ಬ್ಯೂಟಿಪಾರ್ಲರ್‌ನಿಂದ ಲವರ್ ಜೊತೆ ಓಡಿ ಹೋದ ವಧು, ಮಂಟಪದಲ್ಲೇ ಕಾದು ಕುಳಿತು ಸುಸ್ತಾದ ವರ!
ಅಲ್ಲಾ..ಹೀಗೂ ಮಾಡ್ತಾರಾ ಅಂತ..ಬ್ಯೂಟಿಪಾರ್ಲರ್‌ಗೆ ರೆಡಿಯಾಗಲು ಹೋದ ವಧು ಅಲ್ಲಿಂದಲೇ ಪ್ರಿಯಕರನ ಜೊತೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಮದ್ವೆ ಅನ್ನೋದು ಒಂದು ಸುಂದರವಾದ ಬಾಂಧವ್ಯ. ಆದ್ರೆ ಇತ್ತೀಚಿನ ವರ್ಷಗಳಲ್ಲಿ ಈ ಪವಿತ್ರ ಸಂಬಂಧಕ್ಕೆ ಅರ್ಥವೇ ಇಲ್ಲದಂತಾಗಿದೆ. ವಿಚ್ಛೇದನ, ಅನೈತಿಕ ಸಂಬಂಧದಿಂದ ದಾಂಪತ್ಯ ಅನ್ನೋದು ಅರ್ಥಹೀನವಾಗುತ್ತಿದೆ. ಲವ್ ಮಾಡಿ ಅರ್ಧದಲ್ಲೇ ಕೈ ಬಿಡುವುದು, ಎಂಗೇಜ್‌ಮೆಂಟ್ ಮಾಡಿ ಕ್ಯಾನ್ಸಲ್ ಮಾಡಿಕೊಳ್ಳುವುದು, ಮದುವೆ ಮನೆಯಲ್ಲೇ ಈ ಹುಡುಗ ನನಗೆ ಬೇಡ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹೀಗಾಗಿ ಇವತ್ತಿನ ದಿನಗಳಲ್ಲಿ ಮದುವೆಯ ಮೊದಲು ಅದೆಷ್ಟು ತಯಾರಿ ನಡೆದರೂ, ಕಾರ್ಯಗಳು ನಡೆದರೂ ತಾಳಿ ಕಟ್ಟುವ ವರೆಗೆ ಮದುವೆಯಾಯ್ತು ಎಂದು ಹೇಳುವಂತೆಯೇ ಇಲ್ಲ.
ಹಾಗೆಯೇ ಮದುವೆಗೆ ಸಿದ್ಧವಾಗಲು ಬ್ಯೂಟಿಪಾರ್ಲರ್‌ಗೆ ಹೋದ ವಧು ಅಲ್ಲಿಂದಲೇ ಪ್ರಿಯಕರನೊಂದಿಗೆ ಓಡಿ ಹೋಗಿರುವ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ. ಮದುವೆಯ ದಿನ ಸುಂದರವಾಗಿ ಕಾಣಬೇಕೆಂದು ಬ್ಯೂಟಿಪಾರ್ಲರ್‌ಗೆ ಹೋದ ಮುಸ್ಲಿಂ ವಧು ಅಲ್ಲಿಂದಲೇ ಲವರ್ ಜೊತೆ ಓಡಿಹೋಗಿದ್ದಾಳೆ. ವರನು ನಿಕಾಖ್ ಸಮಾರಂಭದಲ್ಲಿ ವಧುವಿನ ಆಗಮನಕ್ಕಾಗಿ ಕಾಯುತ್ತಿದ್ದನು. ಖಜ್ರಾನಾದಲ್ಲಿ ನಡೆದ ನಿಕಾಹ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ವಧುವಿಗಾಗಿ ಗಂಟೆಗಟ್ಟಲೆ ದಿಬ್ಬಣದಲ್ಲಿ ಕಾದ ಜನರು ತಾಳ್ಮೆ ಕಳೆದುಕೊಂಡು ಗಲಾಟೆ ಮಾಡಲು ಆರಂಭಿಸಿದ ನಂತರ ವಿಷಯ ಬೆಳಕಿಗೆ ಬಂದಿದೆ.
ಯಪ್ಪಾ..ಹೀಗೂ ಮಾಡ್ತಾರಾ, ಒಬ್ನೇ ಗಂಡ ಬೋರಿಂಗ್ ಅಂತೆ, ಪತಿಯನ್ನೇ ಎಕ್ಸ್‌ಚೇಂಜ್ ಮಾಡ್ಕೊಂಡ ಹೆಂಡ್ತೀರು!
ಬ್ಯೂಟಿಪಾರ್ಲರ್‌ಗೆ ಹೋದ ವಧು (Bride) ಎಷ್ಟು ಹೊತ್ತಾದರೂ ಮನೆಗೆ ಮರಳಿ ಬರಲ್ಲಿಲ್ಲ. ಹೀಗಾಗಿ ವಧುವಿನ ಪೋಷಕರು ಆಕೆ ಪಾರ್ಲರ್‌ಗೆ ಯಾರೊಂದಿಗೆ ಹೋಗಿದ್ದಳು ಎಂದು ಆಕೆಯ ಸ್ನೇಹಿತರನ್ನು (Friends) ವಿಚಾರಿಸಿದರು. ನಂತರ, 19 ವರ್ಷದ ಯುವತಿ ತನ್ನ ಪ್ರಿಯಕರ ಸಾಲಮನ್‌ನೊಂದಿಗೆ ಹರೂನ್ ಕಾಲೋನಿಯ ಮೇಕಪ್ ಪಾರ್ಲರ್‌ನಿಂದ ಓಡಿಹೋದಳು ಎಂದು ತಿಳಿದುಬಂದಿದೆ. ಬ್ಯೂಟಿಪಾರ್ಲರ್‌ನಿಂದ ಓಡಿ ಹೋಗಿ ಸಾಲಮನ್ ಹಾಗೂ ವಧು ಮದುವೆ (Marriage)ಯಾಗಲು ನಿರ್ಧರಿಸಿದ್ದರು. ವಧುವಿನ ತಾಯಿ ಸುದ್ದಿ ಕೇಳಿ ಮೂರ್ಛೆ ಹೋದರು.
ವಧುವಿನ ತಂದೆ ಮಗಳು ಓಡಿಹೋಗಿರುವ ಬಗ್ಗೆ ದೂರು (Complaint) ನೀಡಲು ಪೊಲೀಸ್ ಠಾಣೆಗೆ ಹೋದರು ಎಂದು ತಿಳಿದುಬಂದಿದೆ. ಇದೆಲ್ಲದರ ಮಧ್ಯೆ ಆಕೆ ಅದೇ ಕಾಲೋನಿಯಲ್ಲಿ ಯುವಕನೊಬ್ಬನ ಜತೆ ಅಕ್ರಮ ಸಂಬಂಧ (Extramarital affair) ಹೊಂದಿದ್ದಳು ಎಂಬುದು ಬಯಲಾಗಿದೆ. ವರ ಕೂಡ ವಧುವಿನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾನೆ ಎಂದು ತಿಳಿದುಬಂದಿದೆ.
ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!
ಮದ್ವೆಯಾಗಿ ಹನಿಮೂನ್‌ಗೆ ಹೋದ ಸಂದರ್ಭದಲ್ಲಿ ಗಂಡನಿಗೆ (Groom) ಮತ್ತು ಬರುವ ಔಷಧಿ (Medicine) ನೀಡಿ ಹೆಂಡತಿ ಪ್ರಿಯಕರನ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ. ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢದ ಗುರುದ್ವಾರ ರಸ್ತೆಯ ನಿವಾಸಿ ಸತ್ಯಂ ಎಂಬವರು ಆಗ್ರಾ ಕ್ಯಾಂಟ್ ನಿವಾಸಿ ದೀಪಾಸಿ ಅವರನ್ನು ನವೆಂಬರ್‌ನಲ್ಲಿ ವಿವಾಹವಾಗಿದ್ದರು. ದಂಪತಿಗಳು (Couple) ಕೆಲ ವಾರಗಳ ಜೊತೆಯಾಗಿ ಖುಷಿಯಾಗಿಯೇ ಇದ್ದರು. ಮದುವೆಯಾದ ಹೊಸತರಲ್ಲಿ ನೆಂಟರಿಷ್ಟರ ಮನೆಗೆ ಜೊತೆಯಾಗಿಯೇ ಹೋಗಿ ಬಂದಿದ್ದರು. ಆ ನಂತರ ನವವಿವಾಹಿತ ದಂಪತಿಗಳು ಡಿಸೆಂಬರ್ ನಲ್ಲಿ ಹನಿಮೂನ್‌ಗೆ ಬುಕ್ ಮಾಡಿದ್ದರು.
ನಮ್ ಹುಡ್ಗೀನಾ ಬಿಡ್ತೀವಾ..ಮನೆಗೆ ನುಗ್ಗಿ ತಾಯಿ ಎದುರೇ ಗರ್ಲ್‌ಫ್ರೆಂಡ್‌ನ್ನು ಕರ್ಕೊಂಡು ಹೋದ ಹುಡ್ಗ!
ಸತ್ಯಂ ಡಿಸೆಂಬರ್ 8, 2022 ರಂದು ಮಧುಚಂದ್ರಕ್ಕಾಗಿ (Honeymoon) ಉತ್ತರಾಖಂಡಕ್ಕೆ ತಮ್ಮ ಹೆಂಡತಿ (Wife)ಯೊಂದಿಗೆ ತೆರಳಿದ್ದರು. ದಂಪತಿಗಳು ತಮ್ಮ ಹನಿಮೂನ್‌ಗಾಗಿ ಡೆಹ್ರಾಡೂನ್‌ಗೆ ತೆರಳಿದರು. ಇಲ್ಲಿಂದ ಮಸ್ಸೂರಿಗೆ ಹೋಗಿ ಹೃಷಿಕೇಶ ತಲುಪಿದರು. ನವವಿವಾಹಿತ ದಂಪತಿಗಳು ಡಿಸೆಂಬರ್ 9ರಂದು ಹೃಷಿಕೇಶಕ್ಕೆ ಹೋಗಿ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದರು. ಈ ನಡುವೆ ಹೋಟೆಲ್ ನಲ್ಲಿ ಚಹಾ ಕುಡಿದ ಬಳಿಕ ಸತ್ಯಂ ಪ್ರಜ್ಞೆ ಕಳೆದುಕೊಂಡ ಎನ್ನಲಾಗಿದೆ. ಆಗ ದೀಪಾಸಿ ತನ್ನ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ ಬ್ಯಾಗ್ ಮತ್ತು ಹಣದೊಂದಿಗೆ ಹೋಟೆಲ್ ನಿಂದ ಓಡಿ ಹೋಗಿದ್ದಾಳೆ.