Asianet Suvarna News Asianet Suvarna News

ಬಿಗ್‌ಬಾಸ್‌ ಮನೆಯಲ್ಲಿ ಚಪ್ಪಲಿ ಎಸೆದು ಸ್ಪರ್ಧಿಗಳ ಕಿತ್ತಾಟ; ಇದೆಲ್ಲಾ ಓವರ್ ಆಯ್ತು ಎಂದ ನೆಟ್ಟಿಗರು!

ಬಿಗ್‌ಬಾಸ್‌ ಮನೆಯಲ್ಲಿ ಕಿತ್ತಾಟ ತುಂಬಾ ಸಾಮಾನ್ಯವಾಗಿದೆ. ಸ್ಪರ್ಧಿಗಳ ಪರಸ್ಪರ ಭಿನ್ನಾಭಿಪ್ರಾಯದಿಂದ ಕೆಟ್ಟದಾಗಿ ಬೈಯ್ದುಕೊಳ್ಳುವುದು, ಹೊಡೆಯುವುದು, ತಳ್ಳುವುದೂ ಮಾಡುತ್ತಾರೆ. ಹಾಗೆಯೇ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಬ್ಬರ ನಡುವಿನ ಜಗಳ ಹೆಚ್ಚು ಸುದ್ದಿಯಾಗ್ತಿದೆ. ಅದರಲ್ಲೂ ಸ್ಪರ್ಧಿಗಳು ಪರಸ್ಪರ ಚಪ್ಪಲಿ ಎಸೆದು ಕಿತ್ತಾಡಿಕೊಂಡಿದ್ದು, ವೀಕ್ಷಕರು ಓವರ್ ಆಯ್ತು ಅಂತಿದ್ದಾರೆ.

Bigg Boss 17, Ankita Lokhande throws chappal at husband Vicky Jain Vin
Author
First Published Nov 26, 2023, 11:03 AM IST

ಬಿಗ್‌ಬಾಸ್‌ ರಿಯಾಲಿಟಿ ಶೋ ಪ್ರತಿಬಾರಿಯೂ ಸಾಕಷ್ಟು ಸದ್ದು ಮಾಡುತ್ತದೆ. ಸ್ಪರ್ಧಿಗಳ ಆಯ್ಕೆ, ಟಾಸ್ಕ್‌, ಸಂಭಾವನೆ ಎಲ್ಲರ ಗಮನ ಸೆಳೆಯುತ್ತದೆ. ದೊಡ್ಮನೆಯಲ್ಲಿರುವ ಚಿತ್ರ-ವಿಚಿತ್ರ ಸ್ವಭಾವದ ಸ್ಪರ್ಧಿಗಳು, ಹಲವು ಟಾಸ್ಕ್‌, ಲೀಡರ್‌ಶಿಪ್‌, ಲವ್‌, ಫೈಟ್‌, ಕಿತ್ತಾಟ ಎಲ್ಲವೂ ಸುದ್ದಿಯಾಗುತ್ತದೆ. ಕೆಲವೊಮ್ಮೆ ಇದು ವಿಪರೀತಕ್ಕೆ ಹೋಗುವುದು ಇದೆ. ಸ್ಪರ್ಧಿಗಳ ಪರಸ್ಪರ ಭಿನ್ನಾಭಿಪ್ರಾಯದಿಂದ ಕೆಟ್ಟದಾಗಿ ಬೈಯ್ದುಕೊಳ್ಳುವುದು, ಹೊಡೆಯುವುದು, ತಳ್ಳುವುದೂ ಮಾಡುತ್ತಾರೆ. ಹಾಗೆಯೇ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳಿಬ್ಬರ ನಡುವಿನ ಜಗಳ ಹೆಚ್ಚು ಸುದ್ದಿಯಾಗ್ತಿದೆ. ಈ ಘಟನೆ ನಡೀತಿರೋದು ಹಿಂದಿ ಬಿಗ್‌ಬಾಸ್ ಸೀಸನ್‌ 17ರಲ್ಲಿ.

ಹೌದು, ಹಿಂದಿ ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಈ ಬಾರಿ ಹೆಚ್ಚು ಸುದ್ದಿಯಾದವರು ಕಿರುತೆರೆ ನಟಿ ಅಂಕಿತಾ ಲೋಖಂಡೆ ಹಾಗೂ ಆಕೆಯ ಪತಿ ವಿಕ್ಕಿ ಜೈನ್‌. ಬಿಗ್‌ಬಾಸ್‌ ಮನೆಯೊಳಗೆ ಹೋಗುವ ಮೊದಲು ಹೆಚ್ಚು ಅನ್ಯೋನ್ಯವಾಗಿ ಮೀಡಿಯಾದ ಮುಂದೆ ಕಾಣಿಸಿಕೊಳ್ಳುತ್ತಿದ್ದ ದಂಪತಿ (Couple) ದೊಡ್ಮನೆಯಲ್ಲಿ ಸಣ್ಣಪುಟ್ಟ ವಿಚಾರಕ್ಕೆ ಕಿತ್ತಾಡಿಕೊಳ್ಳುವುದು (Fighting) ಸುದ್ದಿಯಾಗಿತ್ತು. ಅಂಕಿತಾ ಲೋಖಂಡೆ ಪತಿಯ ಬಳಿ, 'ನಾನು ನಿನ್ನನ್ನು ಮದುವೆಯಾಗಿದ್ದೇ ತಪ್ಪು' ಎಂದು ಸಹ ಹೇಳಿಕೊಂಡಿದ್ದರು. ಇಬ್ಬರೂ ಹಲವು ಬಾರಿ ಕಿತ್ತಾಡಿಕೊಂಡು ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡಿದ್ದರು. 

ಬಿಗ್​ಬಾಸ್​ ಮನೆಯಲ್ಲೇ ನಟಿ ಗರ್ಭಿಣಿ? ಪ್ರೇಕ್ಷಕರ ಈ ಪ್ರಶ್ನೆಗಳಿಗೆ ಉತ್ತರ ಕೊಡ್ತಾರಾ ಅಂಕಿತಾ?

ಸಣ್ಣ ಪುಟ್ಟ ವಿಚಾರಕ್ಕೂ ಕಿತ್ತಾಡಿಕೊಳ್ಳುವ ವಿಕ್ಕಿ-ಅಂಕಿತಾ ದಂಪತಿ
ಇತ್ತೀಚಿಗೆ ನಡೆದ ಘಟನೆಯಲ್ಲಿ ನಟಿ ಅಂಕಿತಾ ಲೋಖಂಡೆ ಪತಿ ವಿಕ್ಕಿ ಜೈನ್ ಮೇಲೆ ಚಪ್ಪಲಿಗಳನ್ನು ಎಸೆದಿದ್ದಾರೆ. ಬಿಗ್ ಬಾಸ್ 17 ರ ಸಂಚಿಕೆಯಲ್ಲಿ, ಅಂಕಿತಾ ಅವರು ಇತರ ಮನೆಯ ಸದಸ್ಯರ ಮುಂದೆ ಮಲಗಿದ್ದ ವಿಕ್ಕಿಯನ್ನು ಹಿಡಿದು ಅಟ್ಟಾಡಿಸಿ ಹೊಡೆದರು. ಸ್ಪರ್ಧಿಗಳ (Contestants) ನಡುವೆ ಆಹಾರದ ವಿಚಾರವಾಗಿ ಚರ್ಚೆ ನಡೆಯುತ್ತಿದ್ದಾ ವಿಕ್ಕಿ ತಮಾಷೆಯಾಗಿ ಅಂಕಿತಾ ಕುತ್ತಿಗೆಯನ್ನು ಹಿಂದೆಯಿಂದ ಹಿಡಿಯುತ್ತಾನೆ. ಅದನ್ನು ಬಿಡಿಸಿದ ಅಂಕಿತಾ ಅವನ ಹಿಂದೆ ಓಡಿ, ತನ್ನ ಚಪ್ಪಲಿಗಳನ್ನು (Chappal) ತೆಗೆದು ಆತನ ಮೇಲೆ ಎಸೆಯುತ್ತಾಳೆ. ಉಳಿದ ಸ್ಪರ್ಧಿಗಳೆಲ್ಲಾ ನಗುತ್ತಾರೆ. 

ಕೆಲ ದಿನಗಳ ಹಿಂದೆ ವಿಕ್ಕಿ ಜೈನ್ ಇನ್ನೊಬ್ಬ ಸ್ಪರ್ಧಿ ಸನಾ ರಯೀಸ್ ಖಾನ್ ಅವರ ಕೈಗಳನ್ನು ಹಿಡಿದಿರುವ ದೃಶ್ಯಗಳು ವೈರಲ್ ಆಗಿತ್ತು. ವೀಡಿಯೋದಲ್ಲಿ ವಿಕ್ಕಿ ಸನಾ ಪಕ್ಕ ಕುಳಿತುಕೊಂಡು, ಇಬ್ಬರೂ ಕೈಗಳನ್ನು ಹೆಣೆದುಕೊಂಡು ಬೆರಳುಗಳಲ್ಲಿ ಆಟವಾಡುತ್ತಿರುತ್ತಾರೆ. ಈ ನಡವಳಿಕೆಗೆ ವೀಕ್ಷಕರು ಸಹ ವಿರೋಧ ವ್ಯಕ್ತಪಡಿಸಿದ್ದರು.

ಟಾಪ್‌ ಹಾಕಿ, ಪ್ಯಾಂಟ್ ಹಾಕೋದನ್ನೇ ಮರೆತ್‌ಬಿಟ್ರಾ; ಬಿಗ್‌ಬಾಸ್‌ ನಟಿಯ ಹಾಟ್‌ ಲುಕ್‌ ವೈರಲ್‌

ರೆಡ್ಡಿಟ್‌ನಲ್ಲಿ ಕಾಮೆಂಟ್ ಮಾಡಿದ ಕೆಲವು ವೀಕ್ಷಕರು ವಿಕ್ಕಿ ಅವರ ನಡವಳಿಕೆಯು ಅವರ ಪತ್ನಿ ಅಂಕಿತಾಗೆ ಮಾಡುವ ಅಗೌರವವಾಗಿದೆ ಎಂದು ತಿಳಿಸಿದ್ದರು. ಮತ್ತೆ ಕೆಲವರು ಕಾಮೆಂಟ್ ಮಾಡಿ 'ಅಂಕಿತಾಳ ಸಂಗಾತಿಯ ಆಯ್ಕೆ ತುಂಬಾ ತಪ್ಪಾಗಿದೆ' ಎಂದು ಕಾಮೆಂಟ್ ಮಾಡಿದ್ದರು.

Bigg Boss 17, Ankita Lokhande throws chappal at husband Vicky Jain Vin

Follow Us:
Download App:
  • android
  • ios