2019ರಲ್ಲಿ ಒರಾಕಲ್‌ ಸಿಇಒ ಮಾರ್ಕ್‌ ಹರ್ಡ್‌ ನಿಧನರಾಗಿದ್ದರು. ಅವರ ಪತ್ನಿ 60 ವರ್ಷದ ಪೌಲಾ ಹರ್ಡ್‌ರಲ್ಲಿ 67 ವರ್ಷದ ಬಿಲ್‌ ಗೇಟ್ಸ್‌ ಪ್ರೀತಿಯನ್ನು ಕಂಡಿದ್ದಾರೆ ಎಂದು ವರದಿಯಾಗಿದೆ. ಕಳೆದೊಂದು ವರ್ಷದಿಂದ ಇವರ ನಡುವೆ ಡೇಟಿಂಗ್‌ ನಡೆಯುತ್ತಿದೆ ಎನ್ನುವ ಅನುಮಾನಗಳಿವೆ. 

ನವದೆಹಲಿ (ಫೆ.9): ಪತ್ನಿ ಮೆಲಿಂಡಾ ಗೇಟ್ಸ್‌ರಿಮದ 2021ರಲ್ಲಿ ವಿಚ್ಛೇದನ ಪಡೆದುಕೊಂಡಿದ್ದ ಶತಕೋಟ್ಯಧಿಪತಿ ಬಿಲ್‌ ಗೇಟ್ಸ್‌ ಮತ್ತೊಮ್ಮೆ ಪ್ರೀತಿಯನ್ನು ಕಂಡುಕೊಂಡಿದ್ದಾರೆ. ಈ ಪ್ರೀತಿ 67ನೇ ವರ್ಷದಲ್ಲಿ ಹುಟ್ಟುಕೊಂಡಿರುವುದು ವಿಶೇಷ. 2019ರಲ್ಲಿ ನಿಧನರಾದ ಒರಾಕಲ್‌ ಸಿಇಒ ಮಾರ್ಕ್‌ ಹರ್ಡ್‌ ಅವರ ಪತ್ನಿ ಪೌಲಾ ಹರ್ಡ್‌ ಅವರೊಂದಿಗೆ ಮೈಕ್ರೋಸಾಫ್ಟ್‌ನ ಸಹ-ಸಂಸ್ಥಾಪಕ ಬಿಲ್‌ ಗೇಟ್ಸ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಇಂಗ್ಲೆಂಡ್‌ ಹಾಗೂ ಅಮೆರಿಕದ ಪತ್ರಿಕೆಗಳು ಕೂಡ ಈ ಬಗ್ಗೆ ವಿಸ್ತ್ರತ ವರದಿಯನ್ನು ಪ್ರಕಟಿಸಿವೆ. "ಬಿಲ್ ಗೇಟ್ಸ್ ಮತ್ತು ಪೌಲಾ ಹರ್ಡ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವ್ಯಾಪಕವಾಗಿ ಸುದ್ದಿಯಾಗಿದೆ. ಆದರೆ ಪೌಲಾ ಹರ್ಡ್‌ ಇನ್ನೂ ಬಿಲ್‌ ಗೇಟ್ಸ್‌ ಅವರ ಮಕ್ಕಳನ್ನು ಭೇಟಿ ಮಾಡಿಲ್ಲ" ಎಂದು ಮೂಲವೊಂದು ಪೀಪಲ್ ಮ್ಯಾಗಜೀನ್‌ಗೆ ತಿಳಿಸಿದೆ. ಈ ನಡುವೆ ಇಂಗ್ಲೆಂಡ್‌ನ ಡೇಲಿ ಮೇಲ್‌ ಪತ್ರಿಕೆಗೆ ಇವರಿಬ್ಬರ ಆಪ್ತರೊಬ್ಬರು ಪ್ರತಿಕ್ರಿಯೆ ನೀಡಿದ್ದೂ, ಇಬ್ಬರೂ ಕೂ ಬೇರ್ಪಡಿಸಲಾಗದಂಥ ಸಂಬಂಧದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಬಿಲ್‌ ಗೇಟ್ಸ್‌ ಅವರಿಗೆ 67 ವರ್ಷವಾಗಿದ್ದರೆ, ಪೌಲಾ ಹರ್ಡ್‌ ಅವರಿಗೆ 60 ವರ್ಷವಾಗಿದೆ. ಕಳೆದ ತಿಂಗಳು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ ಟೂರ್ನಿಯ ವೇಳೆ ಗ್ಯಾಲರಿಯಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. 

ಇಬ್ಬರೂ ಕೂಡ ಟೆನಿಸ್‌ನ ಅಪಾರ ಅಭಿಮಾನಿಗಳಾಗಿದ್ದು. 2022ರ ಮಾರ್ಚ್‌ನಲ್ಲಿ ನಡೆದ ಇಂಡಿಯನ್‌ ವೆಲ್ಸ್‌ ಟೆನಿಸ್‌ ಟೂರ್ನಿಯ ಡಬ್ಲ್ಯುಟಿಎ ಸೆಮಿಫೈನಲ್‌ ಪಂದ್ಯವನ್ನೂ ಜೊತೆಯಾಗಿ ವೀಕ್ಷಿಸಿದ್ದರು. ದಂಪತಿಗಳು ಒಂದು ವರ್ಷದಿಂದ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ ಆದರೆ ಅವರ ಸಂಬಂಧವನ್ನು ಸಾರ್ವಜನಿಕರ ಕಣ್ಣಿನಿಂದ ದೂರವಿಡುವಲ್ಲಿ ಈವರೆಗೂ ಯಶಸ್ವಿಯಾಗಿದ್ದರು. ಆದರೂ ಹರ್ಡ್ ಗೇಟ್ಸ್ ಅವರೊಂದಿಗೆ ಕಳೆದ ತಿಂಗಳು ಸಿಡ್ನಿಗೆ ತೆರಳಿದ್ದರು. ಅಲ್ಲಿ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿದ್ದರು.

ಆ ಬಳಿಕ ಸಿಡ್ನಿ ನಗರದ ಪ್ರಸಿದ್ಧ ಒಪೇರಾ ಹೌಸ್‌ನ ಹೊರಗೆ ಗೇಟ್ಸ್ ಮತ್ತು ಹರ್ಡ್ ಫೋಟೋ ಕೂಡ ತೆಗೆಸಿಕೊಂಡಿದ್ದರು. ಆದರೆ, ಆ ಸಮಯದಲ್ಲಿ ಪೌಲಾ ಹರ್ಡ್‌ ಬಗ್ಗೆ ಯಾವುದೇ ವಿಶೇಷವಾದ ಮಾಹಿತಿಗಳಿರಲಿಲ್ಲ. ಅಂದು ವರದಿ ಮಾಡಿದ್ದ ಪತ್ರಿಕೆಗಳು ಬಿಲ್‌ ಗೇಟ್ಸ್‌ ಅವರೊಂದಿಗೆ ನಿಗೂಢ ಮಹಿಳೆಯೊಬ್ಬರು ಪೋಸ್‌ ನೀಡಿದ್ದಾರೆ ಎಂದು ವರದಿ ಮಾಡಿತ್ತು.
ಕಳೆದ ಒಂದು ವರ್ಷದಿಂದ ಬಿಲ್ ಗೇಟ್ಸ್‌ ಹಾಗ ಪೌಲಾ ಹರ್ಡ್‌ ಡೇಟಿಂಗ್‌ ಮಾಡುತ್ತಿದ್ದಾರೆ. ಆದರೆ, ಹೆಚ್ಚಿನ ಪತ್ರಿಕೆಗಳನ್ನು ಅವರ್ನು ಮಿಸ್ಟ್ರಿ ವುಮೆನ್‌ ಎಂದೇ ಕರೆದಿದ್ದವು. ಆದರೆ, ಆಕೆ ಮಿಸ್ಟ್ರಿ ವುಮೆನ್‌ ಅಲ್ಲ. ಕಳೆದೊಂದು ವರ್ಷದಿಂದ ಅವರು ರೊಮಾಂಟಿಕ್‌ ಸಂಬಂಧದಲ್ಲಿದ್ದಾರೆ ಎಂದು ದಂಪತಿಗಳ ಆಪ್ತರೊಬ್ಬರು ತಿಳಿಸಿದ್ದಾರೆ.

Vaccine Death: ಮಗಳ ಸಾವಿಗೆ 1000 ಕೋಟಿ ರೂ. ಪರಿಹಾರ ಕೇಳಿದ ತಂದೆ: Bill Gatesಗೆ ನೋಟಿಸ್‌

ಬಿಲ್‌ ಗೇಟ್ಸ್ ಹೆಸರು ಎರಡು ವರ್ಷದ ಬಳಿಕ ಡೇಟಿಂಗ್‌ ವಿಚಾರವಾಗಿ ಸುದ್ದಿಯಲ್ಲಿದೆ. 2021ರ ಮೇ ತಿಂಗಳಲ್ಲಿ ಬಿಲ್‌ ಗೇಟ್ಸ್‌ ಹಾಗೂ ಮೆಲಿಂಡಾ ಗೇಟ್ಸ್‌ ತಮ್ಮ 27 ವರ್ಷದ ದಾಂಪತ್ಯವನ್ನು ಮುರಿದುಕೊಂಡಿದ್ದರು. ಅದೇ ವರ್ಷದ ಆಗಸ್ಟ್‌ನಲ್ಲಿ ಇಬ್ಬರೂ ಕೂಡ ಅಧಿಕೃತವಾಗಿ ವಿಚ್ಛೇದನಕ್ಕೆ ಒಳಪಟ್ಟಿದ್ದರು. ಮೆಲಿಂಡಾ ಗೇಟ್ಸ್ ಮಾಜಿ ಟಿವಿ ರಿಪೋರ್ಟರ್‌ ಜೋನ್ ಡು ಪ್ರೀ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.

ಜಗತ್ತು ಮತ್ತೊಂದು ಸಾಂಕ್ರಾಮಿಕ ರೋಗಕ್ಕೆ ಸಾಕ್ಷಿಯಾಗಲಿದೆ: ಬಿಲಿಯನೇರ್ ಬಿಲ್ ಗೇಟ್ಸ್ ಎಚ್ಚರಿಕೆ!

ಮತ್ತೊಂದೆಡೆ, ಪೌಲಾ ಹರ್ಡ್ ಅವರ ಪತಿ ಮಾರ್ಕ್ ಹರ್ಡ್ 2019 ರಲ್ಲಿ ಕ್ಯಾನ್ಸರ್‌ನಿಂದಾಗಿ ಸಾವು ಕಂಡಿದ್ದರು. ಪ್ರಸ್ತುತ ಪೌಲಾ ಹರ್ಡ್‌ ಈವೆಂಟ್ ಪ್ಲಾನರ್, ಕಾರ್ಯಕ್ರಮ ಆಯೋಜಕ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.