ನಕಲಿ ಮದ್ವೆ ಗ್ಯಾಂಗ್‌ನ ವಧುವಿಗೆ HIV ಪಾಸಿಟಿವ್: ಈಕೆ ಮದ್ವೆಯಾದ ಹುಡುಗರ ಹುಡುಕಾಟದಲ್ಲಿ ಪೊಲೀಸರು

ಮದುವೆಗಾಗಿ ವಧುವಿನ ಹುಡುಕಾಟದಲ್ಲಿರುವ ಹುಡುಗರನ್ನೇ ಟಾರ್ಗೆಟ್ ಮಾಡಿ ನಯವಾದ ಮಾತುಗಳಿಂದ ಅವರನ್ನು  ಬಲೆಗೆ ಬೀಳಿಸಿ ಮದುವೆಯಾಗಿ ಬಳಿಕ ಒಡವೆ ಚಿನ್ನಾಭರಣಗಳೊಂದಿಗೆ ರಾತ್ರೋರಾತ್ರಿ ಪರಾರಿಯಾಗುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ. 

Arrested Bride of fake marriage gang who cheated youths in the name of marriage is HIV positive akb

ಮದುವೆಗಾಗಿ ವಧುವಿನ ಹುಡುಕಾಟದಲ್ಲಿರುವ ಹುಡುಗರನ್ನೇ ಟಾರ್ಗೆಟ್ ಮಾಡಿ ನಯವಾದ ಮಾತುಗಳಿಂದ ಅವರನ್ನು  ಬಲೆಗೆ ಬೀಳಿಸಿ ಮದುವೆಯಾಗಿ ಬಳಿಕ ಒಡವೆ ಚಿನ್ನಾಭರಣಗಳೊಂದಿಗೆ ರಾತ್ರೋರಾತ್ರಿ ಪರಾರಿಯಾಗುತ್ತಿದ್ದ ಗ್ಯಾಂಗೊಂದನ್ನು ಪೊಲೀಸರು ಬಂಧಿಸಿದ್ದಾರೆ. ಇದಕ್ಕಿಂತಲೂ ಶಾಕಿಂಗ್ ವಿಚಾರವೆಂದರೆ ಈ ಗ್ಯಾಂಗ್‌ನಲ್ಲಿ  ವಧುವಿನಂತೆ ನಟಿಸುತ್ತಿದ್ದ ಮಹಿಳೆ ಹೆಚ್‌ಐವಿ ಪಾಸಿಟಿವ್ ಇದೆ ಎಂಬುದು. ಈ ಹಿನ್ನೆಲೆಯಲ್ಲಿ ಪೊಲೀಸರು ಈಗ ಈಕೆಯನ್ನು ಮದುವೆಯಾದ ಹುಡುಗರಿಗಾಗಿ ತಲಾಶ್ ನಡೆಸುತ್ತಿದ್ದಾರೆ. 

ಉತ್ತರ ಪ್ರದೇಶದ ಮುಜಾಫರ್‌ಪುರದಲ್ಲಿ ಈ ಘಟನೆ ನಡೆದಿದೆ. ನೌಟಂಕಿ ವಧು ಸೇರಿದಂತೆ ಆಕೆಯ ನಕಲಿ ಮದ್ವೆ ಗ್ಯಾಂಗ್‌ನಲ್ಲಿದ್ದ ಆರು ಜನರನ್ನು ಬಂಧಿಸಿದ ಪೊಲೀಸರು ಬಳಿಕ ವೈದ್ಯಕೀಯ ತಪಾಸಣೆಗಾಗಿ ಇವರನ್ನು ಆಸ್ಪತ್ರೆಗೆ ಕರೆತಂದು ತಪಾಸಣೆ ನಡೆಸಿದ ನಂತರ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಖತರ್ನಾಕ್ ಗುಂಪು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್‌ನಲ್ಲಿ ಕಾರ್ಯಾಚರಿಸುತ್ತಿತ್ತು. ಮದುವೆಗಾಗಿ ಹುಡುಗಿ ಹುಡುಕಿ ಬಸವಳಿದ ಹುಡುಗರನ್ನೇ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್‌ ತಮ್ಮ ಗ್ಯಾಂಗ್‌ನ ವಧುವಿನೊಂದಿಗೆ ಹುಡುಗರ ಮದುವೆ ಮಾಡುತ್ತಿದ್ದರು. ಬಳಿಕ ಸಮಯ ಸಂದರ್ಭ ನೋಡಿ ಹಣ ಚಿನ್ನಾಭರಣದ ಸಮೇತ ಮನೆ ಬಿಟ್ಟು ಎಸ್ಕೇಪ್ ಆಗುತ್ತಿದ್ದರು. 

ಗಂಡ ಅವನಲ್ಲ ಅವಳು! ಪತಿ ಈ ಹಿಂದೆ ಹೆಂಗಸಾಗಿದ್ದನಂತೆ, 8 ವರ್ಷದ ಬಳಿಕ ತಿಳಿದು ಹೆಂಡತಿ ಶಾಕ್‌

ಈ ಗ್ಯಾಂಗ್‌ನ್ನು ಬೇಧಿಸಿದ ಪೊಲೀಸರು ಬಳಿಕ ವಧು ಹಾಗೂ ಗ್ಯಾಂಗ್ ಅನ್ನು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಕರೆತಂದು ವೈದ್ಯಕೀಯ ತಪಾಸಣೆ ನಡೆಸಿದ ನಂತರ ವಧುವಿಗೆ ಹೆಚ್‌ಐವಿ ಇರುವುದು ತಿಳಿದು ಬಂದಿದೆ.  ಘಟನೆಗೆ ಸಂಬಂಧಿಸಿದಂತೆ ಜೈಲ್ ಸೂಪರಿಟೆಂಡೆಂಟ್ ಸೀತಾರಾಮ್ ಶರ್ಮಾ ಪ್ರತಿಕ್ರಿಯಿಸಿದ್ದು, ಆಕೆಗೆ ಆಂಟಿರೆಟ್ರೋವೈರಲ್ ಥೆರಪಿ ನಡೆಸಲಾಗುತ್ತಿದೆ ಎಂಬುದನ್ನು ಖಚಿಸತಪಡಿಸಿದ್ದಾರೆ. 

ಘಟನೆಯ ಬಳಿಕ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ ಎರಡು ರಾಜ್ಯಗಳ ಆರೋಗ್ಯ ಇಲಾಖಗಳು ಈಕೆ ಮದ್ವೆಯಾದ ಯುವಕರರಿಗಾಗಿ ಶೋಧ ನಡೆಸಿವೆ. ಅವರಲ್ಲಿ ಉತ್ತರಾಖಂಡ್ ಆರೋಗ್ಯ ಇಲಾಖೆ ಪತ್ತೆ ಮಾಡಿದ ಮೂವರಿಗೂ ಹೆಚ್‌ಐವಿ ಪಾಸಿಟಿವ್ ಇರುವುದು ತಪಾಸಣೆಯಿಂದ ಸಾಬೀತಾಗಿದೆ. ಉದ್ದಮ್ ಸಿಂಗ್ ನಗರ ಆರೋಗ್ಯ ಇಲಾಖೆ ಹಾಗೂ ಕೆಲವು ಎನ್‌ಜಿಒಗಳು ಜೊತೆಯಾಗಿ ಕಾರ್ಯಾಚರಣೆ ನಡೆಸಿ ಈ ಮೂವರು ಸಂತ್ರಸ್ತರಿಗೆ ಎಆರ್‌ಟಿ ಕೇಂದ್ರದಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ. 

ಪಾಕ್ ಪ್ರಜೆಗಳು ಭಾರತದಲ್ಲಿರಲು ಸುಳ್ಳು ಮ್ಯಾರೇಜ್ ಸರ್ಟಿಫಿಕೇಟ್ : ಅಕ್ರಮ ಜಾಲ ಪತ್ತೆ

ಈ ಪ್ರಕರಣದಲ್ಲಿ ಈ ಗ್ಯಾಂಗ್‌ನ ಇತರ ಸದಸ್ಯರು ಇತರ ಕುಟುಂಬ ಸದಸ್ಯರಂತೆ ನಾಟಕ ಮಾಡುತ್ತಿದ್ದರು. ಆದರೂ ಅವರ ಬಗ್ಗೆ ಅನುಮಾನ ಮೂಡಿ ಸಂತ್ರಸ್ತರೊಬ್ಬರು ದೂರು ನೀಡಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆಯ ತಾಯಿಯೂ ಸೇರಿದಂತೆ ಒಟ್ಟು 7 ಜನರ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನು ಮುಜಾಫರ್‌ನಗರ ಜೈಲಿಗೆ ಕಳುಹಿಸಲಾಗಿದೆ. 

ಘಟನೆಗೆ ಸಂಬಂಧಿಸಿದಂತೆ ಜೈಲು ಸೂಪರಿಟೆಂಡೆಂಟ್ ಪ್ರತಿಕ್ರಿಯಿಸಿದ್ದು, ಜೈಲಿನಲ್ಲಿದ್ದಾಗ ಜಿಲ್ಲಾಸ್ಪತ್ರೆಯಲ್ಲಿ ಆಕೆಯ ವೈದ್ಯಕೀಯ ತಪಾಸಣೆ ಮಾಡಿದಾಗ ಆಕೆಗೆ ಹೆಚ್‌ಐವಿ ಇರುವುದು ತಿಳಿದು ಬಂತು. ಅಂದಿನಿಂದ ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಬಂಧನದ ವೇಳೆ ಆಕೆ ತಾನು ಐದು ಬಾರಿ ಮದ್ವೆಯಾಗಿದ್ದಾಗಿ ಹೇಳಿದ್ದಾಳೆ. ಅದರಲ್ಲಿ ಮೂವರು ಉತ್ತರಾಖಂಡ್‌ನವರಾಗಿದ್ದಾರೆ. ಆದರೆ ಪೊಲೀಸರಿಗೆ ಆಕೆ ಇನ್ನು ಅನೇಕರನ್ನು ವಿವಾಹವಾಗಿರಬಹುದು ಎಂಬ ಅನುಮಾನವಿದೆ.

Latest Videos
Follow Us:
Download App:
  • android
  • ios