ಅಬ್ಬಬ್ಬಾ..11 ಮಕ್ಕಳು, 40 ಮೊಮ್ಮಕ್ಕಳಿದ್ದರೂ ಮರು ಮದ್ವೆಯಾದ ಭೂಪ !
ಮದ್ವೆ ಅನ್ನೋದು ಒಂದು ಪವಿತ್ರವಾದ ಬಂಧ. ಆದರೆ ಈಗೆಲ್ಲಾ ಹಾಗಿಲ್ಲ. ಬೇಕಾಬಿಟ್ಟಿ ಮದ್ವೆಯಾಗಿ ಬಿಡುತ್ತಾರೆ. ವಯಸ್ಸು, ವಿವಾಹಿತ ಯಾವ ವಿಚಾರವನ್ನೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಹಾಗೆಯೇ ಇಲ್ಲೊಬ್ಬ ಭೂಪ ನಾಲ್ಕು ಬಾರಿ ಮದ್ವೆಯಾಗಿದ್ದರೂ, 11 ಮಂದಿ ಮಕ್ಕಳಿದ್ದರೂ ಮಗಳ ಮದ್ವೆಯಲ್ಲೇ ಮತ್ತೆ ವಿವಾಹವಾಗಿದ್ದಾನೆ. ಆ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ.
ಮದ್ವೆ ಅನ್ನೋದು ಏಳೇಳು ಜನುಮ ಅನುಬಂಧ ಅಂತಾರೆ. ಆದರೆ ಆ ಮಾತೆಲ್ಲಾ ಈಗ ಅರ್ಥಹೀನವಾಗಿಬಿಟ್ಟಿದೆ. ಏಳು ಜನ್ಮ ಬಿಟ್ಟು ಏಳು ತಿಂಗಳುಗಳ ವರೆಗೂ ದಾಂಪತ್ಯ ಜೀವನ ಉಳೀತಿಲ್ಲ. ಆಸ್ತ-, ಅಂತಸ್ತು ಉಳ್ಳು ಪುರುಷರು ಸಂಖ್ಯೆಯ ಲೆಕ್ಕವಿಲ್ಲದೆ ಬೇಕಾಬಿಟ್ಟಿ ಮದ್ವೆಯಾಗಿ ಬಿಡುತ್ತಾರೆ. ಹಾಗೇ ಇಲ್ಲೊಂದೆಡೆ ಈಗಾಗಲೇ ನಾಲ್ಕು ಮದ್ವೆಯಾಗಿದ್ದ ವ್ಯಕ್ತಿಗೆ ಆತನ ಮಕ್ಕಳೇ ಮದ್ವೆ ಮಾಡಿಸಿದ್ದಾರೆ. ಈ ಮೊದಲಿನ ಹೆಂಡ್ತಿಯಂದಿರುವ ಸಾವನ್ನಪ್ಪಿರುವ ಕಾರಣ ತಂದೆಯ ಒಂಟಿತನವನ್ನು ಹೋಗಲಾಡಿಸಲು ಮಕ್ಕಳು ಈ ನಿರ್ಧಾರ ತೆಗೆದುಕೊಂಡಿದ್ದಾರೆ.
ನಾಲ್ವರು ಹೆಂಡ್ತಿಯರು, 11 ಮಕ್ಕಳು ಮತ್ತು 40 ಮೊಮ್ಮಕ್ಕಳು
ಇತ್ತೀಚೆಗೆ ವೈರಲ್ ಆಗಿರುವ ವಿಚಿತ್ರ ಘಟನೆಯೊಂದರಲ್ಲಿ, ಪಾಕಿಸ್ತಾನಿ ವ್ಯಕ್ತಿಯೊಬ್ಬರು ಐದನೇ ಬಾರಿಗೆ ವಿವಾಹ (Marriage)ವಾದರು. ಅದು ಕೂಡ ತನ್ನ ಹಿಂದಿನ ಮದುವೆಯ ಹೆಣ್ಣುಮಕ್ಕಳ ಒತ್ತಾಯದ ಮೇರೆಗೆ. ಶೌಕತ್ ಎಂಬ ವ್ಯಕ್ತಿಗೆ 10 ಹೆಣ್ಣುಮಕ್ಕಳು, ಒಬ್ಬ ಮಗ, 11 ಅಳಿಯಂದಿರು ಮತ್ತು 40 ಮೊಮ್ಮಕ್ಕಳು. ಇದು ಅವರ ಕುಟುಂಬ (Family)ದಲ್ಲಿನ ಸದಸ್ಯರ ಸಂಖ್ಯೆಯನ್ನು ಒಟ್ಟು 62 ಕ್ಕೆ ತರುತ್ತದೆ. ಯೂಟ್ಯೂಬರ್ ಮತ್ತು ಕಂಟೆಂಟ್ ಕ್ರಿಯೇಟರ್ ಯಾಸಿರ್ ಶಮಿ ಅವರೊಂದಿಗಿನ ಸಂದರ್ಶನದಿಂದಾಗಿ ಶೌಕತ್ ಆಲಿ ವಿಚಾರ ಎಲ್ಲರಿಗೆ ತಿಳಿದುಬಂತು.
ಈ ಪ್ರೀತಿಗೇ ಕಣ್ಣೂ ಇಲ್ಲ..3 ವರ್ಷದ ಪ್ರೀತಿಯ ಬಳಿಕ 18 ವರ್ಷದ ಹುಡುಗಿಯನ್ನು ಮದುವೆಯಾದ 78ರ ಅಜ್ಜ!
ಶೌಕತ್, ಎಂಟು ಹೆಣ್ಣುಮಕ್ಕಳು ಮತ್ತು ಅವರ ಮಗ ಈಗಾಗಲೇ ಮದುವೆಯಾಗಿದ್ದರು. ಅವನ ಕೊನೆಯ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗುವ ಮೊದಲು ಅವನು ಮತ್ತೆ ಮದುವೆಯಾಗಬೇಕೆಂದು ಒತ್ತಾಯಿಸಿದರು. ಯಾಕೆಂದರೆ ಈ ಹಿಂದಿನ ನಾಲ್ಕು ಪತ್ನಿಯರೂ ಮೃತಪಟ್ಟಿದ್ದು. ಹೀಗಾಗಿ ಆತ ಒಂಟಿತನ (Alone) ಅನುಭವಿಸುತ್ತಾನೆ ಎಂದು ತಿಳಿಸಿದರು. ಹೀಗಾಗಿ ಐದನೇ ಬಾರಿ ವ್ಯಕ್ತ ಮರುಮದ್ವೆಯಾಗಿದ್ದಾನೆ.
ತಂದೆಗೆ ಐದನೇ ಮದ್ವೆ ಮಾಡಿಸಿದ ಹೆಣ್ಣು ಮಕ್ಕಳು
ಶೌಕತ್ ಆಲಿ ತಮ್ಮ ಒಂಬತ್ತನೇ ಮಗಳ ಮದುವೆಯನ್ನು ಏರ್ಪಡಿಸುತ್ತಿದ್ದಾಗ, ಅವನ ಇತರ ಹೆಣ್ಣುಮಕ್ಕಳು ತಮ್ಮ ತಂದೆಯನ್ನು ಅವನಿಗೆ ಸೂಕ್ತವಾದ ಜೋಡಿಯನ್ನು ಹುಡುಕಲು ನಿರ್ಧರಿಸಿದರು. ಆ ಹೆಣ್ಣು ಮಕ್ಕಳು ತಮ್ಮ ತಂದೆಗೆ ಹೊಸ ವಧುವನ್ನು (Bride) ಹುಡುಕಿದರು. ಈ ಮದುವೆಯ ಬಗ್ಗೆ ನಿಮಗೆ ಏನನಿಸುತ್ತದೆ ಎಂದು ಕೇಳಿದಾಗ, ಹೆಂಡತಿಯು (Wife) ತಾನು ಸಂತೋಷವಾಗಿದ್ದೇನೆ ಮತ್ತು ಅಸಾಮಾನ್ಯವಾಗಿ ದೊಡ್ಡ ಕುಟುಂಬದೊಂದಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.
ಮಾಜಿ ಗರ್ಲ್‌ಫ್ರೆಂಡ್ ಜೊತೆಗಿನ ಇಂಟಿಮೇಟ್ ಪೋಟೋ ಗಂಡ ಇನ್ನೂ ಇಟ್ಕೊಂಡಿದ್ದಾನೆ, ಏನ್ಮಾಡ್ಮಿ ?
ದೊಡ್ಡ ಕುಟುಂಬಕ್ಕೆ ಒಂದು ಹೊತ್ತಿಗೆ ಬೇಕು 100 ರೊಟ್ಟಿ
ಶೌಕತ್ ಹೇಳುವಂತೆ ಮನೆಯಲ್ಲಿ ಇಬ್ಬರು ಅವಿವಾಹಿತ ಹೆಣ್ಣು ಮಕ್ಕಳಿದ್ದಾರೆ. ಆದರೆ ಅವರ ಮದುವೆಯ ನಂತರ ಮನೆ ನಿರ್ಜನವಾದಾಗ ಏನಾಗುತ್ತದೆ. ಶೌಕತ್ ಅವರ ಹೆಣ್ಣುಮಕ್ಕಳು ಅದನ್ನೇ ಯೋಚಿಸಿ ತಂದೆಗೆ ವಧುವನ್ನು ಹುಡುಕಿ ಐದನೇ ಮದುವೆ ಮಾಡಿದ್ದಾರೆ. ವಾಸ್ತವವಾಗಿ, ಶೌಕತ್ ಅವರ ನಾಲ್ವರು ಪತ್ನಿಯರು ಸಾವನ್ನಪ್ಪಿದ್ದಾರೆ. ಅವರ ತಂದೆಯ (Father) ಒಂಟಿತನವನ್ನು ಹೋಗಲಾಡಿಸಲು ಹೆಣ್ಣುಮಕ್ಕಳು ಮತ್ತೊಮ್ಮೆ ಅವರಿಗೆ ಮದುವೆ ಮಾಡಿಸಿದ್ದಾರೆ.
ದೊಡ್ಡ ಕುಟುಂಬ: ವ್ಯಕ್ತಿಯ ಕುಟುಂಬದಲ್ಲಿ ಒಟ್ಟು 62 ಸದಸ್ಯರಿದ್ದಾರೆ. ಶೌಕತ್‌ನ ಹೊಸ ಹೆಂಡತಿಗೂ ಅವನ ಕುಟುಂಬದೊಂದಿಗೆ ಯಾವುದೇ ಸಮಸ್ಯೆ ಇಲ್ಲ. ಕುಟುಂಬಕ್ಕಾಗಿ ಮನೆಯಲ್ಲಿ 100 ರೊಟ್ಟಿಗಳನ್ನು ತಯಾರಿಸಲಾಗುತ್ತದೆ. ಹಂತಹಂತವಾಗಿ ಈ ವಾತಾವರಣಕ್ಕೆ ಹೊಂದಿಕೊಳ್ಳುತ್ತಾರೆ ಎನ್ನುತ್ತಾರೆ ಅವರ ಮಕ್ಕಳು. ಕಡ್ಡಾಯವಲ್ಲದಿದ್ದರೂ ಇಸ್ಲಾಂನಲ್ಲಿ ಬಹುಪತ್ನಿತ್ವವನ್ನು ಅನುಮತಿಸಲಾಗಿದೆ ಎಂಬುದನ್ನು ಗಮನಿಸಬೇಕು.