ಮ್ಯಾಟ್ರಿಮೋನಿಯಲ್ಲಿ ಈಕೆ ಪ್ರೊಫೈಲ್ ಹಾಕಿದ್ದಾಳೆ. ಈಕೆಯ ಪ್ರೊಫೈಲ್ ನೋಡಿ ಮಾತುಕತೆ ನಡೆಸಿದ ಯುವಕರಿಗೆ ತಲೆ ಸುತ್ತು ಬಂದಿದೆ. ಕಾರಣ ಈಕೆ ನೀಡಿದ 18 ಗುಣಗಳ ಪಟ್ಟಿ. ಅಷ್ಟಕ್ಕೂ ಈಕೆಯ ಮದುವೆಯಾಗಲು ಏನೆಲ್ಲಾ ಗುಣಗಳಿರಬೇಕು ಗೊತ್ತಾ? ಈ ಕ್ವಾಲಿಟಿ ಇದ್ರೆ ನಿಮ್ಮದಾಗಿಸುವ ಅವಕಾಶವಿದೆ.

ಈಗಿನ ಕಾಲದಲ್ಲಿ ಮದುವೆಯಾಗಿ ಸಂಸಾರ ನಡೆಸುವುದು ಸುಲಭದ ಮಾತಲ್ಲ ಅಂತಾರೆ. ಇದಕ್ಕೆ ಹಲವು ಕಾರಣಗಳನ್ನು ಕೊಡುತ್ತಾರೆ. ಝೆನ್ಜಿ ಜನರೇಶನ್ ಮದುವೆಯಿಂದ ಕೊಂಚ ದೂರ ಅನ್ನೋ ಮಾತಿದೆ. ರಿಲೇಶನ್‌ಶಿಪ್, ಲಿವಿಂಗ್ ಟುಗೆದರ್ ಸೇರಿದಂತೆ ಹಲವು ರೀತಿಯ ಸಂಬಂಧದಕ್ಕೆ ತೃಪ್ತಿ ಕಂಡುಕೊಳ್ಳುತ್ತಾರೆ. ಇದರ ನಡುವೆ ಸಂಸ್ಕಾರಯುತವಾಗಿ ಮದುವೆಯಾಗಿ ಸಂಸಾರ ನಡೆಸಲು ಹಲವು ಅಡೆ ತಡೆ ಎದುರಾಗುವುದು ಸಾಮಾನ್ಯ. ಇನ್ನು ಹುಡುಗಿ ಸಿಗುತ್ತಿಲ್ಲ, ಕಂಕಣ ಭಾಗ್ಯ ಕೂಡಿ ಬರುತ್ತಿಲ್ಲ, ಜಾತಕ ಸೇರುತ್ತಿಲ್ಲ ಅನ್ನೋ ಕುಂದು ಕೊರತೆ ಇದ್ದೆ ಇದೆ. ಇದೀಗ ಮದುವೆಯಾಗಲು ಹೆಣ್ಣು ಹುಡುಕುತ್ತಿರುವವರಿಗೆ ಇಲ್ಲೊಂದು ಪ್ರೊಫೈಲ್ ಇದೆ. ಈಕೆಯ ಮದುವೆಯಾಗಲು 18 ಗುಣ ಇರಬೇಕು. ಈ ಗಣಗಳ ಪಟ್ಟಿಯನ್ನು ನೀಡಿದ್ದಾಳೆ. ಈ ಪಟ್ಟಿ ನೋಡಿದ ಹಲವರು ಸುಸ್ತಾಗಿದ್ದಾರೆ. 

ರೆಡ್ಡಿಟ್ ಬಳಕೆದಾರನೊಬ್ಬ ಈ ಯುವತಿಯ ಪ್ರೊಫೈಲ್ ನೋಡಿದ್ದಾಳೆ. ಮ್ಯಾಟ್ರಿಮೋನಿ ರೀತಿಯ ಯಾವುದೇ ಸೈಟ್‌ನಲ್ಲಿ ಈಕೆಯ ಪ್ರೊಫೈಲ್ ನೋಡಿದ್ದಾನೆ. ಮದುವೆಯಾಗಲು ಇಚ್ಚಿಸುವ ಹುಡುಗನಲ್ಲಿ ನನ್ನ ಕೆಲ ಪುಟ್ಟ ಪುಟ್ಟ ಆಸೆ,, ಗುಣ ಇರಬೇಕು ಅನ್ನೋ ಬೇಡಿಕೆಗಳಿವೆ ಎಂದು ಹೇಳಿಕೊಂಡಿದ್ದಾರೆ. ಹೀಗೆ ರೆಡ್ಡಿಟ್ ಬಳಕೆದಾರ, ಎಲ್ಲಾ ಹುಡುಗಿಯರಿಗೂ ಆಸೆಗಳು, ಆಕಾಂಕ್ಷೆಗಳು, ಬೇಡಿಕೆಗಳು ಇದ್ದೇ ಇರುತ್ತೆ. ಈ ಪೈಕಿ ಈಕೆಯ ಪುಟ್ಟ ಕೇಳುತ್ತಿರುವ ಗುಣ ಏನು ಎಂದು ಮೆಸೇಜ್ ಮಾಡಿದ್ದಾನೆ.

30 ಲಕ್ಷ ರೂ ವೇತನ,ಪೋಷಕರಿಂದ ದೂರ: ಭಾವಿ ಪತಿಗೆ ಇರಬೇಕಾದ ಅರ್ಹತೆ ಲಿಸ್ಟ್ ನೀಡಿದ ಮಹಿಳೆ!

ಚೆಕ್‌ಲಿಸ್ಟ್ ಏನು ಅನ್ನೋದು ನೋಡಬೇಕಾ ಎಂದು ಆಕೆ ಮೆಸೇಜ್ ಮಾಡಿದ್ದಾಳೆ. ಹೌದು, ನೋಡಬೇಕು ಎಂದಿದ್ದಾನೆ. ಬಳಿಕ ಆಕೆ ದೊಡ್ಡ ಪಟ್ಟಿಯನ್ನೇ ಕಳುಹಿಸಿದ್ದಾಳೆ. ಈ ಪಟ್ಟಿಯಲ್ಲಿ 18 ಗುಣಗಳ ಬೇಡಿಕೆಗಳಿವೆ. ಈ ಪಟ್ಟಿಯ 2ನೇ ಗುಣದ ಬೇಡಿಕೆಯಿಂದಲೇ ಈತನ ಈ ಸಂಬಂಧ ಕ್ಲೋಸ್ ಎಂದು ಅರಿವಾಗಿದೆ. ಅಷ್ಟಕ್ಕೂ ಈಕೆ ಹೇಳಿದ 18 ಗುಣ ಯಾವುದು ಗೊತ್ತಾ?

ನನ್ನನ್ನು ಅತ್ಯಂತ ಹೆಚ್ಚು ಅಂದರೆ ಡೀಪ್ ಆಗಿ ಪ್ರೀತಿಸಬೇಕು, ಪ್ರೀತಿ ವಿಚಾರದಲ್ಲೇ ಗಂಡನಿಗೆ ನಾನೇ ಮೊದಲಿರಬೇಕು. ನಾನೇ ಮೊದಲ ಆದ್ಯತೆಯಾಗಿರಬೇಕು. ಸಂಬಳ 300ಕೆ ಪ್ಲಸ್ ಅಂದರೆ ವಾರ್ಷಿಕ ವೇತನ 2.5 ಕೋಟಿ ರೂಪಾಯಿ ಇರಬೇಕು. ತನ್ನನ್ನು ಹೆಚ್ಚು ಕಂಫರ್ಟ್ ಝೋನ್‌ನಲ್ಲಿ ಇಡಬೇಕು, ಪ್ರೀತಿಯಿಂದ ನೋಡಿಕೊಳ್ಳಬೇಕು, ಆಗಾಗ ಗಿಫ್ಟ್ ಕೊಡಬೇಕು ಇವೆಲ್ಲವೂ 3ನೇ ಗುಣ. ಐಷಾರಾಮಿತನ ಇರಬೇಕು, ಜೀವನವನ್ನು ಅತ್ಯಂತ ಸುಂದರವಾಗಿ, ಕೊರತೆಗಳಿಲ್ಲದೆ ಕಳೆಯಬೇಕು. ಭಾವುಕತೆ, ಇಂಟಿಲಜೆಂಟ್, ನೋಡಲು ಹ್ಯಾಂಡ್ಸಮ್ ಆಗಿರಬೇಕು, ಫಿಟ್ ಆಗಿರಬೇಕು. ಸಂಬಂಧ, ಕುಟುಂಬ ಎಲ್ಲರರ ಜೊತೆ ಸಂಪರ್ಕದಲ್ಲಿರಬೇಕು, ನನ್ನ ಲೈಫ್‌ಸ್ಟೈಲ್, ನನ್ನ ಗುರಿ, ನನ್ನ ಆಸೆ ಆಕಾಂಕ್ಷೆಗಳನ್ನು ಈಡೇರಿಸುವಂತಿರಬೇಕು, ನನಗೆ ಬೆಂಬಲ ಕೊಡಬೇಕು, ಪ್ರವಾಸ, ಟ್ರಿಪ್ ಹೋಗುವಂತೆ ಇರಬೇಕು. ಆತ ಪ್ರಯಾಣ ಮಾಡುವನಾಗಿರಬೇಕು, ಹೊರಗಡೆ ರೆಸ್ಟೋರೆಂಟ್‌ನಲ್ಲಿ ಆಹಾರ ಸವಿಯುವ ಅಭ್ಯಾಸ ಇರಬೇಕು. ಲೈಂಗಿಕತೆಯಲ್ಲಿ ಶಿಸ್ತು ಇರಬೇಕು, ಗರ್ಭಿಣಿಯಾಗದಂತೆ ನೋಡಿಕೊಳ್ಳಬೇಕು, ಅಡುಗೆ ಸಿಬ್ಬಂದಿ, ಕೆಲಸಕ್ಕೆ ಸಿಬ್ಬಂದಿ ಸೇರಿದಂತೆ ಎಲ್ಲದ್ದಕ್ಕೂ ಸಿಬ್ಬಂದಿ ನೇಮಿಸಿ ನನ್ನ ಕೆಲಸ ಸುಲಭ ಮಾಡಬೇಕು ಸೇರಿದಂತೆ ಅತೀದೊಡ್ಡ ಪಟ್ಟಿಯನ್ನೇ ಈಕೆ ನೀಡಿದ್ದಾಳೆ.

ಈ ಪಟ್ಟಿ ನೋಡಿ ಸುಸ್ತಾದ ರೆಡ್ಡಿಟ್ ಬಳಕೆದಾರ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾನೆ. ಇದೀಗ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲು ಎಲ್ಲರೂ ಈ ರೀತಿ ಲಿಸ್ಟ್ ಕಳುಹಿಸುತ್ತಾರೆ. ಇದೀಗ ಹಲವರಿಗೆ ಈ ರೀತಿ ಲಿಸ್ಟ್ ಕಳುಹಿಸುವುದು ಫ್ಯಾಶನ್ ಆಗಿದೆ. ಬಳಿಕ ಸಮಾಜವನ್ನು ದೂಷಿಸುತ್ತಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವವರು ಈ ಮಹಿಳೆ ಪರ ನಿಂತಿದ್ದಾರೆ. ಆಕೆಯ ಬೇಡಿಕೆ ಹೇಳಿದ್ದಾಳೆ, ಸರಿ ಹೊಂದುವವರು ಮದುವೆಯಾಗತ್ತಾರೆ ಎಂದಿದ್ದಾರೆ. 

ದುಡಿದು ಸಂಪಾದಿಸಿ, ಪತಿಯಿಂದ ಮಾಸಿಕ 6 ಲಕ್ಷ ಜೀವನಾಂಶ ಕೇಳಿದ ಪತ್ನಿಗೆ ಖಡಕ್ ಸಂದೇಶ ನೀಡಿದ ಜಡ್ಜ್