ಕಾನ್ಪುರ್ ದೇಹತ್‌ನ ರಾಜ್‌ಪುರ್ ಪಟ್ಟಣದಲ್ಲಿ ಮದುವೆ ಮಂಟಪದಲ್ಲೇ ವಧು ತನ್ನ ಬಾವನೊಂದಿಗೆ ಪರಾರಿಯಾದ ಘಟನೆ ನಡೆದಿದೆ.
ಉತ್ತರ ಪ್ರದೇಶದ ಭೋಗ್ನಿಪುರ್ ತಹಸಿಲ್‌ನ ಡಿಚ್‌ಕಿ ಗ್ರಾಮದ ರಾಜೇಶ್ ಕಟಿಯಾರ್ ತಮ್ಮ ಮಗಳು ಕೀರ್ತಿಯನ್ನು ಸಿಕಂದ್ರಾ ತಹಸಿಲ್‌ನ ಕೊರ್ವಾ ಗ್ರಾಮದ ಡಾ. ರಾಹುಲ್ ಕಟಿಯಾರ್‌ಗೆ ಮದುವೆ ಮಾಡಲು ನಿಶ್ಚಯಿಸಿದ್ದರು. ವರನ ತಂದೆ ರಮೇಶ್ ಕಟಿಯಾರ್ ಮಾತನಾಡಿ, ಫೆಬ್ರವರಿ 7 ರಂದು ಮುಗಿನ್ಸಾಪುರ್‌ನಲ್ಲಿರುವ ತಮ್ಮ ಮನೆಯಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿತು. ಈ ಸಂದರ್ಭದಲ್ಲಿ ವಧುವಿನ ಕಡೆಯವರು 9 ಲಕ್ಷ ರೂಪಾಯಿ ನಗದು ಮತ್ತು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದರು ಎಂದು ತಿಳಿಸಿದರು. ರಾತ್ರಿಯಿಡೀ ಸಂಭ್ರಮ ಮುಗಿದು, ಬೆಳಿಗ್ಗೆ ಮದುವೆ ಸಮಯ ಬಂದಾಗ, ವಧುವಿಗೆ ಹಠಾತ್ ಅನಾರೋಗ್ಯ ಕಾಣಿಸಿಕೊಂಡಿದೆ ಮತ್ತು ಈ ಮದುವೆಯನ್ನು ನಿಲ್ಲಿಸುತ್ತಿದ್ದೇವೆ ಎಂದು ಹೇಳಿದರು. ಮೊದಲಿಗೆ ವರನ ಕಡೆಯವರು ಇದನ್ನು ತಾತ್ಕಾಲಿಕ ಮುಂದೂಡಿಕೆ ಎಂದು ಭಾವಿಸಿದರು, ಆದರೆ ಸ್ವಲ್ಪ ಸಮಯದ ನಂತರ ವಧುವಿನ ಕಡೆಯವರು ವಧು ಇನ್ನು ಮದುವೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ವಧುವಿನ ನಿರ್ಧಾರದಿಂದ ವರನಿಗೆ ಆಘಾತ
ಈ ನಿರ್ಧಾರದಿಂದ ವರ ಮತ್ತು ಅವರ ಕುಟುಂಬಕ್ಕೆ ತೀವ್ರ ಆಘಾತವಾಯಿತು. ಅವರು ಎಷ್ಟೇ ಮನವೊಲಿಸಿದರೂ ವಧು ತನ್ನ ನಿರ್ಧಾರವನ್ನು ಬದಲಾಯಿಸಲಿಲ್ಲ. ಕೊನೆಗೆ, ವರನ ಕಡೆಯವರು ಮದುವೆ ಪೂರ್ಣಗೊಳ್ಳದೆ ವಾಪಸ್ ಹೋದರು. ಈ ಘಟನೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚರ್ಚೆಯ ವಿಷಯವಾಯಿತು, ಎರಡೂ ಕುಟುಂಬಗಳ ನಡುವೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು. ಜಗಳ ಆರಂಭವಾಯಿತು.
ಈ ಹಿಂದೆಯೇ ಮದುವೆಯಾಗಿತ್ತು
ಅಸಲಿಗೆ ಏನಾಯಿತೆಂದರೆ.. ಫೆಬ್ರವರಿ 8 ರಂದು ನೀರಜಾ ಗಾರ್ಡನ್ ರಾಜ್‌ಪುರ್‌ನಲ್ಲಿ ಬಾರಾತ್ ಅದ್ದೂರಿಯಾಗಿ ನಡೆಯಿತು. ವರನಿಗೆ ಅದ್ದೂರಿ ಸ್ವಾಗತ ದೊರಕಿತು. ರಾತ್ರಿ 12 ಗಂಟೆಗೆ ಜೈಮಾಲ ಕಾರ್ಯಕ್ರಮ ನಡೆಯಿತು. ಸುಮಾರು 17 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು ಮತ್ತು ಇತರ ಉಡುಗೊರೆಗಳನ್ನು ನೀಡಲಾಯಿತು. ನಂತರ ತಾಳಿ ಕಟ್ಟುವ ಮದುವೆಗೆ ಸ್ವಲ್ಪ ಸಮಯ ಉಳಿದಿತ್ತು. ಈ ಮಧ್ಯೆ ವಧು ಕಾಣೆಯಾದಳು. ತೀವ್ರ ವಿಳಂಬವಾದಾಗ ವಧುವಿನ ಕಡೆಯವರು ಮೊದಲು ಸ್ವಲ್ಪ ಸಮಯ ಬೇಕು, ನಂತರ ಈ ಮದುವೆ ನಡೆಯುವುದಿಲ್ಲ ಎಂದು ಹೇಳಿದರು. ವಧು ತನ್ನ ಬಾವನೊಂದಿಗೆ ನ್ಯಾಯಾಲಯದಲ್ಲಿ ಮದುವೆಯಾಗಿದ್ದಾಗಿ ಗುಟ್ಟಾಗಿ ತಿಳಿಸಿದರು. ಇದನ್ನು ಕೇಳಿದವರೆಲ್ಲರೂ ಆಘಾತಕ್ಕೊಳಗಾದರು.
