ಮದುವೆ ಖುಷಿಗೆ ಗಾಳೀಲಿ ಗುಂಡು ಹಾರಿಸಿ ಪರಾರಿಯಾದ ವಧು, ಕಕ್ಕಾಬಿಕ್ಕಿಯಾದ ವರ!
ಮದುವೆ ಅಂದ್ರೆ ಎಲ್ಲರ ಪಾಲಿಗೂ ಸ್ಪೆಷಲ್ ಡೇ. ಹೀಗಾಗಿಯೇ ಈ ದಿನ ವದು-ವರರು ತುಂಬಾ ಖುಷಿಯಾಗಿರ್ತಾರೆ. ಆದ್ರೆ ಇಲ್ಲೊಬ್ಬ ವಧು ಸಿಕ್ಕಾಪಟ್ಟೆ ಖುಷಿಯಾಗಿ ಅದೆಂಥಾ ಅವಾಂತರ ಮಾಡ್ಕೊಂಡಿದ್ದಾಳೆ ನೋಡಿ.
ನವದೆಹಲಿ: ಉತ್ತರ ಭಾರತದಲ್ಲಿ ವಿವಾಹ ಸೇರಿದಂತೆ ಸಂಭ್ರಮದ ಕ್ಷಣಗಳನ್ನು ಅನುಭವಿಸಲು ಗಾಳಿಯಲ್ಲಿ ಗುಂಡು ಹಾರಿಸುವುದು ಸಾಮಾನ್ಯ. ಆದರೆ ಹೀಗೆ ಸಂಭ್ರಮಪಡಲು ಹೋಗಿ ಇದೀಗ ನವ ವಧುವೊಬ್ಬಳು ಸಂಕಷ್ಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾಳೆ. ರಾಜ್ಯದ ಹತ್ರಾಸ್‌ನಲ್ಲಿ ಇತ್ತೀಚೆಗೆ ನಡೆದ ತನ್ನ ಮದುವೆ ವೇಳೆ ವಧು ಪಿಸ್ತೂಲ್‌ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ. ಪಕ್ಕದಲ್ಲಿ ವರ ಮಹಾಶಯ ಸುಮ್ಮನೆ ಕುಳಿತಿರುವಾಗ ಆಕೆಯ ಈ ಧಮ್ ನೋಡಿ ಜನರ ಅಚ್ಚರಿ ವ್ಯಕ್ತಪಡಿಸಿದ್ದನು. ಆದರೆ ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೊಲೀಸರು ಆಕೆಯ ವಿರುದ್ಧ ಪ್ರಕರಣ ದಾಖಲಿಸಿ, ಆಕೆಯನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಈ ವಿಷಯ ಗೊತ್ತಾಗುತ್ತಲೇ ಆಕೆ ಮನೆಯಿಂದ ಪರಾರಿಯಾಗಿದ್ದಾಳೆ.
ಗಾಳಿಯಲ್ಲಿ ಗುಂಡು ಹಾರಿಸಿದ ವಧು, ಕಕ್ಕಾಬಿಕ್ಕಿಯಾದ ವರ
ಮದುವೆ (Wedding) ಶಾಸ್ತ್ರ ನಡೆಯುತ್ತಿದ್ದ ಸಂದರ್ಭ, ವಧು-ವರರು ಪರಸ್ಪರ ಹಾರ ಬದಲಾಯಿಸಿಕೊಂಡ ನಂತರ ವಧು (Bride) ಗಾಳಿಯಲ್ಲಿ ಗುಂಡು ಹಾರಿಸಿದ್ದಾಳೆ ಎಂದು ತಿಳಿದುಬಂದಿದೆ. ಹತ್ರಾಸ್ ಜಿಲ್ಲೆಯ ಅತಿಥಿಗೃಹದಲ್ಲಿ ನಡೆದ ಈ ಘಟನೆಯ ವಿಡಿಯೋವನ್ನು ವಧುವಿನ ಸಂಬಂಧಿಯೊಬ್ಬರು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ (Social media) ಅಪ್ಲೋಡ್ ಮಾಡಿದ್ದಾರೆ. ವಧು ಪಿಸ್ತೂಲ್ ಹಿಡಿದುಕೊಂಡು ಗಾಳಿಯಲ್ಲಿ ಹಲವಾರು ಸುತ್ತು ಗುಂಡು ಹಾರಿಸುತ್ತಿರುವಾಗ ವರನು ತನ್ನ ಪಕ್ಕದಲ್ಲಿ ಕುಳಿತು ಗೊಂದಲಕ್ಕೊಳಗಾಗುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮದ್ವೆ ಮನೆಯಲ್ಲಿ ಡಿಜೆ ಅಬ್ಬರಕ್ಕೆ ಪೊಲೀಸರ ತಡೆ, ಸಿಟ್ಟಿಗೆದ್ದ ವಧು-ವರ ಏನ್ ಮಾಡಿದ್ರು ನೋಡಿ!
ಪರಾರಿಯಾದ ವಧುವಿನ ವಿರುದ್ಧ ದೂರು ದಾಖಲು
ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅಶೋಕ್ ಕುಮಾರ್ ಈ ಬಗ್ಗೆ ಮಾತನಾಡಿ, 'ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸಲಾಗುತ್ತಿದೆ. ಶುಕ್ರವಾರದಂದು ಮದುವೆಯ ಸಂದರ್ಭದಲ್ಲಿ ಬಂದೂಕಿನಿಂದ ಗಾಳಿಯಲ್ಲಿ ನಾಲ್ಕು ಬಾರಿ ಗುಂಡು ಹಾರಿಸಿದ ನಂತರ ವಧುವಿನ ವಿರುದ್ಧ ಸಂಭ್ರಮಾಚರಣೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ' ಎಂದು ಹೇಳಿದರು.
ಕೊತ್ವಾಲಿ ಹತ್ರಾಸ್ ಜಂಕ್ಷನ್‌ನ ಎಸ್‌ಎಚ್‌ಒ ಗಿರೀಶ್ ಚಂದ್ ಗೌತಮ್ ಮಾತನಾಡಿ, 'ಹತ್ರಾಸ್ ಜಂಕ್ಷನ್ ಪ್ರದೇಶದ ನಿವಾಸಿ ವಧು ರಾಗಿಣಿ ವಿರುದ್ಧ ಐಪಿಸಿ ಸೆಕ್ಷನ್ 25 (9) (ಸಂಭ್ರಮದ ಗುಂಡೇಟು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರು ಬಂಧನದ ಭೀತಿಯಿಂದ ಪರಾರಿಯಾಗಿದ್ದಾರೆ. ನಾವು ಆಕೆಗಾಗಿ ಹುಡುಕಾಟ ನಡೆಸುತ್ತಿದ್ದಾರೆ, ವಧುವಿಗೆ ಪಿಸ್ತೂಲ್ ಹಸ್ತಾಂತರಿಸಿದ ವ್ಯಕ್ತಿಯನ್ನು ಗುರುತಿಸಲು ನಾವು ಪ್ರಯತ್ನಿಸುತ್ತಿದ್ದೇವೆ' ಎಂದು ತಿಳಿಸಿದ್ದಾರೆ. ಮಾತ್ರವಲ್ಲ 'ಯಾರ ಹೆಸರಿನಲ್ಲಿ ಬಂದೂಕಿನ ಪರವಾನಗಿ ನೀಡಲಾಗಿದೆಯೋ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ' ಎಂದು ಮಾಹಿತಿ ನೀಡಿದ್ದಾರೆ.
Viral Video : ವರನ ಹೆಸರಿನ ಬದಲು ಈ ವಧು ಮೆಹಂದಿಯಲ್ಲಿ ಬರೆದುಕೊಂಡಿದ್ದೇ ಬೇರೆ!?
'ಯಾರಾದರೂ ದುಡುಕಿನ ಅಥವಾ ನಿರ್ಲಕ್ಷ್ಯದ ರೀತಿಯಲ್ಲಿ ಬಂದೂಕನ್ನು ಬಳಸಿದರೆ ಅಥವಾ ಮಾನವ ಜೀವ ಅಥವಾ ಇತರರ ಸುರಕ್ಷತೆಗೆ ಅಪಾಯವನ್ನುಂಟುಮಾಡುವ ಸಂಭ್ರಮಾಚರಣೆಯ ಗುಂಡೇಟಿನಲ್ಲಿ ತೊಡಗಿದರೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ. ಮಾತ್ರವಲ್ಲ ಇಂಥವರ ವಿರುದ್ಧ ಐಪಿಸಿ ಸೆಕ್ಷನ್ 25 (9)ರ ಪ್ರಕಾರ ಪ್ರಕರಣವನ್ನು ಸಹ ದಾಖಲಿಸಬಹುದು.
ಪೊಲೀಸ್ ಠಾಣೆಯಲ್ಲಿ ನವವಧುವಿನ ಹೈಡ್ರಾಮ, ಪ್ರಿಯಕರನ ಜೊತೆಯೂ ಮದ್ವೆ ಮಾಡಿ ಎಂದು ರಂಪಾಟ!