Asianet Suvarna News Asianet Suvarna News

ಮಟನ್ ಬೇಕೇ ಬೇಕು, ಇಲ್ಲಾಂದ್ರೆ ತಾಳಿ ಕಟ್ಟಲ್ಲ; ಮದ್ವೆ ಮನೆಯಲ್ಲಿ ವರನ ಕುಟುಂಬದಿಂದ ಗಲಾಟೆ!

ಭಾರತೀಯ ಮದುವೆ ಮನೆಗಳಲ್ಲಿ ಮದ್ವೆ ಊಟಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಸಂಬಂಧಿಕರು, ಊರವರು, ಫ್ರೆಂಡ್ಸ್‌ನ್ನು ಕರೆಸಿ ಮಾಡೋ ಆತಿಥ್ಯ, ಅದ್ಧೂರಿಯಾಗಿ ಪರ್ಫೆಕ್ಟ್ ಆಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದ್ರೆ ಇಲ್ಲೊಂದು ಮದ್ವೆ ಮನೆಯಲ್ಲಿ ಊಟದ ವಿಚಾರಕ್ಕೆ ಗಲಾಟೆ ನಡೆದು ಮದ್ವೆಯೇ ನಿಂತು ಹೋಗಿದೆ.

Bride cancels marriage as grooms side demand mutton in Odishas Sambalpur Vin
Author
First Published Jun 15, 2023, 12:10 PM IST

ಇತ್ತೀಚಿನ ವರ್ಷಗಳಲ್ಲಿ ಸಣ್ಣಪುಟ್ಟ ಕಾರಣಕ್ಕೆ ವಧು-ವರರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ಳೋದು ಸಾಮಾನ್ಯ. ಮದ್ವೆ ಊಟ ಚೆನ್ನಾಗಿಲ್ಲಾಂತ, ಬ್ಯಾಂಡ್ ಕರೆಸಿಲ್ಲಾಂತ, ಹುಡುಗನ ಕಡೆಯವರು ಬರೋಕೆ ಕಾರು ಕಳಿಸಿಕೊಟ್ಟಿಲ್ಲಾಂತ ಹೀಗೆ ನಾನಾ ಕಾರಣಕ್ಕೆ ಹುಡುಗರು ಮದ್ವೆ ಕ್ಯಾನ್ಸಲ್ ಮಾಡಿಕೊಳ್ತಾರೆ. ಇತ್ತ ಹುಡುಗಿಯರು ಹುಡುಗನ ಮನೆಯಿಂದ ಕೊಟ್ಟ ಸೀರೆ ಚೆನ್ನಾಗಿಲ್ಲ, ಹುಡುಗನ ಮನೆ ಚಿಕ್ಕದು ಅನ್ನೋ ಕಾರಣಕ್ಕೆಲ್ಲಾ ಮದ್ವೆ ಬೇಡ ಅನ್ನುತ್ತಾರೆ. ಹಲವು ಜೋಡಿಗಳು ಮಂಟಪದಲ್ಲೇ ಮದುವೆ ಕ್ಯಾನ್ಸಲ್ ಮಾಡಿಕೊಂಡ ಹಲವಾರು ಘಟನೆಗಳು ನಡೆದಿವೆ. ಹಾಗೆಯೇ ಒಡಿಶಾದ ಸಂಬಲ್ಪುರ ಜಿಲ್ಲೆಯ ಧಾಮಾ ಪ್ರದೇಶದಲ್ಲಿ ನಡೆಯುತ್ತಿದ್ದ ಮದ್ವೆ ಮನೆಯಲ್ಲಿ ಊಟ ಚೆನ್ನಾಗಿಲ್ಲಾಂತ ಗಲಾಟೆ ನಡೆದು ಮದ್ವೆ ಕ್ಯಾನ್ಸಲ್ ಆಗಿದೆ.

ಮದುವೆ (Marriage)ಯಾಗಲು ತೆರಳಿದ್ದ ವರ, ಹಾಗೂ ಆತನ ಸಂಬಂಧಿಕರು ಊಟದ ವಿಚಾರಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಮಟನ್‌ ಊಟ ಬಡ್ಸಿಲ್ಲ ಅಂತಾ ವರನ (Groom) ಕಡೆಯವರು ಜಗಳವಾಡಿದದ್ದು, ಪರಿಣಾಮವಾಗಿ ವಧು (Bride) ಮದುವೆಯನ್ನೇ ಕ್ಯಾನ್ಸಲ್ ಮಾಡಿದ್ದಾಳೆ. ಸಂಬಲ್ಪುರ ಜಿಲ್ಲೆಯ ಧಾಮಾ ಪ್ರದೇಶದಲ್ಲಿ ವಧುವಿನ ಮನೆಯಲ್ಲಿ ಈ ವಿಲಕ್ಷಣ ಘಟನೆ ವರದಿಯಾಗಿದೆ.

ದಿಬ್ಬಣ ಹೋಗೋ ರಸ್ತೆಯಲ್ಲಿ ಲೈಟೇ ಇಲ್ಲ, ಮದ್ವೆ ಕ್ಯಾನ್ಸಲ್‌ ಮಾಡ್ಕೊಂಡು ಹೊರಟೇ ಹೋದ ವರ!

ಮಟನ್ ಕರಿ ಸಿಕ್ಕಿಲ್ಲ ಅಂತ ಗಲಾಟೆ, ವರನ ಸಂಬಂಧಿಕರ ಕಾಲಿಗೆ ಬಿದ್ದ ವಧುವಿನ ತಂದೆ
ಸಂಬಲ್‌ಪುರದ ಹುಡುಗಿಗೆ, ಬ್ಯಾಂಕ್‌ನಲ್ಲಿ ಕೆಲಸ ಮಾಡುವ  ಸುಂದರ್‌ಗಢದ ಯುವಕನೊಂದಿಗೆ ಮದುವೆ ನಿಶ್ವಯವಾಗಿತ್ತು. ನಿಗದಿತ ದಿನದಂದು ಮದುವೆ ನಡೆಯುತ್ತಿತ್ತು. ವರ, ತನ್ನ ಮನೆಯವರೊಂದಿಗೆ ಮೆರವಣಿಗೆಯಲ್ಲಿ ಸಂಬಲ್‌ಪುರದ ಐಂತಪಾಲಿಯಲ್ಲಿರುವ ವಧುವಿನ ಮನೆಗೆ ತಲುಪಿದ್ದಾನೆ. ಎಲ್ಲಾ ಶಾಸ್ತ್ರಗಳು ಮುಗಿದು ಊಟದ ಹೊತ್ತಿಗೆ ವರನ ಕಡೆಯವರು ಮಟನ್ ಕರಿ ಸಿಕ್ಕಿಲ್ಲ ಅಂತ ಗಲಾಟೆ (Quarrel) ಮಾಡಿದ್ದಾರೆ. ವರ ಸಹ ಮಟನ್ ಊಟ ಸಿಕ್ಕದ ಕಾರಣ ಹುಡುಗಿಯನ್ನು ಮದ್ವೆಯಾಗಲ್ಲ ಎಂದು ಹಠ ಹಿಡಿದಿದ್ದಾನೆ. 

ಆಗಲೇ ತಡರಾತ್ರಿ ಆಗಿದ್ದರಿಂದ ವಧುವಿನ ಮನೆಯವರು ಮಟನ್​ ವ್ಯವಸ್ಥೆ ಮಾಡಲು ಸಾಧ್ಯವಾಗಲಿಲ್ಲ. ಆದರೆ, ಹುಡುಗನ ಕಡೆಯವರಿಗೆ ಮಟನ್​ ಕೊರತೆಯೇ ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿತು. ಕೂಡಲೇ ಮಟನ್‌ ಊಟ ತರಿಸುವಂತೆ ಒತ್ತಾಯಿಸಿದರು. 'ನನ್ನ ತಂದೆ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿ ವಿಚಾರವನ್ನು ಬಗೆಹರಿಸುವಂತೆ ಮನವಿ (Request) ಮಾಡಿದರು. ಆದರೆ ಅವರು ಮಾತ್ರ ಒಪ್ಪಲೇ ಇಲ್ಲ. ಇದರಿಂದ ನನಗೆ ಬೇಜಾರಾಗಿದ್ದು ನಾನು ಮದುವೆಯಾಗುವುದಿಲ್ಲ, ಎಂದು ಹೇಳಿದೆ' ಎಂದು ವಧು ವಿವರಿಸಿದರು. 

ವರನ ಕುಟುಂಬ ಕಡಿಮೆ ಚಿನ್ನಾಭರಣ ಕೊಟ್ಟಿದ್ದಕ್ಕೆ ಮದ್ವೆ ಕ್ಯಾನ್ಸಲ್ ಮಾಡಿದ ವಧು!

ಸಿಟ್ಟಿಗೆದ್ದು ಮದುವೆ ಕ್ಯಾನ್ಸಲ್ ಮಾಡಿದ ವಧು
ಘಟನೆ ಕುರಿತು ಮಾತನಾಡಿದ ವಧು, 'ವರನ ಕಡೆಯವರು ನನ್ನ ತಂದೆ ವ್ಯವಸ್ಥೆ ಸರಿಯಾಗಿ ಮಾಡಿಲ್ಲ ಎಂದು ಜಗಳಕ್ಕಿಳಿದರು. ನನ್ನ ಮನೆಯವರು ಊಟಕ್ಕೆ ಕೋಳಿ ಮತ್ತು ಮೀನು ಮಟನ್‌ ಕೂಡ ನೀಡಿದ್ದಾರೆ. ಆದರೆ, ಕೊನೆಯ ಆರು ಅಥವಾ ಏಳು ಜನರು ತಿನ್ನುವ ಮೊದಲು ಅದು ಮುಗಿದಿದೆ. ಅದು ಅನಿರೀಕ್ಷಿತವಾಗಿತ್ತು. ಆಗಲೇ ತಡರಾತ್ರಿ ಆಗಿದ್ದರಿಂದ ವ್ಯವಸ್ಥೆ ಮಾಡಲು ಸಾಧ್ಯವಾಗಲ್ಲಿಲ್ಲ. ಆದರೆ ಇಷ್ಟಕ್ಕೇ ಎಲ್ಲರೂ ಗಲಾಟೆ ಮಾಡಲು ಶುರು ಮಾಡಿದರು' ಎಂದು ತಿಳಿಸಿದ್ದಾರೆ.

'ನನ್ನ ಪೋಷಕರು ಮತ್ತು ಇತರ ಕುಟುಂಬ ಸದಸ್ಯರು ಅವರನ್ನು ಸುಮ್ಮನಿರಲು ಒತ್ತಾಯಿಸಿದರು ಮತ್ತು ಬದಲಿಗೆ ಕೋಳಿ ಮತ್ತು ಮೀನು ನೀಡುವ ಮೂಲಕ ಅವರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು, ಆದರೆ ಅವರು ಮಟನ್‌ಗಾಗಿ ನಮ್ಮೊಂದಿಗೆ ಅನುಚಿತವಾಗಿ ವರ್ತಿಸಲು ಪ್ರಾರಂಭಿಸಿದರು. ನಾನು ಅವರನ್ನು ಮದುವೆಯಾಗದೆ ಹಿಂತಿರುಗುವಂತೆ ಹೇಳಿದೆ' ಎಂದು ವಧು ತಿಳಿಸಿದ್ದಾರೆ.

ಮತ್ತೊಂದೆಡೆ, ವರನ ಕಡೆಯವರು, ವಧುವಿನ ಕಡೆಯವರು ಮಾಡಿರುವ ಆರೋಪ ಸುಳ್ಳು ಎಂದು ಹೇಳಿದ್ದಾರೆ. ಮದ್ವೆ ಮನೆಯಲ್ಲಿ '200 ಜನರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ವಧುವಿನ ಕಡೆಯವರು ತಿಳಿಸಿದ್ದರು. ಮೆರವಣಿಗೆಯಲ್ಲಿ ಸುಮಾರು 150 ಜನರಿದ್ದರು. ಆದರೆ ಅವರಲ್ಲಿ ಹಲವರಿಗೆ ಊಟ ಸಿಗಲಿಲ್ಲ. ಈ ವಿಷಯವನ್ನು ನನ್ನ ತಂದೆ, ವಧುವಿನ ಚಿಕ್ಕಪ್ಪನಿಗೆ ತಿಳಿಸಿದಾಗ ಅವರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿದರು. ಮದುವೆಯ ರದ್ದತಿಗೆ ಮಟನ್ ಕಾರಣವಲ್ಲ' ಎಂದು ವರ ಹೇಳಿದರು. ರಾತ್ರಿ 12ರಿಂದ ಬೆಳಗಿನ ಜಾವ 4ರವರೆಗೆ ಮಾತುಕತೆ ನಡೆಸಲಾಗಿದ್ದು. ಮದುವೆಗೆ ಹಲವು ಬಾರಿ ಮನವಿ ಮಾಡಿದರೂ ನಿರಾಕರಿಸಿದರು ಎಂದು ವರನ ತಂದೆ ತಿಳಿಸಿದ್ದಾರೆ.

Follow Us:
Download App:
  • android
  • ios