ಮನೆಯವರ ವಿರೋಧದ ಮಧ್ಯೆಯೂ ಒಂದಾದ ಸಲಿಂಗಿ ಜೋಡಿ, ದೇವಸ್ಥಾನದಲ್ಲಿ ಯುವತಿಯರಿಬ್ಬರ ಮದುವೆ!
ಸಲಿಂಗಿಗಳ ನಡುವೆ ಪ್ರೀತಿ, ಮದುವೆ ಅನ್ನೋದು ಇತ್ತೀಚಿಗೆ ಸಾಮಾನ್ಯವಾಗಿದೆ. ಹಾಗೆಯೇ ಉತ್ತರಪ್ರದೇಶದಲ್ಲೊಂದು ಜೋಡಿ, ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಉತ್ತರಪ್ರದೇಶ: ಪಶ್ಚಿಮ ಬಂಗಾಳದ ಲೆಸ್ಬಿಯನ್ ಜೋಡಿ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ದೇವಸ್ಥಾನವೊಂದರಲ್ಲಿ ಸಾಂಪ್ರದಾಯಿಕವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪರಗಣ ಜಿಲ್ಲೆಯಿಂದ ಬಂದ ಜಯಶ್ರೀ ರಾಹುಲ್ (28) ಮತ್ತು ರಾಖಿ ದಾಸ್ (23) ಅವರು ಡಿಯೋರಿಯಾದ ಆರ್ಕೆಸ್ಟ್ರಾದಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿ ಇಬ್ಬರಿಗೆ ಪರಸ್ಪರ ಪರಿಚಯವಾಗಿದ್ದು, ಪ್ರೀತಿಸಲು ಆರಂಭಿಸಿದ್ದಾರೆ. ಎರಡೂ ಮನೆಯ ಸದಸ್ಯರು ಮದುವೆಗೆ ಒಪ್ಪಿಗೆ ಸೂಚಿಸದ ಕಾರಣ ಸಲಿಂಗಿ ಯುವತಿಯರು ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ.
ಇಬ್ಬರೂ ಮೊದಲು ತಮ್ಮ ಮದುವೆಗೆ ನೋಟರಿ ಪ್ರಮಾಣ ಪತ್ರವನ್ನು ಪಡೆದುಕೊಂಡರು, ನಂತರ ಸೋಮವಾರ ಡಿಯೋರಿಯಾದ ಭಟ್ಪರ್ ರಾಣಿಯ ಭಗದಾ ಭವಾನಿ ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾದರು ಎಂದು ತಿಳಿದುಬಂದಿದೆ. ಆರ್ಕೆಸ್ಟಾದ ಮಾಲೀಕ ಮುನ್ನಾ ಪಾಲ್ ಅವರು ಮದುವೆಗೆ ನೋಟರೈಸ್ ಅಫಿಡವಿಟ್ ಪಡೆಯುವ ಮೂಲಕ ಮದುವೆಯನ್ನು ಔಪಚಾರಿಕಗೊಳಿಸಿದರು.
ಗಂಡು ಮಗುವಿನ ಜನ್ಮ ನೀಡಿದ ಸಲಿಂಗಿ, ವಿಶ್ವದಲ್ಲೇ ಎರಡನೇ ಪ್ರಕರಣ!
ದೇವಸ್ಥಾನದಲ್ಲಿ ಸಂಪ್ರದಾಯಬದ್ಧವಾಗಿ ಮದುವೆಯಾದ ಜೋಡಿ
ಕೆಲವು ದಿನಗಳ ಹಿಂದೆ ದೀರ್ಗೇಶ್ವರನಾಥ ದೇವಸ್ಥಾನದಲ್ಲಿ ಈ ಸಲಿಂಗಿ ಜೋಡಿ ಮದುವೆಯಾಗಲು ತೀರ್ಮಾನಿಸಿತ್ತು. ಆದ್ರೆ ಆ ದೇವಸ್ಥಾನದಲ್ಲಿ ಮದುವೆಗೆ ಅನುಮತಿ ನಿರಾಕರಿಸಲಾಗಿತ್ತು. ಇದರಿಂದ ನೊಂದ ದಂಪತಿಗಳು ತಮ್ಮ ಹಿತೈಷಿಗಳೊಂದಿಗೆ ಪರ್ಯಾಯ ಮಾರ್ಗ ಹುಡುಕಿಕೊಂಡರು. ಮದುವೆಗೆ ನೋಟರಿ ಪ್ರಮಾಣ ಪತ್ರ ಪಡೆದು ಮಜೌಳಿರಾಜದ ಭಗದ ಭವಾನಿ ದೇವಸ್ಥಾನಕ್ಕೆ ತೆರಳಿ ದೇವಸ್ಥಾನದ ಅರ್ಚಕರ ಸಮ್ಮುಖದಲ್ಲಿ ಮಾಲಾರ್ಪಣೆ ಮಾಡಿಕೊಂಡರು.
ಇತ್ತೀಚಿಗೆ ಕೋಲ್ಕತ್ತಾದಲ್ಲಿಯೂ ಇಂಥಹದ್ದೇ ಘಟನೆಯೊಂದು ನಡೆದಿತ್ತು. ಕೋಲ್ಕತ್ತಾದಲ್ಲಿ ಸಲಿಂಗಿ ಜೋಡಿ ಮದುವೆಯಾಗಿದ್ದರು. ಸಂಪ್ರದಾಯಿಕ ಬೆಂಗಾಲಿ ವಿವಾಹದಂತೆ ಈ ಸಮಾರಂಭ ನಡೆದಿತ್ತು. ಅರಿಶಿಣಶಾಸ್ತ್ರ, ಸಂಗೀತ, ಮೆಹಂದಿ ಸಪ್ತಪದಿ ಸೇರಿದಂತೆ ಎಲ್ಲಾ ಆಚರಣೆಗಳನ್ನು ನಡೆಸಿದ ಈ ಜೋಡಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಮೌಸುಮಿ ದತ್ತ ಹಾಗೂ ಮೌನಿತಾ ಮಜಮ್ದಾರ್ ಎಂಬವರು ಸಲಿಂಗ ವಿವಾಹವಾದ ಜೋಡಿ. ಇದು ಕೋಲ್ಕತ್ತಾದಲ್ಲಿ ನಡೆದ ಮೂರನೇ ಸಲಿಂಗ ವಿವಾಹವಾಗಿತ್ತು.
ಪ್ರೀತಿ ಮುಖ್ಯ, ಲಿಂಗ-ಗಾತ್ರವಲ್ಲ: ಮಕ್ಕಳಿಗೆ ಸಲಿಂಗಿ ಮದ್ವೆ ಕುರಿತು ಕರೀನಾ ಕಪೂರ್ ಪಾಠ
ಇದಕ್ಕೂ ಮೊದಲು ಚೈತನ್ಯ ಶರ್ಮಾ ಹಾಗೂ ಅಭಿಷೇಕ್ ರಾಯ್ ಎಂಬ ಸಲಿಂಗ ಜೋಡಿ ವಿವಾಹವಾಗಿದ್ದರು. ಈ ವಿವಾಹಕ್ಕೂ ಮೊದಲು 2018ರಲ್ಲಿ ಸುಚೇಂದ್ರ ದಾಸ್ ಹಾಗೂ ಶ್ರೀ ಮುಖರ್ಜಿ ಎಂಬುವವರು ಮೊದಲ ಬಾರಿಗೆ ಸಲಿಂಗ ವಿವಾಹವಾಗುವ ಮೂಲಕ ಸಲಿಂಗ ವಿವಾಹಕ್ಕೆ ನಾಂದಿ ಹಾಡಿ ಆ ಸಮುದಾಯದ ಜನರಿಗೆ ಸ್ಪೂರ್ತಿಯಾಗಿದ್ದರು.