ಉಗುರು ಕತ್ತರಿಸುತ್ತಿದ್ದ ಒಡತಿ| ಉಗುರು ಕತ್ತರಿಸಿಕೊಳ್ಳಲು ಇಷ್ಟವಿಲ್ಲದ ನಾಯಿ| ನಾಯಿಯ ಒಂದೇ ಆ್ಯಕ್ಷನ್‌ಗೆ ವಿಡಿಯೋ ವೈರಲ್!

ನವದೆಹಲಿ[ಅ.19]: ಉಗುರು ಕತ್ತರಿಸುವುದೆಂದರೆ ನಾಯಿಗಳಿಗೆ ಇಷ್ಟವಾಗುವುದಿಲ್ಲ. ಹೀಗಂತ ಹೇಳಿದ್ದು ಟಿಕ್ ಟಾಕ್‌ ವಿಡಿಯೋ ಮೂಲಕ ಎಲ್ಲರ ಮನಕದ್ದ ನಾಯಿ. ವಿಡಿಯೋದಲ್ಲಿ ಒಡತಿ ಉಗುರು ಕತ್ತರಿಸುತ್ತಾಳೆನ್ನುವಷ್ಟರದಲ್ಲಿ ಮುದ್ದಾದ ನಾಯಿ ಮಾಡಿದ ಆ್ಯಕ್ಷನ್ಎಲ್ಲರಿಗೂ ಬಹಳ ಇಷ್ಟವಾಗಿದೆ. 

ಹೌದು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಟಿಕ್‌ ಟಾಕ್ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದ್ದು, ಇದರಲ್ಲಿ ಮಹಿಳೆಯೊಬ್ಬಳು ನಾಯಿಯ ಉಗುರು ಕತ್ತರಿಸಲು ಸಜ್ಜಾಗಿದ್ದಾಳೆ. ಹೀಗಿರುವಾಗ ಉಗುರು ಕತ್ತರಿಸಿಕೊಳ್ಳಲು ಇಷ್ಟವಿಲ್ಲದ ನಾಯಿ, ನಾಟಕೀಯವಾಗಿ ಬೀಳುವ ದೃಶ್ಯವಿದೆ.

ನೆಟ್ಟಿಗರ ಮನಗೆದ್ದ ಈ ವಿಡಿಯೋಗೆ ಹಲವರಿಗೆ ಇಷ್ಟವಾಗಿದ್ದು, ವಿವಿಧ ಕಮೆಂಟ್‌ಗಳು ಬಂದಿವೆ. ಕೆಲವರು 'ಡ್ರಾಮಾ ಕಿಂಗ್' ಎಂದು ಬರೆದರೆ, ಮತ್ತೊಬ್ಬರು 'ಈ ನಾಯಿಯ ಆ್ಯಕ್ಟಿಂಗ್ ಭರ್ಜರಿಯಾಗಿದೆ' ಎಂದಿದ್ದಾರೆ.