Intimate Health: ಮುತ್ತಿಡುವುದ್ರಿಂದ ಹರಡುತ್ತಾ ಲೈಂಗಿಕ ರೋಗ?
ಈಗಿನ ದಿನಗಳಲ್ಲಿ ಎಸ್ ಟಿಡಿಯಂತಹ ರೋಗ ಸದ್ದಿಲ್ಲದೆ ಜನರನ್ನು ಆಕ್ರಮಿಸುತ್ತಿದೆ. ಮುತ್ತಿಡುವುದ್ರಿಂದ ಲೈಂಗಿಕ ರೋಗ ಹರಡುತ್ತದೆ ಎಂದು ಕೆಲವರು ನಂಬುತ್ತಾರೆ. ಆದ್ರೆ ಎಸ್ ಟಿಡಿ ಇದ್ರಿಂದ ಹರಡುತ್ತಾ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ.
ಚುಂಬನ ಪ್ರೀತಿಯನ್ನು ತೋರ್ಪಡಿಸುವ ಒಂದು ವಿಧ. ದೇಹದ ಒಂದೊಂದು ಭಾಗಕ್ಕೆ ಮುತ್ತಿಡುವುದೂ ಒಂದೊಂದು ರೀತಿ ಪ್ರೀತಿಯನ್ನು ವ್ಯಕ್ತಪಡಿಸುತ್ತದೆ. ನವಜಾತ ಶಿಶುವಿಗೆ ಎಂದಿಗೂ ಮುತ್ತಿಡಬಾರದು ಎನ್ನಲಾಗುತ್ತದೆ. ಮಕ್ಕಳಿಗೆ ಅಪ್ಪಿತಪ್ಪಿಯೂ ತುಟಿಗೆ ಮುತ್ತು ನೀಡ್ಬೇಡಿ ಎಂದು ತಜ್ಞರು ಸಲಹೆ ನೀಡ್ತಾರೆ. ತುಟಿಗೆ ಮುತ್ತಿಟ್ರೆ ಗರ್ಭಧರಿಸ್ತೇವೆ ಎಂದು ನಂಬುವ ಅನೇಕ ಜನರು ಈಗ್ಲೂ ನಮ್ಮಲ್ಲಿದ್ದಾರೆ. ಕೆಲವರು ತುಟಿಗೆ ಮುತ್ತಿಡೋದ್ರಿಂದ ಲೈಂಗಿಕ ರೋಗಗಳು ಹರಡುತ್ತವೆ ಎಂದು ನಂಬುತ್ತಾರೆ. ತುಟಿಗಳಿಗೆ ಮುತ್ತಿಡುವ ಕಾರಣ ಲಕ್ಷಾಂತರ ಬ್ಯಾಕ್ಟೀರಿಯಾಗಳು ಪರಸ್ಪರ ವರ್ಗಾವಣೆಯಾಗ್ತವೆ. ಆದ್ರೆ ಲೈಂಗಿಕ ರೋಗಗಳು ಹರಡುವುದಿಲ್ಲ.
ಮುತ್ತಿಡುವ ಕಾರಣ ಎಸ್ ಟಿಡಿ (STD) ಸೋಂಕು ಕಾಡುವುದಿಲ್ಲ. ಎಸ್ ಟಿಡಿ ಸೋಂಕು (Infection) ಮುಖ್ಯವಾಗಿ ಲೈಂಗಿಕ ಚಟುವಟಿಕೆಯ ಸಮಯದಲ್ಲಿ ಜನನಾಂಗದ ಭಾಗಗಳು, ಗುದ ಮತ್ತು ಮೌಖಿಕ ಭಾಗಗಳ ನೇರ ಸಂಪರ್ಕದಿಂದ ಉಂಟಾಗುತ್ತದೆ. ಮುತ್ತಿನಿಂದ ಉಂಟಾಗುವ ಸಮಸ್ಯೆ ಏನು ಹಾಗೆ ಅದನ್ನು ತಡೆಗಟ್ಟೋದು ಹೇಗೆ ಎನ್ನವು ಬಗ್ಗೆ ನಾವಿಂದು ಮಾಹಿತಿ ನೀಡ್ತೇವೆ.
Relationship Tips: ಮಾಜಿ ಸಂಗಾತಿಯನ್ನು ಸ್ಟಾಕ್ ಮಾಡೋದು ಸರೀನಾ?
ಮುತ್ತಿ (Kiss)ಡುವುದ್ರಿಂದ ಕಾಡುವ ರೋಗ ಯಾವುದು ? : ತುಟಿಗಳಿಗೆ ಮುತ್ತಿಡುವ ಕಾರಣ, ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ (HSV) ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಈ ವೈರಸ್ ಮೌಖಿಕ ಮತ್ತು ಜನನಾಂಗದ ಸೋಂಕಿಗೆ ಕಾರಣವಾಗಿದೆ. ಹರ್ಪಿಸ್ ಸಿಂಪ್ಲೆಕ್ಸ್ ವೈರಸ್ ದೇಹದಲ್ಲಿ ಸಕ್ರಿಯವಾಗಿದ್ದಾಗ ಅದು ಬೇರೆಯವರಿಗೆ ಹರಡುವ ಸಾಧ್ಯತೆ ಹೆಚ್ಚು. ರೋಗ ಲಕ್ಷಣಗಳು ಇದ್ರಲ್ಲಿ ಗೋಚರಿಸದ ಕಾರಣ ಸೋಂಕಿರುವ ವ್ಯಕ್ತಿಗೆ ಈ ಸೋಂಕಿದೆ ಎಂಬುದು ತಿಳಿಯೋದಿಲ್ಲ. ಒಂದ್ವೇಳೆ ಇದು ಪತ್ತೆಯಾದ್ರೆ ಸಂಗಾತಿಗೆ ಮುತ್ತಿಡದಂತೆ ಸೂಚನೆ ನೀಡಲಾಗುತ್ತದೆ.
ಮುತ್ತಿನಿಂದ ಕಾಡುತ್ತೆ ಈ ಸಮಸ್ಯೆ : ಯಾರಿಗಾದ್ರೂ ಮುತ್ತಿಟ್ಟರೆ ನಿಮಗೆ ಸಿಪಿಲಿಸ್ (Syphilis) ಕಾಡುವ ಅಪಾಯವಿದೆ. ಇದೊಂದು ಬ್ಯಾಕ್ಟೀರಿಯಾ ಆಗಿದ್ದು, ತೆರೆದ ಗಾಯಗಳಿಂದ ಹರಡುತ್ತದೆ. ವ್ಯಕ್ತಿಯ ಬಾಯಲ್ಲಿ ಅಥವಾ ಸುತ್ತಮುತ್ತ ಸಿಪಿಲಿಸ್ ಸೋಂಕನ್ನು ಹೊಂದಿದ್ದು ಆತ ಮುತ್ತಿಟ್ಟರೆ ಅದು ಬೇರೆಯವರಿಗೆ ಹರಡುವ ಸಾಧ್ಯತೆಯಿದೆ. ಮುತ್ತಿಟ್ಟಾಗ ಇದು ಹರಡುವ ಅಪಾಯ ಕಡಿಮೆ. ಯಾಕೆಂದ್ರೆ ಸಿಪಿಲಿಸ್ ಜನನಾಂಗದ ಮೂಲಕ ಹರಡುವ ಖಾಯಿಲೆಯಾಗಿದೆ. ಲೈಂಗಿಕ ಕ್ರಿಯೆ ವೇಳೆ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ರೊಮ್ಯಾಂಟಿಕ್, ಕೇರಿಂಗ್, ಸೆಕ್ಸುವಲ್…. ಹೀಗೆಲ್ಲಾ ಕಿಸ್ ಮಾಡ್ತಾರಾ?
ಮುತ್ತಿಡುವುದ್ರಿಂದ ಹರಡುತ್ತೆ ಈ ರೋಗ : ಎಪ್ಸ್ಟೀನ್-ಬಾರ್ ವೈರಸ್‌ನಿಂದ ಉಂಟಾಗುವ ಚುಂಬನದ ರೋಗ ಮಾನೋನ್ಯೂಕ್ಲಿಯೊಸಿಸ್ ಹರಡುತ್ತದೆ. ಜ್ವರ, ಗಂಟಲು ನೋವು, ಆಯಾಸ, ಸ್ನಾಯು ದೌರ್ಬಲ್ಯ ಸೇರಿದಂತೆ ಕೆಲ ಲಕ್ಷಣ ಇದ್ರಿಂದ ಕಾಣಿಸಿಕೊಳ್ಳುತ್ತದೆ.
ಜಿಂಗೈವಿಟಿಸ್ ಮತ್ತು ಪಿರಿಯಾಂಟೈಟಿಸ್ ಎಂಬ ಒಸಡು ರೋಗ ಕೂಡ ಮುತ್ತಿಡುವುದ್ರಿಂದ ಹರಡುತ್ತದೆ. ಇದು ನೋವು ರಹಿತ ಕಾಯಿಲೆಯಾಗಿದ್ದು, ಒಸಡಿನಲ್ಲಿ ರಕ್ತಸ್ರಾವ, ಸಡಿಲವಾಗುವ ಹಲ್ಲು ಮತ್ತು ಹಲ್ಲಿನ ನಷ್ಟ ಕಾಡುತ್ತದೆ.
ಮೆನಿಂಜೈಟಿಸ್ ಎಂಬ ರೋಗ ಕೂಡ ಕಾಡುವ ಅಪಾಯವಿದೆ. ಇದು ಮೆದುಳು ಮತ್ತು ಬೆನ್ನುಹುರಿಯ ರಕ್ಷಣಾತ್ಮಕ ಒಳಪದರದ ಉರಿಯೂತವಾಗಿದೆ. ತ್ವರಿತವಾಗಿ ಚಿಕಿತ್ಸೆ ಸಿಗದೆ ಹೋದ್ರೆ ರೋಗ ಮಾರಕವಾಗುವ ಅಪಾಯವಿರುತ್ತದೆ.
ಜ್ವರ, ಶೀತ ಕೂಡ ಚುಂಬನದಿಂದ ಹರಡುತ್ತದೆ. ಆಳವಾದ ಚುಂಬನದಿಂದ ಈ ರೋಗ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ.
ಲೈಂಗಿಕ ಖಾಯಿಲೆಯಿಂದ ರಕ್ಷಣೆ : ಮುತ್ತಿನಿಂದ ಲೈಂಗಿಕ ಖಾಯಿಲೆ ಹರಡದೆ ಇರಬಹುದು, ಆದ್ರೆ ತಪ್ಪಾದ ಲೈಂಗಿಕ ಕ್ರಿಯೆಯಿಂದ ಇದ್ರ ಅಪಾಯ ಹೆಚ್ಚು. ಸುರಕ್ಷತೆಯಿಲ್ಲದ ಲೈಂಗಿಕ ಕ್ರಿಯೆ, ಯೋನಿ, ಗುದ, ಮೌಖಿಕ ಸಂಭೋಗದ ವೇಳೆ ಕಾಂಡೋಮ್ ಬಳಸದೆ ಇರೋದು, ಲೈಂಗಿಕ ರೋಗಗಳ ಬಗ್ಗೆ ನಿಯಮಿತ ಪರೀಕ್ಷೆ ಮಾಡಿಸದೆ ಇದ್ದಲ್ಲಿ, ಒಂದಕ್ಕಿಂತ ಹೆಚ್ಚು ಜನರ ಜೊತೆ ಅಸುರಕ್ಷಿತ ಲೈಂಗಿಕ ಕ್ರಿಯೆ ಇವೆಲ್ಲವೂ ಲೈಂಗಿಕ ರೋಗಕ್ಕೆ ಕಾರಣವಾಗುವ ಕಾರಣ, ಇದ್ರ ಬಗ್ಗೆ ಎಚ್ಚರಿಕೆ ಇರಬೇಕು.