ಮದ್ವೆ ದಿನ ವರನ ಸರ್‌ಪ್ರೈಸ್, ಸ್ಪೆಷಲ್ ಗೆಸ್ಟ್ ನೋಡಿ ಕಣ್ಣೀರಾಧ ವಧು, ಬಂದಿದ್ಯಾರು ?
ಮದುವೆ ಅನ್ನೋದು ಎಲ್ಲರ ಜೀವನದಲ್ಲಿಯೂ ಬಹಳ ಮುಖ್ಯವಾದುದು. ಹೀಗಾಗಿಯೇ ಈ ದಿನವನ್ನು ಸ್ಪೆಷಲ್ ಆಗಿ ಸೆಲಬ್ರೇಟ್ ಮಾಡಲು ಎಲ್ಲಾ ಜೋಡಿ ಬಯಸ್ತಾರೆ. ಈ ದಿನದ ತಮ್ಮ ಸಂಭ್ರಮಕ್ಕೆ ಜೀವನದ ಎಲ್ಲಾ ಪ್ರಮುಖ ವ್ಯಕ್ತಿಗಳನ್ನು ಆಹ್ವಾನಿಸ್ತಾರೆ. ಆದ್ರೆ ಇಲ್ಲೊಂದು ಜೋಡಿ ತಮ್ಮ ಮದುವೆಯಲ್ಲಿ ಎಂಥಾ ಸ್ಪೆಷಲ್ ಗೆಸ್ಟ್‌ಗಳನ್ನು ಆಹ್ವಾನಿಸಿದ್ದಾರೆ ನೋಡಿ.
ಮದುವೆ ಅನ್ನೋದು ಎಲ್ಲರ ಪಾಲಿಗೂ ಸ್ಪೆಷಲ್ ಆಗಿರುತ್ತದೆ. ಈ ದಿನ ಹೀಗೆಯೇ ಇರಬೇಕೆಂದು ಪ್ರತಿಯೊಬ್ಬರೂ ಪ್ಲಾನ್ ಮಾಡಿಕೊಳ್ಳುತ್ತಾರೆ. ಡ್ರೆಸ್, ಡೆಕೋರೇಶನ್, ಭಾಗವಹಿಸಿಬೇಕಾದ ಅತಿಥಿಗಳ ಪಟ್ಟಿಯನ್ನು ಸಿದ್ಧ ಮಾಡುತ್ತಾರೆ. ಇನ್ನು ಕೆಲವರು ಡೆಸ್ಟಿನೇಶನ್ ವೆಡ್ಡಿಂಗ್ ಅಥವಾ ಥೀಮ್‌ಡ್ ವೆಡ್ಡಿಂಗ್ ಮಾಡಿಕೊಳ್ಳುವ ಮೂಲಕ ತಮ್ಮ ಮದುವೆಯನ್ನು ಮೆಮೊರೆಬಲ್ ಆಗಿಸಿಕೊಳ್ಳುತ್ತಾರೆ. ಆದ್ರೆ ಇಲ್ಲೊಂದೆಡೆ ನಡೆದಿರುವ ಮದ್ವೆ ಇದೆಲ್ಲಕ್ಕಿಂತಲೂ ಸ್ಪೆಷಲ್ ಆಗಿದೆ. ಯಾಕಂದ್ರೆ ಇಲ್ಲಿ ಸ್ವತಃ ಮದುಮಗಳೇ, ಮದುಮಗ ಕರೆಸಿರುವ ಗೆಸ್ಟ್‌ಗಳನ್ನು ನೋಡಿ ಅಚ್ಚರಿಗೊಂಡಿದ್ದಾಳೆ. ಅಷ್ಟಕ್ಕೂ ಅಲ್ಲಿಗೆ ಬಂದಿದ್ಯಾರು ?
ವಿಶೇಷ ಚೇತನ ಮಕ್ಕಳನ್ನು ನೋಡಿ ಭಾವುಕಳಾದ ವಧು
ಟ್ವಿಟ್ಟರ್‌ನಲ್ಲಿ ದಿ ಫಿಗನ್ ಎಂಬ ಪುಟದಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ವರ (Groom), ವಧು (Bride) ಎಂಗೇಜ್‌ಮೆಂಟ್‌ಗೆ ಸಿದ್ಧವಾಗಿ ನಿಂತಿರುತ್ತಾರೆ. ಈ ಸಂದರ್ಭದಲ್ಲಿ ವರ ಕೆಲವೊಬ್ಬರನ್ನು ವೇದಿಕೆಗೆ ಆಹ್ವಾನಿಸುತ್ತಾನೆ. ವಿಶೇಷ ಚೇತನ ಮಕ್ಕಳು (Specially Abled) ಹಾರವನ್ನು ಹಿಡಿದುಕೊಂಡು ಸ್ಟೇಜ್‌ಗೆ ಬರುತ್ತಾರೆ. ವಧು. ತನ್ನ ವಿದ್ಯಾರ್ಥಿಗಳಾದ ವಿಶೇಷ ಚೇತನ ಮಕ್ಕಳನ್ನು ನೋಡಿ ಭಾವುಕಳಾಗುತ್ತಾಳೆ. ಸದ್ಯ ಈ ಎಂಗೇಜ್‌ಮೆಂಟ್ ವೀಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದೆ. ವರನು ಮುಗುಳ್ನಗುತ್ತಿದ್ದರೆ, ವಧು ಸಂಪೂರ್ಣ ಆಶ್ಚರ್ಯಚಕಿತಳಾಗಿದ್ದಾಳೆ. ಇದು ವರನು ತನ್ನ ವಧುವನ್ನು ಅಚ್ಚರಿಗೊಳಿಸುವ ಒಂದು ಮಾರ್ಗವಾಗಿತ್ತು. ಖುಷಿಯಿಂದ ವಧು ಕಣ್ಣೀರು (Tear) ಹಾಕಿದರು.
ಅಬ್ಬಬ್ಬಾ..11 ಮಕ್ಕಳು, 40 ಮೊಮ್ಮಕ್ಕಳಿದ್ದರೂ ಮರು ಮದ್ವೆಯಾದ ಭೂಪ !
ವಿಶೇಷ ಚೇತನ ಮಕ್ಕಳು ಉಂಗುರ, ಹಾರಗಳನ್ನು ತಂದು ಕೊಟ್ಟಿದ್ದು ಹೃದಯಸ್ಪರ್ಶಿಯಾಗಿತ್ತು. ವರ ಮತ್ತು ವಧು ಇಬ್ಬರೂ ಉಂಗುರ ತಂದ ಮಕ್ಕಳನ್ನು ಭೇಟಿಯಾಗುವುದು ಮತ್ತು ಅವರು ಹತ್ತಿರ ಬಂದಾಗ ಅವರ ಕೈ ಕುಲುಕುವುದು ಕಂಡುಬಂದಿತು. ಇಬ್ಬರೂ ಯುವ ಉಂಗುರ ತೊಡುವವರನ್ನು ಅಪ್ಪಿಕೊಂಡು ಮಾತನಾಡುತ್ತಿದ್ದರು, ವಧು ಸಂತೋಷದಿಂದ ಅಳುತ್ತಲೇ (Crying) ಇದ್ದರು.
ಈ ಪೋಸ್ಟ್‌ಗೆ ' ವಿಶೇಷ ಚೇತನ ಮಕ್ಕಳಿಗೆ ವರ, ಉಂಗುರ (Ring)ಗಳನ್ನು ಒಯ್ಯುವ ಕೆಲಸವನ್ನು ನೀಡಿದ್ದಾನೆ. ಈ ಕ್ಷಣ ಎಷ್ಟು ಸುಂದರವಾಗಿದೆ' ಎಂಬ ಶೀರ್ಷಿಕೆ ನೀಡಲಾಗಿದೆ. ವೀಡಿಯೊ ಈಗಾಗಲೇ 2 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ವೀಡಿಯೋ ನೋಡಿ ವಧುವಿನ ಜೊತೆಗೆ ಅಂತರ್ಜಾಲದ ಜನರೂ ಭಾವುಕರಾಗಿದ್ದಾರೆ. ಬಳಕೆದಾರರು ದಂಪತಿಗಳಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಇನ್ನು ಕೆಲವರು 'ಮುದ್ದಾಗಿದೆ ಜೋಡಿ, ವಿಶೇಷ ಚೇತನ ಮಕ್ಕಳ ನಗುವು ಸುಂದರವಾಗಿದೆ' ಎಂದಿದ್ದಾರೆ.
ಈ ಪ್ರೀತಿಗೇ ಕಣ್ಣೂ ಇಲ್ಲ..3 ವರ್ಷದ ಪ್ರೀತಿಯ ಬಳಿಕ 18 ವರ್ಷದ ಹುಡುಗಿಯನ್ನು ಮದುವೆಯಾದ 78ರ ಅಜ್ಜ!
ಮಗು ಅಥವಾ ವಯಸ್ಕರಲ್ಲಿ ಡೌನ್ ಸಿಂಡ್ರೋಮ್ ಇದ್ದಾಗ, ಅದು ವ್ಯಕ್ತಿಯ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರಬಹುದು. ಅಂಗವೈಕಲ್ಯವು ಮಗುವಿನ ವಿವಿಧ ರೀತಿಯಲ್ಲಿ ಕಲಿಯುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಹೆಚ್ಚಿನವರು ಸೌಮ್ಯದಿಂದ ಮಧ್ಯಮ ಬೌದ್ಧಿಕ ಅಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಈ ವಿಶೇಷ ಚೇತನ ಮಕ್ಕಳು ತಮ್ಮ ಜೀವನದುದ್ದಕ್ಕೂ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬಹುದು. ಸದ್ಯಕ್ಕೆ ಡೌನ್ ಸಿಂಡ್ರೋಮ್‌ಗೆ ಯಾವುದೇ ಚಿಕಿತ್ಸೆ ಇಲ್ಲ.
ಆದರೆ, ಕೌಶಲ್ಯಗಳನ್ನು ಸುಧಾರಿಸಲು ಸಹಾಯ ಮಾಡುವ ಹಲವಾರು ಆರಂಭಿಕ ಚಿಕಿತ್ಸಾ ಕಾರ್ಯಕ್ರಮಗಳಿವೆ. ಭಾಷಣ, ದೈಹಿಕ, ಔದ್ಯೋಗಿಕ, ಮತ್ತುಅಥವಾ ಶೈಕ್ಷಣಿಕ ಚಿಕಿತ್ಸೆಯನ್ನು ಇದು ಒಳಗೊಂಡಿರಬಹುದು. ಬೆಂಬಲ ಮತ್ತು ಚಿಕಿತ್ಸೆಯೊಂದಿಗೆ, ಈ ಸಿಂಡ್ರೋಮ್ ಹೊಂದಿರುವ ಅನೇಕ ಜನರು ಸಂತೋಷದ ಜೀವನವನ್ನು ನಡೆಸಬಹುದು.
ಗರ್ಲ್‌ಫ್ರೆಂಡ್, ಸಹೋದ್ಯೋಗಿ ಜೊತೇನೆ ಹೆಚ್ಚು ಓಡಾಡ್ತಾಳೆ, ಇಬ್ಬರ ಮಧ್ಯೆ ಏನಾದ್ರೂ ನಡೀತಿದ್ಯಾ ?