆ. ಅದಕ್ಕಾಗೆ ನನಗೆ ಹಲವು ಕಡೆಗಳಿಂದ ಪ್ರಶಸ್ತಿ ಪುರಸ್ಕಾರಗಳೂ ಬಂದಿದ್ದವು. ಆದರೆ ಪುರಸ್ಕಾರ ನೀಡಿದ ಅದೇ ಸಮಾಜ, ನನ್ನ ಲೈಂಗಿಕತೆಯ ವಿಷಯಕ್ಕೆ ಬಂದಾಗ ಮಾತ್ರ ನನ್ನನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿತ್ತು. ಇದೊಂದು ವಿಚಿತ್ರ. 

#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ! 

2009ರಲ್ಲಿ ಸಲಿಂಗಕಾಮ ಅಪರಾಧವಲ್ಲ ಅಂತ ದಿಲ್ಲಿ ಹೈಕೋರ್ಟ್‌ ಹೇಳಿತು. ನಮಗೆಲ್ಲಾ ತುಂಬಾ ಸಂತಸವಾಯಿತು. ಒಮ್ಮೆಲೇ ರೆಸ್ಟೋರೆಂಟ್‌ಗಳೆಲ್ಲಾ ಒಂದೇ ಲಿಂಗದ ಜೋಡಿಗಳಿಂದ ತುಂಬಿ ತುಳುಕತೊಡಗಿದವು. ಮುಕ್ತ ವಾತಾವರಣ ಎಲ್ಲೆಡೆ ಸೃಷ್ಟಿಯಾಯಿತು. ಆದರೆ ಸರಕಾರ ಇದರ ವಿರುದ್ಧ ಅಪೀಲು ಹೋಯಿತು. 2013ರಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪನ್ನು ರದ್ದು ಮಾಡಿತು. ಮತ್ತೆ ನಾವೆಲ್ಲಾ ನಮ್ಮ ಮುಕ್ತತೆಯನ್ನು ಬಚ್ಚಿಟ್ಟುಕೊಳ್ಳಬೇಕಾಗಿ ಬಂತು. 2015ರಲ್ಲಿ ನಾನು ಮತ್ತು ಮೇನಕಾ ಗುರುಸ್ವಾಮಿ ಎಂಬವರು ಸೇರಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹಾಕಿದೆವು. ಅಷ್ಟರಲ್ಲಿ ನಾನು ಸೆಲೆಬ್ರಿಟಿ ಶೆಫ್ ಹಾಗೂ ಸೆಲೆಬ್ರಿಟಿ ಲೆಸ್ಬಿಯನ್ ಹೋರಾಟಗಾರ್ತಿ ಆಗಿಬಿಟ್ಟಿದ್ದೆ. ಆದರೆ ನನ್ನ ಸೋಶಿಯಲ್ ಸೈಟ್‌ಗಳಲ್ಲಿ ನನ್ನನ್ನು ಪದೇ ಪದೇ ಟ್ರೋಲ್‌ ಮಾಡಲಾಗುತ್ತಿತ್ತು. ನನ್ನ ಕಾರಿನ ಗಾಜಿನಲ್ಲಿ ಅಸಹ್ಯವಾಗಿ ಬರೆಯಲಾಗುತ್ತಿತ್ತು. ಕೆಲವು ಗಂಡಸರು, ಹೆಂಗಸರು ನನಗೆ ಕ್ಯಾಕರಿಸಿ ಉಗಿದದ್ದೂ ಉಂಟು. ಆದರೆ ನಾನು ಎಂದೂ ನನ್ನ ನಿರ್ಧಾರದ ಬಗ್ಗೆ ಪಶ್ಚಾತ್ತಾಪ ಪಡಲಿಲ್ಲ. 2018ರಲ್ಲಿ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಬಂತು. ಮತ್ತೆ ಅದು ನಮ್ಮ ಪರವಾಗಿತ್ತು.

ವಿವಾಹಕ್ಕೆ ವಾರವಿರುವಾಗ ಪುರುಷನಾದ ಮಹಿಳೆ! ಆಮೇಲೆ? 

ನಾನು ಎಂದೂ ಹುಟ್ಟಾ ಚಳವಳಿಗಾರ್ತಿ ಅಲ್ಲ. ಆದರೆ ಪರಿಸ್ಥಿತಿ ನನ್ನನ್ನು ಹಾಗೆ ರೂಪಿಸಿತು. ಲೆಸ್ಬಿಯನ್‌ ಆಗಿರುವುದು ನನಗೆ ಸಂತೋಷ ನೀಡುತ್ತದೆ. ನಮ್ಮನ್ನು ಹಾಗೇ ಬಿಡಲು ಸಮಾಜಕ್ಕೆ ನನ್ನ ಮನವಿ.