7ನೇ ಕ್ಲಾಸಲ್ಲಿ ಓದುವ 15 ವರ್ಷದ ಹುಡುಗನ ಮದ್ವೆಯಾದ ಮೂರು ಮಕ್ಕಳ ತಾಯಿ

ಬಿಹಾರದಲ್ಲಿ 30 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು 7ನೇ ತರಗತಿಯಲ್ಲಿ ಓದುತ್ತಿರುವ 15 ವರ್ಷದ ಬಾಲಕನನ್ನು ವಿವಾಹವಾಗಿದ್ದು, ಈ ವಿವಾದಾತ್ಮಕ ಘಟನೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

Bihar woman who have 3 children marries 15 year old 7th class boy

ಸಿನಿಮಾ ಸೀರಿಯಲ್‌ಗಳನ್ನೂ ಮೀರಿಸುವ ಘಟನೆಯೊಂದು ಬಿಹಾರದ ವೈಶಾಲಿಯಲ್ಲಿ ನಡೆದಿದೆ. 30 ವರ್ಷದ ಮೂರು ಮಕ್ಕಳ ತಾಯಿಯೊಬ್ಬಳು 7ನೇ ಕ್ಲಾಸ್‌ನಲ್ಲಿ  ಓದುತ್ತಿರುವ 15 ವರ್ಷದ ಹುಡುಗನೊಬ್ಬನನ್ನು ಮದುವೆಯಾಗಿದ್ದಾಳೆ. ಈ ಪ್ರಕರಣವೀಗ ವಿವಾದಕ್ಕಿಡಾಗಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮದುವೆಯ ವಿಚಾರವೂ ಈಗ ಜನರನ್ನು ಸೆಳೆದಿರುವುದು ಮಾತ್ರವಲ್ಲದೇ ತೀವ್ರ ಟೀಕೆಗೂ ಗ್ರಾಸವಾಗಿದೆ. ಈ ವಿಚಾರದ ಬಗ್ಗೆ ಮಹಿಳೆಯನ್ನು ಪ್ರಶ್ನಿಸಿದಾಗ ಆಕೆ ತನ್ನ ಈ ಕೃತ್ಯವನ್ನು  ಸಮರ್ಥಿಸಿಕೊಂಡಿರುವುದರಿಂದ ಜನ ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಮಾಧ್ಯಮದವರು ಅಪ್ರಾಪ್ತ ಬಾಲಕನನ್ನು ಮದುವೆಯಾಗಿರುವುದು ಏಕೆ ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಮಹಿಳೆ, ನಾವಿಬ್ಬರು ಪ್ರೀತಿ ಮಾಡ್ತಿದ್ದೆವು ಹೀಗಾಗಿ ಮದ್ವೆಯಾಗಿದ್ದೇವೆ, ಇದರಲ್ಲಿ ತಪ್ಪೇನು ಎಂದು ಮಹಿಳೆ ಸಂಪೂರ್ಣ ವಿಶ್ವಾಸದಿಂದಲೇ ವರದಿಗಾರರನ್ನು ಮರು ಪ್ರಶ್ನಿಸಿದ್ದಾಳೆ. ಆಕೆಯ ಈ ಉತ್ತರ ಕೇಳಿದ ಜನ ಪ್ರೀತಿ, ವಯಸ್ಸು ಹಾಗೂ ಸಾಮಾಜಿಕ ನಿಯಮಗಳ ಬಗ್ಗೆ ಮಾತನಾಡುತ್ತಿದ್ದಾರೆ. 

ಹೀಗೆ ಮದ್ವೆಯಾದ ಮಹಿಳೆಯನ್ನು ಸೀಮಾ ಎಂದು ಗುರುತಿಸಲಾಗಿದೆ. ಇತ್ತ ಈಕೆ ಮದ್ವೆಯಾದ  ಹುಡುಗ ಅಪ್ರಾಪ್ತನಾಗಿದ್ದು, 7ನೇ ಕ್ಲಾಸ್‌ನಲ್ಲಿ ಓದುತ್ತಿದ್ದಾನೆ. ಹೀಗಾಗಿ ಮಹಿಳೆಯ ಉತ್ತರ ಅನೇಕರನ್ನು ಸಿಟ್ಟಿಗೇಳಿಸಿದೆ. ಅನೇಕರು ಇದೇ ಜಾಗದಲ್ಲಿ ಪುರುಷ ಇದ್ದಿದ್ದರೆ ಈಗ ಕಂಬಿ ಹಿಂದೆ ಕೂರಿಸುತ್ತಿದ್ದರು ಎಂದು ಹೇಳಿದ್ದಾರೆ. ಬಾಲಕ ಇನ್ನೂ ಅಪ್ರಾಪ್ತ ಈಗಷ್ಟೇ ಓದುತ್ತಿದ್ದಾನೆ ಹೀಗಿರುವಾಗ ಇದೆಷ್ಟು ಸರಿ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ. ಮತ್ತೆ ಕೆಲವರು ಆನ್‌ಲೈನ್‌ನಲ್ಲಿ ಮಹಿಳೆಯ ಕೆನ್ನೆಗೆ ಬಾರಿಸುವ ಅವಕಾಶವಿದ್ದರೆ ಇಲ್ಲೇ ಬಾರಿಸುತ್ತಿದೆ ಎಂದು ಸಿಟ್ಟಿಗೆದ್ದ ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ. ಈಗಾಗಲೇ ಮೂರು ಮಕ್ಕಳಿರುವ ಹೆಂಗಸಿಗೆ ಈ ರೀತಿ ಮಾಡಲು ನಾಚಿಕೆ ಅಗಲ್ವೆ ಎಂದು ಪ್ರಶ್ನೆ ಮಾಡಿದ್ದಾರೆ. 

ಆದರೆ ಯೂಟ್ಯೂಬ್ ಚಾನೆಲೊಂದರ ವರದಿಯ ಪ್ರಕಾರ, ಮಹಿಳೆ ಸೀಮಾ ತನ್ನ ತಾಯಿ ಕಡೆಯಿಂದ ತನಗೆ ಮಾವನಾಗುವ ವ್ಯಕ್ತಿಯ ಮಗನನ್ನು ಮದುವೆಯಾಗಿದ್ದಾಳೆ. ಸಂದರ್ಶಕರು ಈಕೆಯ ಬಳಿ ಪ್ರಶ್ನಿಸಿದಾಗ ಆತನನ್ನು ಸಣ್ಣ ಮಗುವಿದ್ದಾಗಿನಿಂದಲೂ ಪ್ರೀತಿಸುತ್ತಿದ್ದಿದ್ದಾಗಿ ಹೇಳಿದ್ದಾರೆ. ಅಲ್ಲದೇ ತನ್ನ ಹಾಲಿ ಗಂಡ ತನ್ನನ್ನು ಪ್ರೀತಿಸುತ್ತಿಲ್ಲ, ಹೀಗಾಗಿಯೇ ಆತನನ್ನು ಬಿಟ್ಟು ಈ ಸಣ್ಣ ಹುಡುಗನನ್ನು ಮದ್ವೆಯಾಗಿದ್ದಾಗಿ ಹೇಳಿದ್ದಾಳೆ. ಅಲ್ಲದೇ ಈ ಹುಡುಗನನ್ನು ಮದ್ವೆಯಾಗಲು ಮನೆ ಬಿಟ್ಟು ಓಡಿ ಬಂದಿದ್ದಾಗಿಯೂ ಆಕೆ ಹೇಳಿದ್ದಾಳೆ.  ಅಂದಹಾಗೆ ಈ ಸೀಮಾಗೆ ಇನ್ಸ್ಟಾಗ್ರಾಮ್‌ನಲ್ಲಿ 50 ಸಾವಿರಕ್ಕು ಹೆಚ್ಚು ಫಾಲೋವರ್ಸ್‌ಗಳಿದ್ದಾರೆ. ಇತ್ತೀಚೆಗೆ ಅಲ್ಲಿ ಆಕೆ ಮದ್ವೆ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ಇದನ್ನು 20 ಸಾವಿರಕ್ಕೂ ಹೆಚ್ಚು ಜನ ಲೈಕ್ ಮಾಡಿದ್ದಾರೆ.  ಈ ಮದ್ವೆ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.

 

Latest Videos
Follow Us:
Download App:
  • android
  • ios