ಕೊರೋನಾ ಬಂದ ಮೇಲೆ ಎಲ್ಲರೂ ಮನೆಯೊಳಗೆ ಉಳಿದಿದ್ದಾರೆ. ಈ ಸಂದರ್ಭ ಜನರಿಗೆ ದೊಡ್ಡ ಮನೆರಂಜನೆಯಾಗಿದ್ದು ಇಂಟರ್‌ನೆಟ್. ವಿಡಿಯೋ ಕಾಲ್, ಕಾನ್ಫರೆನ್ಸ್ ಮಾಡ್ತಾ ಜನರು ಸಂಪರ್ಕದಲ್ಲಿದ್ದಾರೆ.

ಇನ್ನೂ ಒಂದಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆಯುತ್ತಿದ್ದಾರೆ. ನಗಿಸುವ ಮೆಮ್ಸ್, ಪೋಸ್ಟ್‌ಗಳನ್ನೂ ಶೇರ್ ಮಾಡುತ್ತಾ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಎಲ್ಲ ಬಗೆಯ ತಮಾಷೆ, ವಿಡಿಯೋ, ಪೋಸ್ಟ್‌ಗಳು ಸಿಗುತ್ತಿದ್ದರೂ ಇದು ಕೆಲವೊಮ್ಮೆ ಸಾಮಾಜಿಕವಾಗಿ ಕೆಲವರಿಗೆ ತೊಂದರೆಯಾಗುತ್ತಿದೆ. ಟ್ವಿಲಿಯೋ ಆಯೋಜಿಸಿದ ದೆವಲಪರ್ ಕಾನ್ಫರೆನ್ಸ್‌ನಲ್ಲಿ ಮಾಜಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರೂ ಇದನ್ನೇ ಹೇಳಿದ್ದಾರೆ.

 

ಜನ ಸತ್ಯ, ಸುಳ್ಳು ಅರಿಯದೆಯೇ ತಮ್ಮದೇ ಆದ ಅಭಿಪ್ರಾಯಗಳನ್ನು ಸೃಷ್ಟಿಸುತ್ತಿದ್ದಾರೆ. ಹಾಗೆಯೇ ಎಲ್ಲರೂ ವೈಯಕ್ತಿಕವಾಗಿ ಐಸೋಕೇಟ್ ಆಗುತ್ತಿದ್ದಾರೆ. ಇಂಟರ್‌ನೆಟ್ ಫೇಸ್‌ಬುಕ್‌ಗಳ ಮೂಲಕ ಜನ ಸಂಕುಚಿತಗೊಳ್ಳುತ್ತಿದ್ದಾರೆ. ಸಾಕಷ್ಟು ವೆಬ್‌ಸೈಟ್ ಮತ್ತು ಚಾನೆಲ್‌ಗಳಿದ್ದರೂ ನಮ್ಮ ಸಂಸ್ಕೃತಿ ನಾವು ಮತ್ತೆ ಪರಿಶೀಲಿಸುವುದು ಹೇಗೆ ಎಂದು ಪ್ರಶ್ನಿಸಿದ್ದಾರೆ.

ನಂಬಿಕೆ ಮತ್ತು ಸತ್ಯಗಳ ನಡುವಿನ ವತ್ಯಾಸವನ್ನು ಜನ ಅರಿತುಕೊಳ್ಳಬೇಕು. ನೀವು ನಿಮ್ಮ ನಂಬಿಕೆ ನಂಬಬಹುದು. ಆದರೆ ನಿಮ್ಮ ಸತ್ಯವೇ ನಿಜ ಎಂದು ಬಂಬುವ ಹಾಗಿಲ್ಲ ಎಂದಿದ್ದಾರೆ.

 

ಸೋಷಿಯಲ್ ಮೀಡಿಯಾ ದೇಶದ ಜನರಿಗೆ ಮೊದಲಿಗಿಂತೂ ಹೆಚ್ಚು ಮಾಹಿತಿ ತಲುಪಿಸುತ್ತಿದೆ. ಸೋಷಿಯಲ್ ಮೀಡಿಯಾ ಸರಿಯಾಗಿ ಬಳಸಿ ಜನರಿಗೆ ಮಾಹಿತಿ ನೀಡಬೇಕು, ಆದರೆ ಜನರನ್ನು ಒಡೆಯಬಾರದು ಎಂದಿದ್ದಾರೆ.