ಪಾಲಕರ ಈ ತಪ್ಪಿನಿಂದ ಮಕ್ಕಳಲ್ಲಿ ಕಡಿಮೆಯಾಗುತ್ತೆ Confidence
ಪಾಲಕರೇ ಮಕ್ಕಳ (Children) ಮೊದಲ ಗುರುವಾಗಿರ್ತಾರೆ. ಬರೀ ಅಕ್ಷರಾಭ್ಯಾಸವಲ್ಲ ಮಕ್ಕಳ ಪ್ರತಿಯೊಂದು ಏಳಿಗೆ ಪಾಲಕರ ಕೈನಲ್ಲಿರುತ್ತದೆ. ಮಕ್ಕಳ ಜೊತೆ ಪೋಷಕರು (Parents) ಹೇಗೆ ನಡೆದುಕೊಳ್ತಾರೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಮಕ್ಕಳು ತಪ್ಪುದಾರಿ ಹಿಡಿಬಾರದು ಅಂದ್ರೆ ಪೋಷಕರು ಕೆಲ ಟ್ರಿಕ್ಸ್ (Tricks) ನೆನಪಿಟ್ಟುಕೊಳ್ಳಬೇಕು.
ಅನೇಕ ಪಾಲಕರಿಗೆ (Parents) ಮಕ್ಕಳೆಂದ್ರೆ ತಮ್ಮ ಕನಸ (Dream) ನ್ನು ಈಡೇರಿಸುವ ದಾರಿ. ತಾವು ಬಾಲ್ಯದಲ್ಲಿ ಕಲಿಯಲಾಗದ್ದನ್ನು ಮಕ್ಕಳಿಗೆ (Children) ಕಲಿಸ್ತಾರೆ. ತಾವು ಮಾಡದ ಸಾಧನೆಯನ್ನು ಮಕ್ಕಳು ಮಾಡ್ಬೇಕೆಂದು ಬಯಸ್ತಾರೆ. ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳಿರಬೇಕೆಂದು ಬಯಸ್ತಾರೆ. ಒಂದೇ ಸಮಯದಲ್ಲಿ ಐದಾರು ಕ್ಲಾಸ್ (Class) ಗಳಿಗೆ ಮಕ್ಕಳನ್ನು ಕಳುಹಿಸುವ ಪಾಲಕರು ಎಲ್ಲ ಕ್ಷೇತ್ರಗಳಲ್ಲೂ ಮಕ್ಕಳು ಪಾಲ್ಗೊಳ್ಳುವುದು ಮಾತ್ರವಲ್ಲ, ನಂಬರ್ ಒನ್ ಸ್ಥಾನದಲ್ಲಿಯೇ ಇರಬೇಕೆಂದು ಬಯಸ್ತಾರೆ. ಆತ್ಮಸ್ಥೈರ್ಯ ತುಂಬಿದ ಮಕ್ಕಳಿಗೆ ಮಾತ್ರ ಎಲ್ಲ ಕೆಲಸಗಳನ್ನು ಒಟ್ಟಿಗೆ ಮಾಡಲು ಸಾಧ್ಯ. ಶಾಲೆಯಲ್ಲಿ ಉತ್ತಮ ಅಂಕ ಪಡೆಯುವ ಜೊತೆಗೆ ಜನರೊಂದಿಗೆ ಆರೋಗ್ಯಕರ ಸಂಬಂಧವನ್ನು ರೂಪಿಸುವ ಸಾಮರ್ಥ್ಯವನ್ನು ಅವರು ಹೊಂದುತ್ತಾರೆ ಎಂದು ಸಂಶೋಧನೆ ಕಂಡುಹಿಡಿದಿದೆ.
ಆತ್ಮವಿಶ್ವಾಸ (Confidence)ವಿರುವ ಮಕ್ಕಳನ್ನು ಭಯ ಹಾಗೂ ಆತಂಕ ಸೋಲಿಸಲು ಸಾಧ್ಯವಿಲ್ಲ. ಆತ್ಮವಿಶ್ವಾಸ ತುಂಬಿರುವ ಮಕ್ಕಳು ತಮ್ಮ ಜೀವನದ ಬಗ್ಗೆ ತಾವೇ ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿರುತ್ತಾರೆ. ಪೋಷಕರ ನಡವಳಿಕೆಯು ಮಕ್ಕಳ ಆತ್ಮವಿಶ್ವಾಸದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದು ಮನಶ್ಶಾಸ್ತ್ರಜ್ಞರು ಹೇಳಿದ್ದಾರೆ. ಪೋಷಕರು, ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸಿದರೆ ಮಕ್ಕಳು ಆತ್ಮವಿಶ್ವಾಸದಿಂದಿರುತ್ತಾರೆ. ಅವರ ಬುದ್ಧಿವಂತಿಕೆ ಸ್ವಯಂಚಾಲಿತವಾಗಿ ಸುಧಾರಿಸುತ್ತದೆ. ಆದ್ರೆ ಅನೇಕ ಪೋಷಕರು ಬೆಳೆಸುವ ವಿಧಾನ, ಮಕ್ಕಳ ಆತ್ಮವಿಶ್ವಾಸದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ತಮ್ಮ ಮೇಲಿನ ನಂಬುಗೆಯನ್ನು ಕಳೆದುಕೊಳ್ತಾರೆ. ಸದಾ ಮಕ್ಕಳು ಭಯದಲ್ಲಿರುತ್ತಾರೆ. ಪೋಷಕರು, ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎಂಬುದನ್ನು ತಿಳಿಯಬೇಕು.
ಮಕ್ಕಳ ಆತ್ಮವಿಶ್ವಾಸ ಕಡಿಮೆಯಾಗಲು ಕಾರಣವೇನು? :
ಜವಾಬ್ದಾರಿಯಿಂದ ದೂರವಿಡುವುದು : ಅನೇಕ ಪೋಷಕರು ತಮ್ಮ ಮಕ್ಕಳನ್ನು ಅತಿಯಾಗಿ ಪ್ರೀತಿಸ್ತಾರೆ. ಆದ್ರೆ ಮಕ್ಕಳಿಗೆ ಯಾವುದೇ ಜವಾಬ್ದಾರಿ (Responsibility) ನೀಡುವುದಿಲ್ಲ. ಮಕ್ಕಳನ್ನು ಮನೆ ಕೆಲಸದಿಂದ ಸಂಪೂರ್ಣವಾಗಿ ದೂರವಿಡ್ತಾರೆ. ನಿಮಗೆ ಬರೋದಿಲ್ಲ ಎನ್ನುವ ಮಾತು ಹೇಳಿ ಅವರಿಗೆ ಜವಾಬ್ದಾರಿ ನೀಡುವುದಿಲ್ಲ. ಹಾಗಾಗಿ ಮಕ್ಕಳು ಯಾವಾಗಲೂ ಇತರರ ಮೇಲೆ ಅವಲಂಬಿತರಾಗುತ್ತಾರೆ. ಮಕ್ಕಳಿಗೆ ಜವಾಬ್ದಾರಿ ಕಲಿಸುವುದು ಪಾಲಕರ ಕರ್ತವ್ಯ. ಬಟ್ಟೆಗಳನ್ನು ಪ್ಯಾಕ್ ಮಾಡುವುದು, ಮನೆಯನ್ನು ಅಲಂಕರಿಸುವುದು, ಧೂಳು ತೆಗೆಯುವುದು, ಪಾತ್ರೆಗಳಿಗೆ ನೀರು ತುಂಬುವುದು ಸೇರಿದಂತೆ ಸಣ್ಣಪುಟ್ಟ ಮನೆ ಕೆಲಸಗಳನ್ನು ಮಕ್ಕಳಿಂದ ಮಾಡಿಸಬೇಕು.
SEX AND DIVORCE: ಲೈಂಗಿಕ ಅತೃಪ್ತಿಯಿಂದಲೇ ಡೈವೋರ್ಸ್ ಹೆಚ್ಚು, ಯುವಜನರೇ ಹುಷಾರ್
ಮಕ್ಕಳಿಗೆ ತಪ್ಪು ಮಾಡಲು ಬಿಡದಿರುವುದು : ಎಲ್ಲರಿಗೂ ಎಲ್ಲ ಕೆಲಸ ಬರುವುದಿಲ್ಲ. ಮಕ್ಕಳು ಕೂಡ ಪರ್ಫೆಕ್ಟ್ ಅಲ್ಲ. ಪ್ರಾಕ್ಟೀಸ್ ಮೇಕ್ ಮೆನ್ ಪರ್ಫೆಕ್ಟ್ ಎಂಬ ಮಾತಿದೆ. ಮಕ್ಕಳು ಕೂಡ ಹಾಗೆ ಪ್ರಯೋಗ ಮಾಡಿಯೇ ಅದರಿಂದ ಕಲಿಯಬೇಕು. ಆದ್ರೆ ಬಹುತೇಕ ಪಾಲಕರು ಮಕ್ಕಳಿಗೆ ಏನನ್ನೂ ಮಾಡಲು ಬಿಡುವುದಿಲ್ಲ. ತಪ್ಪು ಮಾಡ್ತಾರೆ ಎಂಬ ಕಾರಣಕ್ಕೆ ಅವರನ್ನು ದೂರವಿಡ್ತಾರೆ. ಇದು ಪಾಲಕರು ಮಾಡುವ ದೊಡ್ಡ ತಪ್ಪು. ತಪ್ಪು ಮಾಡಿ ಅದನ್ನು ತಿದ್ದಿಕೊಂಡಾಗ ಮಾತ್ರ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ.
ಅವರನ್ನು ಅವರಿಗೆ ಅರ್ಥ ಮಾಡಿಸಿ : ಮಕ್ಕಳು ಕೋಪಗೊಂಡಾಗ ಅಥವಾ ಅಳುತ್ತಿದ್ದಾಗ ಪಾಲಕರು ಅವರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಾರೆ. ಬೈದು – ಹೊಡೆದು ಮಕ್ಕಳನ್ನು ಶಾಂತಗೊಳಿಸುವ ಬದಲು ಪ್ರೀತಿಯಿಂದ ಅವರಿಗೆ ತಿಳಿ ಹೇಳಬೇಕು. ಮುಂದಿನ ದಿನಗಳಲ್ಲಿ ಭಾವನೆಗಳು ಅವರ ಮೇಲೆ ಪ್ರಭಾವ ಬೀರಿದ್ರೆ ಹೇಗೆ ಅದನ್ನು ನಿಭಾಯಿಸಬಹುದು ಎಂಬುದನ್ನು ಅವರಿಗೆ ಹೇಳಿ.
ಅವನೂ ಬೇಕು, ಅವಳೂ ಬೇಕು ! ಗಂಡ-ಹೆಂಡತಿ, ಅವಳು ಮೂವರದು ಅನ್ಯೋನ್ಯ ಸಂಸಾರ..!
ಬೇರೆಯವರಿಗೆ ಹೋಲಿಕೆ : ಅನೇಕ ಪೋಷಕರು ತಮ್ಮ ಮಕ್ಕಳನ್ನು ಇತರ ಮಕ್ಕಳೊಂದಿಗೆ ಹೋಲಿಸುವ ಅಭ್ಯಾಸ ಹೊಂದಿರುತ್ತಾರೆ. ತಮ್ಮ ಮಕ್ಕಳು ಅವರೆಲ್ಲರಿಗಿಂತ ಕಡಿಮೆ ಎಂದುಕೊಳ್ತಾರೆ. ಪದೇ ಪದೇ ಬೇರೆ ಮಕ್ಕಳಿಗೆ ಹೋಲಿಕೆ ಮಾಡಿದ್ರೆ ಅವರ ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಎಲ್ಲರಿಗಿಂತ ತಾನು ಕೀಳು ಎಂದುಕೊಳ್ಳುವ ಮಕ್ಕಳು ಹೊಸ ಪ್ರಯತ್ನ,ಪ್ರಯೋಗಕ್ಕೆ ಮುಂದಾಗುವುದಿಲ್ಲ.