ಪರಸ್ಪರ ಮಾಜಿ ಪ್ರೇಮಿಗಳಿಂದ ಕೈಬಿಡಲ್ಪಟ್ಟ ನಿರಂಜನ್ ಮತ್ತು ಯಶಸ್ವಿನಿ, ಬ್ರೇಕಪ್ ನೋವಿನಲ್ಲಿ ಪರಸ್ಪರ ಸಾಂತ್ವನ ಹೇಳಿಕೊಳ್ಳುತ್ತಾ, ಪ್ರೀತಿಯ ಅರಿವು ಮೂಡಿಸಿಕೊಂಡು ವಿವಾಹವಾದರು. ಬಿಗ್ ಬಾಸ್ ನಂತರ ಮಜಾ ಭಾರತ ಸೆಟ್ ನಲ್ಲಿ ಮದುವೆಯಾದ ಈ ಜೋಡಿ, ಮದುವೆಗೂ ಮುನ್ನದ ಸಂಬಂಧಗಳನ್ನು ಮರೆತು ಸುಖೀ ದಾಂಪತ್ಯ ನಡೆಸುತ್ತಿದ್ದಾರೆ.
ಋಣಾನುಬಂಧ ರೂಪೇಣ ಪಶು, ಪತ್ನಿ, ಸುತಾಲಯ.. ಎನ್ನುವ ಮಾತು ಇರುವುದು ಸುಮ್ಮನೇ ಅಲ್ಲ. ಋಣವಿಲ್ಲದೆ ಯಾವ ಬಂಧಗಳೂ ಬೆಸೆಯಲಾರವು. ಮನುಷ್ಯರು ಎಷ್ಟೇ ದೂರವಿದ್ದರೂ, ಮನಸ್ಸುಗಳು ಹತ್ತಿರವಾಗಿ ಬದುಕಲು ಋಣ ಇರಬೇಕು, ಇದ್ದ ಇಬ್ಬರು ಒಂದಾಗಲು ಕಾರಣವೂ ಇದೇ ಋಣ. ಅದು ದಂಪತಿ ರೂಪದಲ್ಲಿಯೇ ಇರಬಹುದು, ಇನ್ನಾವುದೇ ರೂಪದಲ್ಲಿ ಇರಬಹುದು. ಆದರೆ ಎಲ್ಲೋ ಇರುವ ಒಬ್ಬ ಹುಡುಗ, ಇನ್ನೆಲ್ಲೋ ಇರುವ ಒಬ್ಬರ ಹುಡುಗಿ ಕೋಟ್ಯಂತರ ಮಂದಿಯ ಮಧ್ಯೆ ಜೊತೆಯಾಗಬೇಕು, ಒಟ್ಟಿಗೇ ದಾಂಪತ್ಯ ನಡೆಸಬೇಕು ಎನ್ನುವ ಹಿಂದೆ ಇದೇ ಋಣ ಎನ್ನುವುದು ಇದೆ. ಇದರ ಬಗ್ಗೆಯೇ ವಿವರಿಸುತ್ತಾ ಖ್ಯಾತ ಆಂಕರ್ ನಿರಂಜನ್ ಅವರು ತಮ್ಮ ಇಂಟರೆಸ್ಟಿಂಗ್ ಲವ್ ಸ್ಟೋರಿಯನ್ನು ತೆರೆದಿಟ್ಟಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ನಿರಂಜನ್ ಅವರು, ತಮ್ಮ ಮತ್ತು ಪತ್ನಿ ಯಶಸ್ವಿನಿ ಪ್ರೀತಿ ಶುರುವಾಗಿದ್ದು ಹೇಗೆ ಎನ್ನುವ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರೂ ಬೇರೆ ಬೇರೆಯವರ ಜೊತೆ ಸಂಬಂಧದಲ್ಲಿ ಇದ್ವಿ. ಅವಳಿಗೂ ಬಾಯ್‌ಫ್ರೆಂಡ್ ಇದ್ದ, ನನಗೂ ಗರ್ಲ್‌ಫ್ರೆಂಡ್ ಇದ್ದಳು. ಅವನೂ ಕೈಕೊಟ್ಟ, ಇವಳೂ ಕೈಕೊಟ್ಟಳು. ನಾವಿಬ್ಬರೂ ಒಟ್ಟಿಗೇ ಇದ್ದಾಗ ನಮ್ಮ ನಮ್ಮ ಬ್ರೇಕಪ್ ಬಗ್ಗೆ ಗೋಳೋ ಎಂದು ಹೇಳಿಕೊಳ್ಳುತ್ತಿದ್ದೆವೆ. ಪರಸ್ಪರ ಸಮಾಧಾನ ಮಾಡಿಕೊಳ್ಳುತ್ತಿದ್ದೆವು. ಆಮೇಲೆ ಇವಳು ಪ್ರೀತಿ ಸಂಬಂಧಗಳ ಬಗ್ಗೆ ಎಷ್ಟೊಂದು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾಳಲ್ಲ ಎಂದು ನನಗೆ ಅನ್ನಿಸಿತು, ಆಕೆಗೂ ಹಾಗೆಯೇ ಅನ್ನಿಸಿತು. ಆಮೇಲೆ ನಾವಿಬ್ರೂ ಮದುವೆಯಾದ್ವಿ ಎಂದಿದ್ದಾರೆ.
ಪಾರ್ಟಿ ಮತ್ತಲ್ಲಿ ತಮ್ಮದೇ ಮದ್ವೆಗೆ ಹೋಗೋದನ್ನು ಮರೆತಿದ್ರಂತೆ ನಿರಂಜನ್ ದೇಶಪಾಂಡೆ! ಮುಂದೇನಾಯ್ತು ಕೇಳಿ..
ಯಶಸ್ವಿನಿ ಕೂಡ, ಮದುವೆಯ ಮೊದಲು, ಸಂಬಂಧ ರಿಲೇಷನ್‌ಗಳು ಏನೇ ಇರಲಿ, ಮದುವೆಯಾದ ಮೇಲೆ ಆತನ ಜೊತೆ ಜೀವನ ಪರ್ಯಂತ ಇರಬೇಕು, ಸುಖ ಸಂಸಾರ ನಡೆಸಬೇಕು. ಇದೇ ಜೀವನ, ಇದೇ ಪ್ರೀತಿ ಎನ್ನುವ ಮೂಲಕ ಮದುವೆಯ ಮುಂಚಿನ ಸಂಬಂಧಗಳನ್ನು ಮದುವೆಯಾದ ಬಳಿಕ ದಾಂಪತ್ಯ ಜೀವನದ ನಡುವೆ ಎಳೆದು ತರದೇ ಹೇಗೆ ಸುಂದರ ದಾಂಪತ್ಯ ನಡೆಸಬಹುದು ಎನ್ನುವ ಬಗ್ಗೆ ಹೇಳಿದ್ದಾರೆ.
ಇನ್ನು ಈ ಜೋಡಿಯ ಮದುವೆಯ ವಿಷಯವೂ ಸಕತ್ ಇಂಟರೆಸ್ಟಿಂಗ್ ಆಗಿಯೇ ಇದೆ. 2017ರಲ್ಲಿ ನಡೆದ 'ಬಿಗ್ ಬಾಸ್ ಕನ್ನಡ ಸೀಸನ್ 4' ಮೂಲಕ ಜನಪ್ರಿಯತೆ ಗಳಿಸಿದ್ದ ನಿರಂಜನ್ ಈ ಷೋದಿಂದ ಹೊರಬಂದ ಬಳಿಕ ಯಶಸ್ವಿನಿ ಜೊತೆ ಮದುವೆಯಾಗಿದ್ದಾರೆ. ಮದುವೆಯ ಬಗ್ಗೆ ಮೊದಲೇ ಡಿಸೈಡ್ ಆಗಿತ್ತು. ಆದರೆ ಮದುವೆ ಫಿಕ್ಸ್ ಆಗುತ್ತಲೇ ಬಿಗ್ಬಾಸ್ನಿಂದ ಆಫರ್ ಬಂದಿತ್ತು. ಆದ್ದರಿಂದ ಮದುವೆ ಡೇಟ್ ಮುಂದಕ್ಕೆ ಹಾಕಿದ್ದರು. ಪತ್ನಿ ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿತ್ತು. ಬಳಿಕ ಇವರು ಇಬ್ಬರ ಪ್ರೀತಿಗೆ ಕಾರಣವಾದ ಮಜಾ ಭಾರತ ಶೂಟಿಂಗ್ ಸೆಟ್ ನಲ್ಲೇ ಮದ್ವೆಯಾಗಿದ್ದರು. ಇಷ್ಟು ವರ್ಷಗಳಾದರೂ ದಂಪತಿ ಕಾಲೆಳೆದುಕೊಳ್ಳುತ್ತಾ ಎಂಜಾಯ್ ಮಾಡುತ್ತಿದ್ದಾರೆ.
ನಿಮಗೆಲ್ಲಾ ರೋಲ್ ಇಲ್ಲ ಅಂತ ಕೆಜಿಎಫ್ ನಿರ್ದೇಶಕ ಮಾಳವಿಕಾಗೆ ವಾಪಸ್ ಕಳಿಸೇ ಬಿಡೋದಾ? ಗರಂ ಆಗಿದ್ದ ನಟಿ
