ಬೆಂಗಳೂರಿನಲ್ಲಿ ಬೀದಿ ನಾಯಿ ಕಳ್ಳತನವಾಗಿರುವ ಬಗ್ಗೆ ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮೈಕೋ ಲೇಔಟ್ ಬಳಿ ರಂಗ ಕಾಲೋನಿಯಲ್ಲಿ ನಾಯಿಯನ್ನು ಕದ್ದೊಯ್ದಿರುವ ಬಗ್ಗೆ ದೂರು ದಾಖಲಾಗಿದೆ.

ಬೆಂಗಳೂರು (ಮಾ.09): ನಮ್ಮ ಮನೆ ಮುಂದಿನ ಬೀದಿಯಲ್ಲಿ ಇರುತ್ತಿದ್ದ ಹಾಗೂ ರಾತ್ರಿ ವೇಳೆ ನಮ್ಮ ಬೀದಿಯನ್ನು ಕಾವಲು ಕಾಯುತ್ತಿದ್ದ ನಾಯಿ ಕಾಣೆಯಾಗಿದೆ. ದಯವಿಟ್ಟು ನಮ್ಮ ನಾಯಿಯನ್ನು ಹುಡುಕಿಕೊಡಿ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಗೆ ದೂರು ನಿಡಿದ್ದಾರೆ.

ಹೌದು, ಬೀದಿ ನಾಯಿ ಕಳ್ಳತನವಾಗಿದ್ದಕ್ಕೆ ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ನಮ್ಮ ಏರಿಯಾ ಬೀದಿ ನಾಯಿಯನ್ನು ಯಾರೋ‌ ಕದ್ದೊಯ್ದಿದ್ದಾರೆ. ಹುಡುಕಿ ಕೊಡಿ ಎಂದು ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಾಣಿ ಪ್ರಿಯೆ ನಿರ್ಮಲಾ ಎನ್ನುವವರಿಂದ ಮೈಕೋ ಲೇಔಟ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಪರಿಚಿತರ ವಿರುದ್ಧ ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಕೂಡ FIR ದಾಖಲು ಮಾಡಿಕೊಂಡಿದ್ದಾರೆ.

ಮೈಕೋ ಲೇಔಟ್‌ನ ರಂಕ ಕಾಲೊನಿ ರಸ್ತೆಯಲಿ ರಾತ್ರಿ 2 ಗಂಟೆಗೆ ಅಪರಿಚಿತ ವ್ಯಕ್ತಿಗಳಿಂದ ಬೀದಿ ನಾಯಿ ಕಳ್ಳತನ ಆಗಿದೆ ಎಂದು ಮಹಿಳೆ ಆರೋಪ ಮಾಡಿದ್ದಾರೆ. ಸುಮಾರು 3-4 ಅಪರಿಚಿತ ವ್ಯಕ್ತಿಗಳು ಬಂದು ರಂಗ ಕಾಲೋನಿ ಅಪಾರ್ಟೆಂಟ್‌ನ ಬೀದಿಯಲ್ಲಿ ಮಲಗಿದ್ದ ನಾಯಿಯನ್ನು ಚೀಲದಲ್ಲಿ ಕಟ್ಟಿ ಎತ್ತಿಕೊಂಡು ಹೋಗಿದ್ದಾರೆ. ಮೂರ್ನಾಲ್ಕು ಜನರು ಸೇರಿಕೊಂಡು ಚೀಲದಲ್ಲಿ ಏನೋ ಒಯ್ಯುತ್ತಿರುವುದನ್ನು ನಾವು ನೋಡಿದ್ದೇನೆ. ಬಳಿಕ GOGO ಶ್ವಾನವು ಕಾಣೆಯಾಗಿದೆಯೆಂದು ಸ್ನೇಹಿತರು ಹೇಳಿದ್ದಾರೆ.

ಇದನ್ನೂ ಓದಿ: ಅಹಂಕಾರವನ್ನು ದೂರವಿಟ್ಟರೆ ಸಕ್ಸಸ್ ಖಂಡಿತ ಎನ್ನುವ ಉದ್ಯಮಿಯ 7000 ಕೋಟಿ ರೂ ಆಸ್ತಿಯ ಗುಟ್ಟಿದು!

ರಂಗ ಕಾಲೋನಿಲ್ಲಿ GOGO ಶ್ವಾನ ಎಂದೇ ಖ್ಯಾತಿಯಾಗಿದ್ದ ಈ ಬೀದಿ ನಾಯಿ ಕಾಣೆಯಾದ ಸಮಯದ ಸಿಸಿಟಿವಿ ಫೂಟೆಜ್ ಕೇಳಿದರೆ ಅಲ್ಲಿನ ಕೆಲವು ನಿವಾಸಿಗಳು ಡಿಲಿಟ್ ಆಗಿದೆ ಅಂತಿದ್ದಾರೆ. ಆದರೆ, ಮಧ್ಯರಾತ್ರಿ 2 ಗಂಟೆ ಸುಮಾರಿನ ಸಿಸಿಟಿವಿಉ ಫೂಟೇಜ್ ಮಾತ್ರ ಏಕೆ ಡಿಲೀಟ್ ಮಾಡಿದ್ದೀರಿ. ಸರಿಯಾಗಿ ನಾಯಿ ಕಳೆದುಹೋದ ಸಮಯದ ಸಿಸಿಟಿವಿ ಫೂಟೇಜ್ ಡಿಲೀಟ್ ಆಗಿದ್ದರಿಂದ ರಂಗ ಕಾಲೋನಿಯ ನಿವಾಸಿಗಳ ಮೇಲೆಯೇ ಅನುಮಾನ ಬರುತ್ತಿದೆ. ಹೀಗಾಗಿ, ನಾಯಿ ಹುಡುಕಿ ಕೊಡುವಂತೆ ಮಹಿಳೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.