Asianet Suvarna News Asianet Suvarna News

ಬಿಹಾರದಲ್ಲೊಂದು ಸಲಿಂಗಿ ವಿವಾಹ: ಗಂಡನ ಬಿಟ್ಟು ಸೊಸೆಯ ಮದ್ವೆಯಾದ ಅತ್ತೆ

ಬಿಹಾರದಲ್ಲೊಂದು ವಿಭಿನ್ನ ಸಲಿಂಗಿ ವಿವಾಹ ನಡೆದಿದ್ದು,  ಅತ್ತೆಯೊಬ್ಬಳು ಗಂಡನನ್ನು ಬಿಟ್ಟು ತನ್ನ  ಸೊಸೆಯನ್ನೇ ಮದುವೆಯಾಗಿದ್ದಾಳೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.

bihar same sex marriage in gopalganj mother in law marry her daughter in law akb
Author
First Published Aug 13, 2024, 4:42 PM IST | Last Updated Aug 13, 2024, 4:42 PM IST

ಪಾಟ್ನಾ: ಬಿಹಾರದಲ್ಲೊಂದು ವಿಭಿನ್ನ ಸಲಿಂಗಿ ವಿವಾಹ ನಡೆದಿದ್ದು,  ಅತ್ತೆಯೊಬ್ಬಳು ಗಂಡನನ್ನು ಬಿಟ್ಟು ತನ್ನ  ಸೊಸೆಯನ್ನೇ ಮದುವೆಯಾಗಿದ್ದಾಳೆ. ಬಿಹಾರದ ಗೋಪಾಲಗಂಜ್ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ.  ಮೂರು ವರ್ಷಗಳ ಕಾಲ ತಾವಿಬ್ಬರು ಸಂಬಂಧದಲ್ಲಿದ್ದು ಈಗ ಮದುವೆಯಾಗಿದ್ದಾಗಿ ಈ ನವವಿವಾಹಿತ ಸಲಿಂಗಿ ಜೋಡಿ ಹೇಳಿದ್ದಾರೆ. ಸೊಸೆ ಶೋಭಾಗಾಗಿ ಗಂಡನನ್ನು ತೊರೆದ ಸುಮನ್ ಎಂಬ ಮಹಿಳೆ ಬಳಿಕ ಆಕೆಯೊಂದಿಗೆ ಓಡಿ ಹೋಗಿದ್ದಾಳೆ. ಈ ಅತ್ತೆ ಸೊಸೆ ಈಗ ಗಂಡ ಹೆಂಡತಿಯಾಗಿದ್ದು, ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧದಲ್ಲಿ ಇದ್ದಿದ್ದಾಗಿ ಹೇಳಿದ್ದಾರೆ. 

ಗೋಪಾಲಗಂಜ್ ಜಿಲ್ಲೆಯ ಬೆಲ್ವಾ ಗ್ರಾಮದಲ್ಲಿರುವ ಸ್ಥಳೀಯ ದೇಗುಲದಲ್ಲಿ ಹಿಂದೂ ಸಂಪ್ರದಾಯದಂತೆ ಈ ಜೋಡಿ ಹಸೆಮಣೆ ಏರಿದ್ದಾರೆ. ಇವರ ಈ ವಿಶೇಷ ಮದುವೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅತ್ತೆ ಸೊಸೆ ದಂಪತಿಗಳಾಗಿ ಹೂ ಹಾರ ಬದಲಾಯಿಸಿಕೊಳ್ಳುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.  ಇದಾದ ನಂತರ ಅತ್ತೆ ಸುಮನ್ ಸೊಸೆ ಶೋಭಾಗೆ ತಾಳಿ ಕಟ್ಟುವುದನ್ನು ಕೂಡ ವಿಡಿಯೋದಲ್ಲಿ ಕಾಣಬಹುದಾಗಿದೆ. ಇದರ ಜೊತೆಗೆ ಅವರು ಮದುವೆಯ ಸಪ್ತಪದಿ ತುಳಿಯುವ ಕ್ರಮವನ್ನು ಕೂಡ ಪಾಲಿಸಿದ್ದು, ಜೀವನವಿಡೀ ಒಬ್ಬರಿಗೊಬ್ಬರು ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ. 

ನನ್ನ ದೇಹ ನೀವು ನೋಡಿದ್ರೆ... ಸಲಿಂಗಕಾಮಿ ಮಾತಿನ ನಡುವೆಯೇ ಕರಣ್‌ ಜೋಹರ್‌ ಓಪನ್‌ ಮಾತು...

ಮಹಿಳೆಯನ್ನು ಮಹಿಳೆ ಅದರಲ್ಲೂ ಸ್ವಂತ ಸೊಸೆಯನ್ನೇ ಮದುವೆಯಾಗುತ್ತಿರುವುದರ ಬಗ್ಗೆ ಸುಮನ್ ಬಳಿ ಕೇಳಿದಾಗ, ತಾನು ಶೋಭಾ ಜೊತೆ ತುಂಬಾ ಡೀಪ್ ಆಗಿ ಪ್ರೀತಿಯಲ್ಲಿ ಇರುವುದಾಗಿ ಹೇಳಿದ್ದಾರೆ. ಶೋಭಾ ನನ್ನ ಜೀವನದ ಪ್ರೀತಿ, ಆಕೆ ಬೇರೆಯವರನ್ನು ಮದುವೆಯಾಗಿ ಅವಳನ್ನು ನಾನು ಕಳೆದುಕೊಳ್ಳುವುದನ್ನು ನಾನು ಊಹೆಯೂ ಮಾಡಲಾಗದು. ಒಬ್ಬರನ್ನೊಬ್ಬರು ಕಳೆದುಕೊಳ್ಳುವ ಭಯವೇ ನಮ್ಮನ್ನು ಬೇರೆಲ್ಲಾ ವಿಚಾರವನ್ನು ಪಕ್ಕಕ್ಕಿಟ್ಟು ಪರಸ್ಪರ ಮದುವೆಯಾಗುವಂತೆ  ಮಾಡಿತ್ತು. ಜಗತ್ತು ಏನು ಯೋಚನೆ ಮಾಡಬಹುದು ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಮದುವೆಯಾದೆವು ಎಂದು ಸುಮನ್ ಹೇಳಿದ್ದಾರೆ. 

ಮನೆಯವರ ವಿರೋಧದ ಮಧ್ಯೆಯೂ ಒಂದಾದ ಸಲಿಂಗಿ ಜೋಡಿ, ದೇವಸ್ಥಾನದಲ್ಲಿ ಯುವತಿಯರಿಬ್ಬರ ಮದುವೆ!

ಇತ್ತ ಸೊಸೆ ಶೋಭಾ ಕೂಡ ಅತ್ತೆ ಸುಮನ್ ಮಾತಿಗೆ ತಲೆದೂಗಿದ್ದು,  ಜನರ, ಸಮಾಜದ ಮಾತಿಗೆ ನಾವು ತಲೆಕೆಡಿಸಿಕೊಳ್ಳಲಿಲ್ಲ ಎಂದು ಹೇಳಿದ್ದಾಳೆ. ಇದಾದ ನಂತರ ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮದುವೆಯ ಫೋಟೋ ವೀಡಿಯೋಗಳನ್ನು ಪೋಸ್ಟ್ ಮಾಡಿದ್ದು, ತಾವು ವಿವಾಹವಾಗಿರುವುದಾಗಿ ಘೋಷಿಸಿದ್ದಾರೆ.  ಈ ಮೂಲಕ ತಮ್ಮ ವಿವಾಹದ ಬಗ್ಗೆ ಪೋಷಕರು ಹಾಗೂ ಕುಟುಂಬದವರು ಸಂಬಂಧಿಗಳಿಗೆ ಮಾಹಿತಿ ನೀಡಿದ್ದಾರೆ. 

ವಿರಾಟ್ ಕೊಹ್ಲಿಗೆ ಪ್ರಪೋಸ್ ಮಾಡಿದ್ದ ಇಂಗ್ಲೆಂಡ್ ಕ್ರಿಕೆಟ್ ಆಟಗಾರ್ತಿ ಗರ್ಲ್‌ಫ್ರೆಂಡ್ ಜೊತೆ ಮದುವೆ!

ಈ ಮದುವೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಈ ಜೋಡಿಯನ್ನು ಬೆಂಬಲಿಸಿದ್ದರೆ ಮತ್ತೆ ಕೆಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಈ ಜೋಡಿಯ ಧೈರ್ಯವನ್ನು ಶ್ಲಾಘಿಸಿದ್ದಾರೆ. ಇದೊಂದು ಅಸಹಜ ಮದುವೆ, ಇದು ಕಲಿಯುಗದ ಮಹಿಮೆ ಎಂದೆಲ್ಲಾ ಕೆಲವರು ಈ ಮದುವೆಯನ್ನು ಟೀಕಿಸಿದ್ದಾರೆ.

 

 

Latest Videos
Follow Us:
Download App:
  • android
  • ios