ಆಧುನಿಕ ಸಂಬಂಧಗಳಲ್ಲಿ 'ಬ್ಯಾಂಕ್ಸಿಂಗ್' ಎಂಬ ಹೊಸ ಟ್ರೆಂಡ್ ಹೊರಹೊಮ್ಮುತ್ತಿದೆ. ಘೋಸ್ಟಿಂಗ್‌ಗಿಂತ ಭಿನ್ನವಾಗಿ, ಬ್ಯಾಂಕ್ಸಿಂಗ್‌ನಲ್ಲಿ ವ್ಯಕ್ತಿಯು ನಿಧಾನವಾಗಿ, ಯಾವುದೇ ಸ್ಪಷ್ಟ ಕಾರಣವಿಲ್ಲದೆ ಸಂಬಂಧದಿಂದ ದೂರ ಸರಿಯುತ್ತಾರೆ. ಇದು ಮಾನಸಿಕ ಖಿನ್ನತೆಗೆ ಕಾರಣವಾಗಬಹುದು.
ಇತ್ತೀಚಿನ ಆಧುನಿಕ ಬದುಕಿನಲ್ಲಿ ವಿವಿಧ ರೀತಿಯ ರಿಲೇಶನ್‌ಶಿಪ್‌ಗಳು(Relationship) ದಿನದಿಂದ ದಿನಕ್ಕೆ ಮನ್ನಣೆಗೆ ಬರಯತ್ತಲೇ ಇರುತ್ತದೆ. ಹೊಸ ಹೊಸ ರೀತಿಯ ಟ್ರೆಂಡ್ ರಿಲೇಷಶಿಫ್‌ಗತ್ತ(Relationship) ಯುವಕರು ಮಾರುಹೋಗುತ್ತಲೇ ಇರುತ್ತಾರೆ. ಮದುವೆಗಳಂತ ಬಂಧದಲ್ಲಿ ಸಿಲುಕಿ ಜೀವನ ಪೂರ್ತಿ ಒಬ್ಬರ ಜೊತೆ ಇರುವುದಕ್ಕಿಂತ ಎಲ್ಲಿಯ ವರೆಗೆ ಒಬ್ಬ ವ್ಯಕ್ತಿ ಜೊತೆ ನಮಗೆ ಇರಬೇಕು ಎನಿಸುತ್ತದೆಯೋ ಅಲ್ಲಿಯವರೆಗೆ ಅವರ ಜೊತೆಗಿದ್ದು,ನಂತರ ಆ ಸಂಬಂಧದಿಂದ ದೂರವಾಗುವಂತ್ ಸಂಬಂದ್ದಗಳು ಇತ್ತೀಚಿಗೆ ಬಹಳ ಟ್ರೇಂಡ್ ಆಗ್ತಾ ಇವೆ. ಹಾಗೇ ಇತ್ತೀಚಿಗಿನ ಯುವಕ ಯುವತಿಯರೂ ಸಹ ಇಂತಾ ಟ್ರೆಂಡ್‌ಗಳನ್ನ ಫಾಲೋವ್ ಮಾಡೋದು ಹೆಚ್ಚಾಗ್ತಾ ಇದೆ.
ಒಬ್ಬ ವ್ಯಕ್ತಿ ನಿಧಾನವಾಗಿ ನಿಮ್ಮ ಜೀವನದಿಂದ ದೂರ ಸರಿಯುತ್ತಿರುವಂಥ ಅನುಭವ ನಿಮಗೆ ಎಂದಾದರೂ ಆಗಿದೆಯಾ? ಅವರು ಸ್ಪಷ್ಟವಾಗಿ ಏನೂ ಹೇಳಲ್ಲ,ನಿಮ್ಮ ವಿರುದ್ದ ಏನು ಮಾತನಾಡುವುದು ಇಲ್ಲಾ, ಬ್ರೇಕಪ್ ಸಹ ಮಡಿಕೊಳ್ಳುವುದಿಲ್ಲ ,ಆದರೆ ಒಂದು ದೂರದ ಎಳವಿಲ್ಲದ ಅಂತರವನ್ನ ಆ ಸಂಬಂಧದಲ್ಲಿ ಹೊಂದಿರುತ್ತಾರೆ. ಇತ್ತೀಚೆಗೆ ಈ ತರದ ಅನುಭವಕ್ಕೆ "ಬ್ಯಾಂಕ್ಸಿಂಗ್" (Banksying) ಅಂತ ಹೆಸರಿಡ್ತಾ ಇರೋದು."ಬ್ಯಾಂಕ್ಸಿಂಗ್" (Banksying) ಇದು "ಘೋಸ್ಟಿಂಗ್" ಗಿಂತ ಬೇರೆ. ಘೋಸ್ಟಿಂಗ್ ಎಂದರೆ ತಕ್ಷಣಕ್ಕೆ ,ಒಮ್ಮೆಲೆ ತಳ್ಳಿಹಾಕುವ ರೀತಿ. ಆದರೆ ಬ್ಯಾಂಕ್ಸಿಂಗ್? ನಿಧಾನವಾಗಿ ಆ ಸಂಬಂಧದಿಂದ ದೂರ ಸರಿಯುವದು, ಆದರೆ ಎರಡು ರಿಲೇಷನ್‌ಶಿಫ್‌ಗಳು(Relationship) ನೋವನ್ನ ನೀಡೆ ನೀಡುತ್ತವೆ
ಬ್ಯಾಂಕ್ಸಿಂಗ್ ಅಂದರೆ ಈ ಪದವು ಸ್ಟ್ರೀಟ್ ಆರ್ಟಿಸ್ಟ್ ಬ್ಯಾಂಕ್ಸಿಯಿಂದ ಸ್ಫೂರ್ತಿ ಪಡೆದದ್ದಾಗಿದ್ದು. ಒಬ್ಬ ವ್ಯಕ್ತಿ ಕೆಲವು ಸಮಯ ನಿಮ್ಮ ಜೊತೆಗಿದ್ದು ಬೇಡವೆನಿಸಿದಾಗ ಹೇಳದೇ ಕೇಳದೆ ಮೌನವಾಗಿ ದೂರವಾಗುವುದು."ಬ್ಯಾಂಕ್ಸಿಂಗ್ ಯಾರಾದರೂ ಯಾವುದೇ ಎಚ್ಚರಿಕೆ ಇಲ್ಲದೆ ಸಂಬಂಧದಿಂದ ಸಂಪೂರ್ಣವಾಗಿ ಮರೆಯಾಗುವುದು ಮತ್ತು ಯಾವದೇ ಸುಳಿವು ನೀಡದೆ ಹೋಗಿಬಿಡೋದು.ಅಂದರೆ ಇಬ್ಬರು ಇಷ್ಟ ಪಟ್ಟು ಕೆಲವು ವರ್ಷಗಳು ಜೊತೆಗಿದ್ದು, ನಂತರ ಅವರ ಜೊತೆಗೆ ಇರುವುದು ಬೇಸರವೆನಿಸಿದಾಗ ದೂರವಾಗುವುದು. ಈ ತರದ ಸಂಬಂಧದಲ್ಲಿ, ಇಬ್ಬರೂ ಇನ್ನೂ ಮಾತಾಡ್ತಾ ಇರಬಹುದು, ಒಟ್ಟಿಗೆ ಊಟ ಮಾಡ್ತಾ ಇರಬಹುದು, ಮೆಸೇಜ್ ಕೂಡ ಶೇರ್ ಮಾಡ್ತಾ ಇರಬಹುದು ಆದರೆ ಒಂದು ಬದಲಾವಣೆ ಖಚಿತವಾಗಿ ಅನ್ನಿಸತ್ತೆ. ಅವರು ನಿಮ್ಮ ಜೊತೆಗೆ ಇದ್ದರೂ, ನಿಜವಾಗಿಯೂ ‘ಇಲ್ಲ’ ಅನ್ನಿಸತ್ತೆ. ಅವರು ದೈಹಿಕವಾಗಿ ನಿಮ್ಮ ಜೊತೆ ಇದ್ದರೂ ಮಾನಸಿಕವಾಗಿ ನಿಮ್ಮ ಜೊತೆ ಇರಲು ಇಚ್ಚೆ ಪಡುವುದಿಲ್ಲ.ಅವರಿಗೆ ನಿಮ್ಮಿಂದ ಮುಕ್ತಿ ಬೇಕಾಗಿರುತ್ತದೆ. "ಬ್ಯಾಂಕ್ಸಿಂಗ್ (Banksying) ಯಾರಾದರೂ ಯಾವುದೇ ಎಚ್ಚರಿಕೆ ಇಲ್ಲದೆ ಸಂಬಂಧದಿಂದ ಸಂಪೂರ್ಣವಾಗಿ ಮರೆಯಾಗುವುದು ಮತ್ತು ಯಾವುದೇ ಸುಳಿವು ನೀಡದೆ ಹೋಗಿಬಿಡೋದು.
ಕೆಲವೊಮ್ಮೆ, ಕೆಲವರು ತಾವು "ಬ್ಯಾಂಕ್ಸಿಂಗ್"(Banksying) ಮಾಡ್ತಾ ಇರೋದು ಅಂತ ಗೊತ್ತೇ ಇರೋದಿಲ್ಲ. ಆದ್ರೆ ಗಂಭೀರ ವಿಷಯ ಏನೆಂದರೆ – ಬ್ಯಾಂಕ್ಸಿಂಗ್ ಅನ್ನುವಂತಹ ರಿಲೇಷನ್‌ಶಿಪ್ ಇದ್ದು ದೂರವಾಗೋದು ನಿಮಗೆ ತುಂಬಾ ಆಘಾತ ಉಂಟುಮಾಡಬಹುದು. ಏಕೆಂದರೆ ಬ್ಯಾಂಕ್ಸಿಂಗ್(Banksying) ರಿಲೇಷನ್‌ಶಿಫ್ ಒಬ್ಬ ವ್ಯಕ್ತಿ ನಿಧಾನವಾಗಿ ದೂರವಾಗೋದು. ಅದು ನಿಮಗೆ ಹಲವು ಪ್ರಶ್ನೆಗಳನ್ನು ಹುಟ್ಟಿಸುತ್ತೆ – “ನಾನು ಏನಾದರೂ ತಪ್ಪು ಮಾಡಿದ್ದೆನಾ?”, “ಅವರ ಜೊತೆಗೆ ನನಗೆ ಇರಲು ಅರ್ಹತೆ ಇಲ್ಲವಾ?”,“ಅವರು ಏಕೆ ಏನೂ ಹೇಳ್ಲಿಲ್ಲ?” ಅವರಿಗೆ ನಾನು ಇಷ್ಟ ಇಲ್ವಾ? ಅನ್ನುವಂತಹ ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡಬಹುದು. ಇದರಿಂದ ಮಾನಸಿಕ ಖಿನ್ನತೆಗೆ ವ್ಯಕ್ತಿ ಜಾರುವಂತಹ ಸಂಭವ ಸಹ ಇರುತ್ತದೆ. ಯಾಕೆಂದರೆ ಈ ರಿಲೇಷನ್‌ಶಿಪ್ನಲ್ಲಿ ಒಬ್ಬರು ಮಾತ್ರ ಬಿಟ್ಟುಹೋಗುವಂತಹ ನಿರ್ಧಾರವನ್ನ ಮಾಡಿದರೆ ಇನ್ನೊಬ್ಬರಿಗೆ ಸಹಜವಾಗಿ ನೋವಾಗುತ್ತದೆ. ಬ್ರೇಕಪ್ ಎಂದೆಂದಿಗೂ ಸುಲಭವಲ್ಲ. ಆದರೆ ಏನು ಸುಳಿವಿಲ್ಲದೇ ಮೌನದ ಬಿಟ್ಟುಹೋಗುವುದು ಬಿಟ್ಟುಹೋಗೋದು? ಅದು ಜೀವನ ಪೂರ್ತಿ ನೆನಪಾಗಿ ಕಾಡುತ್ತೆ.
