Asianet Suvarna News Asianet Suvarna News

ಹ್ಯಾಪಿ ರಿಲೇಶನ್‌ಶಿಪ್‌ನ ವೈಜ್ಞಾನಿಕ ಒಳಗುಟ್ಟು

ಹ್ಯಾಪಿ ರಿಲೇಶನ್‌ಶಿಪ್‌ನ ಗುಟ್ಟು ಬಹಳ ಸರಳವೆನಿಸಿದರೂ ಅದನ್ನು ಕರಗತವಾಗಿಸಿಕೊಳ್ಳಲು ನಮ್ಮ ಪ್ರಯತ್ನ ಜೋರಾಗಿಯೇ ಇರಬೇಕು. ಏಕೆಂದರೆ ಹ್ಯಾಪಿ ರಿಲೇಶನ್‌ಶಿಪ್ ಎಂದರೆ ಹ್ಯಾಪಿ ಲೈಫ್ ಎಂದರ್ಥ.

The Science Behind Happy Relationships
Author
Bangalore, First Published Jun 2, 2020, 4:32 PM IST

ಎಲ್ಲ ಸಂಬಂಧಗಳೂ ಹಾಗೆಯೇ... ಆರಂಭದಲ್ಲಿ ಮೋಡದ ಮೇಲೆ ತೇಲಿಸುತ್ತಿರುತ್ತವೆ. ನಿಧಾನವಾಗಿ ಜವಾಬ್ದಾರಿಗಳು, ಸಮಸ್ಯೆಗಳು, ಹೊಂದಿಕೊಳ್ಳುವುದು, ಸ್ವಾತಂತ್ರ್ಯಕ್ಕೆ ಬರುವ ಧಕ್ಕೆ, ಭಾವನೆಗಳ ಮೇಲೆ ದಾಳಿ, ಬಾಣಬಿರುಸಾಗಿ ಬರುವ ಮೊನಚು ಮಾತುಗಳು.... ಕೆಳಗಿಳಿಸುತ್ತಾ ಭೂಮಿಯನ್ನು ಮೀರಿ ಪಾತಾಳಕ್ಕೆ ಕುಸಿಯುವವರೆಗೂ ಸಂಬಂಧದಲ್ಲಿರುವವರಿಗೆ ಹಿಡಿತ ತಪ್ಪಿದ್ದು ಅರಿವೇ ಆಗುವುದಿಲ್ಲ. ಸಂಬಂಧಗಳನ್ನು ಕಟ್ಟಿಕೊಳ್ಳುವುದಕ್ಕಿಂತಾ ಅವನ್ನು ಉಳಿಸಿಕೊಂಡು ಹೋಗುವುದೇ ದೊಡ್ಡ ಸವಾಲು. 

ಇದು ಬಹುತೇಕರ ಸಮಸ್ಯೆಯಾಗುತ್ತಿದ್ದಂತೆ ವಿಜ್ಞಾನ ಕೂಡಾ ಈ ಕ್ಷೇತ್ರಕ್ಕೆ ನುಗ್ಗಿ, ಆರೋಗ್ಯಕರ, ಸಂತೋಷಕರ ಜೋಡಿಯಾಗಲು ಏನು ಮಾಡಬೇಕು, ಹ್ಯಾಪಿ ಸಂಬಂಧದ ಗುಟ್ಟೇನು ಎಂದು ಸಂಶೋಧನೆಯಲ್ಲಿ ತೊಡಗಿದಾಗ ಕಂಡುಕೊಂಡ ಉತ್ತರಗಳು ಬಹಳ ಸರಳವಾಗಿವೆ. ಆದರೆ ಅವನ್ನು ಕರಗತ ಮಾಡಿಕೊಳ್ಳುವುದು ಸ್ವಲ್ಪ ಹೆಚ್ಚಿನ ಪ್ರಯತ್ನವನ್ನು ಬೇಡುತ್ತದೆ. ಇಷ್ಟಕ್ಕೂ ಪ್ರಯತ್ನವಿಲ್ಲದೆ ಯಾವುದು ಕೂಡಾ ಲಭಿಸಲಾರದು ಅಲ್ಲವೇ- ಸ್ವಲ್ಪ ಪ್ರಯತ್ನಪಟ್ಟರೆ ನಾವು ನೀವು ಕನಸು ಕಂಡಂತೆ ಹ್ಯಾಪಿ ಕಪಲ್ ಪಟ್ಟ ನಮ್ಮದಾಗಿಸಿಕೊಳ್ಳುವುದು ಅಸಾಧ್ಯವೇನಲ್ಲ. ಇದಕ್ಕಾಗಿ ವಿಜ್ಞಾನ ಕೊಟ್ಟ ದಾರಿಗಳಿಲ್ಲಿವೆ. 

ಲಾಕ್‌ಡೌನ್‌ನಲ್ಲಿ ಮಕ್ಕಳಿಗೆ ಕಲಿಸುವ ಬಗ್ಗೆ ತಜ್ಞರ ಸಲಹೆಗಳು

- ಭಾವನಾತ್ಮಕ ಕೊಂಡಿ
ಜೋಡಿಯ ನಡುವೆ ಯಾವಾಗ ಭಾವನಾತ್ಮಕ ಕೊಂಡಿ ಕಳಚುವುದೋ ಆಗ ಅಸಂತೋಷ ದಾಂಗುಡಿಯಿಡುತ್ತದೆ. ಹಾಗಾಗಿ, ಒಬ್ಬರಿಗೊಬ್ಬರು ಎಮೋಶನಲಿ ಅಗತ್ಯ ಬಿದ್ದಾಗೆಲ್ಲ ಇರುವುದು ಅಗತ್ಯ. ಅವರ ಎಮೋಶನ್ಸ್ ಸ್ವಲ್ಪ ಏರುಪೇರಾದರೂ ಅದನ್ನು ಗಮನಿಸುವ ಛಾತಿ ಬೆಳೆಸಿಕೊಳ್ಳಬೇಕು. ಅದನ್ನು ವಿಚಾರಿಸಬೇಕು. ಅವರಿಗೆ ಸಮಾಧಾನದ ಮಾತುಗಳು, ನಡತೆ ಆ ಕ್ಷಣದ ಅಗತ್ಯವಾಗಿರುತ್ತದೆ. ಇವೆಲ್ಲದರ ಜೊತೆ ನಗುವಾಗ, ಅಳುವಾಗ, ನೋವುನಲಿವುಗಳಲ್ಲಿ ಜೊತೆಗಿರುವ ಭರವಸೆ ಮೂಡಿಸುವುದು- ಅಲ್ಲೊಂದು ಚೆಂದದ ಎಮೋಶನಲ್ ಬಾಂಡಿಂಗ್ ಬೆಳೆಸಿಕೊಳ್ಳಬೇಕು. 

The Science Behind Happy Relationships

- ಪಾಸಿಟಿವ್ ಲುಕ್
ಜೋಡಿಯು ಪಾಸಿಟಿವಿಟಿಯನ್ನು ಹುಟ್ಟುಹಾಕದಿದ್ದಾಗ ಅಲ್ಲಿ ಎಮೋಶನಲ್ ಕೊಂಡಿ ಸುಲಭವಾಗಿ ಕಳಚುತ್ತದೆ. ಹ್ಯಾಪಿ ಕಪಲ್ ನಡುವೆ ಪ್ರತೀ ಒಂದು ನೆಗೆಟಿವ್ ಮಾತುಕತೆಯಾಗುವಷ್ಟರಲ್ಲಿ ಕನಿಷ್ಠ ಐದಾದರೂ ಪಾಸಿಟಿವ್ ಮಾತುಗಳು, ಕ್ರಿಯೆಗಳು ನಡೆದಿರುತ್ತವೆ ಎನ್ನುತ್ತದೆ ವಿಜ್ಞಾನ. ಅವರು ವಾರದಲ್ಲಿ ಕನಿಷ್ಠ 5 ಗಂಟೆಗಳನ್ನು ಪರಸ್ಪರ ಮಾತನಾಡುತ್ತಾ ಜೊತೆಗೆ ಕಳೆಯುತ್ತಾರಂತೆ. ಈ ಮಾತುಗಳಲ್ಲಿ ಹೆಚ್ಚಾಗಿ ತಮ್ಮಿಬ್ಬರ ಜೊತೆಯ ನೆನಪುಗಳು, ಒಬ್ಬರನ್ನೊಬ್ಬರು ಶ್ಲಾಘಿಸುವುದು, ಪ್ರೀತಿಯ ಮಾತುಗಳು, ಅವರ ಒಳ್ಳೆಯ ಕೆಲಸಕ್ಕೆ ಮೆಚ್ಚುಗೆ, ಅವರ ದಿನಚರಿ ವಿಚಾರಿಸುವುದು ಎಲ್ಲವೂ ಸೇರಿರುತ್ತದೆ. ಇಬ್ಬರ ಕ್ರಿಯೆ ಹಾಗೂ ಮಾತುಗಳಲ್ಲಿ ಪಾಸಿಟಿವಿಟಿ ಇದ್ದರೆ ಖಂಡಿತಾ ಅವರು ಸುಖವಾಗಿ ಜೀವನ ನಡೆಸಬಲ್ಲರು. 

- ಸೆಕ್ಸ್ ಲೈಫ್
ಸುಖೀ ಜೋಡಿಯು ವಾರದಲ್ಲಿ ಕನಿಷ್ಠ 1 ಬಾರಿಯಾದರೂ ಸೆಕ್ಸ್ ಕ್ರಿಯೆಯಲ್ಲಿ ತೊಡಗುತ್ತಾರೆ. ಹಾಗಂಥ ಹೆಚ್ಚು ಹೆಚ್ಚು ಲೈಂಗಿಕ ಚಟುವಟಿಕೆಯಿಂದ ಹೆಚ್ಚು ಸಂತೋಷವಾಗುತ್ತದೆ ಎಂಬುದೇನು ಇಲ್ಲ ಎಂದು ಇತ್ತೀಚಿನ ಅಧ್ಯಯನವೊಂದು ಹೇಳಿದೆ. ಇವೆಲ್ಲದರ ಜೊತೆಗೆ ಸಂಗಾತಿಯ ಹೊರತು ಬೇರಾರೊಂದಿಗೂ ಲೈಂಗಿಕ ಕ್ರಿಯೆ ನಡೆಸುವುದಿಲ್ಲ. 

The Science Behind Happy Relationships

- ಹೊಸ ಅನುಭವ
ಸದಾ ಸಂತೋಷವಾಗಿರಬೇಕೆಂದರೆ ಜೀವನದಲ್ಲಿ ಆಗಾಗ ಹೊಸ ಹೊಸ ಅನುಭವಗಳು ಬೇಕು. ಹಾಗಾಗಿ ಯಾವ ಜೋಡಿಯು ಹೊಸ ಹೊಸ ಅನುಭವಗಳನ್ನು ಒಟ್ಟಾಗಿ ಪಡೆಯುತ್ತದೆಯೋ, ಮಾಡುವ ಕೆಲಸಗಳನ್ನು ಜಂಟಿಯಾಗಿ ನಿರ್ವಹಿಸುತ್ತದೆಯೋ ಅದು ಹೆಚ್ಚು ಸಂತೋಷದಿಂದ ಇರುತ್ತದಂತೆ. ಅಂದರೆ ಇಬ್ಬರೂ ಒಟ್ಟಾಗಿ ವಾಕ್ ಹೋಗುವುದು, ಅಡುಗೆ ಮಾಡುವುದು, ಆಗಾಗ ಪ್ರವಾಸ, ಹೊಸ ಸಾಹಸ ಚಟುವಟಿಕೆಗಳು, ಮೂವಿ ನೋಡುವುದು ಹೀಗೆ... 

ಬರ್ತ್‌ಡೇ ಬಾಯ್‌ ಮಾಧವನ್‌ ತನ್ನ ವಿದ್ಯಾರ್ಥಿನಿಯನ್ನೇ ಪ್ರೀತಿಸಿದ ಕತೆ ...

- ನಿನ್ನ ಗೆಲವು ನನ್ನದು
ತನ್ನ ಸಂಗಾತಿಯ ಗೆಲುವನ್ನು ತನ್ನದೇ ಎಂದು ಸಂಭ್ರಮಿಸುವುದು, ಅವರು ಅವರ ಗುರಿ ಸಾಧಿಸಲು ಹುರಿದುಂಬಿಸುವ ಮಾತುಗಳನ್ನಾಡುವುದು, ಹೊಸ ಕನಸುಗಳನ್ನು ಅವರಲ್ಲಿ ಹುಟ್ಟು ಹಾಕುವುದು, ಅವರ ಆಸಕ್ತಿಗಳನ್ನು ಪ್ರೋತ್ಸಾಹಿಸುವುದು ಮುಂತಾದವನ್ನು ಮಾಡಿದಾಗ ಜೋಡಿಯ ನಡುವೆ ಎಮೋಶನಲ್ ಬಾಂಡಿಂಗ್ ಹೆಚ್ಚು ಸ್ಟ್ರಾಂಗ್ ಆಗುತ್ತದೆ ಎನ್ನುತ್ತದೆ ಅಧ್ಯಯನ. 

- ಸುಖೀ ಸಂಬಂಧ, ಸುಖೀ ಜೀವನ
ವ್ಯಕ್ತಿಯು ವೈವಾಹಿಕ ಸಂಬಂಧ ಖುಷಿಖುಷಿಯಾಗಿದ್ದಲ್ಲಿ, ಆತನ ಜೀವನದ ಗುಣಮಟ್ಟವೂ ಹೆಚ್ಚಿರುತ್ತದೆ. ಪ್ರೀತಿಯು ವ್ಯಕ್ತಿಯ್ನು ಸ್ಟ್ರಾಂಗ್ ಆಗಿಸುತ್ತದೆ. ಪ್ರೀತಿಪಾತ್ರರೊಂದಿಗೆ ನೆಮ್ಮದಿ, ಸಂತೋಷ, ಪ್ರೀತಿ ಹೊಂದಿದ್ದರೆ ಜೀವನದ ಸಂತೋಷಕ್ಕೆ ಅಷ್ಟೇ ಸಾಕಾಗುತ್ತದೆ. 
 

Follow Us:
Download App:
  • android
  • ios