Asianet Suvarna News Asianet Suvarna News

ಟ್ರಿಪ್ ರೋಡ್ ಮ್ಯಾಪ್ ಮೂಲಕವೇ ಗೆಳತಿಗೆ ವಿಲ್ ಯು ಮ್ಯಾರಿ ಮೀ ಪ್ರಪೋಸ್: ಮುಂದೇನಾಯ್ತು?

ಗೆಳತಿಯನ್ನು ಕೂರಿಸಿಕೊಂಡು ಲಾಂಗ್ ಟ್ರಿಪ್. ಈ ಟ್ರಿಪ್ ರೋಡ್ ಮ್ಯಾಪ್ ಮೂಲಕವೇ ವಿಲ್ ಯು ಮ್ಯಾರಿ ಮಿ ಎಂದು ಗೆಳತಿಗೆ ಪ್ರಪೋಸ್ ಮಾಡಿದ್ದಾನೆ.  ಅತೀ ದೊಡ್ಡ ಸಾಹಸ ಮಾಡಿ ಪ್ರೇಮ ನಿವೇದನೆ ಮಾಡಿದ ಆತನ ಲವ್ ಏನಾಯ್ತು?
 

America Man propose girl in GPS route map trip spelled out will you marry me ends with breakup ckm
Author
First Published Aug 17, 2024, 8:13 PM IST | Last Updated Aug 17, 2024, 8:13 PM IST

ಕ್ಯಾಲಿಫೋರ್ನಿಯಾ(ಆ.17) ಪ್ರೀತಿ ಮೊಳಕೆಯೊಡೆದಿದೆಯೋ ಇಲ್ಲವೋ? ಆದರೆ ಭಿನ್ನವಾಗಿ, ಆಪ್ತವಾಗಿ, ಹಿತವಾಗಿ ಪ್ರಪೋಸ್ ಮಾಡಿ ಸಕ್ಸಸ್ ಆದ ಹಲವು ಉದಾಹರಣೆಗಳಿವೆ. ಹೀಗಾಗಿ ಪ್ರಪೋಸ್ ಮಾಡಲು ಹಲವರು ತೀರಾ ತಲೆಕೆಡಿಸಿಕೊಳ್ಳುತ್ತಾರೆ. ಭಾರಿ ಕಸರತ್ತು ನಡೆಸುತ್ತಾರೆ. ಈ ಮೂಲಕ ಪ್ರೀತಿ ಒಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಹೀಗೆ ಇಲ್ಲೊಬ್ಬ ಪ್ರೇಮ ನಿವೇದನಗೆ ಅತೀ ದೊಡ್ಡ ಸಾಹಸವನ್ನೇ ಮಾಡಿದ್ದಾನೆ. ಗೆಳತಿಯನ್ನು ಕಾರಿನಲ್ಲಿ ಕೂರಿಸಿ ಲಾಂಗ್ ಟ್ರಿಪ್. ಅಂದರೆ ಇಡೀ ದೇಶವನ್ನು ಕಾರಿನಲ್ಲೇ ಸುತ್ತಾಡಿಸಿದ್ದಾನೆ. ಈತ ತೆರಳಿದ ರೋಡ್ ಮ್ಯಾಪ್‌ನಲ್ಲೇ ವಿಲ್ ಯು ಮ್ಯಾರಿ ಮಿ(ನನ್ನ ಮದುವೆಯಾಗುತ್ತೀಯಾ) ಎಂದು ದಾರಿ ಮೂಲಕವೇ ಗೆಳತಿಗೆ ತಿಳಿಸಿದ್ದಾನೆ. ತಿಂಗಳುಗಳ ಕಾಲ, ಅತೀ ದೊಡ್ಡ ಸಾಹಸ ಮಾಡಿದರೂ ಕನಿಷ್ಠ ಗೆಳತಿಯಾಗಿದ್ದ ಈಕೆ ಇದೀಗ ಇವನ ಜೊತೆಗಿಲ್ಲ. ಈ ಘಟನೆ ನಡೆದಿರುವುದು ಅಮೆರಿಕದಲ್ಲಿ.

ಲಾಸ್ ಎಂಜಲ್ಸ್‌ನ ಹೆನ್‌ಶೆಲ್ ತನ್ನ ಬ್ರೇಕ್ ಅಪ್ ಘಟನೆಯನ್ನು ಹೇಳಿಕೊಂಡಿದ್ದಾನೆ. ಎಲ್ಲರೂ ಭೂಮಿ ಮೇಲಿನ ವಸ್ತುಗಳು, ವಿಷಯಗಳನ್ನು ಹೆಕ್ಕಿ ತೆಗೆದು ಪ್ರಪೋಸ್ ಮಾಡಿದರೆ ಹೆನ್‌ಶೆಲ್ ಜಿಪಿಎಸ್ ರೂಟ್ ಮ್ಯಾಪ್ ಬಳಸಿ ವಿಶಿಷ್ಠ ರೀತಿಯಲ್ಲಿ ಪ್ರಪೋಸ್ ಮಾಡಿದ್ದಾನೆ. ಹೆನ್‌ಶೆಲ್ ಹಾಗೂ ಆತನ ಆಪ್ತ ಸ್ನೇಹಿತೆ ನಡುವೆ ಆತ್ಮೀಯತೆ ಹೆಚ್ಚಾಗಿತ್ತು. ಇದು ಪ್ರೀತಿಯಾಗಿ ಹೆನ್‌ಶೆಲ್ ಮನದಲ್ಲಿ ಮೊಳಕೆಯೊಡೆದಿತ್ತು. ಇದಕ್ಕಾಗಿ ಅಮೆರಿಕ ಮ್ಯಾಪ್ ಹಿಡಿದು ತಿಂಗಳುಗಳ ಕಾಲ ತೆಲೆಕಿಡಿಸಿಕೊಂಡಿದ್ದಾನೆ. ತಾನು ಹೋದ ಟ್ರಿಪ್ ರೂಟ್‌ನಲ್ಲೇ ವಿಲ್ ಯು ಮ್ಯಾರಿ ಮಿ ಎಂದು ಬರಬೇಕು. ಇದಕ್ಕಾಗಿ ಹೇಗೆ ತೆರಳಬೇಕು ಅನ್ನೋದನ್ನು ಗುರುತಿಸಿಕೊಂಡು ಲೆಕ್ಕಾಚಾರ ಹಾಕಿದ್ದಾನೆ.  

BMW ಕಾರಿನಲ್ಲಿ ಯುವಕನ ಫೋಟೋ ನೋಡಿ ಹುಟ್ಟಿತು ಪ್ರೀತಿ, ಮದ್ವೆ ಬೆನ್ನಲ್ಲೇ ಮುಳ್ಳಾಗಿ ಚುಚ್ಚಿತು ಅದೇ ಕಾರು!

ಪ್ರೀತಿಯನ್ನು ಒಲಿಸಿಕೊಳ್ಳಲು ಅಮೆರಿಕದ ಪೆಸಿಫಿಕ್ ಕೋಸ್ಟ್‌ನಿಂದ ಟ್ರಿಪ್ ಆರಂಭಿಸಿದ್ದಾನೆ. ಗೆಳತಿಯನ್ನು ಕೂರಿಸಿಕೊಂಡು ಕಾರು ಪ್ರವಾಸ ಆರಂಗೊಂಡಿದೆ. ಕೆಲವು ಕಡೆಗಳಲ್ಲಿ ಒತ್ತಾಯಪೂರ್ವಕವಾಗಿ ಜಿಪಿಎಸ್ ಆಫ್ ಮಾಡಿದ್ದಾನೆ. ಕಾರಣ ವಿಲ್ ಯು ಮ್ಯಾರಿ ಮಿ ಎಂದು ಸ್ಪಷ್ಟವಾಗಿ ಗೋಚರವಾಗಬೇಕು ಅನ್ನೋ ಕಾರಣಕ್ಕೆ ಈ ರೀತಿ ಮಾಡಿದ್ದಾನೆ.

ಇಡೀ ಅಮೆರಿಕ ಸುತ್ತಿದ್ದಾನೆ. ರೂಟ್ ಮ್ಯಾಪ್ ಮೂಲಕ ಕೊನೆಯ ಅಕ್ಷರ ಪೂರ್ಣಗೊಳ್ಳುವ ವರೆಗೆ ಈತ ಸೀಕ್ರೆಟ್ ಮೈಂಟೈನ್ ಮಾಡಿದ್ದಾನೆ.  ಟ್ರಿಪ್ ಮ್ಯಾಪ್ ನೋಡಿದರೆ ಸ್ಪಷ್ಟವಾಗಿ ವಿಲ್ ಯು ಮ್ಯಾರಿ ಮಿ ಎಂಬಂತಿದೆ. ಇದನ್ನು ಗೆಳತಿಗೆ ತಿಳಿಸಲು ಈತ ಕೆಲ ಸಾಹಸ ಮಾಡಿದ್ದಾನೆ. ಜಿಪಿಎಸ್ ರೂಟ್ ಮ್ಯಾಪ್ ನೇರವಾಗಿ ನೋಡುವಂತೆ ಹೇಳದೆ ಪರೋಕ್ಷವಾಗಿ ನೋಡುವಂತೆ ಮಾಡಿದ್ದಾನೆ. ಇದರ ನಡುವೆ ನನ್ನ ಪರ್ಸ್ ಮರೆತು ಹೋಗಿದೆ. ಸೇರಿದಂತೆ ಹಲವು ನಾಟಕಗಳನ್ನು ಪ್ರಯೋಗಿಸಿ, ಗೆಳತಿ ತನ್ನ ರೂಟ್ ಮ್ಯಾಪ್‌ನಲ್ಲಿರುವ ಪ್ರಪೋಸಲ್ ನೋಡಲಿ ಎಂದು ಪ್ರಯತ್ನಿಸಿದ್ದಾನೆ. 

 

 

ಅತೀ ದೊಡ್ಡ ಸಾಹಸವನ್ನು ಗೆಳತಿಗೆ ಹೇಗೋ ತಿಳಿಸಿದ್ದಾನೆ. ಆದರೆ ಗೆಳತಿ ಮಾತ್ರ ಈತನಿಂದ ದೂರವಾಗಿದ್ದಾಳೆ. ಈತನ ಪ್ರಪೋಸಲ್‌ಗೆ ನೋ ಎಂದಿದ್ದಾಳೆ. ಇದಕ್ಕೆ ಕಾರಣವೇನು ಅನ್ನೋದನ್ನು ಹೆನ್‌ಶೆಲ್ ಬಿಚ್ಚಿಟ್ಟಿಲ್ಲ. ನಾವಿಬ್ಬರು ಜೊತೆಯಾಗಿ ಸಾಗುವುದು ಸೂಕ್ತ ಏನಿಸಿಲ್ಲ ಎಂದಷ್ಟೆ ಹೆನ್‌ಶೆಲ್ ಹೇಳಿಕೊಂಡಿದ್ದಾನೆ. 

ರಾಂಗ್ ನಂಬರ್‌ನಿಂದ ಮಹಿಳೆಯರ ಸಲಿಂಗಿ ಪ್ರೀತಿ ಶುರು: ಪತಿ ಬಿಟ್ಟು ಪರಾರಿಯಾದ ಬೆನ್ನಲ್ಲೇ ಟ್ವಿಸ್ಟ್! 
 

Latest Videos
Follow Us:
Download App:
  • android
  • ios