ಮೂರು ಮದುವೆಯಿಂದ ಇಬ್ಬರು ಮಕ್ಕಳನ್ನು ಪಡೆದಿರುವ ಹಾಲಿವುಡ್​ ನಟಿ ಇದೀಗ ತನ್ನನ್ನು ತಾನೇ ಮದುವೆಯಾಗಲು ಮುಂದಾಗಿದ್ದಾಳೆ. ಏನಿದು ವಿಷಯ?  

 ಎರಡು ವರ್ಷಗಳ ಹಿಂದೆ ಗುಜರಾತಿನ ಯುವತಿ ಕ್ಷಮಾ ಎಂಬಾಕೆ ತನ್ನನ್ನು ತಾನೇ ಮದುವೆಯಾಗಿ ಸದ್ದು ಮಾಡಿದ್ದಳು. ಈಗ ಇಲ್ಲೊಬ್ಬ ನಟಿ ತನ್ನನ್ನು ತಾನೇ ಮದ್ವೆಯಾಗಿ ಹನಿಮೂನ್​ಗೂ ಹೊರಟಿದ್ದಾಳೆ! ಇವಳು ಈ ನಿರ್ಧಾರ ತೆಗೆದುಕೊಳ್ಳಲು ಕಾರಣ, ಗಂಡಸರ ಸಹವಾಸ ಸಾಕು ಎನ್ನಿಸಿರುವುದಕ್ಕೆ. ಈಕೆ ಹೆಸರು ಬ್ರಿಟ್ನಿ ಸ್ಪಿಯರ್ಸ್. ಈಕೆ ಅಮೆರಿಕದ ಖ್ಯಾತ ಗಾಯಕಿ ಹಾಗೂ ಹಾಲಿವುಡ್​ ಸ್ಟಾರ್​. ಹಾಗೆಂದು ಈಕೆಯೇನೂ ಮದ್ವೆಯಾಗದೇ ಇದ್ದವಳಲ್ಲ. ಇದಾಗಲೇ ಮೂರು ಮದುವೆಯಾಗಿ ಮೂರು ಬಾರಿ ಡಿವೋರ್ಸ್​ ಕೂಡ ಆಗಿದೆ. ಈಗ ಗಂಡಸರ ಸಹವಾಸ ಸಾಕು ಎನ್ನಿಸಿದೆ ಅಷ್ಟೇ.

ಅಷ್ಟಕ್ಕೂ, ಬ್ರಿಟ್ನಿ ಸ್ಪಿಯರ್ಸ್ ಮದುವೆ ಮಾಡಿಕೊಂಡು ಆಗಾಗ ದೊಡ್ಡ ಸುದ್ದಿಯಾಗುತ್ತಲೇ ಇರುತ್ತಾಳೆ. ಮೂರು ಬಾರಿ ವಿವಾಹವಾದ ಬ್ರಿಟ್ನಿಯ ವೈವಾಹಿಕ ಜೀವನವು ವಿವಾದಗಳಿಂದ ತುಂಬಿದೆ. ಬ್ರಿಟ್ನಿ ಸ್ಪಿಯರ್ಸ್ ತಾನು ಮತ್ತೆ ಮದುವೆಯಾಗಿರುವುದಾಗಿ ಘೋಷಿಸಿ ಮತ್ತೆ ಎಲ್ಲರನ್ನೂ ಶಾಕ್​ ಮಾಡಿದ್ದರು. ಆದರೆ ಶಾಕ್​ ಆಗಲು ಕಾರಣ, ಈಗ ತನ್ನನ್ನೇ ತಾನು ಮದುವೆಯಾಗುವೆ ಎಂದು ಘೋಷಿಸಿದ್ದರಿಂದ. ಬ್ರಿಟ್ನಿ ಸ್ಪಿಯರ್ಸ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್​ನಲ್ಲಿ ಈ ವಿಷಯ ಶೇರ್​ ಮಾಡಿದ್ದಾಳೆ. ವಿಡಿಯೋ ಮೂಲಕ ತಾನು ಮತ್ತೆ ಮದುವೆಯಾಗಿದ್ದೇನೆ ಎಂದು ಬಹಿರಂಗಪಡಿಸಿದ್ದಾಳೆ.

ಇವಳೇ ಅವಳು... ಕಾಜೋಲ್​ ಮಗಳು... ಹೇಗಿದ್ಲು ಹೇಗಾದ್ಲು ನೋಡಿ ನೀಸಾ ದೇವಗನ್​- ಹಳೆ ಫೋಟೋ ವೈರಲ್

'ನನ್ನನ್ನೇ ನಾನು ಮದುವೆಯಾಗಲು ನಿಶ್ಚಯಿಸಿದ್ದೇನೆ. ಇದು ಮುಜುಗರ ಅಥವಾ ಮೂರ್ಖತನದಂತೆ ನಿಮಗೆಲ್ಲಾ ಕಾಣಿಸಬಹುದು. ಆದರೆ ಇದು ನಾನು ಮಾಡಿದ ಅತ್ಯಂತ ಬುದ್ಧಿವಂತ ಕೆಲಸ ಎಂದು ನಾನು ಭಾವಿಸುತ್ತೇನೆ' ಎಂದು ಬ್ರಿಟ್ನಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ ಹೇಳಿದ್ದಾಳೆ. ಗಾಯಕಿ, ನಟಿ ಮದುಮಗಳಂತೆ, ಸ್ಯಾಟಿನ್ ವೆಡ್ಡಿಂಗ್ ಗೌನ್ ಮತ್ತು ಮುಸುಕು ಧರಿಸಿ ತನ್ನ ಅಭಿಮಾನಿಗಳಿಗೆ ತನ್ನ ಮದುವೆಯ ಸುದ್ದಿಯನ್ನು ಘೋಷಿಸಿದಳು. ಇಷ್ಟೇ ಅಲ್ಲದೇ ಹನಿಮೂನ್​ ಕೂಡ ಮಾಡ್ತಾ ಇದ್ದೇನೆ. ಒಬ್ಬಳೇ ಹೋಗ್ತಾ ಇದ್ದೇನೆ. ಟರ್ಕ್ಸ್ ಮತ್ತು ಕೈಕೋಸ್ ದ್ವೀಪದಲ್ಲಿ ಹನಿಮೂನ್​ ಪ್ಲ್ಯಾನ್​ ಮಾಡಿದ್ದೇನೆ. ಅಲ್ಲಿ ಏನೇನು ಮಾಡ್ತೇನೆ ಎಂದು ಶೀಘ್ರದಲ್ಲಿಯೇ ಅಪ್​ಡೇಟ್​ ಕೊಡ್ತೇನೆ ಎಂದಿದ್ದಾಳೆ ಈಕೆ! 

ಬ್ರಿಟ್ನಿ ಸ್ಪಿಯರ್ಸ್ ಮೊದಲ ಬಾರಿಗೆ 2004 ರಲ್ಲಿ ಜೇಸನ್ ಅಲೆಕ್ಸಾಂಡರ್ ಅವರನ್ನು ವಿವಾಹವಾದಳು. ಆದರೆ ಮೊದಲ ಮದುವೆ ಕೇವಲ 55 ಗಂಟೆಗೇ ಮುರಿದು ಬಿತ್ತು! ಅಂದ್ರೆ ಮದುವೆಯಾದ ಎರಡನೇ ದಿನದಲ್ಲಿ ಸಂಬಂಧ ಮುರಿದುಬಿತ್ತು. ಅದೇ ವರ್ಷ, ಗಾಯಕ ಕೆವಿನ್ ಫೆಡರಲ್ ಅವರನ್ನು ವಿವಾಹವಾದಳು. ಈ ಸಂಬಂಧ ಇಬ್ಬರು ಮಕ್ಕಳಿದ್ದಾರೆ. ಮೂರು ವರ್ಷಗಳ ನಂತರ 2007 ರಲ್ಲಿ ಇಬ್ಬರೂ ಬೇರ್ಪಟ್ಟರು. ಇದರ ನಂತರ, ಬ್ರಿಟ್ನಿ ನಟ ಮತ್ತು ರೂಪದರ್ಶಿ ಸ್ಯಾಮ್ ಅಸ್ಕರಿ ಅವರನ್ನು ವಿವಾಹವಾದಳು. ಸ್ಯಾಮ್, ಬ್ರಿಟ್ನಿಗಿಂತ 12 ವರ್ಷ ಚಿಕ್ಕವಳು. ಆದರೆ ಕಳೆದ ವರ್ಷ ಇಬ್ಬರೂ ಬೇರೆಯಾಗಿದ್ದರು. ಮದುವೆಯ ಸುದ್ದಿಯಿಂದಾಗಿ ಅವರ ಜೀವನವು ವಿವಾದಗಳಿಂದ ತುಂಬಿತ್ತು ಮತ್ತು ಅನೇಕ ಬಿಕ್ಕಟ್ಟುಗಳನ್ನು ಎದುರಿಸಿತು.

ಬಿಗ್​ಬಾಸ್​ ಕರೆಸಿಕೊಳ್ಳಲ್ಲ ಅಂತ ಗೊತ್ತಾದ್ಮೇಲೆ ಲಾಯರ್​ ಜಗದೀಶ್​ಗೆ ಮನೆಯಲ್ಲಿ ಈ ಸ್ಥಿತಿನಾ? ಅಯ್ಯೋ ಎಂದ ಫ್ಯಾನ್ಸ್​

View post on Instagram