ಎರಡು ಬಾರಿ ಪತ್ನಿಯಿಂದ ಮೋಸ, ಜಿಪಿಎಸ್ ಟ್ರಾಕರ್‌ನಿಂದ ಹೊಟೆಲ್ ಸರಸ ಕಂಡು ಕಣ್ಣೀರಿಟ್ಟ ಪತಿ, 15 ವರ್ಷದ ಸಂಸಾರದಲ್ಲಿ ಪತ್ನಿ ಎರಡನೇ ಬಾರಿಗೆ ಈ ರೀತಿ ಮೋಸ ಮಾಡಿದ್ದಾಳೆ ಎಂದು ಪತ್ನಿ ಕಣ್ಣೀರಿಟ್ಟಿದ್ದಾನೆ.

ಅಮೃತಸರ (ಜ.23) ಸುಖ ಸಂಸಾರದಲ್ಲಿ ಮತೊಬ್ಬನ ಎಂಟ್ರಿಯಾಗಿದೆ. ಆದರೆ ಪತಿಗೆ ಗೊತ್ತೇ ಆಗಲಿಲ್ಲ. 15 ವರ್ಷದ ಸಂಸಾರದಲ್ಲಿ ಪತ್ನಿಯ ಸರಸವನ್ನು ಪತಿ ರೆಡ್ ಹ್ಯಾಂಡ್ ಆಗಿ ಪತ್ತೆ ಹಚ್ಚಿದ್ದ. ಆಘಾತಗೊಂಡಿದ್ದ ಗಂಡ, ತನ್ನ ಪತ್ನಿಯನ್ನು ಮನ ಒಲಿಸಿ ಸಂಸಾರ, ಮಕ್ಕಳು ಜವಾಬ್ದಾರಿಯಿಂದ ಬುದ್ಧಿವಾದ ಹೇಳಿದ್ದ. ಪತ್ನಿ ಸರಿಯಾಗಿದ್ದಾಳೆಂದು ನಂಬಿದ್ದ ಪತಿಗೆ ಮತ್ತೆ ಆಘಾತವಾಗಿದೆ. ಕಾರಣ ಮತ್ತೆ ಅದೇ ಗೆಳೆಯನೊಂದಿಗೆ ಹೊಟೆಲ್ ಕೊಠಡಿಯಲ್ಲಿ ಸರಸವಾಡುತ್ತಿದ್ದ ವೇಳೆ ಮತ್ತೆ ಪತಿ ಎಂಟ್ರಿಕೊಟ್ಟ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾನೆ. ಈ ಬಾರಿ ಪತ್ನಿಯ ಮನ ಒಲಿಸುವ ಬದಲು ಪತಿ ಕಣ್ಣೀರಿಟ್ಟಿದ್ದಾನೆ. 2ನೇ ಬಾರಿಗೆ ಪತ್ನಿ ಮೋಸ ಮಾಡಿದ್ದಾಳೆ. 15 ವರ್ಷದ ಸಂಸಾರ ಹಾಳಾಗಿದೆ ಎಂದು ಪತಿ ಗಳಗಳನೇ ಅತ್ತ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ.

ಮಕ್ಕಳ ಸಲುವಾಗಿ ಮೊದಲ ಬಾರಿ ಕರುಣೆ ತೋರಿದ್ದ ಗಂಡ

ಅಮೃತಸರದ ನಿವಾಸಿ ರವಿ ಗುಲಾಟಿ 2018ರಲ್ಲಿ ಮೊದಲ ಬಾರಿಗೆ ಪತ್ನಿಯ ಸರಸವನ್ನು ಪತ್ತೆ ಹಚ್ಚಿದ್ದ. ಪತ್ನಿಗೆ ಮತ್ತೊಬ್ಬನ ಜೊತೆ ಸಲುಗೆಯಿಂದ ಇರುವ ಮಾಹಿತಿ ಪಡೆದಿದ್ದ ಪತಿ, ಪತ್ನಿಯನ್ನು ಹಿಂಬಾಲಿಸಿದ್ದ ಈ ವೇಳೆ ಹೊಟೆಲ್ ರೂಂನಲ್ಲಿ ಇಬ್ಬರು ಸರಸದಲ್ಲಿರುವಾಗಲೇ ಪತ್ತೆ ಹಚ್ಚಿದ್ದ. ಪತಿಯನ್ನು ನೋಡಿ ಪತ್ನಿ ಕೂಡ ಬೆಚ್ಚಿ ಬಿದ್ದಿದ್ದಳು. ಪುಟ್ಟ ಮಗುವಿನ ಕಾರಣದಿಂದ ರವಿ ಗುಲಾಟಿ, ಪತ್ನಿಗೆ ಬುದ್ದಿವಾದ ಹೇಳಿ ಮನೆಗೆ ಕರೆದುಕೊಂಡು ಬಂದಿದ್ದ. ಮಗುವಿನ ಭವಿಷ್ಯದ ದೃಷ್ಟಿಯಿಂದ ದೊಡ್ಡವಳಾಗಿ ಮದುವೆಯಾಗುವ ವರೆಗೂ ಜೊತೆಗಿರಬೇಕು. ಆಕೆಯನ್ನು ದಡ ಸೇರಿಸಿದ ಬಳಿಕ ಏನೇ ನಿರ್ಧಾರ ತೆಗೆದುಕೊ ಎಂದು ಗಂಡ ಸೂಚಿಸಿದ್ದ. ಇದಕ್ಕೆ ಒಪ್ಪಿಕೊಂಡ ಪತ್ನಿ ಸೈಲೆಂಟ್ ಆಗಿದ್ದಳು.

ರವಿ ಗುಲಾಟಿ ಮುಂದೆ ಸೈಲೆಂಟ್ ಆಗಿದ್ದರೂ ಸದ್ದಿಲ್ಲದೆ ಸರಸ ನಡೆಯುತ್ತಿತ್ತು. ಈ ಕುರಿತು ರವಿ ಗುಲಾಟಿಗೆ ಹಲವರು ಮಾಹಿತಿ ನೀಡಿದ್ದರು. ಪತ್ನಿಯನ್ನು ವಿಚಾರಿಸಿದಾಗ ಏನೂ ಇಲ್ಲ ಎಂದು ಉತ್ತರಿಸಿದ್ದರು. ಆದರೆ ಜಿಪಿಎಸ್ ಟ್ರಾಕ್ ಅಳವಡಿಸಿದ್ದ ಪತಿಗೆ ಆಘಾತವಾಗಿದೆ. ಪತ್ನಿ ಸ್ಕೂಟರ್‌ಗೆ ಜಿಪಿಎಸ್ ಟ್ರಾಕರ್ ಅಳವಡಿಸಲಾಗಿತ್ತು. ಅನುಮಾನ ಹೆಚ್ಚಾಗುತ್ತಿದ್ದಂತೆ ಪತ್ನಿಯ ಜಿಪಿಎಸ್ ಟ್ರಾಕರ್ ಟ್ರೇಸ್ ಮಾಡಿದಾಗ ಮತ್ತೆ ಹೊಟೆಲ್ ಕಡೆ ತೂರಿಸಿತ್ತು. ಹೀಗಾಗಿ ಜಾಡು ಹಿಡಿದು ಬಂದ ಪತಿಗೆ ಆಘಾತವಾಗಿದೆ. ಎರಡನೇ ಬಾರಿ ಪತ್ನಿ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾಳೆ.

2010ರಲ್ಲಿ ಮದುವೆಯಾದ ರವಿ ಗುಲಾಟಿ

2010ರಲ್ಲಿ ಮದುವೆಯಾದ ರವಿ ಗುಲಾಟಿ ಶಾಪ್ ನಡೆಸುತ್ತಿದ್ದ. ಮನೆಯಲ್ಲಿದ್ದ ಪತ್ನಿಗೆ ಬೇರೊಬ್ಬನ ಜೊತೆ ಸ್ನೇಹ ಶುರುವಾಗಿದೆ. ಸ್ನೇಹ ದೇಹ ಸಂಪರ್ಕಕ್ಕೆ ತಿರುಗಿದೆ. ಇದೀಗ ಪತ್ನಿ ಮೋಸ ಮಾಡುತ್ತಲೇ ಇದ್ದಾಳೆ. ಈಗ ಕ್ಷಮಿಸಿದರೂ ಆಕೆ ಸರಿಯಾಗುತ್ತಾಳೆ ಅನ್ನೋ ನಂಬಿಕೆ ಇಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕೂ ಮಾರಕವಾಗಲಿದೆ. ಹೀಗಾಗಿ ಮತ್ತೆ ಪತ್ನಿಯನ್ನು ಕ್ಷಮಿಸಿದರೆ ನನ್ನ ಮಕ್ಕಳ ಭವಿಷ್ಯಕ್ಕೆ ನಾನೇ ಕೊಳ್ಳಿ ಇಟ್ಟಂತೆ ಎಂದು ಗಂಡ ಕಣ್ಣೀರಿಟ್ಟಿದ್ದಾನೆ.

Scroll to load tweet…